ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gowri Putra Serial: ಇಕ್ಕಟ್ಟಿನಲ್ಲಿ ಸಿಲುಕಿದ ಕಾರ್ತಿಕ್‌ಗೆ ಎದುರಾಯ್ತು ಹೊಸ ಸಂಕಷ್ಟ

Gowri Putra Serial: ಅಮ್ಮನ ಆಸೆ ಈಡೇರಿಸಬೇಕೋ, ಅಥವಾ ಹೊಸದಾಗಿ ಬಂದಿರುವ ಸಂಸಾರದ ಜವಾಬ್ದಾರಿ ನಿಭಾಯಿಸಬೇಕೋ? ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಕಾರ್ತಿಕ್ (Karthik) ಸಿಲುಕಿಕೊಂಡಿದ್ದಾನೆ. ಮದುವೆಯ ವಿಚಾರವಾಗಿ ಸಾಕಷ್ಟು (Gowri Putra serial) ಗೊಂದಲಗಳನ್ನು ಎದುರಿಸಿದ್ದ ಕಾರ್ತಿಕ್ ಕೊನೆಗೂ ಕಾವ್ಯಾಳನ್ನು ಮದುವೆಯಾಗಿದ್ದಾನೆ. ಆದರೆ ಈ ಮದುವೆಯೇ ಇದೀಗ ಆತನ ಬದುಕಿನಲ್ಲಿ ಹೊಸ ಸಮಸ್ಯೆಗಳಿಗೆ ಕಾರಣವಾಗಿದೆ.

ಗೌರಿ ಪುತ್ರ ಧಾರಾವಾಹಿ

ಅಮ್ಮನ ಆಸೆ ಈಡೇರಿಸಬೇಕೋ, ಅಥವಾ ಹೊಸದಾಗಿ ಬಂದಿರುವ ಸಂಸಾರದ ಜವಾಬ್ದಾರಿ ನಿಭಾಯಿಸಬೇಕೋ? ಇಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಕಾರ್ತಿಕ್ (Karthik) ಸಿಲುಕಿಕೊಂಡಿದ್ದಾನೆ. ಮದುವೆಯ ವಿಚಾರವಾಗಿ ಸಾಕಷ್ಟು (Gowri Putra serial) ಗೊಂದಲಗಳನ್ನು ಎದುರಿಸಿದ್ದ ಕಾರ್ತಿಕ್ ಕೊನೆಗೂ ಕಾವ್ಯಾಳನ್ನು ಮದುವೆಯಾಗಿದ್ದಾನೆ. ಆದರೆ ಈ ಮದುವೆಯೇ ಇದೀಗ ಆತನ ಬದುಕಿನಲ್ಲಿ ಹೊಸ ಸಮಸ್ಯೆಗಳಿಗೆ ಕಾರಣವಾಗಿದೆ.

ಧಾರಾವಾಹಿಯ ಆರಂಭದಿಂದಲೂ ಕಾರ್ತಿಕ್‌ಗೆ ತಾಯಿ ಗೌರಿಯೇ ಸರ್ವಸ್ವ. ತಾಯಿಯ ಆಸೆಗಳನ್ನು ಈಡೇರಿಸುವುದು, ಆಕೆಯ ತವರು ಮನೆಯ ಗೌರವ ಮತ್ತು ನೆಮ್ಮದಿಯನ್ನು ಮರಳಿ ತರುವುದು ಆತನ ಪ್ರಮುಖ ಗುರಿ. ಇದೇ ಕಾರಣಕ್ಕೆ ಸೋದರಮಾವನ ಮಗಳನ್ನು ಮದುವೆಯಾಗಲು ಕಾರ್ತಿಕ್ ಒಪ್ಪಿಕೊಂಡಿದ್ದ. ಆದರೆ ವಿಧಿಯ ಆಟವೇ ಬೇರೆಯಾಗಿತ್ತು.

ಗೆಳೆಯನ ಪ್ರೇಯಸಿಯನ್ನು ರಕ್ಷಿಸಲು ಹೋಗಿ ಕಾವ್ಯಾಳನ್ನು ಮದುವೆಯಾದ ಕಾರ್ತಿಕ್!

ಮದುವೆಯ ವಿಚಾರದಲ್ಲಿ ಒಂದರ ಹಿಂದೆ ಒಂದರಂತೆ ಅನಿರೀಕ್ಷಿತ ಘಟನೆಗಳು ನಡೆದವು. ತನ್ನ ಗೆಳೆಯನ ಪ್ರೇಯಸಿಯನ್ನು ರಕ್ಷಿಸಲು ಮುಂದಾದ ಕಾರ್ತಿಕ್, ಅಚಾನಕ್ಕಾಗಿ ಕಾವ್ಯಾಳನ್ನೇ ಕರೆದುಕೊಂಡು ಬರುವ ಪರಿಸ್ಥಿತಿ ಎದುರಾಯಿತು. ನಂತರ ಅನಿವಾರ್ಯ ಸನ್ನಿವೇಶಗಳಿಂದ ಕಾವ್ಯಾಳನ್ನೇ ಮದುವೆಯಾಗಬೇಕಾಯಿತು.

ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಈ ಗುಳ್ಳೆನರಿಯ ಆಟ ಶುರು! ಸ್ಪರ್ಧಿಗಳಿಗೆ ಢವ ಢವ

ಇದೀಗ ಕಾರ್ತಿಕ್ ಮತ್ತು ಕಾವ್ಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಇಲ್ಲಿ ಮತ್ತೊಂದು ದೊಡ್ಡ ಸಮಸ್ಯೆ ಎದುರಾಗಿದೆ. ಕಾವ್ಯಾ ಕಾರ್ತಿಕ್‌ನ ವೈರಿಯ ಮನೆಯ ಮಗಳು. ಹೀಗಾಗಿ ಈ ಮದುವೆ ಎರಡೂ ಕುಟುಂಬಗಳ ನಡುವಿನ ಸಂಘರ್ಷಕ್ಕೆ ಹೊಸ ಕಾರಣವಾಗುವ ಸಾಧ್ಯತೆಯಿದೆ.

ಗೌರಿ-ಸೂರಪ್ಪ ಮುಖಾಮುಖಿ: ಮುಂದೇನಾಗಲಿದೆ?

ಕಾರ್ತಿಕ್ ಮತ್ತು ಕಾವ್ಯಾಳ ಮದುವೆಯ ಬೆನ್ನಲ್ಲೇ ಕಥೆಯಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಗೌರಿ ಮತ್ತು ಸೂರಪ್ಪ ಮುಖಾಮುಖಿಯಾಗಿದ್ದಾರೆ. ಇವರಿಬ್ಬರ ಭೇಟಿಯಿಂದ ಕುಟುಂಬಗಳ ನಡುವಿನ ಹಳೆಯ ವೈಷಮ್ಯ ಮತ್ತೆ ಮುನ್ನೆಲೆಗೆ ಬರುವ ಸೂಚನೆ ಸಿಕ್ಕಿದೆ.

ಈಗಾಗಲೇ ತಾಯಿಯ ಆಸೆ, ಕುಟುಂಬದ ಗೌರವ ಹಾಗೂ ಹೊಸದಾಗಿ ಆರಂಭವಾಗಿರುವ ದಾಂಪತ್ಯ ಜೀವನದ ನಡುವೆ ಕಾರ್ತಿಕ್ ಒದ್ದಾಡುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಗೌರಿ ಮತ್ತು ಸೂರಪ್ಪ ನಡುವಿನ ಮುಖಾಮುಖಿ ಆತನ ಬದುಕಿನಲ್ಲಿ ಯಾವ ರೀತಿಯ ಬದಲಾವಣೆ ತರಲಿದೆ ಎಂಬ ಕುತೂಹಲ ಮೂಡಿದೆ.



ಅಮ್ಮನ ಸಂತೋಷವೇ ಕಾರ್ತಿಕ್‌ಗೆ ಮುಖ್ಯ!

ಗೌರಿ ಮತ್ತು ಕಾರ್ತಿಕ್ ನಡುವಿನ ತಾಯಿ-ಮಗನ ಬಾಂಧವ್ಯ ಧಾರಾವಾಹಿಯ ಪ್ರಮುಖ ಆಕರ್ಷಣೆಯಾಗಿದೆ. ಕೂಡು ಕುಟುಂಬದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಗೌರಿಗೆ ತನ್ನದೇ ಆದ ಆಸೆ-ಆಕಾಂಕ್ಷೆಗಳಿವೆ.

ದೇವರ ಮೆರವಣಿಗೆಯ ಮುಂದೆ ಎಲ್ಲರಂತೆ ಕುಣಿದು ಕುಪ್ಪಳಿಸಬೇಕು ಎಂಬುದು ಗೌರಿಯ ಬಹುದಿನಗಳ ಆಸೆ. ತಾಯಿಯ ಈ ಕನಸನ್ನು ಅರ್ಥಮಾಡಿಕೊಂಡಿರುವ ಕಾರ್ತಿಕ್ ಅದನ್ನು ಈಡೇರಿಸಲು ಪ್ರಯತ್ನಿಸುತ್ತಿದ್ದಾನೆ. ಒಂದೆಡೆ ಅಮ್ಮ ಹೇಳಿದ ಕೆಲಸಗಳನ್ನು ಮಾಡಬೇಕು, ಮತ್ತೊಂದೆಡೆ ಕಾವ್ಯಾಳ ಕುಟುಂಬದ ಶಾಸ್ತ್ರ ಹಾಗೂ ಮದುವೆಯ ನಂತರದ ಸಂಪ್ರದಾಯಗಳಲ್ಲೂ ಭಾಗವಹಿಸಬೇಕು. ಹೀಗೆ ಎರಡೂ ಕಡೆ ಜವಾಬ್ದಾರಿ ನಿಭಾಯಿಸುವ ಅನಿವಾರ್ಯತೆ ಕಾರ್ತಿಕ್‌ಗೆ ಎದುರಾಗಿದೆ.

ಇದನ್ನೂ ಓದಿ: Gowri Putra Serial: ವೈರಿಯ ಮನೆಯ ಮಗಳನ್ನೇ ಮದುವೆಯಾಗಿ ಇಕ್ಕಟ್ಟಿಗೆ ಸಿಲುಕಿದ್ದಾನೆ ಕಾರ್ತಿಕ್! ಯಾರು ಈ ಸೂರಪ್ಪ?

ಕಾವ್ಯಾಳನ್ನು ಮದುವೆಯಾದ ಬಳಿಕ ಕಾರ್ತಿಕ್ ಜೀವನದಲ್ಲಿ ಹೊಸ ಸಂಘರ್ಷಗಳು ಆರಂಭವಾಗಿವೆ. ಗೌರಿ ಮತ್ತು ಸೂರಪ್ಪ ನಡುವಿನ ವೈಮನಸ್ಸು ಯಾವ ಹಂತ ತಲುಪಲಿದೆ? ಕಾರ್ತಿಕ್ ತನ್ನ ತಾಯಿಯ ಆಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತದೆಯೇ? ಕಾವ್ಯಾಳೊಂದಿಗಿನ ದಾಂಪತ್ಯ ಜೀವನ ಹೇಗಿರಲಿದೆ? ಎಂಬ ಪ್ರಶ್ನೆಗಳಿಗೆ ಮುಂದಿನ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ. ಪ್ರತಿದಿನ ಸಂಜೆ 7 ಗಂಟೆಗೆ ಧಾರಾವಾಹಿ ಪ್ರಸಾರವಾಗುತ್ತಿದೆ.

Yashaswi Devadiga

View all posts by this author