Gowri Putra Serial: ವೈರಿಯ ಮನೆಯ ಮಗಳನ್ನೇ ಮದುವೆಯಾಗಿ ಇಕ್ಕಟ್ಟಿಗೆ ಸಿಲುಕಿದ್ದಾನೆ ಕಾರ್ತಿಕ್! ಯಾರು ಈ ಸೂರಪ್ಪ?
Gowri Putra Serial: ಕೌಟುಂಬಿಕ ಕಥಾಹಂದರ, ಭಾವನಾತ್ಮಕ ಸನ್ನಿವೇಶಗಳು ಹಾಗೂ ಅನಿರೀಕ್ಷಿತ ತಿರುವುಗಳ ಮೂಲಕ ಗಮನ ಸೆಳೆಯುತ್ತಿರುವ ಜೀ ಕನ್ನಡ ವಾಹಿನಿಯ ಹೊಸ ಧಾರಾವಾಹಿ ‘ಗೌರಿಪುತ್ರ’ (Gowri putra Serial) ಇದೀಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ಮದುವೆಯ ವಿಚಾರವಾಗಿ ಸಾಕಷ್ಟು ಗೊಂದಲಕ್ಕೆ ಸಿಲುಕಿದ್ದ ಕಾರ್ತಿಕ್ (Karthik) ಕೊನೆಗೂ ಕಾವ್ಯಾಳನ್ನು ಮದುವೆಯಾಗಿದ್ದಾನೆ. ಆದರೆ ಈ ಮದುವೆಯೇ ಆತನ ಬದುಕಿನಲ್ಲಿ ಹೊಸ ಸಮಸ್ಯೆಗಳನ್ನು ಸೃಷ್ಟಿಸಿದೆ. ಅದರಲ್ಲೂ ವೈರಿಯ ಮನೆಯ ಮಗಳನ್ನೇ ಮದುವೆಯಾಗಿರುವ ಕಾರ್ತಿಕ್ ಈಗ ಇಕ್ಕಟ್ಟಿಗೆ ಸಿಲುಕಿದ್ದಾನೆ.
ಗೌರಿ ಪುತ್ರ ಧಾರಾವಾಹಿ -
ಕೌಟುಂಬಿಕ ಕಥಾಹಂದರ, ಭಾವನಾತ್ಮಕ ಸನ್ನಿವೇಶಗಳು ಹಾಗೂ ಅನಿರೀಕ್ಷಿತ ತಿರುವುಗಳ ಮೂಲಕ ಗಮನ ಸೆಳೆಯುತ್ತಿರುವ ಜೀ ಕನ್ನಡ ವಾಹಿನಿಯ ಹೊಸ ಧಾರಾವಾಹಿ ‘ಗೌರಿಪುತ್ರ’ (Gowri putra Serial) ಇದೀಗ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ಮದುವೆಯ ವಿಚಾರವಾಗಿ ಸಾಕಷ್ಟು ಗೊಂದಲಕ್ಕೆ ಸಿಲುಕಿದ್ದ ಕಾರ್ತಿಕ್ (Karthik) ಕೊನೆಗೂ ಕಾವ್ಯಾಳನ್ನು ಮದುವೆಯಾಗಿದ್ದಾನೆ. ಆದರೆ ಈ ಮದುವೆಯೇ ಆತನ ಬದುಕಿನಲ್ಲಿ ಹೊಸ ಸಮಸ್ಯೆಗಳನ್ನು ಸೃಷ್ಟಿಸಿದೆ. ಅದರಲ್ಲೂ ವೈರಿಯ ಮನೆಯ ಮಗಳನ್ನೇ ಮದುವೆಯಾಗಿರುವ ಕಾರ್ತಿಕ್ ಈಗ ಇಕ್ಕಟ್ಟಿಗೆ ಸಿಲುಕಿದ್ದಾನೆ.
ವೈರಿಯ ಮನೆಯ ಮಗಳನ್ನೇ ಮದುವೆಯಾದ ಕಾರ್ತಿಕ್!
ಧಾರಾವಾಹಿಯ ಆರಂಭದಿಂದಲೂ ಕಾರ್ತಿಕ್ಗೆ ತನ್ನ ತಾಯಿ ಗೌರಿಯೇ ಪ್ರಪಂಚ. ತಾಯಿಯ ಆಸೆಗಳನ್ನು ಈಡೇರಿಸಬೇಕು, ಆಕೆಯ ತವರು ಮನೆಯ ಗೌರವ ಮತ್ತು ನೆಮ್ಮದಿಯನ್ನು ಮರಳಿ ಕೊಡಿಸಬೇಕು ಎಂಬುದು ಕಾರ್ತಿಕ್ನ ಬಯಕೆ. ಇದೇ ಕಾರಣಕ್ಕೆ ಸೋದರಮಾವನ ಮಗಳನ್ನು ಮದುವೆಯಾಗಲು ಆತ ಒಪ್ಪಿಕೊಂಡಿದ್ದ.
ಇದನ್ನೂ ಓದಿ: Bigg Boss Kannada 13: ಜಗ್ಗ ಮಮ್ಮಿ ʻಗಂಡಸ್ತನʼ ಪ್ರಶ್ನಿಸಿದ ಮಂಜನಿಗೆ ಕಿಚ್ಚನ ಕ್ಲಾಸ್!
ಆದರೆ ಮದುವೆಯ ವಿಚಾರದಲ್ಲಿ ಒಂದರ ಹಿಂದೆ ಒಂದರಂತೆ ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ಗೆಳೆಯನ ಪ್ರೇಯಸಿಯನ್ನು ರಕ್ಷಿಸಲು ಹೋಗಿದ್ದ ಕಾರ್ತಿಕ್, ತಪ್ಪಾಗಿ ಕಾವ್ಯಾಳನ್ನೇ ಕರೆದುಕೊಂಡು ಬರುತ್ತಾನೆ. ಮುಂದೆ ಇದೇ ಕಾವ್ಯಾಳನ್ನು ಮದುವೆಯಾಗುವ ಪರಿಸ್ಥಿತಿ ಎದುರಾಗುತ್ತದೆ. ಇದೀಗ ಕಾರ್ತಿಕ್ ಮತ್ತು ಕಾವ್ಯಾ ಮದುವೆಯಾಗಿದ್ದು, ಕಥೆ ಹೊಸ ಹಂತಕ್ಕೆ ಕಾಲಿಟ್ಟಿದೆ.
ಗೌರಿ-ಸೂರಪ್ಪ ಮುಖಾಮುಖಿ: ಮುಂದೇನಾಗಲಿದೆ?
ಕಾರ್ತಿಕ್ ಕಾವ್ಯಾಳನ್ನು ಮದುವೆಯಾಗಿರುವುದರ ಹಿಂದೆ ಮತ್ತೊಂದು ದೊಡ್ಡ ತಿರುವಿದೆ. ಕಾವ್ಯಾ ವೈರಿಯ ಮನೆಯ ಮಗಳು ಎಂಬ ವಿಚಾರ ಕಾರ್ತಿಕ್ನ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಗೌರಿ ಮತ್ತು ಸೂರಪ್ಪ ಮುಖಾಮುಖಿಯಾಗಿದ್ದಾರೆ.
ಇವರಿಬ್ಬರ ಭೇಟಿಯಿಂದ ಕಥೆಯಲ್ಲಿ ಹೊಸ ಸಂಘರ್ಷ ಆರಂಭವಾಗುವ ಸೂಚನೆ ಸಿಕ್ಕಿದೆ. ಈಗಾಗಲೇ ಕುಟುಂಬದ ಗೌರವ ಮತ್ತು ಸಂಬಂಧಗಳ ನಡುವೆ ಸಿಲುಕಿರುವ ಕಾರ್ತಿಕ್ಗೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಸವಾಲುಗಳು ಎದುರಾಗಲಿವೆ ಎಂಬ ಕುತೂಹಲ ಮೂಡಿದೆ.
ತಾಯಿಯ ಆಸೆಯೇ ಕಾರ್ತಿಕ್ಗೆ ಸವಾಲಾಗುತ್ತಾ?
ಮೊದಲ ಸಂಚಿಕೆಯಿಂದಲೇ ಗೌರಿ ಮತ್ತು ಕಾರ್ತಿಕ್ ನಡುವಿನ ತಾಯಿ-ಮಗನ ಬಾಂಧವ್ಯ ಧಾರಾವಾಹಿಯ ಪ್ರಮುಖ ಆಕರ್ಷಣೆಯಾಗಿದೆ. ಕೂಡು ಕುಟುಂಬದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಗೌರಿಗೆ ತನ್ನದೇ ಆದ ಆಸೆ, ಕನಸುಗಳಿವೆ. ದೇವರ ಮೆರವಣಿಗೆಯ ಮುಂದೆ ಎಲ್ಲರಂತೆ ಕುಣಿದು ಕುಪ್ಪಳಿಸಬೇಕು ಎಂಬ ಆಕೆಯ ಆಸೆಯನ್ನು ಮಗ ಕಾರ್ತಿಕ್ ಅರ್ಥಮಾಡಿಕೊಂಡು ಈಡೇರಿಸಲು ಪ್ರಯತ್ನಿಸುತ್ತಾನೆ.
ತಾಯಿಯ ಸಂತೋಷಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧನಿರುವ ಕಾರ್ತಿಕ್, ಇದೀಗ ಕಾವ್ಯಾಳನ್ನು ಮದುವೆಯಾಗುವ ಮೂಲಕ ಹೊಸ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಇದನ್ನೂ ಓದಿ: Bigg Boss Kannada 13: ಇಡೀ ಸೀಸನ್ ನಾಮಿನೇಟ್ ಆಗೋದು ಯಾರು? ಬಿಗ್ ಟ್ವಿಸ್ಟ್!
ಒಟ್ಟಿನಲ್ಲಿ, ಕಾವ್ಯಾಳ ಜೊತೆಗಿನ ಕಾರ್ತಿಕ್ ಮದುವೆ, ಗೌರಿ-ಸೂರಪ್ಪ ಮುಖಾಮುಖಿ ಹಾಗೂ ವೈರತ್ವದ ಹಿನ್ನೆಲೆಯಲ್ಲಿ ‘ಗೌರಿಪುತ್ರ’ ಧಾರಾವಾಹಿ ಮತ್ತಷ್ಟು ಕುತೂಹಲ ಮೂಡಿಸಿದೆ. ಈ ಧಾರಾವಾಹಿಯು ಜನಪ್ರಿಯ ‘ಅಮೃತಧಾರೆ’ ಧಾರಾವಾಹಿಯ ಪ್ರಸಾರದ ಸಮಯವನ್ನು ಪಡೆದುಕೊಂಡಿದ್ದು, ಪ್ರತಿದಿನ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ.