‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ರಿಯಾಲಿಟಿ ಶೋ ಟ್ರೋಫಿ ಗೆದ್ದಿರುವ ಗಿಲ್ಲಿ ನಟನ ಹುಟ್ಟೂರಿನಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಗಿಲ್ಲಿಯನ್ನ (Gilli Nata) ಮೆರವಣಿಗೆ ಮಾಡಿಸಿದ್ದಾರೆ. . ಕಪ್ ಗೆದ್ದ ಬಳಿಕ ಗಿಲ್ಲಿ ಅವರು ಮಂಡ್ಯ, ಮದ್ದೂರು (Maddur), ಮಳವಳ್ಳಿಗೆ ಭೇಟಿ ನೀಡಿದ್ದಾರೆ. ಗಿಲ್ಲಿ ನಟ ಹೋದಲ್ಲೆಲ್ಲ ಜನಜಾತ್ರೆ ಸೇರುತ್ತಿದೆ. ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ಜನರನ್ನು ನಿಯಂತ್ರಿಸುವುದೇ ಕಷ್ಟ ಆಗುತ್ತಿದೆ. ಇದೀಗ ಮಾಧ್ಯಮವೊಂದಕ್ಕೆ ಗಿಲ್ಲಿ ಪ್ರತಿಕ್ರಿಯಿಸಿದ್ದು ಹೀಗಿದೆ.
ಖುಷಿಗಿಂತ ಭಯ ಜಾಸ್ತಿ ಆಗಿದೆ
ತುಂಬಾ ಖುಷಿ ಆಗುತ್ತಿದೆ. ಕೆ.ಎಂ. ದೊಡ್ಡಿಯಲ್ಲಿ ಐಟಿಐ ಓದಿದ್ದು ನಾನು. ಇದೇ ರೋಡ್ ಸರಕಾರಿ ಬಸ್‌ನಲ್ಲಿ ಪಾಸ್ ತೋರಿಸಿ ಓಡಾಡುತ್ತಿದ್ದೆ. ಕಪ್ ಗೆದ್ದುಕೊಂಡು ಈ ರೀತಿ ಓಡಾಡುತ್ತೀನಿ ಅಂತ ಗೊತ್ತಿರಲಿಲ್ಲ. ನಮ್ಮೂರು ಬಂದಾಗ ಖುಷಿ ಆಯ್ತು. ಈಗ ಜವಬ್ಧಾರಿ ಜಾಸ್ತಿ ಆಗಿದೆ. ಖುಷಿಗಿಂತ ಭಯ ಜಾಸ್ತಿ ಆಗಿದೆ. ಇನ್ನು ಅಂಬರೀಶ್ ಅವರ ಕಾಲಿನ ಧೂಳಿಗೂ ನಾನು ಸಮ ಇಲ್ಲ. ಅಂಬರೀಶ್ ಅವರಿಗೆ ನಾನು ಹೋಲಿಸುಕೊಳ್ಳಲು ಸಾಧ್ಯ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ: Ashwini Gowda: ಗಿಲ್ಲಿ ನಿಜವಾದ ಬಡವನಾ? ಬಡವನ ಥರ ಗೆಟಪ್ ಹಾಕ್ಕೊಂಡು ಬದುಕೋದು ಬೇರೆ! ಅಶ್ವಿನಿ ಗೌಡ
ತುಂಬಾ ಸಂತೋಷವಾಯ್ತು
ಗೆದ್ದ ಬಳಿಕ ಗಿಲ್ಲಿ ಮಾತನಾಡಿ, ಬಿಗ್ ಬಾಸ್ ಹೋಗಬೇಕಾದರೆ, ಕೆಲವು ಜನರ ಪ್ರೀತಿ ಸಂಪಾದಿಸಿದ್ದೆ, ಅವರಿಗೆ ಮೋಸ ಮಾಡಬಾರದು ಅಂದುಕೊಂಡಿದ್ದೆ. ಒಳಗಡೆ ವಿಡಿಯೊ ತೋರಿಸ್ತಾ ಇದ್ದರು. ಕಟೌಟ್ ಅದೆಲ್ಲ ಹಾಕಿರೋದು. ಅದೆಲ್ಲ ನೋಡಿ ನನಗೆ ತುಂಬಾ ಸಂತೋಷವಾಯ್ತು. ನನಗೆ ನಂಬಲೂ ಆಗ್ತಾ ಇರಲಿಲ್ಲ.
ಹಾಳಾದ್ದು ಅಳೋಣ ಅಂದ್ರೆ ನಂಗೆ ಅಳುನೂ ಬರಲ್ಲ.ಅದೆಲ್ಲ ನೋಡಿ ಕೈ ಹಿಂಡಿಕೊಂಡು ನೋಡ್ತಾ ಇದ್ದೆ, ನಂಬಲೇ ಆಗ್ತಾ ಇರಲಿಲ್ಲ. ದೇವರ ಆಶೀರ್ವಾದ ತುಂಬಾ ಜಾಸ್ತಿ ಸಿಕ್ಕಿದೆ. ಇಷ್ಟು ಜನ ಪ್ರೀತಿ ತೋರಿಸ್ತಾ ಇದ್ದಾರೆ, ಆ ಯೋಗ್ಯತೆ, ಅರ್ಹತೆ ನನಗೆ ಇದ್ಯಾ ಅನ್ನೋದು ಅನ್ನಿಸುತ್ತೆ ಎಂದಿದ್ದಾರೆ ಗಿಲ್ಲಿ.
ಇದನ್ನೂ ಓದಿ: Gilli Nata: ಹಳ್ಳಿಯ ರೈತನ ಮಗನಾಗಿ ಹುಟ್ಟಿ ಮನಗೆದ್ದ ಗಿಲ್ಲಿಗೆ ಹೆಚ್ಚಿನ ಕೀರ್ತಿ ಬರಲಿ ! ಹೆಚ್ ಡಿ ಕುಮಾರಸ್ವಾಮಿ ಶುಭ ಹಾರೈಕೆ
ಗಿಲ್ಲಿ ನಟ ಮನೆಯಲ್ಲಿ ಕೆಲವರ ಜೊತೆ ಸಖತ್ ಕ್ಲೋಸ್ ಇದ್ದರು. ರಕ್ಷಿತಾ ಶೆಟ್ಟಿ, ರಜತ್, ರಘು ಹಾಗೂ ಕಾವ್ಯಾ . ಇವರಿಗೆ ವೇದಿಕೆ ಮೇಲೆಯೇ ಗಿಲ್ಲಿ ಧನ್ಯವಾದ ಹೇಳಿದ್ದಾರೆ. ‘ನನ್ನ ಜರ್ನಿಯಲ್ಲಿ ಹೊರಗೆ ಅಭಿಮಾನಿಗಳು ಹೇಗೆ ಬೆಂಬಲವಾಗಿ ನಿಂತರೋ ಮನೆ ಒಳಗೆ ರಘು ಅಣ್ಣ, ರಕ್ಷಿತಾ, ರಜತ್ ಹಾಗೂ ಕಾವ್ಯಾ ಬೆಂಬಲವಾಗಿ ನಿಂತರು. ಅವರಿಗೂ ಧನ್ಯವಾದ’ ಎಂದು ಗಿಲ್ಲಿ ಹೇಳಿದ್ದಾರೆ.