ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kichcha Sudeep: ಸುದೀಪ್‌ ಅಭಿಮಾನಿಗಳಿಗೆ ಮತ್ತೆ ಗುಡ್‌ ನ್ಯೂಸ್‌; ಕಿಚ್ಚನ 47ನೇ ಸಿನಿಮಾ ಅನೌನ್ಸ್, ತೆರೆಗೆ ಯಾವಾಗ?

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್‌ ಇತ್ತೀಚೆಗಷ್ಟೇ ಬಿಗ್‌ ಬಾಸ್‌ ಕುರಿತು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ಇದೀಗ ಮತ್ತೊಂದು ಗುಡ್‌ ನ್ಯೂಸ್‌ ನೀಡಲು ಅವರು ರೆಡಿ ಆಗಿದ್ದಾರೆ. ಬಿಲ್ಲ ರಂಗ ಬಾಷ ಬೆನ್ನಲ್ಲೇ ಮತ್ತೊಂದು ಚಿತ್ರಕ್ಕೆ ಸಜ್ಜಾದ ಕಿಚ್ಚ ಸುದೀಪ್ ಅವರು ಮುಂದಿನ ಸಿನಿಮಾ ಅನೌನ್ಸ್ ಮಾಡಿದ್ದಾರೆ.

ಅಭಿಮಾನಿಗಳಿಗೆ ಮತ್ತೆ ಗುಡ್‌ ನ್ಯೂಸ್‌; ಕಿಚ್ಚನ 47ನೇ ಸಿನಿಮಾ ಅನೌನ್ಸ್

Profile Vishakha Bhat Jul 5, 2025 12:30 PM

ಬೆಂಗಳೂರು: ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್‌ (Kichcha Sudeep) ಇತ್ತೀಚೆಗಷ್ಟೇ ಬಿಗ್‌ ಬಾಸ್‌ ಕುರಿತು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ಇದೀಗ ಮತ್ತೊಂದು ಗುಡ್‌ ನ್ಯೂಸ್‌ ನೀಡಲು ಅವರು ರೆಡಿ ಆಗಿದ್ದಾರೆ. ಬಿಲ್ಲ ರಂಗ ಬಾಷ ಬೆನ್ನಲ್ಲೇ ಮತ್ತೊಂದು ಚಿತ್ರಕ್ಕೆ ಸಜ್ಜಾದ ಕಿಚ್ಚ ಸುದೀಪ್ ಅವರು ಮುಂದಿನ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಮ್ಯಾಕ್ಸ್ ಸಿನಿಮಾ ಸಕ್ಸಸ್ ಬೆನ್ನಲ್ಲೇ ನಿರ್ದೇಶಕ ವಿಜಯ್ ಕಾರ್ತಿಕೇಯ ಹಾಗೂ ಸುದೀಪ್‌ ಮತ್ತೆ ಒಂದಾಗಿದ್ದಾರೆ. ಕಿಚ್ಚ ಸುದೀಪ್ ಅಭಿನಯದ 47 ನೇ ಸಿನಿಮಾ ಅನೌನ್ಸ್ ಮಾಡಲಾಗಿದೆ.

ಸುದೀಪ್ ಹಾಗೂ ವಿಜಯ್ ಕಾರ್ತಿಕೇಯ ಜೊತೆಯಲ್ಲಿ ಹೊಸ ಸಿನಿಮಾ ಮೂಡಿ ಬರಲಿದೆ. ಸಿನಿಮಾ ಸುದ್ದಿಗೋಷ್ಠಿ ನಡೆದಿದೆ. ಟೀಸರ್ ರಿಲೀಸ್ ಮಾಡುವ ಮೂಲಕ ಕಿಚ್ಚನ 47 ನೇ ಸಿನಿಮಾ ರಿವೀಲ್ ಮಾಡಲಾಗಿದೆ. ಜುಲೈ 7 ರಿಂದ ಸಿನಿಮಾ ಶೂಟಿಂಗ್ ಪ್ಲಾನ್ ಮಾಡಿರುವ ಚಿತ್ರತಂಡ ಎಲ್ಲ ಸಿದ್ಧತೆ ಮಾಡಿಕೊಂಡಿದೆ. . ಸುದೀಪ್ 47ನೇ ಚಿತ್ರವನ್ನು ತಮಿಳಿನ ಬಿಗ್ ಪ್ರೊಡಕ್ಷನ್ ಹೌಸ್ ಸತ್ಯಜ್ಯೋತಿ ಫಿಲಂಸ್ ನಿರ್ಮಾಣ ಮಾಡುತ್ತಿದೆ. ಈ ಹಿಂದೆ ವಿಷ್ಣುವರ್ಧನ್ ಜೊತೆ ಸತ್ಯಜ್ಯೋತಿ ಚಿತ್ರ ನಿರ್ಮಾಣ ಮಾಡಿದ್ದ ಸತ್ಯಜ್ಯೋತಿ ಫಿಲಂಸ್ ಈಗ 39 ವರ್ಷಗಳ ನಂತರ ಮತ್ತೆ ಕನ್ನಡ ಚಿತ್ರನಿರ್ಮಾಣಕ್ಕೆ ಕೈ ಹಾಕಿದೆ.

ಚಿತ್ರದ ಕುರಿತು ಮಾತನಾಡಿದ ಸುದೀಪ್‌ ಮ್ಯಾಕ್ಸ್ ನಂತರ ನಾವು ಮತ್ತೆ ಒಂದಾಗಿದ್ದೇವೆ. ಸದ್ಯಕ್ಕೆ ಮ್ಯಾಕ್ಸ್ 2 ಸಿನಿಮಾ ಕೈ ಬಿಟ್ಟಿದ್ದೀವಿ. ಈ‌ ವರ್ಷ ಎರಡು ಸಿನಿಮಾ ಮಾಡುತ್ತೇವೆ. ಬಿಲ್ಲರಂಗ ಬಾಷ ಸಿನಿಮಾ ಈ ವರ್ಷ ರಿಲೀಸ್ ಆಗಲ್ಲ. ಆದರೆ ಈ ಸಿನಿಮಾ ಇದೇ ವರ್ಷ ಡಿಸೆಂಬರ್ 25 ಕ್ಕೆ ರಿಲೀಸ್ ಮಾಡುತ್ತೇವೆ. ಸೆಪ್ಟೆಂಬರ್ ಕೊನೆಯಲ್ಲಿ ಬಿಗ್ ಬಾಸ್ ಶುರು ಆಗುತ್ತೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: BBK 12: ಮುಂದಿನ 4 ಸೀಸನ್ ಮಾತ್ರವಲ್ಲ: ಬಿಗ್ ಬಾಸ್​ನಲ್ಲಿ ಕಿಚ್ಚನ ನಿರೂಪಣೆ ಎಷ್ಟು ಸೀಸನ್ ವರೆಗೆ ಇರುತ್ತೆ ಗೊತ್ತೇ?

ಬಿಗ್‌ಬಾಸ್‌ಗೆ ಮತ್ತೆ ಬಾದ್‌ಷಾ

ಕಳೆದ ಸೀಸನ್‌ನಲ್ಲಿ ಇದೇ ತನ್ನ ಲಾಸ್ಟ್‌ ಸೀಸನ್‌ ನಿರೂಪಣೆ ಎಂದು ಹೇಳಿ ಸುದೀಪ್‌ ತಿಳಿಸಿದ್ದರು. ಇದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಆದರೆ ಫೈನಲಿ, ಕಿಚ್ಚ ಸುದೀಪ್ 'ಬಿಗ್ ಬಾಸ್ ಕನ್ನಡ ಸೀಸನ್​​ 12' ನಿರೂಪಣೆ ಮಾಡೋದು ಅಧಿಕೃತಗೊಂಡಿದೆ. ಕಲರ್ಸ್ ಕನ್ನಡದ ಮುಖ್ಯಸ್ಥರು ಕಿಚ್ಚ ಸುದೀಪ್ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಿಚ್ಚ ಸುದೀಪ್ ಸೇರಿ ಬಿಗ್ ಬಾಸ್ ತಂಡ ಈ ಬಗ್ಗೆ ಮಾಹಿತಿ ಒದಗಿಸಿದೆ.