ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gicchi Giligili Juniors: ಗೆಲುವಿನ ಪಟ್ಟ ಅಲಂಕರಿಸಿದ ಮಾನಸಾ ಗುರುಸ್ವಾಮಿ! ‘ಗಿಚ್ಚಿಗಿಲಿಗಿಲಿ ಜ್ಯೂನಿಯರ್ಸ್‌’ ಗ್ರ್ಯಾಂಡ್‌ ಫಿನಾಲೆ

Gicchi Giligili Juniors:ಗಿಚ್ಚಿ-ಗಿಲಿಗಿಲಿ ವಿನ್ನರ್‌’ ಬೆಲ್ಟ್‌ ನೋಡುತ್ತಿದ್ದಂತೆ ಕಣ್ಣೀರಿಟ್ಟಿದ್ದಾರೆ. ಎಮೋಷನಲ್‌ ಕ್ಷಣವನ್ನ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ನಟಿ. ಗಿಚ್ಚಿ-ಗಿಲಿಗಿಲಿ ಜ್ಯೂನಿಯರ್ಸ್‌' ಅದ್ದೂರಿ ಕಾರ್ಯಕ್ರಮವನ್ನ ಹೋಸ್ಟ್‌ ಮಾಡಿದ್ದು ನಟಿ, ನಿರೂಪಕಿ ಅನುಪಮಾ ಗೌಡ ಅವರು. ಇಷ್ಟು ವಾರಗಳ ಕಾಲ ಕಾರ್ಯಕ್ರಮ ನಿರೂಪಿಸಿದ ನಟಿ ಗ್ರ್ಯಾಂಡ್‌ ಫಿನಾಲೆಯಲ್ಲಿ ಕಾಣಿಸಿಕೊಂಡಿಲ್ಲ

Gicchi Giligili: ಗೆಲುವಿನ ಪಟ್ಟ ಅಲಂಕರಿಸಿದ ಮಾನಸಾ ಗುರುಸ್ವಾಮಿ!

ಗಿಚ್ಚ ಗಿಲಿ ಗಿಲಿ ಮಾನಸ -

Yashaswi Devadiga
Yashaswi Devadiga May 31, 2026 7:04 PM

ಕಲರ್ಸ್ ಕನ್ನಡ (Colors Kannada) ಗಿಚ್ಚಿ ಗಿಲಿ ಗಿಲಿ ಜ್ಯೂನಿಯರ್ ಶೋ ಶುರು ಆದಾಗಿನಿಂದ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಬಿಗ್ ಬಾಸ್ (Bigg Boss) ಮುಗಿಯುತ್ತಿದ್ದಂತೆ ಗಿಚ್ಚಿ ಗಿಲಿಗಿಲಿ (gicchi gili gili) ಜ್ಯೂನಿಯರ್ಸ್‌ ಶೋ ಆರಂಭವಾಗಿತ್ತು. ನಟಿ ಶ್ರುತಿ, ಸೃಜನ್ ಲೋಕೇಶ್ (Srujan Lokesh) ಹಾಗೂ ಸಾಧು ಕೋಕಿಲಾ ತೀರ್ಪುಗಾರರಾಗಿದ್ದರು. ಇಂದು ಅದ್ದೂರಿಯಾಗಿ ಅಂತ್ಯವಾದ ಕಾರ್ಯಕ್ರಮದ ವಿನ್ನರ್‌ (winner) ಆಗಿ ಹೊರ ಹೊಮ್ಮಿದ್ದಾರೆ ಮಾನಸಾ (Manasa) ಮತ್ತು ಪ್ರಗ್ಯ.

ಗಿಚ್ಚಿ ಗಿಲಿ ಗಿಲಿ ಜ್ಯೂನಿಯರ್ ಶೋಗಾಗಿಯೇ ಕಲರ್ಸ್ ಕನ್ನಡ ಅನೇಕ ಕಡೆ ಆಡಿಷನ್ ನಡೆಸಿತ್ತು. ಆಡಿಷನ್ ವೇಳೆ ಸಾಕಷ್ಟು ಗದ್ದಲ ಕೂಡ ನಡೆದಿತ್ತು. ಆಡಿಷನ್ ಸರಿಯಾಗಿ ನಡೆದಿಲ್ಲ, ಮಕ್ಕಳ ಟ್ಯಾಲೆಂಟ್ ನೋಡಿಲ್ಲ ಎಂಬ ಆರೋಪದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ಪ್ರತಿ ವಾರವೂ ಒಂದೊಂದು ವಿಭಿನ್ನ ಕಾನ್ಸೆಪ್ಟ್‌ ಜೊತೆಗೆ ವೇದಿಕೆ ಮೇಲೆ ಧೂಳ್‌ ಎಬ್ಬಿಸುತ್ತಿದ್ದರು ಸ್ಪರ್ಧಿಗಳು. ಮಾನಸಾ ಗುರುಸ್ವಾಮಿ, ತುಕಾಲಿ ಸಂತೋಷ್‌, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್‌, ವಿನೋದ್‌ ಗೊಬ್ಬರಗಾಲ, ಚಿಲ್ಲರ್‌ ಮಂಜು, ಚಂದ್ರಪ್ರಭಾ, ಶಿವಕುಮಾರ್‌(ಶಿವು), ಪ್ರಶಾಂತ್‌ (ಟ್ಯಾಲೆಂಟೆಡ್‌ ಕಲಾವಿದ), ರಾಘವೇಂದ್ರ (ರಾಘು ರಾಗಿಣಿ), ಕಾಮಿಡಿ ಕಿಲಾಡಿಗಳು ಖ್ಯಾತಿಯ ವಾಣಿ ಸೇರಿದಂತೆ ಅನೇಕ ಹಾಸ್ಯ ಕಲಾವಿದರು ಸೀನಿಯರ್‌ ಕ್ಯಾಟಗರಿಯಲ್ಲಿ ಮಕ್ಕಳಿಗೆ ಮೆಂಟರಿಂಗ್‌ ಮಾಡಿದ್ದರು.Amruthadhaare Serial: ಮಿಂಚು ಸುಳಿವು ಕೇಡಿ ಜೆಡಿಗೆ ಸಿಕ್ಕೇ ಬಿಡುತ್ತಾ? ಶಕುನಿ ಮಾಮ ಕಿಡ್ನಾಪ್‌!

ಗಿಚ್ಚಿ-ಗಿಲಿಗಿಲಿ ವಿನ್ನರ್‌’ ಬೆಲ್ಟ್‌ ನೋಡುತ್ತಿದ್ದಂತೆ ಕಣ್ಣೀರಿಟ್ಟಿದ್ದಾರೆ. ಎಮೋಷನಲ್‌ ಕ್ಷಣವನ್ನ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ನಟಿ. ಗಿಚ್ಚಿ-ಗಿಲಿಗಿಲಿ ಜ್ಯೂನಿಯರ್ಸ್‌' ಅದ್ದೂರಿ ಕಾರ್ಯಕ್ರಮವನ್ನ ಹೋಸ್ಟ್‌ ಮಾಡಿದ್ದು ನಟಿ, ನಿರೂಪಕಿ ಅನುಪಮಾ ಗೌಡ ಅವರು. ಇಷ್ಟು ವಾರಗಳ ಕಾಲ ಕಾರ್ಯಕ್ರಮ ನಿರೂಪಿಸಿದ ನಟಿ ಗ್ರ್ಯಾಂಡ್‌ ಫಿನಾಲೆಯಲ್ಲಿ ಕಾಣಿಸಿಕೊಂಡಿಲ್ಲ.

ಗಿಚ್ಚಿ ಗಿಲಿಗಿಲಿ ಸೀನಿಯರ್‌’ ಆಗಿದ್ದ ಮಾನಸಾ ಗುರುಸ್ವಾಮಿ ಅವರು ಗೆಲುವು ಸಾಧಿಸಿದ್ದಾರೆ. ಇವರಿಗೆ 5ಲಕ್ಷ ರೂಪಾಯಿ ಬಹುಮಾನವನ್ನ ಸ್ಪಾನ್ಸರ್ಸ್‌ ನೀಡಿದರು. ಗೆಲುವಿನ ಟ್ರೋಫಿ ಬೆಲ್ಟ್‌ ಕೂಡ ಲಭಿಸಿದೆ.

ನಾನು ಒಬ್ಬಳು ವಿನ್ನರ್‌ ಆಗ್ತೀನಿ ಅಂತ ಅನ್ಕೊಂಡಿರಲಿಲ್ಲ. ಈ ಕ್ಷಣ ಏನು ಹೇಳಬೇಕು ಅಂತ ಗೊತ್ತಾಗುತ್ತಿಲ್ಲ. ಸಾಕಷ್ಟು ಆಡಿಷನ್‌ ಕೊಟ್ಟು ಅವಕಾಶಕ್ಕಾಗಿ ಕಾಯುತ್ತಿದ್ದೆ. ಆದರೆ, ಎಲ್ಲಿಯೂ ನನಗೆ ಆಫರ್‌ಗಳು ಬರಲಿ . ನನ್ನ ಗಂಡ ಶಿವು ಜೊತೆಗೆ ಕಳಿಸಿದ್ದಾರೆ. ಇವರು ನನ್ನ ಲಕ್ಕಿ ಚಾರ್ಮ್‌. ನಮ್ಮ ಮದುವೆ ಆದ ನಂತರ ಸಿಕ್ಕ ಮೊದಲ ಗೆಲುವಿದು” ಎಂದು ‘ಗಿಚ್ಚಿ-ಗಿಲಿಗಿಲಿ ಜ್ಯೂನಿಯರ್ಸ್ ವಿನ್ನರ್‌’ ನಟಿ ಮಾನಸಾ ಅವರು ಹೇಳಿದರು.

ಇದನ್ನೂ ಓದಿ: Rashmika Mandanna: ರಶ್ಮಿಕಾಗೆ ತಿರುಗೇಟು ಕೊಟ್ಟ ಶಾಹಿದ್ ಕಪೂರ್; ವಿಡಿಯೋ ವೈರಲ್‌

ಇನ್ನು ಚಿಕ್ಕ ವಯಸ್ಸಿನಿಂದಲೂ ಸಹ ನಟನೆಯಲ್ಲಿ ಆಸಕ್ತಿ ಇದ್ದ ಮಾನಸಾ ಗುರುಸ್ವಾಮಿ ಅವರನ್ನು ಅವರ ತಾಯಿ ನಟನ ಕಲಿಕಾ ಶಾಲೆಗೆ ಸೇರಿಸಿದ್ದರು ಮತ್ತು ಮಾನಸ ಗುರುಸ್ವಾಮಿ ನಂತರದ ದಿನಗಳಲ್ಲಿ ಥಿಯೇಟರ್ ಆರ್ಟಿಸ್ಟ್ ಆಗಿ ಕೂಡ ಕಲಿಯಲು ಆರಂಭಿಸಿದ್ದರು. ಹೀಗೆ ಥಿಯೇಟರ್‌ನಲ್ಲಿ ಮಾನಸಾ ಗುರುಸ್ವಾಮಿಗೆ ಮಾರ್ಗದರ್ಶಕರಾಗಿದ್ದ ಓರ್ವರು ಮಜಾ ಭಾರತದಲ್ಲಿಯೂ ಕೆಲಸ ಮಾಡುತ್ತಿದ್ದ ಕಾರಣ ಅವಕಾಶ ಲಭಿಸಿತು ಎನ್ನುತ್ತಾರೆ.