ಬೆಂಗಳೂರು: ಈ ವರ್ಷದ ಮತ್ತೊಂದು ಒಳ್ಳೆ ಸಿನಿಮಾಗಳ ಸಾಲಿಗೆ ʼಏಳುಮಲೆʼ (Elumale Kannada Movie) ಸೇರ್ಪಡೆಗೊಂಡಿದೆ. ನಿರ್ದೇಶಕರಾಗಿ ಗೆದ್ದಿರುವ ತರುಣ್ ಸುಧೀರ್ ನಿರ್ಮಾಪಕರಾಗಿಯೂ ಸಕ್ಸಸ್ ಕಂಡಿದ್ದಾರೆ. ಅವರ ನಿರ್ಮಾಣದಲ್ಲಿ ಬಂದಿರುವ ʼಏಳುಮಲೆʼ ಚಿತ್ರಕ್ಕೆ ಪ್ರೇಕ್ಷಕರ ವಲಯದಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ನಾಯಕ ರಾಣಾ ಹಾಗೂ ನಾಯಕಿ ಪ್ರಿಯಾಂಕಾ ಆಚಾರ್ ಪ್ರೇಕ್ಷಕರ ಪ್ರೀತಿ ಪಡೆದುಕೊಂಡಿದ್ದಾರೆ. ಇನ್ನೂ ಈ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿಗೆ ಪುನೀತ್ ರಂಗಸ್ವಾಮಿಯಂತಹ ಒಳ್ಳೆ ನಿರ್ದೇಶಕರು ಸಿಕ್ಕಿದ್ದಾರೆ. ಯಶಸ್ವಿ ಹಾದಿಯಲ್ಲಿ ಚಿತ್ರ ಸಾಗುತ್ತಿದ್ದು, ಚಿತ್ರತಂಡ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದೆ.
ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ʼಏಳುಮಲೆʼ ಚಿತ್ರದ ಸಕ್ಸಸ್ ಮೀಟ್ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಇಡೀ ಚಿತ್ರತಂಡ ಭಾಗಿಯಾಗಿತ್ತು. ಸಿನಿಮಾ ಗೆಲುವಿನ ಬಗ್ಗೆ ನಿರ್ಮಾಪಕ ತರುಣ್ ಸುಧೀರ್ ಮಾತನಾಡಿ, ʼʼಏಳುಮಲೆʼ ಸಿನಿಮಾಕ್ಕೆ ಸಿಗುತ್ತಿರುವ ಅದ್ಭುತ ಪ್ರತಿಕ್ರಿಯೆಗೆ ಖುಷಿಯಾಗಿದೆ. ಇದಕ್ಕೆ ಪ್ರೇಕ್ಷಕರು ಹಾಗೂ ಮೀಡಿಯಾದವರು ಕಾರಣ. ನಾನು ಈ ಸಿನಿಮಾ ಮಾಡಲು ನಾನು ನಂಬಿದ್ದು ಈ ಕಥೆ ಹಾಗೂ ಕನ್ನಡ ಪ್ರೇಕ್ಷಕರನ್ನು, ಒಳ್ಳೆ ಕಂಟೆಂಟ್ ಅನ್ನು ಪ್ರೇಕ್ಷಕರು ಯಾವತ್ತೂ ಕೈಬಿಡುವುದಿಲ್ಲʼʼ ಎನ್ನುವುದು ಮತ್ತೆ ಸಾಬೀತಾಗಿದೆ ಎಂದರು.
ಇದನ್ನು ಓದಿ:Kantara: Chapter 1 Movie: 'ಕಾಂತಾರ ಚಾಪ್ಟರ್ 1' ಸಿನಿಮಾಕ್ಕಾಗಿ ಹಾಡಲಿದ್ದಾರೆ ಪಂಜಾಬ್ ಗಾಯಕ ದಿಲ್ಜಿತ್ ದೋಸಾಂಜ್
ಕರ್ನಾಟಕ ಹಾಗೂ ತಮಿಳುನಾಡಿನ ಗಡಿ ಪ್ರದೇಶದಲ್ಲಿ ನಡೆಯುವ ನೈಜ ಕಥೆ ಸಿನಿಮಾ ಪ್ರೇಮಿಗಳಿಗೆ ಇಷ್ಟವಾಗಿದೆ. ಎಲ್ಲ ಕಲಾವಿದರೂ ಅಚ್ಚುಕಟ್ಟಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಿರೀಕ್ಷೆ ಇಟ್ಟುಕೊಳ್ಳದೇ ಥಿಯೇಟರ್‌ಗೆ ಹೋದರೆ ನಿರೀಕ್ಷೆಗೂ ಮೀರಿ ಇಷ್ಟವಾಗುವ ಸಿನಿಮಾ ʼಏಳುಮಲೆʼ ಎನ್ನುವುದು ಹಲವರ ಅಭಿಮತ. ಡಿ.ಇಮ್ಮಾನ್ ಅವರ ಸಂಗೀತವೂ ಗಮನ ಸೆಳೆದಿದೆ.