ಗಿಲ್ಲಿ ನಟ (Gilli Nata) ಅವರು ಅಪಾರವಾದ ಜನಪ್ರಿಯತೆ ಸಂಪಾದಿಸಿದ್ದಾರೆ. ಹೋದಲ್ಲಿ ಬಂದಲ್ಲಿ ಜನರು ಮುತ್ತಿಕೊಳ್ಳುತ್ತಿದ್ದಾರೆ. ಶುಕ್ರವಾರ ಬೆಂಗಳೂರಿನಲ್ಲಿ ಚಿನ್ನದ ಅಂಗಡಿ ಉದ್ಘಾಟನೆಗೆ ಹೋದಾಗ ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು (Fans) ಸೇರಿದ್ದರು. ಬಿಗ್ ಬಾಸ್ಗೆ ಹೋಗುವಾಗ ಗಿಲ್ಲಿ ನಟನಿಗೆ ಇನ್ಸ್ಟಾಗ್ರಾಮ್ನಲ್ಲಿ (Instagram) ಇದ್ದಿದ್ದು ಕೇವಲ 1 ಲಕ್ಷ ಹಿಂಬಾಲಕರು. ಈಗ ಆ ಸಂಖ್ಯೆ 2 ಮಿಲಿಯನ್ (Followers) ತಲುಪಿದೆ. 20 ಲಕ್ಷ ಹಿಂಬಾಲಕರನ್ನು ಸಂಪಾದಿಸಿ ಅವರು ದಾಖಲೆ ಬರೆದಿದ್ದಾರೆ. ಅವರು ಅಂದುಕೊಂಡಿದ್ದು 10 ಲಕ್ಷ, ಸಿಕ್ಕಿದ್ದು ಮಾತ್ರ 20 ಲಕ್ಷ. ಇದೀಗ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಗಿಲ್ಲಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಏಕೆ ಮೆಚ್ಚಿಕೊಂಡರು ಗೊತ್ತಾಗ್ತಾ ಇಲ್ಲ
ಜನ ನನ್ನನ್ನು ಏಕೆ ಮೆಚ್ಚಿಕೊಂಡರು ಗೊತ್ತಾಗ್ತಾ ಇಲ್ಲ. ಪವಾಡ ಅಂತ ಹೇಳಬಹುದು. ನನಗೆ 10 ನೇ ವಾರದಲ್ಲಿ ತುಂಬಾ ಕಾನ್‌ಫಿಡೆನ್ಸ್ ಬಂತು . ಕೊನೆ ತನಕ ಇರಬಹುದು ಎಂದು ಎಂದಿದ್ದಾರೆ. ಸುದೀಪ್ ಅವರು ಕೂಡ ಒಂದು ಸುಳಿವು ಕೊಡ್ತಾ ಇದ್ದರು. ಇನ್ನು ಕೆಲವು ನಮಗೆ ಕಾಂಪಿಟೇಟರ್ ಅಂದಾಗ ಹಿಂಟ್ ಸಿಕ್ಕಿತ್ತು ಎಂದರು.
ಇದನ್ನೂ ಓದಿ: Daali Dhananjaya: ತಂದೆ ಆಗ್ತಿದ್ದಾರೆ ಡಾಲಿ ಧನಂಜಯ್; ವೇದಿಕೆಯಲ್ಲೇ ಸಂತೋಷದ ವಿಚಾರ ಹಂಚಿಕೊಂಡ ನಟ
ನನ್ನಿಂದ ಶೋ ಅಂತ ನಾನು ಹೇಳಲ್ಲ
ನಾನು ನನ್ನ ಮೇಲೆ ಶೋ ಇದೆ ಅಂತ ಹೇಳೋಲ್ಲ, ಅದು ಜನಗಳ ಪ್ರೀತಿ. ಅದು ಸಮಯ, ಹಾಗೇ ಸಿಗೋ ಜನ, ಅಲ್ಲಿ ಬರೋ ಸಂದರ್ಭ ಮುಖ್ಯ ಆಗುತ್ತದೆ, ಬೇರೆ ಸೀಸನ್‌ನಲ್ಲಿ ಇದ್ದರೆ ಬರ್ತಾ ಇರ್ತಿದ್ದೆ ಅನ್ಸತ್ತೆ. ಆದರೆ ಈ ಸೀಸನ್‌ನಲ್ಲಿ ಎಲ್ಲವೂ ಅವಕಾಶ ಮೂಡಿ ಬಂದಿದೆ. ನನ್ನಿಂದ ಶೋ ಅಂತ ನಾನು ಹೇಳಲ್ಲ ಎಂದಿದ್ದಾರೆ.
ಡೌಟ್ ಶುರು ಆಗಿತ್ತು
ಮೂರು ಜನ ಹುಡುಗಿರು ಫೈನಲ್ ಇದ್ದಾಗ, ಅನ್ನಿಸಿತ್ತು. ನಾನೇ ಹೋಗ್ತೀನಿ ಅಂತ. ಶೃತಿ ಅವರು ಕೂಡ ಬಂದಿದ್ದರು. ಹಾಗಾಗಿ ಡೌಟ್ ಶುರು ಆಗಿತ್ತು. ಯಾವ ಸೀಸನ್ ಬಂದಿಲ್ಲ, ಈ ಸೀಸನ್ ಯಾಕೆ ಬಂದರು ಅಂತ ಡೌಟ್ ಬಂತು. ಆಮೇಲೆ ಕೊನೆಯಲ್ಲಿ ನಂಗೆ ಕ್ಲಾರಿಟಿ ಸಿಕ್ತು. ಸ್ಟೇಜ್ ಮೇಲೆ ಕರೆದುಕೊಂಡು ಹೋದಾಗ, ಅನ್ಸೋದು. ಕಾವ್ಯ ಅವರು ಟಾಪ್ 3 ಅಲ್ಲಿ ಇರಬೇಕಿತ್ತು ಅನ್ಸತ್ತೆ. ರಕ್ಷಿತಾ ಕೂಡ ಗೆದ್ದರೆ ನಾನು ಖುಷಿ ಅಂತಿದ್ದರು. ನಾನು ಅಂದುಕೊಂಡಂತೆ ಪಾಸಿಷನ್ ಸಿಕ್ಕಿದೆ. ಡೌಟ್ ಇರಲಿಲ್ಲ ಎಂದರು.
ಇದನ್ನೂ ಓದಿ: Sri Raghavendra Mahathme: ವಾರಾಂತ್ಯದಲ್ಲಿ ಭಕ್ತಿಸುಧೆ! ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲಿ ವಿವಾಹ ವೈಭವ
ಮುಖವಾಡ ಹಾಕೊಂಡ್ರೋ ಎಷ್ಟು ದಿನ ಹಾಕಿಕೊಳ್ಳಲು ಆಗತ್ತೆ
ಇನ್ನು ಅಶ್ವಿನಿ ಅವರು ನನಗೆ ಮಾತಿಗೆ ಸಿಕ್ಕಿಲ್ಲ. ಮುಖವಾಡ ಹಾಕೊಂಡ್ರೋ ಎಷ್ಟು ದಿನ ಹಾಕಿಕೊಳ್ಳಲು ಆಗತ್ತೆ. ನಾನು ಎಲ್ಲಿಯೂ ಬಡವ ಅಂತ ಹೇಳಿಲ್ಲ. ನಾನು ಹಾಕೋ ಬಟ್ಟೆ ಅಲ್ಲಿ ಜಡ್ಜ್ ಮಾಡಬಾರದು. ನಾನು ಎಲ್ಲಿಯೂ ಹೇಳಿಕೊಂಡಿಲ್ಲ. ಆ ಥರ ನೋಡೋಕೆ ಹೋದ್ರೆ ತುಂಬಾ ಜನ ಇದ್ದರು. ಗೊತ್ತಿಲ್ಲ ಅಶ್ವಿನಿ ಅವರು ಏಕೆ ಹಾಗೆ ಅಂದ್ರು ಎಂದರು.