Sri Raghavendra Mahathme: ವಾರಾಂತ್ಯದಲ್ಲಿ ಭಕ್ತಿಸುಧೆ! ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲಿ ವಿವಾಹ ವೈಭವ
Kannada Serial: ಜೀ ಕನ್ನಡ `ಶ್ರೀ ರಾಘವೇಂದ್ರ ಮಹಾತ್ಮೆ’ ಎಂಬ ಭಕ್ತಿಪರ ಧಾರಾವಾಹಿಯನ್ನು ಪ್ರೇಕ್ಷಕರಿಗೆ ನೀಡುತ್ತಿದೆ. ಶ್ರೀ ರಾಘವೇಂದ್ರ ಸ್ವಾಮಿಗಳ ಅಸಾಮಾನ್ಯ ಜೀವನಯಾತ್ರೆ ವಿವರಿಸುತ್ತದೆ ಈ ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲಿ. ರಾಯರ ಬಾಲ್ಯದಿಂದ ಹಿಡಿದು ಅವರ ಆತ್ಮಜಾಗೃತಿ, ಉಪದೇಶಗಳು, ಪವಾಡಗಳು ಮತ್ತು ಪರಂಪರೆ ಈ ಧಾರಾವಾಹಿಯಲ್ಲಿ ಕಾಣಸಿಗಲಿದೆ. ಕಥಾಶೈಲಿ, ಮತ್ತು ಭವ್ಯ ದೃಶ್ಯಾವಳಿಗಳ ಸಮನ್ವಯದೊಂದಿಗೆ ಈ ಧಾರಾವಾಹಿ ರಾಯರ ಆತ್ಮಚರಿತ್ರೆ ಮಾತ್ರವಲ್ಲದೆ ಜೀವನದ ಮೌಲ್ಯಗಳನ್ನು ವೀಕ್ಷಕರಿಗೆ ತಿಳಿಸುವಲ್ಲಿ ಯಶಸ್ವಿಯಾಗಿದೆ.
ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿ -
ಜೀ ಕನ್ನಡ `ಶ್ರೀ ರಾಘವೇಂದ್ರ ಮಹಾತ್ಮೆ’ ( Sri Raghavendra Mahathme) ಎಂಬ ಭಕ್ತಿಪರ ಧಾರಾವಾಹಿಯನ್ನು ಪ್ರೇಕ್ಷಕರಿಗೆ ನೀಡುತ್ತಿದೆ. ಶ್ರೀ ರಾಘವೇಂದ್ರ ಸ್ವಾಮಿಗಳ ಅಸಾಮಾನ್ಯ ಜೀವನಯಾತ್ರೆ ವಿವರಿಸುತ್ತದೆ ಈ ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲಿ. ರಾಯರ ಬಾಲ್ಯದಿಂದ ಹಿಡಿದು ಅವರ ಆತ್ಮಜಾಗೃತಿ, ಉಪದೇಶಗಳು, ಪವಾಡಗಳು ಮತ್ತು ಪರಂಪರೆ ಈ ಧಾರಾವಾಹಿಯಲ್ಲಿ ಕಾಣಸಿಗಲಿದೆ. ಕಥಾಶೈಲಿ (Story), ಮತ್ತು ಭವ್ಯ ದೃಶ್ಯಾವಳಿಗಳ ಸಮನ್ವಯದೊಂದಿಗೆ ಈ ಧಾರಾವಾಹಿ ರಾಯರ ಆತ್ಮಚರಿತ್ರೆ (Rayaru) ಮಾತ್ರವಲ್ಲದೆ ಜೀವನದ ಮೌಲ್ಯಗಳನ್ನು ವೀಕ್ಷಕರಿಗೆ ತಿಳಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲಿ ವೆಂಕಟನಾಥ- ಸರಸ್ವತಿಯ ವಿವಾಹ ವೈಭವವು ಮಹಾಸಂಚಿಕೆಯ ರೂಪದಲ್ಲಿ ಪ್ರಸಾರಗೊಳ್ಳಲಿದೆ.
ಶನಿವಾರ ಮತ್ತು ಭಾನುವಾರ (ಇಂದು ಮತ್ತು ನಾಳೆ) ಸಂಜೆ 5.30 ರಿಂದ 7 ಗಂಟೆಯ ವರೆಗೆ ರಾಯರ ಪೂರ್ವಾಶ್ರಮದ ಬದುಕಿನ ಸಂಭ್ರಮವನ್ನು ಕಣ್ತುಂಬಿಕೊಳ್ಳಬಹುದು.
ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಹೆಸರು ವೆಂಕಟನಾಥ ಎಂಬುದಾಗಿತ್ತು. ವಿಜಯೀಂದ್ರ ತೀರ್ಥರ ಅನುಗ್ರಹದಂತೆ ಅಧ್ಯಾಪನ ವೃತ್ತಿ ನಡೆಸುತ್ತಿದ್ದ ವೆಂಕಟನಾಥ ಸರಸ್ವತಿ ಎಂಬ ವಧುವನ್ನು ವಿವಾಹವಾದ.
ಇದನ್ನೂ ಓದಿ: Daali Dhananjaya: ತಂದೆ ಆಗ್ತಿದ್ದಾರೆ ಡಾಲಿ ಧನಂಜಯ್; ವೇದಿಕೆಯಲ್ಲೇ ಸಂತೋಷದ ವಿಚಾರ ಹಂಚಿಕೊಂಡ ನಟ
ರಾಯರ ಬದುಕಿನ ಪುಣ್ಯಕಥೆ ಶ್ರೀ ರಾಘವೇಂದ್ರ ಮಹಾತ್ಮೆಯು ಪ್ರಸ್ತುತ ವಿವಾಹದ ಘಟ್ಟದಲ್ಲಿದೆ. ವೆಂಕಟನಾಥ- ಸರಸ್ವತಿಯ ಮದುವೆಯನ್ನು ಮಾಧ್ವ ಸಂಪ್ರದಾಯದ ಅನುಸಾರ, ಹಳೆಯ ಕಾಲದ ರೀತಿ ರಿವಾಜುಗಳಂತೆ ಚಿತ್ರಿಸಲಾಗಿದೆ. ನಾಂದಿ ಶಾಸ್ತ್ರ, ತುಳಸಿ ಪೂಜೆ, ಚಪ್ಪರ ಶಾಸ್ತ್ರ ಮತ್ತಿತರ ಶಾಸ್ತ್ರಗಳಿಂದ ವೆಂಕಟನಾಥನ ಮದುವೆಯು ಅದ್ಧೂರಿಯಾಗಿ ನಡೆಯಲಿದೆ. ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ, ರಾಯರ ಮೇಲಿನ ಭಕ್ತಿ, ಪ್ರೀತಿ ಇವುಗಳ ಕಾರಣದಿಂದ ಧಾರಾವಾಹಿಯು ಜನಮನ್ನಣೆ ಪಡೆದಿದೆ.
ಇದರ ನಿರ್ಮಾಣ ಮತ್ತು ಕ್ರಿಯೇಟಿವ್ ಹೆಡ್ ಆಗಿ ಮಹೇಶ್ ಸುಖಧರೆ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನು ಟಾಲೆಂಟೆಡ್ ಆಕ್ಟರ್, ಡೈರೆಕ್ಟರ್ ನವೀನ್ ಕೃಷ್ಣ ಅವರು ಹೊತ್ತಿದ್ದಾರೆ.
ಇನ್ನು ಈ ಧಾರಾವಾಹಿಗೆ ಮಣಿಕಾಂತ್ ಕದ್ರಿ ಅವರ ಅಮೋಘ ಸಂಗೀತ ಇದೆ, ವಿಷ್ಣು ಪಾತ್ರದಲ್ಲಿ ಅಮಿತ್ ಕಶ್ಯಪ್ ಅವರು ನಟಿಸಿದ್ದಾರೆ. ಸಿರಿ ಪ್ರಹ್ಲಾದ್ ಲಕ್ಷ್ಮಿ ಪಾತ್ರದಲ್ಲಿ ನಟಿಸಿದ್ದು, ವ್ಯಾಸರಾಯರ ಪಾತ್ರದಲ್ಲಿ ಪರೀಕ್ಷಿತ್ ಅವರು ಕಾಣಿಸಿಕೊಂಡಿದ್ದಾರೆ. ಹಾಗೆಯೇ ವಿಕಾಸ್ ವಸಿಷ್ಠ, ದೀಪಿಕಾ, ಕಾರ್ತಿಕ್ ಸಾಮಗ, ಧನ್ಯಶ್ರೀ ಪ್ರಭು, ವಿಕ್ರಂ ಸೂರಿ, ಡಾ.ಸಂಜಯ್, ಸ್ನೇಹಾ ಹೆಗ್ಡೆ, ಶ್ರೀನಿಧಿ, ಶ್ರೀಲತಾ, ಅನುರಾಗ್ ಸೇರಿ ಅನೇಕ ಪ್ರತಿಭಾನ್ವಿತ ಕಲಾವಿದರ ದಂಡು ಇದೆ.
ಇದನ್ನೂ ಓದಿ: Hayagrriva Teaser: ‘ಹಯಗ್ರೀವ‘ ಟೀಸರ್ ಔಟ್; ಅಬ್ಬರಿಸಿದ ಧನ್ವೀರ್, ಪಾತ್ರ ಏನು?
ಹಿರಣ್ಯ ಕಶಿಪುವಾಗಿ ಚೆಲುವರಾಜು, ಕಯಾದು ಆಗಿ ಲೂಸಿಯಾ ಚೆಲುವೆ ಶ್ರುತಿ ಹರಿಹರನ್ ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ.