ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gowri Putra Serial: ಈ ಕಡೆ ತವರಿನ ಬಂಧ ಗಟ್ಟಿ, ಆ ಕಡೆ ಕಾರ್ತಿಕ್‌ನ ಮದುವೆ!

Gowri Putra Serial: ಜೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ‘ಗೌರಿಪುತ್ರ’ (Gowri Putra Serial) ಸೋಮವಾರದಿಂದ ಪ್ರಸಾರ ಆರಂಭಿಸಿದೆ. ಅದ್ಧೂರಿ ಮೇಕಿಂಗ್, ಭಾವನಾತ್ಮಕ ಸನ್ನಿವೇಶಗಳು ಹಾಗೂ ಅನಿರೀಕ್ಷಿತ ತಿರುವುಗಳೊಂದಿಗೆ ಪ್ರೇಕ್ಷಕರ ಮುಂದೆ ಬಂದಿರುವ ಈ ಧಾರಾವಾಹಿ ಮೊದಲ ಸಂಚಿಕೆಯಲ್ಲೇ ಕುತೂಹಲ ಮೂಡಿಸಿದೆ. ಧಾರಾವಾಹಿಯ ಆರಂಭದಲ್ಲೇ ನಾಯಕಿ ಕಾವ್ಯಾ ಮದುವೆ ಮನೆಯಿಂದ ತಪ್ಪಿಸಿಕೊಂಡು ಓಡುವ ದೃಶ್ಯ ಬರುತ್ತದೆ.

ಗೌರಿ ಪುತ್ರ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ‘ಗೌರಿಪುತ್ರ’ (Gowri Putra Serial) ಸೋಮವಾರದಿಂದ ಪ್ರಸಾರ ಆರಂಭಿಸಿದೆ. ಅದ್ಧೂರಿ ಮೇಕಿಂಗ್, ಭಾವನಾತ್ಮಕ ಸನ್ನಿವೇಶಗಳು ಹಾಗೂ ಅನಿರೀಕ್ಷಿತ ತಿರುವುಗಳೊಂದಿಗೆ ಪ್ರೇಕ್ಷಕರ ಮುಂದೆ ಬಂದಿರುವ ಈ ಧಾರಾವಾಹಿ ಮೊದಲ ಸಂಚಿಕೆಯಲ್ಲೇ ಕುತೂಹಲ ಮೂಡಿಸಿದೆ. ಧಾರಾವಾಹಿಯ ಆರಂಭದಲ್ಲೇ ನಾಯಕಿ ಕಾವ್ಯಾ ಮದುವೆ ಮನೆಯಿಂದ ತಪ್ಪಿಸಿಕೊಂಡು ಓಡುವ ದೃಶ್ಯ ಬರುತ್ತದೆ.

ಮದುವೆ ಮಂಟಪದಿಂದ ಕಾವ್ಯಾ ಎಸ್ಕೇಪ್!

ಕಾವ್ಯಾ ಮದುವೆ ಮನೆಯಿಂದ ತಪ್ಪಿಸಿಕೊಂಡು ಓಡುವ ದೃಶ್ಯ ಬರುತ್ತದೆ. ಆಕೆಯನ್ನು ಬೆನ್ನಟ್ಟಿಕೊಂಡು ಬರುತ್ತಿದ್ದವರಿಂದ ಕಾರ್ತಿಕ್ ಸಹಾಯ ಮಾಡಿ ರಕ್ಷಿಸುತ್ತಾನೆ. ಬಳಿಕ ಕಾರ್ತಿಕ್ ತನ್ನ ಗೆಳೆಯನ ಮದುವೆಗೆ ತೆರಳುತ್ತಾನೆ. ಅಲ್ಲಿ ಗೆಳೆಯನ ಪ್ರೇಯಸಿಗೆ ಬಲವಂತವಾಗಿ ಬೇರೆ ಮದುವೆ ಮಾಡಿಸಲಾಗುತ್ತಿದೆ ಎಂಬ ವಿಚಾರ ತಿಳಿಯುತ್ತದೆ.

ಗೆಳೆಯನ ಪ್ರೇಯಸಿ ಯಾರು, ಆಕೆಯ ಹೆಸರೇನು ಎಂಬುದನ್ನು ಸರಿಯಾಗಿ ವಿಚಾರಿಸದೆ ಕಾರ್ತಿಕ್ ಸಹಾಯಕ್ಕೆ ಧಾವಿಸುತ್ತಾನೆ. ದಾರಿಯಲ್ಲಿ ಕಂಡ ವಧುವೇ ಗೆಳೆಯನ ಪ್ರೇಯಸಿ ಎಂದು ಭಾವಿಸಿ ಕಲ್ಯಾಣಮಂಟಪಕ್ಕೆ ತೆರಳಿ ಆಕೆಯನ್ನು ಕರೆದುಕೊಂಡು ಬರುತ್ತಾನೆ. ಆದರೆ ಮನೆಗೆ ಬಂದ ಬಳಿಕ ಆಕೆ ತನ್ನ ಪ್ರೇಯಸಿ ಅಲ್ಲ ಎಂಬುದನ್ನು ಗೆಳೆಯ ತಿಳಿಸುತ್ತಾನೆ. ಇದರಿಂದ ಕಾರ್ತಿಕ್‌ಗೆ ಶಾಕ್ ಆಗುತ್ತದೆ.

ಇತ್ತ ಬಲವಂತದ ಮದುವೆಯಿಂದ ತಪ್ಪಿಸಿಕೊಂಡ ಕಾವ್ಯಾ ನಿರಾಳವಾಗಿರುತ್ತಾಳೆ. ಮುಂದೆ ಇದೇ ಕಾವ್ಯಾಳನ್ನು ಕಾರ್ತಿಕ್ ಮದುವೆಯಾಗುವ ಸನ್ನಿವೇಶ ಕಥೆಯಲ್ಲಿ ಮೂಡಿಬರುತ್ತದೆ.

ತಾಯಿಗಾಗಿ ಮಗನ ತ್ಯಾಗ, ಮದುವೆಯಲ್ಲೂ ಅನಿರೀಕ್ಷಿತ ತಿರುವು!

ಕಾರ್ತಿಕ್‌ಗೆ ತನ್ನ ತಾಯಿ ಗೌರಿಯೇ ಪ್ರಪಂಚ. ತಾಯಿಗೆ ಆಕೆಯ ತವರು ಮನೆಯ ಗೌರವ ಮತ್ತು ನೆಮ್ಮದಿಯನ್ನು ಮರಳಿ ಕೊಡಿಸಬೇಕು ಎಂಬುದು ಆತನ ಬಯಕೆ. ಈ ಕಾರಣದಿಂದ ಸೋದರಮಾವನ ಮಗಳನ್ನು ಮದುವೆಯಾಗಲು ಕಾರ್ತಿಕ್ ಒಪ್ಪಿಕೊಳ್ಳುತ್ತಾನೆ. ಆದರೆ ಕೊನೆಯ ಕ್ಷಣದಲ್ಲಿ ಪರಿಸ್ಥಿತಿ ಬದಲಾಗುತ್ತದೆ. ಸೋದರಮಾವನ ಮಗಳ ಬದಲಿಗೆ ಕಾವ್ಯಾಳನ್ನು ಮದುವೆಯಾಗುವ ಅನಿವಾರ್ಯತೆ ಎದುರಾಗುತ್ತದೆ.

ಹಾಗಾದರೆ ಕಾರ್ತಿಕ್ ಮತ್ತು ಕಾವ್ಯಾ ಮದುವೆಯಾಗಲು ಕಾರಣವೇನು? ಈ ಮದುವೆಯನ್ನು ಗೌರಿ ಒಪ್ಪಿಕೊಳ್ಳುತ್ತಾರಾ? ಎಂಬ ಪ್ರಶ್ನೆಗಳು ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಿವೆ.

ಇದನ್ನೂ ಓದಿ: Bigg Boss Kannada 13: ಪ್ರೋಮೋ ಕಟ್‌ಗಾಗಿ ಶೆಟ್ಟಿ ಡಾನ್‌ ಪ್ಲ್ಯಾನ್‌? ಸೌಂದರ್ಯ ವಿರುದ್ಧ ಸ್ಪರ್ಧಿಗಳ ಅಸಮಾಧಾನ

ಗೌರಿ ಪಾತ್ರದ ಪರಿಚಯವೇ ಮೊದಲ ಸಂಚಿಕೆಯ ಹೈಲೈಟ್!

ಮೊದಲ ಸಂಚಿಕೆಯಲ್ಲಿ ಗೌರಿ ಪಾತ್ರವನ್ನು ನಿರ್ದೇಶಕರು ಅಚ್ಚುಕಟ್ಟಾಗಿ ಪರಿಚಯಿಸಿದ್ದಾರೆ. ಕೂಡು ಕುಟುಂಬದ ಸೊಸೆಯಾಗಿರುವ ಗೌರಿ, ಮನೆಯ ಪ್ರತಿಯೊಬ್ಬರ ಅಗತ್ಯಗಳನ್ನು ಅರಿತುಕೊಂಡು ಬದುಕುವ ಮಹಿಳೆ. ಬೆಳಗ್ಗೆ ಕುಟುಂಬದ ಸದಸ್ಯರಿಗೆ ಯೋಗಾಭ್ಯಾಸ ಹೇಳಿಕೊಡುವ ಮೂಲಕ ದಿನ ಆರಂಭಿಸುವ ಆಕೆ, ಬಳಿಕ ಅಡುಗೆಮನೆಗೆ ತೆರಳಿ ಎಲ್ಲರಿಗೂ ಇಷ್ಟವಾಗುವ ಅಡುಗೆ ಸಿದ್ಧಪಡಿಸುತ್ತಾಳೆ.

ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವ ಗೌರಿಯ ವ್ಯಕ್ತಿತ್ವದ ಜೊತೆಗೆ ಆಕೆಯ ಆಸೆ, ಕನಸುಗಳಿಗೂ ಕಥೆಯಲ್ಲಿ ಜಾಗ ನೀಡಲಾಗಿದೆ.

ತಾಯಿಯ ಆಸೆ ಈಡೇರಿಸಿದ ಕಾರ್ತಿಕ್: ಮನಮುಟ್ಟಿದ ದೃಶ್ಯ!

ಗೌರಿ ಮತ್ತು ಕಾರ್ತಿಕ್ ನಡುವಿನ ಬಾಂಧವ್ಯ ಮೊದಲ ಸಂಚಿಕೆಯ ಪ್ರಮುಖ ಆಕರ್ಷಣೆ. ದೇವರ ಮೆರವಣಿಗೆಯ ಮುಂದೆ ಎಲ್ಲರಂತೆ ಕುಣಿದು ಕುಪ್ಪಳಿಸಬೇಕು ಎಂಬ ಆಸೆ ಗೌರಿಗೆ ಇರುತ್ತದೆ. ಆದರೆ ಆಕೆಯ ಮನದ ಆಸೆಯನ್ನು ಅರ್ಥಮಾಡಿಕೊಳ್ಳುವ ಕಾರ್ತಿಕ್, ಅದನ್ನು ಈಡೇರಿಸಲು ಮುಂದಾಗುತ್ತಾನೆ.



ತಾಯಿಯ ಮುಖದಲ್ಲಿ ಸಂತೋಷ ಕಂಡಾಗಲೇ ಖುಷಿಪಡುವ ಕಾರ್ತಿಕ್‌ನ ಪ್ರೀತಿ ನೋಡುಗರ ಮನಸ್ಸಿಗೆ ಹತ್ತಿರವಾಗುವಂತಿದೆ. ತಾಯಿ-ಮಗನ ನಡುವಿನ ಈ ಆತ್ಮೀಯ ಕ್ಷಣಗಳು ಧಾರಾವಾಹಿಯ ಭಾವನಾತ್ಮಕ ಅಂಶವನ್ನು ಮತ್ತಷ್ಟು ಹೆಚ್ಚಿಸಿವೆ.

ಮೊದಲ ಸಂಚಿಕೆಯಲ್ಲಿ ಗೌರಿ ಮತ್ತು ರಾಘವೇಂದ್ರ ಅವರ ದಾಂಪತ್ಯ ಜೀವನದ ಸುಂದರ ಕ್ಷಣಗಳನ್ನೂ ತೋರಿಸಲಾಗಿದೆ. ಇವರ 28ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮಕ್ಕಾಗಿ ಕುಟುಂಬದ ಸದಸ್ಯರೆಲ್ಲರೂ ವಿಶೇಷ ತಯಾರಿ ಮಾಡಿರುತ್ತಾರೆ.

ಅವರ ಮದುವೆಯ ದಿನವನ್ನು ಮತ್ತೊಮ್ಮೆ ನೆನಪಿಸುವ ಉದ್ದೇಶದಿಂದ ಕುಟುಂಬದವರೆಲ್ಲ ಸೇರಿ ಮದುವೆಯ ಸನ್ನಿವೇಶವನ್ನೇ ಮರುಸೃಷ್ಟಿಸುತ್ತಾರೆ. ಈ ಮೂಲಕ ಕುಟುಂಬದ ಪ್ರೀತಿ, ಒಗ್ಗಟ್ಟು ಮತ್ತು ದಾಂಪತ್ಯದ ಮಹತ್ವವನ್ನು ಸುಂದರವಾಗಿ ಕಟ್ಟಿಕೊಡಲಾಗಿದೆ.

ಗೌರಿಯ ತವರಿನ ಹಿಂದಿರುವ ರಹಸ್ಯವೇನು?

ಒಂದೆಡೆ ತಾಯಿಯ ಸಂತೋಷಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧನಿರುವ ಕಾರ್ತಿಕ್, ಮತ್ತೊಂದೆಡೆ ಕುಟುಂಬದ ಜವಾಬ್ದಾರಿಗಳ ನಡುವೆ ತನ್ನದೇ ಆದ ವ್ಯಕ್ತಿತ್ವ ಹೊಂದಿರುವ ಗೌರಿ. ಇವರ ಬದುಕಿನ ಸುತ್ತ ಕಥೆ ಸಾಗಲಿದೆ.

ಆದರೆ ಗೌರಿಯ ತವರು ಮನೆಯ ಹಿಂದಿನ ಕಥೆಯೇನು? ಕಾರ್ತಿಕ್‌ಗೆ ತನ್ನ ತಾಯಿಯ ಬದುಕಿನ ಬಗ್ಗೆ ತಿಳಿಯದಿರುವ ರಹಸ್ಯ ಯಾವುದು? ಕಾವ್ಯಾಳ ಆಗಮನದಿಂದ ಗೌರಿ ಕುಟುಂಬದಲ್ಲಿ ಏನೆಲ್ಲ ಬದಲಾವಣೆಗಳಾಗಲಿವೆ? ಎಂಬ ಪ್ರಶ್ನೆಗಳು ಸದ್ಯ ವೀಕ್ಷಕರನ್ನು ಕಾಡುತ್ತಿವೆ.

ಇದನ್ನೂ ಓದಿ: Bigg Boss Kannada 13: ಪುರುಷ ಸ್ಪರ್ಧಿಗಳ ಒಗ್ಗಟ್ಟಿಗೆ ನಡುಗಿದ ಆಸಿಯಾ, ಸೌಂದರ್ಯ ಹಾಗೂ ʻಮಹಾರಾಣಿʼ ಗಾನವಿ!

ತಾಯಿ-ಮಗನ ಪ್ರೀತಿ, ಕುಟುಂಬದ ಬಾಂಧವ್ಯ, ಪ್ರೀತಿ ಮತ್ತು ಅನಿರೀಕ್ಷಿತ ಮದುವೆಯ ತಿರುವುಗಳೊಂದಿಗೆ ‘ಗೌರಿಪುತ್ರ’ ಕಿರುತೆರೆಗೆ ಹೊಸ ಕಥೆಯನ್ನು ಪರಿಚಯಿಸಿದೆ.ವಿಶೇಷವೆಂದರೆ, ಈ ಧಾರಾವಾಹಿಯು ಜನಪ್ರಿಯ ‘ಅಮೃತಧಾರೆ’ ಧಾರಾವಾಹಿಯ ಪ್ರಸಾರದ ಸಮಯವನ್ನು ಪಡೆದುಕೊಂಡಿದ್ದು, ಪ್ರತಿದಿನ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.

Yashaswi Devadiga

View all posts by this author