ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss 12: ಅಯ್ಯೋ, ʻಗಿಚ್ಚಿ ಗಿಲಿ ಗಿಲಿʼ ಟೀಮ್‌ ಬಂದರೂ ರಕ್ಷಿತಾಗೆ ಗಿಲ್ಲಿದೇ ಚಿಂತೆ! ಬಿದ್ದು ಬಿದ್ದು ನಕ್ಕ ಸ್ಪರ್ಧಿಗಳು

Bigg Boss Kannada 12 Finale: ಬಿಗ್‌ ಬಾಸ್‌ ಫಿನಾಲೆಗೆ ಇನ್ನು ಕೇವಲ ಎರಡು ದಿನಗಳು ಬಾಕಿ ಇರುವಾಗ, ಕಲರ್ಸ್ ಕನ್ನಡದ ನೂತನ ಶೋ 'ಗಿಚ್ಚಿ ಗಿಲಿ ಗಿಲಿ' ಜೂನಿಯರ್ಸ್ ತಂಡದ ಕಲಾವಿದರು ದೊಡ್ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ರಕ್ಷಿತಾ ಶೆಟ್ಟಿ ಅವರು "ನನಗೆ ಗಿಲ್ಲಿ ಇಷ್ಟ" ಎಂದು ಹೇಳಿದ್ದು ಮನೆಯಲ್ಲಿ ನಗು ಉಕ್ಕಿಸಿದೆ.

ಕಲರ್ಸ್‌ ಕನ್ನಡ ವಾಹಿನಿಯ ಹೆಮ್ಮೆಯ ಬಿಗ್‌ ಬಾಸ್‌ ಶೋ ಇನ್ನೆರಡು ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಮುಂದಿನ ವಾರದಿಂದ ಕಲರ್ಸ್‌ನ ಜನಪ್ರಿಯ ಶೋ ಗಿಚ್ಚಿ ಗಿಲಿ ಗಿಲಿಯ ಹೊಸ ಸೀಸನ್‌ ಆರಂಭವಾಗಲಿದೆ. ಈ ಬಾರಿಯ ಗಿಚ್ಚಿ ಗಿಲಿ ಗಿಲಿ ಕೊಂಚ ಭಿನ್ನವಾಗಿರಲಿದೆ. ಕಾರಣ, ಮಕ್ಕಳು ಈ ಸಲ ಕಾಮಿಡಿ ಮಾಡಿ, ವೀಕ್ಷಕರನ್ನು ರಂಜಿಸಲಿದ್ದಾರೆ.

ಸದ್ಯ ಶೋ ಆರಂಭದ ಹಿನ್ನೆಲೆಯಲ್ಲಿ ಗಿಚ್ಚಿ ಗಿಲಿ ಗಿಲಿ ತಂಡದ ಪ್ರಮೋಷನ್‌ಗಾಗಿ ಬಿಗ್‌ ಬಾಸ್‌ ಮನೆಯೊಳಗೆ ಕಾಲಿಟ್ಟಿದೆ. ಸ್ಪರ್ಧಿಗಳ ಜೊತೆಗೆ ಮಾತನಾಡಿದೆ. ಈ ಸಂದರ್ಭದಲ್ಲಿ ಸಾಕಷ್ಟು ತಮಾಷೆಯ ಪ್ರಸಂಗಳು ನಡೆದಿವೆ. "ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಸೂಪರ್‌ ಡೂಪರ್‌ ಹಿಟ್‌ ಆಗಿದೆ. ಇದೀಗ ಅದೇ ಜಾಗಕ್ಕೆ ಅಷ್ಟೇ ತೂಕವಾಗಿ ಗಿಚ್ಚಿ ಗಿಲಿ ಗಿಲಿ ಜೂನಿಯರ್ಸ್‌ ಬರ್ತಿದೆ" ಎಂದು ಮಾನಸ ಅವರು ಎಲ್ಲರ ಮುಂದೆ ಹೇಳಿದ್ದಾರೆ.

Chowkidar Movie : ಗಿಲ್ಲಿ ನಟ ನಟಿಸಿರೋ ಮತ್ತೊಂದು ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌! ಪಾತ್ರ ಏನು?

ಬಿಗ್‌ ಬಾಸ್‌ ಮನೆಯೊಳಗೆ ಯಾರೆಲ್ಲಾ ಬಂದಿದ್ರು?

ಗಿಚ್ಚಿ ಗಿಲಿ ಗಿಲಿಯ ಕಲಾವಿದರಾದ ಚಿಲ್ಲರ್‌ ಮಂಜು, ರಾಘವೇಂದ್ರ, ಮಾನಸ, ಶಿವು, ವಿನೋದ್‌ ಗೊಬ್ಬರಗಾಲ, ಪ್ರಶಾಂತ್‌, ತುಕಾಲಿ ಸಂತೋಷ್‌, ವಾಣಿ ಗೌಡ ಮುಂತಾದವರು ಆಗಮಿಸಿದ್ದರು. ಶೋ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದ ಮಾನಸ, ಗಿಲ್ಲಿಯನ್ನು ಕಂಡು, "ಈ ಸಲ ಮಕ್ಕಳು ಇರ್ತಾರೆ, ಆ ಮಕ್ಕಳು ನಿನ್‌ ಥರನೇ ಇರ್ತವೇ ಕಣೋ" ಎಂದು ಗಿಲ್ಲಿ ನಟನಿಗೆ ರೇಗಿಸಿದ್ದಾರೆ. ಆಗ ಗಿಲ್ಲಿ ನಟ, "ನಾನು ಒಂದು ಮಗುವಾಗಿ ಆ ಶೋಗೆ ಬಂದುಬಿಡ್ತಿನಿ" ಎಂದು ತಮಾಷೆ ಮಾಡಿದ್ದಾರೆ.

Bigg Boss 12: ʻಕಿಚ್ಚʼ ಸುದೀಪ್‌ಗೆ ತಂದೆಯ ಸ್ಥಾನ ನೀಡಿದ ರಕ್ಷಿತಾ ಶೆಟ್ಟಿ; ʻಬಿಗ್‌ ಬಾಸ್‌ʼ ಮನೆಯಲ್ಲಿ ತುಳುನಾಡ ಹುಡುಗಿಯ ಭರ್ಜರಿ ಜರ್ನಿ

ನಂಗೆ ಗಿಲ್ಲಿ ಇಷ್ಟ!

ಮನೆಯೊಳಗೆ ಆಗಮಿಸಿದ್ದ ಗಿಚ್ಚಿ ಗಿಲಿ ಗಿಲಿ ತಂಡದಲ್ಲಿ ನಿಮಗೆ ಯಾರು ಇಷ್ಟ ಎಂದು ಪ್ರಶಾಂತ್‌ ಅವರು ಹೇಳಿದರು. ಆಗ ಅಶ್ವಿನಿ ಗೌಡ, "ನೀವು ಇಷ್ಟ ಎಲ್ಲರೂ‌ ಇಷ್ಟ" ಎಂದು ಹೇಳಿದರು. ಆದರೆ ರಕ್ಷಿತಾ ಮಾತ್ರ, "ನನಗೆ ಗಿಲ್ಲಿ ಇಷ್ಟ" ಎಂದರು. ಆಗ ಮನೆಯ ಸದಸ್ಯರೆಲ್ಲಾ ಜೋರಾಗಿ ನಕ್ಕಿದ್ದಾರೆ. ಗಿಚ್ಚಿ ಗಿಲಿ ಗಿಲಿ ಟೀಮ್‌ ಬಂದರೂ ರಕ್ಷಿತಾಗೆ ಮಾತ್ರ ಗಿಲ್ಲಿದೇ ಚಿಂತೆ ಎಂದು ಜೋರಾಗಿ ನಗಾಡಿದ್ದಾರೆ.

ನಂತರ ರಘು ಅವರು ಮಿಮಿಕ್ರಿ ಮಾಡಿದ್ದಾರೆ. "ಅಶ್ವಿನಿ ನನ್ನ ಅಶ್ವಿನಿ" ಎಂದು ಡೈಲಾಗ್‌ ಹೇಳಿ, ಎಲ್ರನ್ನು ನಗಿಸಿದ್ದಾರೆ. ತುಕಾಲಿ ಸಂತೋಷ್‌ ಅವರ ಮಿಮಿಕ್ರಿ ಕೂಡ ಇರಲಿದೆ. ಈ ಪೂರ್ಣ ಸಂಚಿಕೆ ಇಂದು (ಜ.16) ಪ್ರಸಾರವಾಗಲಿದೆ. ನಾಳೆಯಿಂದ (ಜ.17) ಫಿನಾಲೆ ಸಮಾರಂಭ ಶುರುವಾಗಲಿದೆ. ಭಾನುವಾರ (ಜ.18) ಫಿನಾಲೆ ಸಂಚಿಕೆ ಪ್ರಸಾರವಾಗಲಿದ್ದು, ರಾತ್ರಿ ಯಾರು ವಿನ್ನರ್‌ ಎಂಬುದು ಗೋಷಣೆ ಆಗಲಿದೆ.