ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nayana: ತನ್ನ ಎದೆಯ ಮೇಲೆ ಸ್ಪೆಷಲ್ ಟ್ಯಾಟೂ ಹಾಕಿಸಿಕೊಂಡ ನಯನಾ: ಯಾರದ್ದು ನೋಡಿ

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಅವರು ತಮ್ಮ ಎದೆಯ ಮೇಲೆ ಹೊಸದಾಗಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಶರತ್ ಹಾಗೂ ಅವಿನ್ಯಾ ಎಂಬ ಹೆಸರನ್ನು ಬರೆದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಜೊತೆಗೆ ಕೃಷ್ಣನ ಕೊಳಲನ್ನು ಸಹ ಟ್ಯಾಟೂ ಹಾಕಿಸಿದ್ದಾರೆ.

ಎದೆಯ ಮೇಲೆ ಸ್ಪೆಷಲ್ ಟ್ಯಾಟೂ ಹಾಕಿಸಿಕೊಂಡ ನಯನಾ

Nayana Tattoo

Profile Vinay Bhat Jun 11, 2025 7:47 AM

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ನಯನಾ (Nayana) ಸಾಕಷ್ಟು ಜನಪ್ರಿಯರಾದರು. ಅದ್ಭುತ ನಟನೆಯ ಮೂಲಕ ನಯನಾ ಅಭಿಮಾನಿಗಳ ಮನಗೆದ್ದರು. ಅನೇಕ ಸಿನಿಮಾಗಳಲ್ಲಿ ಕೂಡ ಇವರು ನಟಿಸಿದ್ದಾರೆ. ಸದ್ಯ ಇವರು ತಮ್ಮ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಇದರ ಮಧ್ಯೆ ತನ್ನ ಎದೆಯ ಮೇಲೆ ವಿಶೇಷ ಟ್ಯಾಟೂ ಹಾಕಿಸಿಕೊಂಡು ನಯನಾ ಸುದ್ದಿಯಲ್ಲಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹೌದು, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಅವರು ತಮ್ಮ ಎದೆಯ ಮೇಲೆ ಹೊಸದಾಗಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಶರತ್ ಹಾಗೂ ಅವಿನ್ಯಾ ಎಂಬ ಹೆಸರನ್ನು ಬರೆದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಜೊತೆಗೆ ಕೃಷ್ಣನ ಕೊಳಲನ್ನು ಸಹ ಟ್ಯಾಟೂ ಹಾಕಿಸಿದ್ದಾರೆ. ಶರತ್ ನಯನಾ ಅವರ ಗಂಡನ ಹೆಸರು ಮತ್ತು ಅವಿನ್ಯಾ ಈ ದಂಪತಿಯ ಮುದ್ದಿನ ಮಗುವಿನ ಹೆಸರಾಗಿದೆ. ತನ್ನ ಎರಡು ಜೀವಗಳನ್ನು ನಯನಾ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಕಳೆದ ಐದು ವರ್ಷಗಳ ಹಿಂದೆ ಬೆಂಗಳೂರಿನ ಉದ್ಯಮಿ ಶರತ್‌ ಎಂಬವವರ ಜೊತೆ ನಯನಾ ಸರಳವಾಗಿ ಮದುವೆಯಾದರು. ಬಳಿಕ 2023 ರಲ್ಲಿ ಈ ಜೋಡಿ ಮೊದಲ ಮಗುವನ್ನು ಬರಮಾಡಿಕೊಂಡಿತು. ನಯನಾ ಹಾಗೂ ಶರತ್‌ 9 ವರ್ಷಗಳ ಕಾಲ ಪ್ರೀತಿಸಿ, ಮದುವೆಯಾದವರು. 8ನೇ ಕ್ಲಾಸ್‌ನಲ್ಲಿ ಇದ್ದಾಗ, ಇವರಿಬ್ಬರ ಲವ್‌ ಚಿಗುರಿದ್ದಂತೆ.

Maja Talkies: ಡಬಲ್ ಮೀನಿಂಗ್ ಹೆಚ್ಚಿತ್ತು: ಮಜಾ ಟಾಕೀಸ್ ಬಗ್ಗೆ ಶಾಕಿಂಗ್ ವಿಚಾರ ತೆರೆದಿಟ್ಟ ತರಂಗ ವಿಶ್ವ

ಹುಬ್ಬಳ್ಳಿಯ ಸಾಮಾನ್ಯ ಹುಡುಗಿ ನಯನಾ ಅವರು ಯಾವುದೇ ಬ್ಯಾಕ್‌ಗ್ರೌಂಡ್ ಇಲ್ಲದೇ ಕಿರುತೆರೆಯ ಜನಪ್ರಿಯ ಕಾಮಿಡಿ ಕಿಲಾಡಿಗಳು ಶೋ ಎಂಟ್ರಿ ಕೊಟ್ಟರು. ಇಲ್ಲಿ ತಮ್ಮ ಮೊದಲ ಎಪಿಸೋಡ್​ನಿಂದಲೇ ತಾವು ಎಂತಹ ಪ್ರತಿಭಾನ್ವಿತ ಕಲಾವಿದೆ ಎಂದು ತೋರಿಸಿಕೊಟ್ಟರು. ಮುಖ್ಯವಾಗಿ ನಯನಾ ಹಾಗೂ ಶಿವರಾಜ್ ಕೆಆರ್ ಪೇಟೆ ಜೋಡಿಯ ಕಾಮಿಡಿ ಸಖತ್ ವರ್ಕೌಟ್ ಆಗಿತ್ತು. ನಯನಾ ಅವರು ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಮೂಲಕ ಕೂಡ ರಂಜಿಸಿದ್ದಾರೆ. ಕಾಮಿಡಿ ಮಾತ್ರವಲ್ಲ ಎಂತಹ ಪಾತ್ರಕ್ಕೂ ತಾನು ಸೈ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ನಿಖಿಲ್‌ ಕುಮಾರಸ್ವಾಮಿ ಅಭಿನಯದ ಸೀತಾರಾಮ ಕಲ್ಯಾಣ, ಅನಂತು ವರ್ಸಸ್‌ ನುಸ್ರತ್ ಸಿನಿಮಾದಲ್ಲಿ ವಿನಯ್‌ ರಾಜ್‌ಕುಮಾರ್‌ ಜೊತೆ ಅಭಿನಯಿಸಿದ್ದಾರೆ.