ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Golden Star Ganesh Brother: ಅಣ್ಣ ಹಾಕಿಕೊಟ್ಟ 4 ಕೋಟಿ ಬ್ಯುಸಿನೆಸ್ ಲಾಸ್ ಮಾಡಿಬಿಟ್ಟೆ; ಗಣೇಶ್‌ ಸಹೋದರ ಬೇಸರ

Golden Star Ganesh: 'ಗೋಲ್ಡನ್ ಸ್ಟಾರ್' ಗಣೇಶ್' ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ನಟರಾಗಿ ಮಿಂಚುತ್ತಿದ್ದಾರೆ. ಗಣೇಶ್ ಅವರ ಸಹೋದರ ಮಹೇಶ್‌ ಕೂಡ ಚಂದನವನಕ್ಕೆ ನಟರಾಗಿ ಎಂಟ್ರಿ ನೀಡಿದ್ದರು. ಆದರೆ ಯಶಸ್ಸು ಮಾತ್ರ ಸಿಗಲಿಲ್ಲ. 'ನಮಕ್‌ಹರಾಮ್' ಎಂಬ ಸಿನಿಮಾ ಮೂಲಕ ಮಹೇಶ್ ಬಣ್ಣದಲೋಕಕ್ಕೆ ಬಂದರು. ಬಳಿಕ ಎರಡ್ಮೂರು ಸಿನಿಮಾ ಮಾಡಿದ್ರು ಪ್ರಯೋಜನ ಆಗಲಿಲ್ಲ. 'ಮಗ್ಗಿ ಪುಸ್ತಕ' ಎಂಬ ಚಿತ್ರದಲ್ಲಿ ನೆಗೆಟಿವ್ ರೋಲ್ ಮಾಡಿದ್ದಾರೆ.

ಅಣ್ಣ ಹಾಕಿಕೊಟ್ಟ ಬ್ಯುಸಿನೆಸ್ ಲಾಸ್ ಮಾಡಿಬಿಟ್ಟೆ; ಗಣೇಶ್‌ ಸಹೋದರ ಬೇಸರ

ಗೋಲ್ಡನ್‌ ಸ್ಟಾರ್‌ ಗಣೇಶ್‌ -

Yashaswi Devadiga
Yashaswi Devadiga Feb 13, 2026 7:12 PM

'ಗೋಲ್ಡನ್ ಸ್ಟಾರ್' ಗಣೇಶ್' (Golden Star Ganesh) ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ನಟರಾಗಿ ಮಿಂಚುತ್ತಿದ್ದಾರೆ. ಗಣೇಶ್ ಅವರ ಸಹೋದರ ಮಹೇಶ್‌ (mahesh) ಕೂಡ ಚಂದನವನಕ್ಕೆ ನಟರಾಗಿ ಎಂಟ್ರಿ ನೀಡಿದ್ದರು. ಆದರೆ ಯಶಸ್ಸು ಮಾತ್ರ ಸಿಗಲಿಲ್ಲ. 'ನಮಕ್‌ಹರಾಮ್' ಎಂಬ ಸಿನಿಮಾ ಮೂಲಕ ಮಹೇಶ್ ಬಣ್ಣದಲೋಕಕ್ಕೆ ಬಂದರು. ಬಳಿಕ ಎರಡ್ಮೂರು ಸಿನಿಮಾ ಮಾಡಿದ್ರು ಪ್ರಯೋಜನ ಆಗಲಿಲ್ಲ. 'ಮಗ್ಗಿ ಪುಸ್ತಕ' (Maggi Pustaka) ಎಂಬ ಚಿತ್ರದಲ್ಲಿ ನೆಗೆಟಿವ್ ರೋಲ್ ಮಾಡಿದ್ದಾರೆ. ಈ ವಾರ ಸಿನಿಮಾ ಬಿಡುಗಡೆಯಾಗಿದೆ. ಇದೀಗ ಸಂದರ್ಶನವೊಂದರಲ್ಲಿ ಅಣ್ಣ ಹಾಕಿಕೊಟ್ಟ ಬ್ಯುಸಿನೆಸ್ ಬಿಟ್ಟು ಬಂದು ತಪ್ಪು ಮಾಡಿದ್ನಾ ಎನಿಸುತ್ತದೆ ಎಂದು ಮಹೇಶ್ ಹೇಳಿದ್ದಾರೆ.

ಈ ಬಗ್ಗೆ ನನಗೆ ನೋವಿದೆ

ಮಹೇಶ್ ಮಾತನಾಡಿ, ಅಣ್ಣ ಯಾವೆಲ್ಲ ಹಂತದಲ್ಲಿ ಬಂದನೋ ಆಗೆಲ್ಲ ಜೊತೆಗೆ ಇದ್ವಿ. ಆಗೆಲ್ಲ ದೂರದರ್ಶನದಲ್ಲಿ ಹೊಸ ಸಾಂಗ್‌ಗಳು ಬರ್ತಾ ಇತ್ತು. ಆಗ ಅಣ್ಣ ಡ್ಯಾನ್ಸ್‌ ಮಾಡ್ತಾ ಇದ್ದರು. ಅಣ್ಣನ ಜರ್ನಿ ಅಲ್ಲಿಂದ ಶುರು ಆಯ್ತು. ಉದಯ ಟಿವಿಯಲ್ಲಿಯೂ ಕೆಲಸ ಮಾಡುವಾಗ ಚೆಕ್‌ನನ್ನು ನಂಗೆ ಕೊಟ್ಟು ಕಳಿಸೋರು. ಒಂದು ರೂ ಅವರು ಇಟ್ಟುಕೊಳ್ತಾ ಇರಲಿಲ್ಲ.

ಇದನ್ನೂ ಓದಿ: The Paradise: ನಾನಿ ನಟನೆಯ `ದಿ ಪ್ಯಾರಡೈಸ್' ಬಿಡುಗಡೆ ದಿನಾಂಕ ಘೋಷಣೆ !

ಅಣ್ಣನೇ ನಮಗೆ ರೋಲ್‌ ಮಾಡೆಲ್

ನಾನು ಕೂಡ ಸಿನಿಮಾಗೆ ಬರಬೇಕು ಅಂತ ಇರಲಿಲ್ಲ. ಆದರೆ ಕೆಲವು ಸಂಗಡಿಗರೇ ಬಂದು ಕೇಳೋರು. ಈ ಬಗ್ಗೆ ನಾನು ಅಣ್ಣನ ಜೊತೆ ಮಾತನಾಡಿದ್ದೆ. ಅವರಿಗೆ ಈ ಜರ್ನಿ ಬಗ್ಗೆ ನೋವು ಗೊತ್ತು. ಹೀಗಾಗಿ ಗೊತ್ತಿದ್ದು ನನಗೆ ಬ್ಯುಸಿನೆಸ್‌ ಹಾಕಿ ಕೊಟ್ಟಿದ್ದರು. ಆದರೆ ನಾನು ಬ್ಯುಸಿನೆಸ್‌ ಹಾಳು ಮಾಡಿಕೊಂಡೆ. ಈ ಬಗ್ಗೆ ನನಗೆ ನೋವಿದೆ. 4 ಕೋಟಿ ಟರ್ನ್‌ಓವರ್ ಇತ್ತು. ಅದನ್ನು ಬಿಟ್ಟು ಬಂದೆ. ಆ ಕೊರಗು ಇವತ್ತಿಗೂ ಇದೆ. ಇವತ್ತಿಗೂ ಅಣ್ಣನೇ ನಮಗೆ ರೋಲ್‌ ಮಾಡೆಲ್" ಎಂದಿದ್ದಾರೆ.

'ನಮಕ್‌ಹರಾಮ್' ಬಳಿಕ 'ಮಹಾರುದ್ರಂ', 'ಮಹಾಯುದ್ಧ' ಎಂಬ ಸಿನಿಮಾಗಳಲ್ಲಿ ಮಹೇಶ್ ನಟಿಸಿದ್ದರು. 'ಬೌಂಡರಿ' ಎಂಬ ಮತ್ತೊಂದು ಸಿನಿಮಾ ಅರ್ಧಕ್ಕೆ ನಿಂತು ಹೋಗಿತ್ತು . ನೆಲಮಂಗಲದ ಬಳಿಯ ಅಡಕಮಾರನಹಳ್ಳಿ ಹುಟ್ಟೂರು. ಬಸವಣ್ಣದೇವರ ಮಠದಲ್ಲಿ ಓದಿ ಬೆಳೆದಿದ್ದು. ಖಾಸಗಿ ಕಂಪನಿಯಲ್ಲಿ ಕಿರಿಯ ಸಹೋದರ ಸೂರಜ್ ಕೃಷ್ಣ ಕೆಲಸ ಮಾಡಿಕೊಂಡಿದ್ದರು.'ನಾನೇ ರಾಜ' ಎಂಬ ಚಿತ್ರದಲ್ಲಿ ಸೂರಜ್ ನಟಿಸಿದ್ದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಖ್ಯಾತಿಯ ರಂಜನ್ ಕಾಸರಗೋಡು, ರಾನ್ವಿ ಶೇಖರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ 'ಮಗ್ಗಿ ಪುಸ್ತಕ' ಚಿತ್ರ ಕೂಡ ಇದೇ ವಾರ ತೆರೆಗೆ ಬರ್ತಾ ಇದೆ. ಈ ಚಿತ್ರದಲ್ಲಿ ಶೋಭರಾಜ್, ಮೇಘನಾ, ಮೈಸೂರು ರಮಾನಂದ್, ಮೇಘಶ್ರೀ, ಮಿಮಿಕ್ರಿ ಗೋಪಿ, ಚಂದ್ರಪ್ರಭ, ರಾಘು ರಮನಕೊಪ್ಪ ಮುಂತಾದವರು ಅಭಿನಯಿಸಿದ್ದಾರೆ.

ಇದನ್ನೂ ಓದಿ: Shahid Kapoor: ಶಾಹಿದ್ ಕಪೂರ್ ನಟನೆಗೆ ಬಹುಪರಾಕ್‌ ಅಂದ್ರು ಫ್ಯಾನ್ಸ್‌; ʻಓ ರೋಮಿಯೋʼ ಸಿನಿಮಾ ಹೇಗಿದೆ?

ಈ ಚಿತ್ರಕ್ಕೆ ನಂದಕುಮಾರ್ ಅವರ ಛಾಯಾಗ್ರಹಣ, ಶಿವಕುಮಾರ್ ಅವರ ಸಂಕಲನವಿದೆ. ಹರಿವರಾಸನಂ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರ 'ಮಗ್ಗಿಪುಸ್ತಕ’ ಚಿನ್ನಸ್ವಾಮಿ ಫಿಲಂಸ್ ಬ್ಯಾನರ್ ಅಡಿ ಸಿ. ಯತಿರಾಜ್ ಸ್ನೇಹಿತರ ಜೊತೆಗೆ ಸೇರಿ ಈ ಚಿತ್ರ ನಿರ್ಮಿಸಿದ್ದಾರೆ. ಜತೆಗೆ ನಿರ್ದೇಶಕರೂ ಕೈ ಜೋಡಿಸಿದ್ದಾರೆ.