Drishyam 3 Update: 'ದೃಶ್ಯಂ 3' ಕುರಿತು ನಟ ಮೋಹನ್ ಲಾಲ್ ಕೊಟ್ರು ಬಿಗ್ ಅಪ್‌ಡೇಟ್
ಮಲಯಾಳಂನ ʼದೃಶ್ಯಂʼ ಭಾಗ 1 ಮತ್ತು 2 ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಈ ಸಿನಿಮಾ ಚೈನೀಸ್ ಸೇರಿದಂತೆ ಅನೇಕ ಭಾಷೆಗಳಿಗೆ ರಿಮೇಕ್ ಕೂಡ ಆಗಿತ್ತು. ಇದೀಗ ಮೋಹನ್ ಲಾಲ್ ನಟನೆಯಲ್ಲೇ ದೃಶ್ಯಂ ಭಾಗ 3 ರೆಡಿಯಾಗುತ್ತಿರುವ ಬಗ್ಗೆ ಬಿಗ್ ಅಪ್‌ಡೇಟ್ ಹೊರಬಿದ್ದಿದೆ.

ಮೋಹನ್ ಲಾಲ್.

ನವದೆಹಲಿ: ಬಹುಭಾಷೆಗಳಲ್ಲಿ ಬ್ಲಾಕ್ ಬ್ಲಸ್ಟರ್ ಹಿಟ್ ಎನಿಸಿದ್ದ ಮಲಯಾಳಂನ ʼದೃಶ್ಯಂʼ (Drishyam) ಸೀರಿಸ್‌ನ ಕಥೆ ಸಿನಿ ಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಕುಟುಂಬ ಮೌಲ್ಯ, ಅಧಿಕಾರದ ದುರುಪಯೋಗ, ಅಪರಾಧದ ಜಾಡು ಎಲ್ಲವನ್ನು ಬಹಳ ಅಚ್ಚುಕಟ್ಟಾಗಿ ಪ್ರೇಕ್ಷಕರಿಗೆ ಮುಂದೆ ಹರವಿಟ್ಟಿದ್ದ ʼದೃಶ್ಯಂʼ ಭಾಗ 1 ಮತ್ತು 2 ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಈ ಸಿನಿಮಾ ಅನೇಕ ಭಾಷೆಗಳ್ಳಲ್ಲಿ ರಿಮೇಕ್ ಆಗಿ ಹಿಟ್ ಲೀಸ್ಟ್‌ಗೆ ಸೇರಿದ್ದು ಇದೀಗ ಮೋಹನ್ ಲಾಲ್ (Mohanlal) ನಟನೆಯಲ್ಲೇ ʼದೃಶ್ಯಂʼ ಭಾಗ 3 ರೆಡಿಯಾಗುತ್ತಿರುವ ಬಗ್ಗೆ ಬಿಗ್ ಅಪ್‌ಡೇಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈಗಾಗಲೇ ಕ್ರೈಂ ಥ್ರಿಲ್ಲರ್ ʼದೃಶ್ಯಂʼ ಸಿನಿಮಾದ 2 ಭಾಗಗಳು ತೆರೆ ಕಂಡಿದೆ. ಆಕಸ್ಮಿಕವಾಗಿ ನಡೆಯುವ ಕೊಲೆ, ಅದರ ತನಿಖೆ, ಮುಂದೇನು ನಡೆಯುತ್ತದೆ ಎಂಬ ಕುತೂಹಲ ಕೊನೆ ತನಕವು ಉಳಿಸುವಲ್ಲಿ ನಿರ್ದೇಶಕ ಜೀತು ಜೋಸೆಫ್ ಯಶಸ್ವಿಯಾಗಿದ್ದಾರೆ. 2013ರಲ್ಲಿ ಮಾಲಿವುಡ್‌ನಲ್ಲಿ ʼದೃಶ್ಯಂʼ ಸಿನಿಮಾ ತೆರೆಕಂಡ ಯಶಸ್ವಿಯಾಗಿತ್ತು. ಬಳಿಕ ಇದೇ ಚಿತ್ರ ಕನ್ನಡ, ತಮಿಳು, ಹಿಂದಿ, ತೆಲುಗು, ಚೈನೀಶ್, ಇಂಡೋನೇಷ್ಯಾ ಭಾಷೆಗೂ ರಿಮೇಕ್ ಆಗಿದೆ. 2021ರಲ್ಲಿ ʼದೃಶ್ಯಂ 2ʼ ರಿಲೀಸ್ ಆಗಿದ್ದು ಇದು ಕೊನೆ ಭಾಗ ಎಂದು ಪ್ರೇಕ್ಷಕರು ಅಂದುಕೊಳ್ಳುವಾಗಲೇ ಸಿನೆಮಾ ಕೊನೆಯಲ್ಲಿ 3ನೇ ಭಾಗದ ಹಿಂಟ್ ಸಿಕ್ಕಿತ್ತು. ಇದೀಗ ಸಿನೆಮಾ 3ನೇ ಭಾಗ ಬರುವುದು ಅಧಿಕೃತವಾಗಿದೆ. ಈ ಬಗ್ಗೆ ನಾಯಕ ಮೋಹನ್ ಲಾಲ್ ಅವರೇ ಮಾಹಿತಿ ನೀಡಿದ್ದಾರೆ.
ಸದ್ಯ ನಟ ಮೋಹನ್ ಲಾಲ್ ಅವರ ʼಎಂಪುರಾನ್ʼ ಸಿನಿಮಾ ಬಿಡುಗಡೆಎ ಸಿದ್ದವಾಗಿದೆ. ಇದಕ್ಕಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ʼದೃಶ್ಯಂ 3' ಬಗ್ಗೆ ಮಾಹಿತಿ ಸಿಕ್ಕಿದೆ. 3ನೇ ಭಾಗ ಬರಲಿರುವ ಬಗ್ಗೆ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಮೋಹನ್ ಲಾಲ್ ʼದೃಶ್ಯಂ 3ʼ ಖಚಿತಪಟ್ಟಿದೆ ಎಂದು ಪೋಸ್ಟ್ ಹಾಕಿದ್ದಾರೆ. ಇದರೊಂದಿಗೆ ಮೋಹನ್ ಲಾಲ್ ಅವರು ನಿರ್ದೇಶಕ ಜೀತು ಜೋಸೆಫ್, ನಿರ್ಮಾಪಕ ಆಂಟೋನಿ ಪೆರುಂಬವೂರ್ ಅವರ ಜತೆಗಿರುವ ಫೋಟೊವನ್ನೂ ಹಂಚಿಕೊಂಡಿದ್ದಾರೆ.
ಇದನ್ನು ಓದಿ: Chikkaballapur News: ದ್ವಿತೀಯ ಪಿಯುಸಿ ಪರೀಕ್ಷೆಗೆ ಸಕಲ ಸಿದ್ದತೆ ಕೈಗೊಳ್ಳಲು ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್ ಸೂಚನೆ
ʼದೃಶ್ಯಂʼ ಭಾಗ 1 ಮತ್ತು 2ರಲ್ಲಿ ಜಾರ್ಜ್ ಕುಟ್ಟಿ ಪಾತ್ರದಲ್ಲಿ ಮೋಹನ್ ಲಾಲ್ ನಟಿಸಿ ಸೈ ಎನಿಸಿದ್ದರು. ನಟಿ ಮೀನಾ, ಆಶಾ ಶರತ್, ಅಂಜಲಿ ನಾಯರ್ ಸೇರಿದಂತೆ ಅನೇಕ ತಾರಾಗಣ ಈ ಸಿರೀಸ್ ಸಿನಿಮಾದಲ್ಲಿ ಮೋಡಿ ಮಅಡಿತ್ತು. ಹಾಗಾಗಿ ಭಾಗ ಮೂರರಲ್ಲಿಯೂ ಅದೇ ತಾರಾಗಣ ಸಂಗಮವಾಗುತ್ತಾ ಅಥವಾ ಯಾರೆಲ್ಲ ಹೊಸ ನಟ ನಟಿಯರು ಅಭಿನಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ. ʼದೃಶ್ಯಂ 3ʼ ತೆರೆ ಕಂಡ ಬಳಿಕ ಕನ್ನಡದಲ್ಲಿ ರವಿಚಂದ್ರನ್ ಹಿಂದಿನಂತೆ ರಿಮೇಕ್ ಮಾಡುವ ಸಾಧ್ಯತೆ ಇದೆ.