ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ʻಮಾರ್ಕ್‌ʼ ನೋಡಲು ಬಂದ ಸುದೀಪ್‌ ಎದುರು ಗಿಲ್ಲಿ ನಟನಿಗೆ ಜೈಕಾರ; ಕಿಚ್ಚನಿಗೆ ಮಾತಿನ ಮಲ್ಲನ ಫ್ಯಾನ್ಸ್‌ ಬೇಡಿಕೆ ಏನು?

Kiccha Sudeep: 'ಮಾರ್ಕ್' ಸಿನಿಮಾವು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಈಚೆಗೆ ಸುದೀಪ್‌ ಥಿಯೇಟರ್‌ಗೆ ಭೇಟಿ ನೀಡಿ, ಫ್ಯಾನ್ಸ್‌ ಜೊತೆ ಚಿತ್ರ ವೀಕ್ಷಿಸಿದ್ದಾರೆ. ಈ ವೇಳೆ ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟನ ಅಭಿಮಾನಿಗಳು ಜೈಕಾರ ಹಾಕಿದ್ದಾರೆ. "ಗಿಲ್ಲಿ ಗೆಲ್ಲಬೇಕು" ಎಂದು ಅಭಿಮಾನಿಗಳು ಕೂಗಿದಾಗ ಸುದೀಪ್ ಸ್ಮೈಲ್ ನೀಡಿದರು.

Bigg Boss 12: 'ಗಿಲ್ಲಿ ಗೆಲ್ಲಬೇಕು..'; ಸುದೀಪ್ ಎದುರೇ ಅಭಿಮಾನಿಗಳ ಬೇಡಿಕೆ

-

Avinash GR
Avinash GR Jan 1, 2026 12:06 PM

ಕಿಚ್ಚ ಸುದೀಪ್‌ ನಟನೆಯ ʻಮಾರ್ಕ್‌ʼ ಸಿನಿಮಾವು ಕಳೆದ ವಾರ ತೆರೆಕಂಡಿತ್ತು. ಸದ್ಯ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾವನ್ನು ನೋಡಲು ಈಚೆಗೆ ಕಿಚ್ಚ ಸುದೀಪ್‌ ಅವರು ಮೇನ್‌ ಥಿಯೇಟರ್‌ಗೆ ಸಂತೋಷ್‌ಗೆ ಆಗಮಿಸಿದ್ದರು. ಈ ವೇಳೆ ಬಿಗ್‌ ಬಾಸ್‌ ಮನೆಯೊಳಗೆ ಇರುವ ಗಿಲ್ಲಿ ನಟ ಅವರ ಅಭಿಮಾನಿಗಳು ಒಂದು ಬೇಡಿಕೆ ಇಟ್ಟಿದ್ದಾರೆ.

ಸುದೀಪ್‌ ಎದುರು ಗಿಲ್ಲಿಗೆ ಜೈಕಾರ

ಕಿಚ್ಚ ಸುದೀಪ್‌ ಅವರು ಸಂತೋಷ್‌ ಥಿಯೇಟರ್‌ಗೆ ಸಿನಿಮಾ ನೋಡಲು ಬಂದಾಗ, ಗಿಲ್ಲಿ ನಟನ ಅಭಿಮಾನಿಗಳು, ಗಿಲ್ಲಿಗೆ ಜೈಕಾರ ಕೂಗಿದ್ದಾರೆ. ಅಲ್ಲದೆ, "ಅಣ್ಣಾ ಗಿಲ್ಲಿ ಗೆಲ್ಲಬೇಕು, ಗಿಲ್ಲಿ ಗೆಲ್ಲಬೇಕು .." ಎಂದು ಜೋರಾಗಿ ಕೂಗಿದ್ದಾರೆ. ಸುದೀಪ್‌ ಕೂಡ ಅದನ್ನು ಗಮನಿಸಿದರು ಮತ್ತು ಸ್ಮೈಲ್‌ ಮಾಡಿದ್ದಾರೆ. ಆದರೆ, ಬಿಗ್‌ ಬಾಸ್‌ನಲ್ಲಿ ಯಾರು ಗೆಲ್ಲಬೇಕು ಎಂಬುದನ್ನು ನಿರ್ಧಾರ ಮಾಡೋದು ಸುದೀಪ್‌ ಅಲ್ಲ!

Gilli Nata: ʻಬಿಗ್‌ ಬಾಸ್‌ ಮನೆಯಲ್ಲಿ ದಿ ಡೆವಿಲ್‌ ಸಿನಿಮಾ ಟ್ರೇಲರ್‌ ಪ್ರಸಾರ ಮಾಡಿಲ್ಲವೇಕೆʼ; ಗಿಲ್ಲಿ ಅಭಿಮಾನಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ!

ಜನರ ಒಲವು ಹೇಗಿದೆ?

ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಆರಂಭದಿಂದಲೂ ಗಿಲ್ಲಿ ನಟ ಅವರಿಗೆ ಜಾಸ್ತಿ ಕ್ರೇಜ್‌ ಇರುವುದು ಗೊತ್ತೇ ಇದೆ. ಹೊರಗಡೆ ಅವರ ಫ್ಯಾನ್ಸ್‌ ಸಿಕ್ಕಾಪಟ್ಟೆ ಪ್ರಚಾರ ಮಾಡುತ್ತಿದ್ದಾರೆ. ಮನೆಯೊಳಗೂ ಇತರೆ ಸ್ಪರ್ಧಿಗಳಿಗೆ ಕ್ವಾಟ್ಲೆ ಕೊಡುತ್ತಾ ಎಲ್ಲರನ್ನು ನಗಿಸುತ್ತಾ ಎಲ್ಲರ ಗಮನಸೆಳೆಯುತ್ತಿದ್ದಾರೆ ಗಿಲ್ಲಿ ನಟ. ಹಾಗಾಗಿ, ಸೀಸನ್‌ 12ರಲ್ಲಿ ಗೆಲ್ಲುವ ಸಂಭಾವ್ಯ ಸ್ಪರ್ಧಿಯಲ್ಲಿ ಗಿಲ್ಲಿ ನಟ ಮುಂಚೂಣಿಯಲ್ಲಿದ್ದಾರೆ.

ಗಿಲ್ಲಿ ನಟನ ಅಭಿಮಾನಿಗಳ ಜೈಕಾರ

ಫ್ಯಾಮಿಲಿ ರೌಂಡ್‌ನಲ್ಲಿ ಸಾಬೀತಾಯ್ತಾ?

ಹೌದು, ಕಳೆದ ವಾರ ನಡೆದ ಫ್ಯಾಮಿಲಿ ರೌಂಡ್‌ನಲ್ಲಿ ಇತರೆ ಸ್ಪರ್ಧಿಗಳ ಕುಟುಂಬದವರು ಕೂಡ ಗಿಲ್ಲಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು. ರಘು, ಸೂರಜ್‌, ರಕ್ಷಿತಾ, ಧ್ರುವಂತ್‌, ಅಶ್ವಿನಿ ಗೌಡ ಫ್ಯಾಮಿಲಿಯವರು ಕೂಡ ಗಿಲ್ಲಿಗೆ ವೋಟ್‌ ಹಾಕಿದರು. ಇದರಲ್ಲೇ ಗಿಲ್ಲಿ ಹವಾ ಹೇಗಿದೆ ಎಂಬುದು ಗೊತ್ತಾಗುತ್ತದೆ. ಅಲ್ಲದೆ, "ಮನೆಯಲ್ಲಿ ಹೆಂಗೆ ಇದ್ಯೋ, ಇಲ್ಲಿಯೂ ಹಾಗೇ ಆಡ್ತೀಯಾ ನೀನು" ಅಂತ ಗಿಲ್ಲಿ ಅವರ ತಾಯಿ ಹೇಳಿದರು. ಈ ಮೂಲಕ ಗಿಲ್ಲಿ ನಟ ಬಿಗ್‌ ಬಾಸ್‌ನಲ್ಲಿ ತಮ್ಮ ನೈಜ ಆಟ ಆಡ್ತಿದ್ದಾರೆ ಅನ್ನೋದು ಆಡಿಯೆನ್ಸ್‌ಗೆ ಗೊತ್ತಾಗಿದೆ.

ಇನ್ನೇನು ಬಿಗ್‌ ಬಾಸ್‌ ಮುಕ್ತಾಯಕ್ಕೆ ಕೆಲವೇ ದಿನಗಳು ಬಾಕಿ ಇವೆ. ಶೀಘ್ರದಲ್ಲೇ ಬಿಗ್‌ ಬಾಸ್‌ ವಿನ್ನರ್‌ ಯಾರು ಎಂಬ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಉತ್ತರ ಸಿಗಲಿದೆ.