ಬಿಗ್ ಬಾಸ್ ಮನೆಯಲ್ಲಿ ನಟಿ ರಾಶಿಕಾ ಶೆಟ್ಟಿ ಅವರು ಇದ್ದಾರೆ. ಹಾಗಾಗಿ, ಅವರು ನಟಿಸಿದ್ದ ಪ್ಯಾರ್ ಸಿನಿಮಾದ ಪ್ರಮೋಷನ್ ಮಾಡಲಾಗಿದೆ. ಸ್ವತಃ ಚಿತ್ರದಲ್ಲಿ ನಟಿಸಿದ್ದ ರವಿಚಂದ್ರನ್ ಕೂಡ ಬಿಗ್ ಬಾಸ್ ಮನೆಗೆ ಹೋಗಿ ಬಂದಿದ್ದಾರೆ. ಕಳೆದ ವರ್ಷ ಉಗ್ರಂ ಮಂಜು ಇದ್ದರು ಎಂಬ ಕಾರಣಕ್ಕೆ ಮ್ಯಾಕ್ಸ್ ಟ್ರೇಲರ್ ಹಾಕಲಾಗಿತ್ತು. ಈಗ ಮಾರ್ಕ್ ಟ್ರೇಲರ್ ಕೂಡ ಪ್ರಸಾರ ಮಾಡಲಾಗಿದೆ. ಆದರೆ ಗಿಲ್ಲಿ ನಟ ಅಭಿನಯಿಸಿದ್ದ ದಿ ಡೆವಿಲ್ ಸಿನಿಮಾದ ಟ್ರೇಲರ್ ಅನ್ನು ಯಾಕೆ ಪ್ರಸಾರ ಮಾಡಿಲ್ಲ ಎಂಬುದು ಗಿಲ್ಲಿ ಅಭಿಮಾನಿಗಳ ಪ್ರಶ್ನೆ!
ಹೌದು, ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ದೊಡ್ಡ ಚರ್ಚೆಯೇ ಆಗಿದೆ. ಗಿಲ್ಲಿಗೆ ಮೋಸ ಮಾಡಲಾಗಿದೆ. ಅದು ದರ್ಶನ್ ಸಿನಿಮಾ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಎಂದೆಲ್ಲಾ ಮಾತುಗಳು ಕೇಳಿಬಂದಿವೆ. ಆದರೆ ಕಲರ್ಸ್ ಕನ್ನಡ ಆಗಲಿ, ಸುದೀಪ್ ಆಗಲಿ ಈ ಬಗ್ಗೆ ಏನೊಂದು ಹೇಳಿರಲಿಲ್ಲ. ಆದರೆ ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಹೋಗಿದ್ದ ರಜತ್ ಅವರು ಈಗ ಒಂದಷ್ಟು ವಿಚಾರಗಳನ್ನು ತಿಳಿಸಿದ್ದಾರೆ.
The Devil Movie: `ಡೆವಿಲ್' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ? ನಟ ಚಂದು ಗೌಡ ಮನದಾಳದ ಮಾತು!
ಡೆವಿಲ್ ಟೀಮ್ ಅಪ್ರೋಚ್ ಮಾಡಿರಲಿಲ್ಲ
"ಮಂಜು ಇದ್ದಾಗ ಮ್ಯಾಕ್ಸ್ ಟ್ರೇಲರ್ ಯಾಕೆ ಹಾಕಿದ್ರು ಎಂದರೆ, ಅದು ಸುದೀಪ್ ಸರ್ ಸಿನಿಮಾ. ಪ್ಯಾರ್ ಸಿನಿಮಾದವರು ಪ್ರಮೋಷನ್‌ಗೆ ಅಂತಲೇ ಬಂದಿದ್ದು. ಆದರೆ ಡೆವಿಲ್ ಸಿನಿಮಾದ ನಿರ್ಮಾಪಕರು ಬಹುಶಃ ಅಪ್ರೋಚ್ ಮಾಡಿರಲ್ಲ ಅನ್ಸತ್ತೆ. ನನಗೆ ಗೊತ್ತಿರುವ ಸುದೀಪ್ ಸರ್.. ಯಾವತ್ತಿಗೂ ಅವರ ಸಿನಿಮಾ ಹಾಕಬೇಡಿ, ಇವರದ್ದು ಹಾಕಬೇಡಿ ಎಂದು ಹೇಳುವಂತಹ ವ್ಯಕ್ತಿಯೇ ಅಲ್ಲ. ಬಹುಶಃ ಟೀಮ್ ಅವರಿಗೆ ಹೇಗೆ ಅಪ್ರೋಚ್ ಮಾಡಬೇಕು, ಕೇಳಬೇಕು ಎಂದು ಗೊತ್ತಾಗಿರಲ್ಲ ಅನ್ಸತ್ತೆ. ಅದಕ್ಕೆ ಕೇಳಿರಲ್ಲ" ಎಂದು ರಜತ್ ಹೇಳಿದ್ದಾರೆ.
Bigg Boss Kannada 12: ರಜತ್‌ನ ಮನೆಯಿಂದ ಆಚೆ ಕಳುಹಿಸಿಯೇ ಹೋಗ್ತೇನೆ! ಗಿಲ್ಲಿ ನಟ ಓಪನ್ ಚಾಲೆಂಜ್
ದರ್ಶನ್ ಸರ್ ಆಗಲೇ ಮಸ್ತ್ ಆಗವ್ರೇ!
"ಬಿಗ್ ಬಾಸ್ ಮನೆಯಲ್ಲಿ ಸಿನಿಮಾ ಪ್ರಮೋಷನ್ ಮಾಡಿದ ತಕ್ಷಣ ಹೈಪ್ ಆಗತ್ತೆ ಅಂತ ಅಲ್ಲ, ದರ್ಶನ್ ಸರ್ ಆಗಲೇ ಮಸ್ತ್ ಆಗವ್ರೇ. ಇದು ಮ್ಯಾಟರ್ರೇ ಆಗಲ್ಲ. ಸುದೀಪ್ ಸರ್ ಮತ್ತು ದರ್ಶನ್ ಸರ್ ಜಗಳ ಒಂಥರಾ ಆಗಿದೆ ಅಂತ ಟೀಮ್‌ಗೂ ಗೊತ್ತು. ಹಾಗಾಗಿ, ಟೀಮ್ ಅವರಿಗೆ ಧೈರ್ಯ ಇರಲ್ಲ. ಅದನ್ನು ಕೇಳುವುದಕ್ಕೂ ಆಗೋದಿಲ್ಲ" ಎಂದು ರಜತ್ ಹೇಳಿದ್ದಾರೆ.
ದಿ ಡೆವಿಲ್‌ನಲ್ಲಿ ಗಿಲ್ಲಿ ನಟ
ದರ್ಶನ್ ಅಭಿನಯದ ʻದಿ ಡೆವಿಲ್ʼ ಸಿನಿಮಾದಲ್ಲಿ ಗಿಲ್ಲಿ ನಟ ಅವರು ಸಿಬಿಐ ಶಂಕರ್ ಎಂಬ ಪಾತ್ರವನ್ನು ಮಾಡಿದ್ದರು. ಮೂರ್ನಾಲ್ಕು ಸೀನ್‌ಗಳಲ್ಲಿ ಕಾಣಿಸಿಕೊಂಡರೂ, ಮಸ್ತ್ ಆಗಿ ನಗಿಸಿದ್ದರು. ಆದರೆ ಡೆವಿಲ್ ಟ್ರೇಲರ್ ಅನ್ನು ಬಿಗ್ ಬಾಸ್ ಮನೆಯಲ್ಲಿ ಹಾಕಬೇಕಿತ್ತು ಎಂಬುದು ಗಿಲ್ಲಿ ಅಭಿಮಾನಿಗಳ ಒತ್ತಾಸೆಯಾಗಿತ್ತು. ಆದರೆ ಅದು ನೆರವೇರಿರಲಿಲ್ಲ.