ʻಕಾಮಿಡಿ ಕಿಲಾಡಿಗಳುʼ ಖ್ಯಾತಿಯ ನಯನಾ (Comedy Khiladigalu Nayana) ಅವರ ವಿರುದ್ಧ ಕಲಬುರಗಿಯ ಸಬ್‌ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶೋಷಿತ ಸಮುದಾಯಕ್ಕೆ ಉದ್ದೇಶ ಪೂರ್ವಕವಾಗಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಕಲಬುರಗಿ ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ ಎಂಬುವವರು ದೂರನ್ನು ನೀಡಿದ್ದಾರೆ. ಮೈಸೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ದಲಿತ ಸಮುದಾಯದ ವಿರುದ್ದ ನಯನಾ ಅವಾಚ್ಯ ಶಬ್ದ ಬಳಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ದಲಿತ ಸೇನೆ ನೀಡಿದ ದೂರಿನಲ್ಲಿ ಏನಿದೆ?
"ನಯನಾ ಎಂಬ ಹೆಸರಿನ ಹೆಣ್ಣು ಮಗಳು ಮೈಸೂರ ಮೆಟ್ರೋ ಮನಿಮಿಥಾ ಚಿಟ್ ಫಂಡ್ ಸಂಸ್ಥೆ ಬಗ್ಗೆ, ಮಾತನಾಡುತ್ತಾ ಹೊಲಗೇರಿ ಮಾಡುತ್ತಾರಲ್ಲ.. ಅನ್ನೋದರ ಜೊತೆಗೆ ಹೊಲಸು ಹೊಲಗೇರಿ ಎಂಬ ನಿಷೇಧಿತ ಪದ ಬಳಸುವುದರ ಮೂಲಕ ತನ್ನ ಜಾತಿಯತೆಯೇ ಮನಸ್ಥಿತಿಯನ್ನೂ ಬಹಿರಂಗ ಪಡಿಸಿದ್ದು ಅತ್ಯಂತ ಖಂಡನೀಯವಾಗಿದ್ದು ಮತ್ತು ಇದು ಶೋಷಿತ ಸಮುದಾಯದ ಹೊಲೆಯ ಜಾತಿಗೆ ಉದ್ದೇಶಪೂರ್ವಕವಾಗಿ ಅವಹೇಳನ ಮಾಡಿ ವಿಕೃತಿ ಮೆರೆದಿದ್ದು, ಆ ಹೆಣ್ಣು ಮಗಳು ಕೆಟ್ಟ ಪದ ಬಳಕೆ ನಮಗೆ ನೋವುನ್ನುಂಟು ಮಾಡಿದ್ದರಿಂದ ನಮಗೆ ಅಪಮಾನವಾಗಿದ್ದು, ಜಾತಿನಿಂದನೆಯಾಗಿದೆ" ಎಂದು ದೂರಿನಲ್ಲಿ ಹೇಳಿದ್ದಾರೆ.
Nayana: ತನ್ನ ಎದೆಯ ಮೇಲೆ ಸ್ಪೆಷಲ್ ಟ್ಯಾಟೂ ಹಾಕಿಸಿಕೊಂಡ ನಯನಾ: ಯಾರದ್ದು ನೋಡಿ
ನಯನಾ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹ
"ದಿನಾಂಕ 29.10.2025 ರಂದು ಸರಸ್ವತಿಪುರಂ ಮೈಸೂರು ರೋಡ್ ಕಾರ್ಯಕ್ರಮದಲ್ಲಿ, ನಯನಾ ಇವರು ಮೇಲ್ಮಾತಿಯ ಸವರ್ಣೀಯರಾಗಿದ್ದು ನಮ್ಮ ದಲಿತ ಸಮುದಾಯಕ್ಕೆ ಅವಮಾನ ಮಾಡಿರುತ್ತಾರೆ. ಕನ್ನಡ ಕಾಮಿಡಿ ಕಿಲಾಡಿಗಳ ಎಂಬ ಶೋ ದಿಂದ ಪ್ರಚಾರಕ್ಕೆ ಬಂದಿರುವ ನಯನಾ ಎಂಬ ಹೆಸರಿನ ಕೊಳಕು ಮನಸ್ಥಿತಿಯಿಂದ ನಮ್ಮ ಭಾವನೆಗೆ ಧಕ್ಕೆಯಾಗಿದ್ದು ಮೈಸೂರು ಮೆಟ್ರೋ ಎಂಬ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ವೈರಲ್ ಆಗುತ್ತಿದ್ದರಿಂದ ತಕ್ಷಣ ನಯನಾ ಎಂಬ ಹೆಸರಿನ ವಿರುದ್ಧ ದೌರ್ಜನ್ಯ ಕಾಯ್ದೆ ಅನ್ವಯ ಕ್ರಮ ಜರುಗಿಸಬೇಕು" ಎಂದು ದೂರಿನಲ್ಲಿ ತಿಳಿಸಲಾಗಿದೆ.
Lawyer Jagadish: ಜಾತಿ ನಿಂದನೆ ಪ್ರಕರಣದಲ್ಲಿ ಲಾಯರ್ ಜಗದೀಶ್ ಪೊಲೀಸರ ವಶಕ್ಕೆ
ಕಲಬುರಗಿಯ ಸಬ್‌ಅರ್ಬನ್ ಠಾಣೆಯಲ್ಲಿ ದಲಿತ ಸಮುದಾಯಕ್ಕೆ ಅವಮಾನ ಮಾಡಿದ ಆರೋಪದಡಿ ಅಟ್ರಾಸಿಟಿ ತಡೆ ಕಾಯ್ದೆ ಅಡಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. ಈ ಸಂಬಂಧ ನಯನಾ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.
ಕಾಮಿಡಿ ರಿಯಾಲಿಟಿ ಶೋಗಳ ಮೂಲಕ ಬೆಳಕಿಗೆ ಬಂದ ನಟಿ ನಯನಾ ಅವರು ತಮ್ಮ ಅಭಿನಯದಿಂದ ಸಾಕಷ್ಟು ಹೆಸರು ಸಂಪಾದಿಸಿದ್ದಾರೆ. ಕಿರುತೆರೆಯಿಂದ ಹಿರಿತೆರೆಗೆ ಎಂಟ್ರಿ ನೀಡಿರುವ ಅವರು ಸಾಕಷ್ಟು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.