666 Operation Dream Theatre: ರೆಟ್ರೋ ಲುಕ್‌ನಲ್ಲಿ ಧನಂಜಯ್; ʼ666 ಆಪರೇಷನ್ ಡ್ರೀಮ್ ಥಿಯೇಟರ್ʼ ಚಿತ್ರದ ಫಸ್ಟ್ ಲುಕ್ ಔಟ್
Dhananjaya: ಸ್ಯಾಂಡಲ್‌ವುಡ್‌ನ ಕ್ಲಾಸ್ ನಿರ್ದೇಶಕ ಹೇಮಂತ್ ರಾವ್ ಅವರ ಮುಂದಿನ ಚಿತ್ರದಲ್ಲಿ ಡಾ.ಶಿವ ರಾಜ್‌ಕುಮಾರ್ ಮತ್ತು ಧನಂಜಯ್ ನಟಿಸುತ್ತಿದ್ದು, ಈಗಾಗಲೇ ಕುತೂಹಲ ಕೆರಳಿಸಿದೆ. ರೆಟ್ರೋ ಶೈಲಿಯಲ್ಲಿ ಚಿತ್ರ ಮೂಡಿಬರುತ್ತಿದ್ದು, ಇದಕ್ಕೆ ʼ666 ಆಪರೇಷನ್ ಡ್ರೀಮ್ ಥಿಯೇಟರ್ʼ ಹೆಸರಿಡಲಾಗಿದೆ. ಇದೀಗ ಧನಂಜಯ್ ಫಸ್ಟ್ ಲುಕ್ ಹೊರ ಬಿದ್ದಿದೆ.

ʼ666 ಆಪರೇಷನ್ ಡ್ರೀಮ್ ಥಿಯೇಟರ್ʼ ಚಿತ್ರದ ಪೋಸ್ಟರ್.

ಬೆಂಗಳೂರು: 'ಸಪ್ತ ಸಾಗರದಾಚೆ ಎಲ್ಲೋʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಡುವ ಪ್ರೇಮಕಾವ್ಯ ನೀಡಿದ್ದ ನಿರ್ದೇಶಕ ಹೇಮಂತ್ ರಾವ್ (Hemanth M Rao) ಇದೀಗ ಹೊಸ ಚಿತ್ರ ಘೋಷಿಸಿದ್ದಾರೆ. ಇದಕ್ಕೆ ʼ666 ಆಪರೇಷನ್ ಡ್ರೀಮ್ ಥಿಯೇಟರ್ʼ (666 Operation Dream Theatre) ಎನ್ನುವ ವಿಭಿನ್ನ ಶೀರ್ಷಿಕೆ ನೀಡಲಾಗಿದೆ. ಡಾ. ಶಿವರಾಜ್‌ಕುಮಾರ್ (Shivarajkumar) ಮತ್ತು ಧನಂಜಯ್ (Dhananjaya) ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಳೆದ ತಿಂಗಳು ಬೆಂಗಳೂರು ಬಂಡೆಮಹಾಕಾಳಿ ಆಶೀರ್ವಾದ ಪಡೆದು ಶೂಟಿಂಗ್ ಅಖಾಡಕ್ಕೆ ಇಳಿದಿದ್ದ ಚಿತ್ರತಂಡವೀಗ ಡಾಲಿ ಧನಂಜಯ್ ಅವರ ಫಸ್ಟ್ ಲುಕ್ ಅನಾವರಣಗೊಳಿಸಿದೆ.
ಮಾಸ್ ಮತ್ತು ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಧನಂಜಯ್, ʼ666 ಆಪರೇಷನ್ ಡ್ರೀಮ್ ಥಿಯೇಟರ್ʼ ಚಿತ್ರದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ರೆಟ್ರೋ ಲುಕ್‌ನಲ್ಲಿ ಡಾಲಿ ಧನಂಜಯ ಪ್ರತ್ಯಕ್ಷರಾಗಿದ್ದಾರೆ. ಫಸ್ಟ್ ಲುಕ್ ಹಿಂದಿನ ಕಾಲದ ಚೌಕಟ್ಟಿನಲ್ಲಿ, ಪ್ರಕಾಶಮಾನವಾದ ಬಣ್ಣಗಳೊಂದಿಗೆ ಕ್ಲೋಸ್-ಅಪ್ ನೋಟವನ್ನು ನೀಡುತ್ತದೆ. ಧನಂಜಯ್ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Kichcha Sudeep: ಸುದೀಪ್ ಅಭಿಮಾನಿಗಳಿಗೆ ಮತ್ತೆ ಗುಡ್ ನ್ಯೂಸ್; ಕಿಚ್ಚನ 47ನೇ ಸಿನಿಮಾ ಅನೌನ್ಸ್, ತೆರೆಗೆ ಯಾವಾಗ?
ಪೋಸ್ಟರ್‌ನಲ್ಲಿ ಐಕಾನಿಕ್ 999 ಸರಣಿಯ ಚಲನಚಿತ್ರಗಳ ಸರದಾರ ಡಾ. ರಾಜ್‌ಕುಮಾರ್ ಅವರ ಉಲ್ಲೇಖವಿದೆ. ಅಲ್ಲದೆ ಪೋಸ್ಟರ್‌ನಲ್ಲಿ ಈಸ್ಟರ್ ಎಗ್‌ನಂತೆ ಮರೆಮಾಡಲಾಗಿರುವ ವಿಶೇಷ ನಿಗೂಢ ವ್ಯಕ್ತಿಯನ್ನು ಸಹ ಉಲ್ಲೇಖಿಸಲಾಗಿದೆ.
ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಧನಂಜಯ್, "ಒಬ್ಬ ನಟ ದೊಡ್ಡ ದೃಷ್ಟಿಕೋನ ಮತ್ತು ಸಿನಿಮಾದ ಬಗ್ಗೆ ಉತ್ಸಾಹ ಹೊಂದಿರುವ ನಿರ್ದೇಶಕರನ್ನು ಕಂಡುಕೊಂಡಾಗ, ಮಗುವಿನಂತೆ ನಟರು ನಟನಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ಆ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ತಂಡವು ತಮ್ಮ ಹೃದಯ ಮತ್ತು ಆತ್ಮವನ್ನು ಒಂದು ಯೋಜನೆಗೆ ಸೇರಿಸಿದಾಗ ಆ ನಟ ನಿಜವಾಗಿಯೂ ಅಭಿವೃದ್ಧಿ ಹೊಂದುತ್ತಾನೆ. ಹೇಮಂತ್ ಎಂ. ರಾವ್, ನಿರ್ಮಾಪಕ ವೈಶಾಕ್ ಜೆ. ಗೌಡ, ಸಿನಿಮಾವನ್ನು ಉಸಿರಾಡುವ ಉತ್ಸಾಹಿ ವ್ಯಕ್ತಿಗಳು. ಚರಣ್ ರಾಜ್ ಮತ್ತು ಅದ್ವೈತ ಗುರುಮೂರ್ತಿ ಅಂತಹ ಒಂದು ತಂಡದೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಲುಕ್ ಟೆಸ್ಟ್ ಸಮಯದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಕಂಡದ್ದು ಹೇಮಂತ್ ಮತ್ತು ಅವರ ತಂಡವು ನನ್ನ ಎಲ್ಲ ಚಿತ್ರಗಳ ಎಲ್ಲ ಲುಕ್‌ಗಳನ್ನು ಹೊಂದಿತ್ತು. ಅವರು ನನ್ನ ಎಲ್ಲ ಲುಕ್‌ಗಳ ಬಗ್ಗೆ ಸಂಶೋಧನೆ ಮಾಡಿ ಹೊಸದಾಗಿ ಪ್ರಸ್ತುಪಡಿಸಲು ಮುಂದಾಗಿದ್ದಾರೆ. ಚಿತ್ರದ ಕಥೆ ಭಿನ್ನ ಜಗತ್ತಿನಲ್ಲಿ ನಡೆಯುತ್ತದೆ ಮತ್ತು ನಾವು ಹಲವಾರು ಅಚ್ಚರಿಗಳನ್ನು ಜೋಡಿಸಿದ್ದೇವೆ'ʼ ಎಂದು ಹೇಳಿದ್ದಾರೆ.
ಡಾ.ವೈಶಾಕ್ ಜೆ. ಗೌಡ ಅವರ ವೈಶಾಕ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ʼ666 ಆಪರೇಷನ್ ಡ್ರೀಮ್ ಥಿಯೇಟರ್ʼ ಸಿನಿಮಾ ನಿರ್ಮಿಸಲಾಗುತ್ತಿದೆ. ಚರಣ್ ರಾಜ್ ಮತ್ತು ಅದ್ವೈತ ಗುರುಮೂರ್ತಿ ಅವರ ತಂಡವು ಕ್ರಮವಾಗಿ ಸಂಗೀತ ನಿರ್ದೇಶಕ ಮತ್ತು ಛಾಯಾಗ್ರಾಹಕ ಪಾತ್ರಗಳನ್ನು ವಹಿಸಿಕೊಂಡಿದೆ. ವಿಶ್ವಾಸ್ ಕಶ್ಯಪ್ ಈ ಮೂವರೂ ನಿರ್ಮಾಣ ವಿನ್ಯಾಸಕರಾಗಿ ಸೇರಿಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ತಂಡವು ಚಿತ್ರದ ತಾರಾಬಳಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಿದೆ. ಡಾ. ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬವಾದ ಜು. 12ರಂದು ಅವರ ಲುಕ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದೇ ತಿಂಗಳು ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಚಿತ್ರವನ್ನು ದೊಡ್ಡ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದ್ದು, ತೆಲುಗು ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ.