ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ekka Movie: ಅಪ್ಪು ಹುಟ್ಟುಹಬ್ಬಕ್ಕೆ ಹೊರಬಂತು ʼಎಕ್ಕʼ ಚಿತ್ರದ ಟೈಟಲ್‌ ಟ್ರ್ಯಾಕ್‌; ಭರ್ಜರಿಯಾಗಿ ಹೆಜ್ಜೆ ಹಾಕಿದ ಯುವ ರಾಜ್‌ಕುಮಾರ್‌

Ekka Movie Song Out: ಸ್ಯಾಂಡಲ್‌ವುಡ್‌ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ ಪ್ರಯುಕ್ತ ಯುವ ರಾಜ್‌ಕುಮಾರ್‌ ನಟನೆಯ ಎಕ್ಕ ಚಿತ್ರದ ಟ್ರೈಟಲ್‌ ಟ್ರ್ಯಾಕ್‌ ರಿಲೀಸ್‌ ಆಗಿದೆ. ʼಎಕ್ಕಾ ಮಾರ್ ಮಾರ್ʼ ಎಂದು ಆರಂಭವಾಗುವ ಟೈಟಲ್‌ ಟ್ರ್ಯಾಕ್‌ಗೆ ಯುವ ರಾಜ್‌ಕುಮಾರ್ ಭರ್ಜರಿಯಾಗಿಯೇ ಸ್ಟೆಪ್‌ ಹಾಕಿದ್ದಾರೆ.

ಅಪ್ಪು ಹುಟ್ಟುಹಬ್ಬಕ್ಕೆ ಹೊರಬಂತು ʼಎಕ್ಕʼ ಚಿತ್ರದ ಹಾಡು

ʼಎಕ್ಕʼ ಚಿತ್ರದ ದೃಶ್ಯ.

Profile Ramesh B Mar 17, 2025 5:44 PM

ಬೆಂಗಳೂರು: ಮಾ. 17 ಕನ್ನಡಿಗರ ಪಾಲಿಗೆ ಎಂದಿಗೂ ಮರೆಯಲಾಗದ ದಿನ. ಯಾಕೆಂದರೆ ಅದು ಸ್ಯಾಂಡಲ್‌ವುಡ್‌ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಹುಟ್ಟಿದ ದಿನ. ಈ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯಾದ್ಯಂತ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜತೆಗೆ ದೊಡ್ಮನೆಯ ಕುಡಿ ಯುವ ರಾಜ್‌ಕುಮಾರ್‌ (Yuva Rajkumar) ಅವರ ಮುಂದಿನ ಚಿತ್ರ ʼಎಕ್ಕʼದ ಹಾಡು ಬಿಡುಗಡೆ ಮಾಡಲಾಗಿದೆ (Ekka Movie). ಯುವ ಚಿತ್ರದ ಬಳಿಕ ಯುವ ರಾಜ್‌ಕುಮಾರ್ ಎಕ್ಕ ಅವತಾರವೆತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದೆ. ಶೂಟಿಂಗ್ ಹಂತದಲ್ಲಿಯೇ ಭಾರೀ ಹೈಪ್ ಕ್ರಿಯೇಟ್ ಮಾಡಿರುವ ʼಎಕ್ಕʼ ಸಿನಿಮಾದ ಮೊದಲ ಹಾಡು ಇದಾಗಿದ್ದು, ಆನಂದ್ ಆಡಿಯೋ ಯುಟ್ಯೂಬ್‌ನಲ್ಲಿ ರಿಲೀಸ್‌ ಮಾಡಲಾಗಿದೆ.

ʼಎಕ್ಕ ಮಾರ್ ಮಾರ್ʼ ಎಂದು ಆರಂಭವಾಗುವ ಟೈಟಲ್‌ ಟ್ರ್ಯಾಕ್‌ಗೆ ಯುವ ರಾಜ್‌ಕುಮಾರ್ ಭರ್ಜರಿಯಾಗಿಯೇ ಸ್ಟೆಪ್‌ ಹಾಕಿದ್ದಾರೆ. ಬಾಬಾ ಭಾಸ್ಕರ್ ಅವರ ಕೊರಿಯೋಗ್ರಫಿಗೆ ಡ್ಯಾನ್ಸ್‌ಗೆ ಇನ್ನಷ್ಟು ಕಳೆ ತಂದಿದೆ. ನಾಗಾರ್ಜುನ್ ಶರ್ಮಾ ಕ್ಯಾಚಿ ಮ್ಯಾಚಿ ಪದ‌ ಪೋಣಿಸಿ ಸಾಹಿತ್ಯ ಬರೆದಿದ್ದು, ಚರಣ್ ರಾಜ್ ಮ್ಯೂಸಿಕ್ ಕಿಕ್ ಕೊಡುವಂತಿದೆ. ಇನ್ನು ರೋಹಿತ್ ಪದಕಿ, ಚರಣ್ ರಾಜ್ ಹಾಗೂ ಮಹಾಲಿಂಗ್ ವಿ.ಎಂ. ವಾಯ್ಸ್, ಯುವ ಎನರ್ಜಿ... ಹೀಗೆ ʼಎಕ್ಕʼ ಟೈಟಲ್ ಟ್ರ್ಯಾಂಕ್ ಬೊಂಬಾಟ್ ಆಗಿ ಮೂಡಿ ಬಂದಿದೆ ಎಂದು ಫ್ಯಾನ್ಸ್‌ ಮೆಚ್ಚುಗೆ ಸೂಚಿಸಿದ್ದಾರೆ.

ʼಎಕ್ಕʼ ಚಿತ್ರದ ಟೈಟಲ್‌ ಟ್ರ್ಯಾಕ್‌ ಇಲ್ಲಿದೆ:



ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಒಟ್ಟಾಗಿ 'ಎಕ್ಕ' ಚಿತ್ರ ನಿರ್ಮಾಣ ಮಾಡುತ್ತಿವೆ. ಬಹಳ ಅದ್ಧೂರಿಯಾಗಿಯೇ ಈ ಆ್ಯಕ್ಷನ್‌ ಥ್ರಿಲ್ಲರ್ ಚಿತ್ರ ಜೂ. 6ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ. ರೋಹಿತ್ ಪದಕಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ʼಎಕ್ಕʼ ಸಿನಿಮಾದಲ್ಲಿ ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯ ಸೇರಿದಂತೆ ದೊಡ್ಡ ತಾರಾಗಣ ಇದೆ. ಸಂಜನಾ ಆನಂದ್, ಸಂಪದಾ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ.

ರೋಹಿತ್‍ ಪದಕಿ, ವಿಕ್ರಂ ಹತ್ವಾರ್ ಜತೆಗೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಇನ್ನು, ನಿರ್ದೇಶನವೂ ಅವರದ್ದೇ. ಚರಣ್ ರಾಜ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ ಮತ್ತು ದೀಪು ಎಸ್‍. ಕುಮಾರ್ ಸಂಕಲನ ʼಎಕ್ಕʼ ಸಿನಿಮಾಕ್ಕಿದೆ. ಒಬ್ಬ ಮನುಷ್ಯ ಭೂಗತ ಜಗತ್ತಿಗೆ ತುತ್ತಾದಾಗ ಆತನಿಗೆ ಆಗುವ ಅನುಭವವನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆಯಂತೆ.