Gauthami Jadav, BBK 11: ಇನ್ಸ್ಟಾ ಸ್ಟೇಟಸ್ನಲ್ಲಿ ಫೋಟೋ ಹಾಕಿ ಟ್ರೋಲಿಗರ ಬಾಯಿ ಮುಚ್ಚಿಸಿದ ಗೌತಮಿ ಜಾಧವ್
ಗೌತಮಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ಮಂಜು ಅವರನ್ನು ಭೇಟಿಯಾಗಿದ್ದಾರೆ. ಇಬ್ಬರೂ ಜೊತೆಗಿರುವ ಫೋಟೋವನ್ನು ಗೌತಮಿ ಇನ್ಸ್ಟಾಗ್ರಾಮ್ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ. ವಿಶೇಷ ಎಂದರೆ ಈ ಫೋಟೋದಲ್ಲಿ ಗೌತಮಿ ಗಂಡ ಅಭಿಷೇಕ್ ಕೂಡ ಇದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಕ್ತಾಯಗೊಂಡಿದ್ದು, ಸ್ಪರ್ಧಿಗಳು ತಮ್ಮ ಕುಟುಂಬದವರ ಜೊತೆ ಸಮಯ ಕಳೆದಯುತ್ತಿದ್ದಾರೆ. ವಿನ್ನರ್ ಹನುಮಂತ ತನ್ನ ಹುಟ್ಟೂರಿಗೆ ತೆರಳಿದ್ದಾರೆ. ಇನ್ನೂ ಕೆಲಸ ಸ್ಪರ್ಧಿಗಳು ಮಾಧ್ಯಮಕ್ಕೆ ಸಂದರ್ಶನ ಕೊಡುತ್ತಿದ್ದಾರೆ. ಇದರ ಮಧ್ಯೆ ಫಿನಾಲೆ ವೀಕ್ಗು ಮುನ್ನ ಬಿಗ್ ಬಾಸ್ ಮನೆಯಿಂದ ಹೊರಬಂದ ಗೌತಮಿ ಜಾಧವ್ ಇನ್ಸ್ಟಾದಲ್ಲಿ ಒಂದು ಫೋಟೋ ಹಂಚಿಕೊಂಡು ಸಂಚಲನ ಸೃಷ್ಟಿಸಿದ್ದಾರೆ. ಈ ಫೋಟೋ ಮೂಲಕ ತನ್ನನ್ನು ಟ್ರೋಲ್ ಮಾಡುವವರಿಗೆ ಖಡಕ್ ತಿರುಗೇಟು ಕೊಟ್ಟಿದ್ದಾರೆ.
ತನ್ನ ಪಾಸಿಟಿವಿಟಿ ಮೂಲಕ ಕರ್ನಾಟಕ ಜನತೆಯ ಮನಗೆದ್ದ ಗೌತಮಿ ಬಿಗ್ ಬಾಸ್ನಲ್ಲಿ ಗೆಳೆಯ-ಗೆಳತಿ ಎಂದೇ ಮಂಜು ಜೊತೆ ಆತ್ಮೀಯರಾಗಿದ್ದರು. ಅವರ ನಡುವೆ ಎಷ್ಟೇ ವೈಮನಸ್ಸು ಅಥವಾ ಗೊಂದಲಗಳಾಗಿದ್ದರು ಒಬ್ಬರನ್ನೊಬ್ಬರು ಸಮಾಧಾನ ಮಾಡಿಕೊಳ್ಳುತ್ತಾ ಪರಿಶುದ್ಧ ಸ್ನೇಹಿತರಾಗಿ ದೊಡ್ಮನೆಯಲ್ಲಿದ್ದರು. ಆದರೆ, ಕೆಲವರು ಇವರಿಬ್ಬರ ಸ್ನೇಹಕ್ಕೆ ಹುಳಿ ಹಿಂಡುವ ಕೆಲಸ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕೆಲ ಟ್ರೋಲ್‌ಗಳಲ್ಲಿ ಇಬ್ಬರ ಬಗ್ಗೆ ಅಂಕಲ್- ಆಂಟಿ ಲವ್ ಸ್ಟೋರಿ ಎಂದು ಕರೆದಿದ್ದರು.
ಅಲ್ಲದೆ ಗೌತಮಿ ಅವರ ಗಂಡ ಅಭಿಷೇಕ್ಗೆ ಮಂಜು ಮೇಲೆ ಕೋಪ ಇದೆ ಎನ್ನಲಾಗಿತ್ತು. ಆದರೆ, ಇದಕ್ಕೆಲ್ಲ ತಲೆಕೆಡಿಸಿಕೊಳ್ಳದ ಗೌತಮಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ಮಂಜು ಅವರನ್ನು ಭೇಟಿಯಾಗಿದ್ದಾರೆ. ಇಬ್ಬರೂ ಜೊತೆಗಿರುವ ಫೋಟೋವನ್ನು ಗೌತಮಿ ಇನ್ಸ್ಟಾಗ್ರಾಮ್ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ. ವಿಶೇಷ ಎಂದರೆ ಈ ಫೋಟೋದಲ್ಲಿ ಗೌತಮಿ ಗಂಡ ಅಭಿಷೇಕ್ ಕೂಡ ಇದ್ದಾರೆ.
ಗೌತಮಿ ಜಾಧವ್, ಅವರ ಪತಿ ಅಭಿಷೇಕ್ ಹಾಗೂ ಮಂಜು ಒಂದೆಡೆ ಸೇರಿದ್ದಾರೆ. ಈ ಮೂವರು ಈವರೆಗೆ ಒಟ್ಟಾಗಿ ಯಾವುದೇ ಫೋಟೋ ತೆಗೆಸಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ಮೂವರು ಒಟ್ಟಾಗಿ ಸೇರಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಎಲ್ಲರ ಮೊಗದಲ್ಲೂ ನಗು ಇದೆ. ಅಭಿಷೇಕ್ ಹೆಗಲಮೇಲೆ ಮಂಜು ಕೈ ಹಾಕಿ ನಿಂತಿದ್ದಾರೆ. ಈ ಮೂಲಕ ಇವರ ಮಧ್ಯೆ ಯಾವುದೇ ಮನಸ್ತಾಪ ಇಲ್ಲ ಅನ್ನೋದು ಸ್ಪಷ್ಟವಾಗಿದೆ.
ಗೌತಮಿ ಅವರು ಇತ್ತೀಚೆಗಷ್ಟೆ ಸಂದರ್ಶನವೊಂದರಲ್ಲಿ ಅಂಕಲ್- ಆಂಟಿ ಲವ್ ಸ್ಟೋರಿ ಎಂದು ಕರೆದಿದ್ದ ಬಗ್ಗೆಯೂ ಮಾತನಾಡಿದ್ದರು. ದೇವರಿಗೆ ಧನ್ಯವಾದ ಹೇಳಬೇಕು. ನನ್ನ ಕುಟುಂಬಸ್ಥರು ಟ್ರೋಲ್‌ಗಳನ್ನು ಸ್ಪೋಟಿವ್ ಆಗಿ ತೆಗೆದುಕೊಂಡರು. ಈ ಟ್ರೋಲ್‌ಗಳೆಲ್ಲಾ ನನಗೆ ಹೊಸತು. ಆದರೆ ನನ್ನ ಫ್ಯಾಮಿಲಿ ಅವರು ಇದನೆಲ್ಲಾ ಎರಡು ಮೂರು ತಿಂಗಳಿನಿಂದ ನೋಡಿದ್ದಾರೆ. ತುಂಬಾ ಸ್ಪೋಟಿವ್ ಆಗಿ ತೆಗೆದುಕೊಂಡಿದ್ದಾರೆ. ಯಾಕೆಂದರೆ ಅವರಿಗೆ ನಾನೇನು ಎನ್ನುವುದು ಗೊತ್ತು. ಅದರ ಬಗ್ಗೆ ನನಗೆ ಖುಷಿ ಇದೆ ಎಂದಿದ್ದರು.
ಬಿಗ್ ಬಾಸ್ ಮನೆಯಲ್ಲಿ ಅಂಥದ್ದೇನು ಇರಲಿಲ್ಲ. ಲವ್ ಸ್ಟೋರಿ ಅನ್ನೋದೇ ಇರಲಿಲ್ಲ. ಇದು ನೀವು ನೋಡುವ ರೀತಿ. ಯಾರು ಯಾರನ್ನು ಬೇಕಾದ್ರು ಅಂಕಲ್- ಆಂಟಿ ಅಂಥ ಕರೆಯಬಹುದು. ನನಗೆ ಅದರಿಂದ ಸಮಸ್ಯೆಯಿಲ್ಲ. ಲವ್ ಸ್ಟೋರಿ ಇರಲಿಲ್ಲ. ಉತ್ತಮ ಫ್ರೆಂಡ್ ಶಿಪ್ ಇತ್ತು ಎನ್ನುವ ಸ್ಪಷ್ಪನೆಯನ್ನು ನೀಡುತ್ತೇನೆ. ಇದೊಂದು ಟ್ರೋಲ್ ಅಷ್ಟೇ. ಯಾರ ಅಭಿಪ್ರಾಯ ಅಲ್ಲ. ಅಭಿಪ್ರಾಯಕ್ಕೂ ಟ್ರೋಲ್‌ಗೂ ವ್ಯತ್ಯಾಸ ಇದೆ. ನನ್ನ ಜೀವನದಲ್ಲಿ ಅಭಿಷೇಕ್ (ಗಂಡ) ಅವರೊಂದಿಗೆ ಮಾತ್ರ ಲವ್ ಸ್ಟೋರಿ ಇರೋದು ಎಂದು ಟ್ರೋಲಿಗರ ಬಾಯಿ ಮುಚ್ಚಿಸಿದರು.
Mokshitha Pai, BBK 11: ಕೊನೆಗೂ ಮಾಧ್ಯಮದ ಮುಂದೆ ಬಂದ ಮೋಕ್ಷಿತಾ: ಮಕ್ಕಳ ಕಳ್ಳಿ ಎಂದವರಿಗೆ ಖಡಕ್ ತಿರುಗೇಟು