ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Karnataka Film Chamber: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷೆಯಾಗಿ ನಟಿ ಜಯಮಾಲಾ ಆಯ್ಕೆ

ಕರ್ನಾಟಕ ಫಿಲ್ಮ್‌ ಚೇಂಬರ್‌ ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ಭಾಮಾ ಹರೀಶ್ ಮತ್ತು ಹಿರಿಯ ಜಯಮಾಲಾ ಅವರ ನಡುವೆ ತೀವ್ರ ಪೈಫೊಟಿ ಇತ್ತು. ಅಧ್ಯಕ್ಷ ಸ್ಥಾನಕ್ಕೆ ಒಟ್ಟು 813 ಮತಗಳು ಈ ಬಾರಿ ಚಲಾವಣೆ ಆಗಿದ್ದು, ಅವುಗಳಲ್ಲಿ 512 ಮತಗಳನ್ನು ಜಯಮಾಲಾ ಪಡೆದುಕೊಂಡು ಜಯಭೇರಿ ಮೊಳಗಿಸಿದ್ದಾರೆ.

ಫಿಲ್ಮ್‌ ಚೇಂಬರ್‌ ನೂತನ ಅಧ್ಯಕ್ಷೆಯಾಗಿ ನಟಿ ಜಯಮಾಲಾ ಆಯ್ಕೆ

ಹಿರಿಯ ನಟಿ ಜಯಮಾಲಾ -

Prabhakara R
Prabhakara R Jan 31, 2026 9:38 PM

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber Of Commerce) ನೂತನ ಅಧ್ಯಕ್ಷೆಯಾಗಿ ಹಿರಿಯ ನಟಿ, ನಿರ್ಮಾಪಕಿ ಹಾಗೂ ಮಾಜಿ ಸಚಿವೆ ಜಯಮಾಲಾ (Actress Jayamala) ಆಯ್ಕೆಯಾಗಿದ್ದಾರೆ. ಶನಿವಾರ ನಡೆದ ಫಿಲ್ಮ್‌ ಚೇಂಬರ್‌ ಚುನಾವಣೆಯಲ್ಲಿ ನಿರ್ಮಾಪಕ ಭಾಮಾ ಹರೀಶ್ ವಿರುದ್ಧ ನಟಿ ಜಯಮಾಲಾ ಅವರು ಗೆಲುವು ಸಾಧಿಸಿದ್ದಾರೆ.

ಇಂದು ಬೆಳಿಗ್ಗೆ ಆರಂಭವಾದ ಮತದಾನದಲ್ಲಿ ಚಿತ್ರರಂಗದ ಹಲವು ಗಣ್ಯರು ಭಾಗಿ ಆಗಿದ್ದರು. ಶಿವರಾಜ್ ಕುಮಾರ್, ಡಾಲಿ ಧನಂಜಯ್, ಅಶ್ವಿನಿ ಪುನೀತ್ ರಾಜ್​​ಕುಮಾರ್ ಸೇರಿ ಹಲವಾರು ನಟ, ನಟಿಯರು, ತಂತ್ರಜ್ಞರು ಆಗಮಿಸಿ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು.

ಫಿಲಂ ಚೇಂಬರ್ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಮತದಾನ ನಡೆದಿದ್ದು, ಇಂದೇ ಫಲಿತಾಂಶ ಘೋಷಣೆಯಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಭಾಮಾ ಹರೀಶ್ ಮತ್ತು ಜಯಮಾಲಾ ಅವರ ನಡುವೆ ತೀವ್ರ ಪೈಫೊಟಿ ಇತ್ತು. ಅಧ್ಯಕ್ಷ ಸ್ಥಾನಕ್ಕೆ ಒಟ್ಟು 813 ಮತಗಳು ಈ ಬಾರಿ ಚಲಾವಣೆ ಆಗಿದ್ದು, ಅವುಗಳಲ್ಲಿ 512 ಮತಗಳನ್ನು ಜಯಮಾಲಾ ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ. ಈ ಮೂಲಕ ಜಯಮಾಲಾ ಅವರು ಎರಡನೇ ಬಾರಿ ಫಿಲಂ ಚೇಂಬರ್‌ನ ಅಧ್ಯಕ್ಷೆ ಆಗಿ ಆಯ್ಕೆಯಾಗಿದ್ದಾರೆ. 2008ರಲ್ಲಿ ಹಿರಿಯ ನಟಿ ಜಯಮಾಲಾ ಅವರು ಮಂಡಳಿಯ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು.

ನೂತನ ಪದಾಧಿಕಾರಿಗಳು

ಅಧ್ಯಕ್ಷರು: ಜಯಮಾಲಾ

ಗೌರವ ಉಪಾಧ್ಯಕ್ಷ:

  • ಸುಂದರ್ ರಾಜು (ನಿರ್ಮಾಪಕರು)
  • ಕೆ.ಮಂಜು (ಡಿಸ್ಟ್ರಿಬ್ಯೂಟರ್)
  • ಕಿಶೋರ್ (ಎಕ್ಸಿಬ್ಯೂಟರ್)

ಕಾರ್ಯದರ್ಶಿ:

  • ಎ.ಗಣೇಶ್ (ನಿರ್ಮಾಪಕ)
  • ರಮೇಶ್ - ಡಿಸ್ಟ್ರಿಬ್ಯೂಟರ್
  • ಅಶೋಕ್ (ಎಕ್ಸಿಬ್ಯೂಟರ್)

ಖಜಾಂಚಿ: ನರಸಿಂಹ ಮುಸುರಿ