ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Second Case Of Seetharam : ತಮಿಳಿನಲ್ಲಿಯೂ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ರಿಲೀಸ್: ಡ್ರೀಮ್ ವಾರಿಯರ್ಸ್‌ ಪಿಕ್ಚರ್ಸ್ ಸಾಥ್

vijay raghavendra: ಡ್ರೀಮ್ ವಾರಿಯರ್ ಪಿಕ್ಚರ್ಸ್, ದಕ್ಷಿಣ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದು. ಧೀರನ್, ಅರುವಿ, ಎನ್‌ಜಿಕೆ, ರಾಕ್ಷಸಿ, ಖೈದಿ, ಭೋಲಾ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳು ಈ ಸಂಸ್ಥೆಯಡಿ ನಿರ್ಮಾಣಗೊಂಡಿವೆ. ಇದೀಗ ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆ ಜೊತೆ ನಿರ್ದೇಶಕ‌ ಕಂ ನಿರ್ಮಾಪಕ ಪವನ್ ಒಡೆಯರ್ ಕೈ ಜೋಡಿಸಿದ್ದಾರೆ.

ತಮಿಳಿನಲ್ಲಿಯೂ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ರಿಲೀಸ್

ಸೆಕೆಂಡ್ ಕೇಸ್ ಆಫ್ ಸೀತಾರಾಮ್ ಸಿನಿಮಾ -

Yashaswi Devadiga
Yashaswi Devadiga Feb 20, 2026 8:18 AM

ಡ್ರೀಮ್ ವಾರಿಯರ್ ಪಿಕ್ಚರ್ಸ್, ದಕ್ಷಿಣ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದು. ಧೀರನ್, ಅರುವಿ, ಎನ್‌ಜಿಕೆ, ರಾಕ್ಷಸಿ, ಖೈದಿ, ಭೋಲಾ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳು (Movies) ಈ ಸಂಸ್ಥೆಯಡಿ ನಿರ್ಮಾಣಗೊಂಡಿವೆ. ಇದೀಗ ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆ ಜೊತೆ ನಿರ್ದೇಶಕ‌ ಕಂ ನಿರ್ಮಾಪಕ ಪವನ್ ಒಡೆಯರ್ (pawan wadeyar) ಕೈ ಜೋಡಿಸಿದ್ದಾರೆ.

ಪವನ್ ಒಡೆಯರ್ ಮೊದಲ ಬಾರಿಗೆ ಪ್ರಸ್ತುತಪಡಿಸುತ್ತಿರುವ ಸೆಕೆಂಡ್ ಕೇಸ್ ಆಫ್ ಸೀತಾರಾಮ್ ಸಿನಿಮಾಗೆ ಡ್ರೀಮ್ ವಾರಿಯರ್ಸ್‌ ಪಿಕ್ಚರ್ಸ್ ಸಾಥ್ ಕೊಟ್ಟಿದೆ. ಚಿತ್ರದ ಕಂಟೆಂಟ್, ಕ್ವಾಲಿಟಿ, ಮೇಕಿಂಗ್, ಕಥೆ ಇಷ್ಟಪಟ್ಟು ಡ್ರೀಮ್ ವಾರಿಯರ್ಸ್ ಪಿಕ್ಚರ್ಸ್ ತಮಿಳಿನಲ್ಲಿ ಸೀತಾರಾಮ್ ಚಿತ್ರ ಬಿಡುಗಡೆ ಮಾಡ್ತಿದೆ. ಇದು ಇಡೀ ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Second Case Of Seetharam Review: ಸರಣಿ ಕೊಲೆಗಳ ಕೇಸ್‌ನಲ್ಲಿ ಆದಿಯಿಂದ ಅಂತ್ಯದವರೆಗೂ ರೋಚಕವಾಗಿ ಸಾಗುವ ಸೀತಾರಾಮ್‌ನ ತನಿಖೆ!

ಪ್ರೇಕ್ಷಕರಿಂದ ಅತ್ಯುತ್ತಮ ಮೆಚ್ಚುಗೆ

ಪ್ರೇಕ್ಷಕರಿಂದ ಅತ್ಯುತ್ತಮ ಮೆಚ್ಚುಗೆ ಪಡೆದಿರುವ "ಸೆಕೆಂಡ್ ಕೇಸ್ ಆಫ್ ಸೀತಾರಾಮ್" ಚಿತ್ರ ತಮಿಳುನಾಡಿನಲ್ಲೂ ಬರುತ್ತಿದೆ. ಬ್ಲಾಕ್ ಬಸ್ಟರ್ ಚಿತ್ರಗಳಾದ ಕೈಥಿ, ಕುರುಪ್, KGF2, ಕಾಂತರ ಚಿತ್ರಗಳನ್ನು ವಿತರಿಸಿದ್ದ ಪ್ರತಿಷ್ಠಿತ ಡ್ರೀಮ್ ವಾರಿಯರ್ ಪಿಕ್ಚರ್ ಸಹಯೋಗದೊಂದಿಗೆ ಸೆಕೆಂಡ್ ಕೇಸ್ ಆಫ್ ಸೀತಾರಾಮ್ ತಮಿಳುನಾಡಿನಲ್ಲೂ ಫೆಬ್ರವರಿ 20 ರಂದು ತೆರೆ ಕಾಣುತ್ತಿದೆ.



ಡ್ರೀಮ್ ವಾರಿಯರ್ಸ್ ಪಿಕ್ಚರ್ಸ್ ಸೆಕೆಂಡ್ ಕೇಸ್ ಆಫ್ ಸೀತಾರಾಮ್ ಚಿತ್ರಕ್ಕೆ ಬೆಂಬಲವಾಗಿ ನಿಂತಿರುವ ಮಾತಾನಾಡಿರುವ ಪವನ್ ಒಡೆಯರ್, "ಪ್ರತಿಷ್ಟಿತ ನಿರ್ಮಾಣ ಸಂಸ್ಥೆ ಡ್ರೀಮ್ ವಾರಿಯರ್ಸ್‌ ಸೀತಾರಾಮ್ ಚಿತ್ರವನ್ನು ತಮಿಳಿನಲ್ಲಿ ಬಿಡುಗಡೆ ಮಾಡುತ್ತಿರುವುದು ಖುಷಿ. ಅವರ ಜೊತೆ ನಾವು ಕೈ ಜೋಡಿಸಿರುವುದು ಸಂತಸ. ಈಗಾಗಲೇ ಪ್ರೀಮಿಯರ್ ಶೋಗೆ ಪ್ರೇಕ್ಷಕರಿಂದ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ. ತಮಿಳು ಸಿನಿಮಾಪ್ರೇಮಿಗಳಿಗೂ ಈ ಕಥೆ ಇಷ್ಟವಾಗಲಿದೆ ಎಂದು ನಾವು ಬಲವಾಗಿ ನಂಬಿದ್ದೇವೆ" ಎಂದರು.

ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನ

ಸೆಕೆಂಡ್ ಕೇಸ್ ಆಫ್ ಸೀತಾರಾಮ್ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಮತ್ತು ಗೋಪಾಲ್ ಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಪವನ್ ಒಡೆಯರ್ ಚಿತ್ರವನ್ನ ಪ್ರೆಸೆಂಟ್ ಮಾಡುತ್ತಿದ್ದಾರೆ. ದೇವಿ ಪ್ರಸಾದ್ ಶೆಟ್ಟಿ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ‘ಫ್ಲೈಯಿಂಗ್ ಎಲಿಫಂಟ್ ಸ್ಟೋರಿ ಟೆಲ್ಲರ್ಸ್’ ಸಿನಿಮಾ ಮೂಲಕ ದೇವಿ ಪ್ರಸಾದ್ ಶೆಟ್ಟಿ ಹಾಗೂ ಸಾತ್ವಿಕ್ ಹೆಬ್ಬಾರ್ ಈ ಚಿತ್ರವನ್ನ ನಿರ್ಮಿಸಿದ್ದಾರೆ.

ಇದನ್ನೂ ಓದಿ: Kannada Serial TRP: ಟಿಆರ್‌ಪಿ ಜಿದ್ದಾಜಿದ್ದಿನಲ್ಲಿ ಗೆದ್ದ ಸೀರಿಯಲ್ ಯಾವುದು?

ಫೆಬ್ರವರಿ 20ರಂದು 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಹೇಮಂತ್ ಆಚಾರ್ಯ ಛಾಯಾಗ್ರಹಣ ಹಾಗೂ ನವನೀತ ಶಾಮ್ ಸಂಗೀತ ಮತ್ತು ಶಶಾಂಕ್ ಸಂಕಲನ ಚಿತ್ರಕ್ಕಿದೆ.