ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gilli Nata: ಸುದೀಪ್ ಹಾಗೂ ಶಿವಣ್ಣ ಭೇಟಿ ಮಾಡಿದ ಗಿಲ್ಲಿ ನಟ; ತಾರೆಯರ ಶುಭ ಹಾರೈಕೆ

Shivanna: ಗಿಲ್ಲಿ ಬಿಗ್‌ ಬಾಸ್‌ ವಿನ್ನರ್‌ ಆಗಿರೋದು ಗೊತ್ತೇ ಇದೆ. ಗಿಲ್ಲಿ ಕ್ರೇಜ್‌ ಜೋರಾಗಿದೆ. ಈಗ ಅವರು ಶಿವರಾಜ್​​​ಕುಮಾರ್ಹಾ ಗೂ ಸುದೀಪ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಗಿಲ್ಲಿ ಗೆಲ್ಲದಕ್ಕೂ ಮುಂಚೆ ಶಿವಣ್ಣ ಅವರು ಗಿಲ್ಲಿ ಗೆದ್ದೆ ಗೆಲ್ತಾನೆ ಅಂತ ಭವಿಷ್ಯ ನುಡಿದ್ದರು. ಅದರಂತೆ ಆಗಿದೆ.

ಬಿಗ್‌ ಬಾಸ್‌ ಕನ್ನಡ

ಗಿಲ್ಲಿ (Gilli Nata) ಬಿಗ್‌ ಬಾಸ್‌ ವಿನ್ನರ್‌ (Bigg Boss Kannada Winner) ಆಗಿರೋದು ಗೊತ್ತೇ ಇದೆ. ಗಿಲ್ಲಿ ಕ್ರೇಜ್‌ ಜೋರಾಗಿದೆ. ಈಗ ಅವರು ಶಿವರಾಜ್​​​ಕುಮಾರ್ (Shiva Rajkumar) ಹಾಗೂ ಸುದೀಪ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಗಿಲ್ಲಿ ಗೆಲ್ಲದಕ್ಕೂ ಮುಂಚೆ ಶಿವಣ್ಣ (Sudeep) ಅವರು ಗಿಲ್ಲಿ ಗೆದ್ದೆ ಗೆಲ್ತಾನೆ ಅಂತ ಭವಿಷ್ಯ ನುಡಿದ್ದರು. ಅದರಂತೆ ಆಗಿದೆ.

ಆಶೀರ್ವಾದ ಪಡೆದ ಗಿಲ್ಲಿ

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆ ಮೇಲೆ ಶಿವರಾಜ್​​ಕುಮಾರ್ ಜಡ್ಜ್ ಸ್ಥಾನದಲ್ಲಿ ಇದ್ದರು. ಸ್ಪರ್ಧಿಯಾಗಿ ತೆರಳಿದ್ದ ಗಿಲ್ಲಿ ಅವರು ಎಲ್ಲರನ್ನೂ ರಂಜಿಸಿದ್ದರು. ಆಗಲೇ ಶಿವರಾಜ್​​ಕುಮಾರ್​​ಗೆ ಗಿಲ್ಲಿ ಇಷ್ಟ ಆಗಿದ್ದರು.

ಇದನ್ನೂ ಓದಿ: Bigg Boss Kannada 12: ನಿಮ್ಮನ್ನು ಕಳಿಸಿಯೇ ನಾನು ಹೊರಕ್ಕೆ ಹೋಗೋದು! ಅಶ್ವಿನಿ ವಿರುದ್ಧದ ಚಾಲೆಂಜ್​​ನಲ್ಲಿ ರಕ್ಷಿತಾಗೆ ಗೆಲುವು

ಬಿಗ್ ಬಾಸ್​​ನಿಂದ ಹೊರ ಬಂದ ಬಳಿಕ ಗಿಲ್ಲಿ ಹೋಗಿ ಸುದೀಪ್​​ನ ಭೇಟಿ ಮಾಡಿದ್ದಾರೆ. ಸುದೀಪ್ ಹಾಗೂ ಶಿವರಾಜ್​​ಕುಮಾರ್ ಅವರು ಗಿಲ್ಲಿಗೆ ಒಳ್ಳೆಯದಾಗಲಿ ಎಂದು ಮನಸ್ಫೂರ್ತಿಯಾಗಿ ಹಾರೈಸಿದ್ದಾರೆ. ಈ ಹಾರೈಕೆಯಿಂದ ಅವರು ತುಂಬಾನೇ ಖುಷಿಪಟ್ಟಿದ್ದಾರೆ.

ಬಹುಮಾನ ಏನು?

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗೆದ್ದ ಗಿಲ್ಲಿ ನಟನಿಗೆ ಬಂಪರ್ ಬಹುಮಾನ ಸಿಕ್ಕಿದೆ. ಈಗಾಗಲೇ ಶೋದಿಂದ 50 ಲಕ್ಷ ರೂಪಾಯಿ (ತೆರಿಗೆ ಕಡಿತಗೊಳಿಸಿದ ನಂತರ ಸುಮಾರು 35 ಲಕ್ಷ), ಮಾರುತಿ ಸುಜುಕಿ ಇನ್ವಿಕ್ಟೋ ಕಾರು ಮತ್ತು ಬಿಗ್​ ಬಾಸ್​​ ಹೋಸ್ಟ್ ಕಿಚ್ಚ ಸುದೀಪ್ ಅವರಿಂದ ಹೆಚ್ಚುವರಿ 10 ಲಕ್ಷ ರೂಪಾಯಿ ಪಡೆದಿದ್ದಾರೆ.



ಇದರ ಜೊತೆಗೆ ಮತ್ತೊಂದು 20 ಲಕ್ಷ ರೂಪಾಯಿ ಸಿಕ್ಕಿದೆ ಎಂಬ ಮಾತುಗಳು ಈಗ ಸೋಷಿಯಲ್ ಮೀಡಿಯಾ ಮತ್ತು ಫ್ಯಾನ್‌ಗಳ ನಡುವೆ ಚರ್ಚೆಯಾಗುತ್ತಿವೆ.

ಬಿಗ್ ಬಾಸ್​​ ಕನ್ನಡ ಸೀಸನ್ 12ರಲ್ಲಿ ಗೆದ್ದು ಬೀಗಿದ ಗಿಲ್ಲಿಗೆ ಬಿಗ್​ ಬಾಸ್​​ ಶೋದಿಂದ ಅಧಿಕೃತ ಬಹುಮಾನ 50 ಲಕ್ಷ ರೂಪಾಯಿ ನಗದು ಮತ್ತು ಕಾರು ಸಿಕ್ಕಿದೆ. ಜೊತೆಗೆ ಸುದೀಪ್ ವೇದಿಕೆಯ ಮೇಲೆಯೇ ತಮ್ಮ ವೈಯಕ್ತಿಕವಾಗಿ 10 ಲಕ್ಷ ರೂಪಾಯಿ ಗಿಫ್ಟ್ ನೀಡುತ್ತೇನೆ ಎಂದು ಘೋಷಿಸಿದರು. ಇದರಿಂದ ಗಿಲ್ಲಿಗೆ ಸುಮಾರು 45 ಲಕ್ಷದಷ್ಟು ಮೌಲ್ಯದ ಬಹುಮಾನ ಜೊತೆಗೆ ಒಂದು ಕಾರು ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Bigg Boss Kannada 12: Bigg Boss 12 Finale: ಕುಚಿಕು ದೋಸ್ತಿಗಳೇ ವಿನ್ನರ್‌, ರನ್ನರ್‌! ಗೆದ್ದ ಗಿಲ್ಲಿ ಪಕ್ಕಾ ನಿಂತ ಪಟಾಕಿ ರಕ್ಷಿತಾ

‘ಬಿಗ್ ಬಾಸ್ ಕನ್ನಡ ಸೀಸನ್ 12’ ಟ್ರೋಫಿ ಹಿಡಿದುಕೊಂಡು ಗಿಲ್ಲಿ ನಟ ಅವರು ಮಳವಳ್ಳಿಗೆ ಬಂದ್ದರು. ಅವರನ್ನು ನೋಡಲು ಮಳವಳ್ಳಿ ಜನರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪೊಲೀಸರ ಬಿಗಿ ಭದ್ರತೆಯಲ್ಲಿ ಗಿಲ್ಲಿಯ ಮೆರವಣಿಗೆ ಸಾಗಿತ್ತು. ಗಿಲ್ಲಿ ಅವರನ್ನು ಹತ್ತಿರದಿಂದ ನೋಡಿ ಮಾತನಾಡಿಸಬೇಕು ಎಂಬುದು ಅಭಿಮಾನಿಗಳ ಆಸೆ. ಗಿಲ್ಲಿ ಜೊತೆ ಫೋಟೋ ತೆಗೆದುಕೊಳ್ಳುವ ಉತ್ಸಾಹದಲ್ಲಿ ಜನರು ಮುಗಿಬಿದ್ದಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದರು. ಎಲ್ಲೆಲ್ಲೂ ಗಿಲ್ಲಿ ನಟನ ಅಭಿಮಾನಿಗಳೇ ತುಂಬಿಕೊಂಡಿದ್ದರು.

Yashaswi Devadiga

View all posts by this author