Bigg Boss Kannada 13: ಪ್ರೋಮೋ ಕಟ್ಗಾಗಿ ಶೆಟ್ಟಿ ಡಾನ್ ಪ್ಲ್ಯಾನ್? ಸೌಂದರ್ಯ ವಿರುದ್ಧ ಸ್ಪರ್ಧಿಗಳ ಅಸಮಾಧಾನ
Bigg Boss Kannada 13:‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಯಲ್ಲಿ ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡುವಿನ ಮನಸ್ತಾಪ ಹೆಚ್ಚಾಗುತ್ತಿದೆ. ಆರಂಭದಲ್ಲಿ ಎಲ್ಲರೊಂದಿಗೆ ಸ್ನೇಹದಿಂದ ಬೆರೆಯುತ್ತಿದ್ದ ಸೌಂದರ್ಯ ಶೆಟ್ಟಿ ಇದೀಗ ಮನೆಯ ಹಲವು ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೌಂದರ್ಯ ಅವರ ಆಟದ ವೈಖರಿ, ಮಾತಿನ ಶೈಲಿ ಹಾಗೂ ಸಣ್ಣಪುಟ್ಟ ಘಟನೆಗಳನ್ನು ದೊಡ್ಡದಾಗಿ ಬಿಂಬಿಸುವ ಪ್ರಯತ್ನದ ಬಗ್ಗೆ ಮನೆಯೊಳಗೆ ಚರ್ಚೆ ಜೋರಾಗಿದೆ. ಅದರಲ್ಲೂ ಅವರು ಈ ಹಿಂದೆ ಎಂಟಿವಿ ಸ್ಪ್ಲಿಟ್ಸ್ವಿಲ್ಲಾ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವುದನ್ನೇ ಮುಂದಿಟ್ಟುಕೊಂಡು ಕೆಲವು ಸ್ಪರ್ಧಿಗಳು ಪ್ರಶ್ನೆ ಎತ್ತಿದ್ದಾರೆ.
ಬಿಗ್ ಬಾಸ್ ಕನ್ನಡ -
‘ಬಿಗ್ ಬಾಸ್ ಕನ್ನಡ (Bigg Boss Kannada 13) ಸೀಸನ್ 13’ರ ಮನೆಯಲ್ಲಿ ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡುವಿನ ಮನಸ್ತಾಪ ಹೆಚ್ಚಾಗುತ್ತಿದೆ. ಆರಂಭದಲ್ಲಿ ಎಲ್ಲರೊಂದಿಗೆ ಸ್ನೇಹದಿಂದ ಬೆರೆಯುತ್ತಿದ್ದ ಸೌಂದರ್ಯ ಶೆಟ್ಟಿ (Soundarya shetty) ಇದೀಗ ಮನೆಯ ಹಲವು ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೌಂದರ್ಯ ಅವರ ಆಟದ ವೈಖರಿ, ಮಾತಿನ ಶೈಲಿ ಹಾಗೂ ಸಣ್ಣಪುಟ್ಟ ಘಟನೆಗಳನ್ನು ದೊಡ್ಡದಾಗಿ ಬಿಂಬಿಸುವ ಪ್ರಯತ್ನದ ಬಗ್ಗೆ ಮನೆಯೊಳಗೆ ಚರ್ಚೆ ಜೋರಾಗಿದೆ. ಅದರಲ್ಲೂ ಅವರು ಈ ಹಿಂದೆ ಎಂಟಿವಿ ಸ್ಪ್ಲಿಟ್ಸ್ವಿಲ್ಲಾ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವುದನ್ನೇ ಮುಂದಿಟ್ಟುಕೊಂಡು ಕೆಲವು ಸ್ಪರ್ಧಿಗಳು ಪ್ರಶ್ನೆ ಎತ್ತಿದ್ದಾರೆ.
ರಿಯಾಲಿಟಿ ಶೋ ಅನುಭವವನ್ನೇ ಆಟಕ್ಕೆ ಬಳಸುತ್ತಿದ್ದಾರಾ ಸೌಂದರ್ಯ?
ಸೌಂದರ್ಯ ಶೆಟ್ಟಿ ಅವರಿಗೆ ರಿಯಾಲಿಟಿ ಶೋಗಳ ಕಾರ್ಯವೈಖರಿಯ ಬಗ್ಗೆ ಮೊದಲೇ ಅನುಭವವಿದೆ. ಕ್ಯಾಮೆರಾ ಮುಂದೆ ಹೇಗೆ ಮಾತನಾಡಬೇಕು, ಯಾವ ಘಟನೆಗಳು ಪ್ರೋಮೋದಲ್ಲಿ ಸ್ಥಾನ ಪಡೆಯುತ್ತವೆ ಹಾಗೂ ಯಾವ ರೀತಿಯ ಪ್ರತಿಕ್ರಿಯೆಗಳು ವೀಕ್ಷಕರ ಗಮನ ಸೆಳೆಯುತ್ತವೆ ಎಂಬುದನ್ನು ಅವರು ಅರಿತುಕೊಂಡಿದ್ದಾರೆ ಎಂಬುದು ಮನೆಯ ಕೆಲವರ ಅಭಿಪ್ರಾಯ.
ಇದೇ ವಿಚಾರವಾಗಿ ಗಗನ್ ಚಿನ್ನಪ್ಪ, ಪ್ರಶಾಂತ್, ಜಗದೀಶ್, ತಾಂಡವ್ ರಾಮ್ ಮತ್ತು ಕಿರಣ್ ಶಾಸ್ತ್ರಿ ನಡುವೆ ಚರ್ಚೆ ನಡೆದಿದೆ. ಸೌಂದರ್ಯ ಅವರ ವರ್ತನೆಯ ಬಗ್ಗೆ ಮಾತನಾಡಿದ ಗಗನ್, “ಹಿಂದಿನ ಶೋಗಳಲ್ಲಿ ಭಾಗವಹಿಸಿರುವುದರಿಂದ ಎಡಿಟಿಂಗ್ ಹೇಗೆ ನಡೆಯುತ್ತದೆ, ಪ್ರೋಮೋಗಳನ್ನು ಹೇಗೆ ಸಿದ್ಧಪಡಿಸುತ್ತಾರೆ ಎಂಬುದು ಅವಳಿಗೆ ಗೊತ್ತಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಇಷ್ಟೊಂದು ಯೋಚನೆ ಮಾಡುತ್ತಾಳೆ. ನನಗೆ 33 ವರ್ಷವಾದರೂ ಇಂತಹ ಬುದ್ಧಿ ಬಂದಿಲ್ಲ” ಎಂಬ ಅರ್ಥದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Bigg Boss Kannada 13: ಆಸಿಯಾಗೆ ತಿರುಗಿಸಿ ಹೊಡೆಯಲು ಮುಂದಾದ ಶೆಟ್ಟಿ ಡಾನ್
ಇನ್ನೊಂದೆಡೆ ಪ್ರಶಾಂತ್ ಕೂಡ ಸೌಂದರ್ಯ ಅವರ ಆಟವನ್ನು ಪ್ರಶ್ನಿಸಿದ್ದಾರೆ. ಯಾವ ಸಂದರ್ಭದಲ್ಲಿ ಏನು ಮಾತನಾಡಿದರೆ ಗಮನ ಸೆಳೆಯಬಹುದು, ಯಾವ ಹೇಳಿಕೆಯಿಂದ ಮನೆಯಲ್ಲಿ ವಿವಾದ ಸೃಷ್ಟಿಯಾಗಬಹುದು ಎಂಬುದನ್ನು ಲೆಕ್ಕ ಹಾಕಿಕೊಂಡೇ ಅವರು ನಡೆದುಕೊಳ್ಳುತ್ತಿದ್ದಾರೆ ಎನ್ನುವುದು ಪ್ರಶಾಂತ್ ಅವರ ಆರೋಪ. ತಮ್ಮ ಮಾತುಗಳು ಮತ್ತು ವರ್ತನೆಗಳ ಮೂಲಕ ಎಪಿಸೋಡ್ ಹಾಗೂ ಪ್ರೋಮೋಗಳಲ್ಲಿ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸ್ಪರ್ಧಿಗಳ ನಡುವಿನ ಚರ್ಚೆಗೆ ಮತ್ತಷ್ಟು ಕಿಚ್ಚು ಹಚ್ಚಿದ್ದು ನಾಮಿನೇಷನ್ ಪ್ರಕ್ರಿಯೆಯಲ್ಲಿ ನಡೆದ ಬಕೆಟ್ ಘಟನೆ. ಆಸಿಯಾ ಫಿರ್ದೋಸ್ ಅವರು ಸೌಂದರ್ಯಗೆ ಬಕೆಟ್ನಿಂದ ಹೊಡೆದರೇ ಅಥವಾ ಅದು ಆಕಸ್ಮಿಕವಾಗಿ ತಾಗಿತೇ ಎಂಬ ವಿಚಾರ ಮನೆಯೊಳಗೆ ವಿವಾದಕ್ಕೆ ಕಾರಣವಾಗಿದೆ.
ಘಟನೆ ನಡೆದ ಸಂದರ್ಭದಲ್ಲಿ ಸಗಣಿ ಎರಚುವುದು, ಕೂಗಾಟ ಮತ್ತು ಪರಸ್ಪರ ವಾಗ್ವಾದ ನಡೆದಿದ್ದರೂ, ಸೌಂದರ್ಯ ಅದನ್ನು ತಮ್ಮ ಪರವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯವನ್ನೂ ಕೆಲವು ಸ್ಪರ್ಧಿಗಳು ವ್ಯಕ್ತಪಡಿಸಿದ್ದಾರೆ. ಆದರೆ ಇದು ಮನೆಯ ಸದಸ್ಯರು ಮಾಡಿರುವ ಆರೋಪಗಳಾಗಿದ್ದು, ಘಟನೆಯ ನೈಜ ಉದ್ದೇಶದ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರುವುದು ಕಷ್ಟ.
ಆಸಿಯಾ ಮನಸ್ಸಿನಲ್ಲೂ ಸೌಂದರ್ಯ ಬಗ್ಗೆ ಬೇಸರ
ಇದೇ ವಿಚಾರದ ಕುರಿತು ಆಸಿಯಾ ಫಿರ್ದೋಸ್ ಅವರು ಧನುಷ್ ಜೊತೆ ಪ್ರತ್ಯೇಕವಾಗಿ ಮಾತನಾಡಿದ್ದಾರೆ. ನಾಮಿನೇಷನ್ ವೇಳೆ ತಾವು ಆರಂಭದಲ್ಲಿ ವಾದದಲ್ಲಿ ಭಾಗಿಯಾಗದಿದ್ದರೂ ತಮ್ಮನ್ನು ಅನಗತ್ಯವಾಗಿ ಮಧ್ಯಕ್ಕೆ ಎಳೆದುಕೊಳ್ಳಲಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಯಶಸ್ ಕೋಪಗೊಂಡು ಅಲ್ಲಿಂದ ಹೊರಟು ಹೋದ ಬಳಿಕ ಸೌಂದರ್ಯ ತಮ್ಮ ಬಳಿ ಬಂದು ನಡೆದ ಘಟನೆಯ ಬಗ್ಗೆ ಮತ್ತಷ್ಟು ಮಾತನಾಡಿ ಪರಿಸ್ಥಿತಿಯನ್ನು ಗೊಂದಲಗೊಳಿಸಿದರು ಎಂಬುದು ಆಸಿಯಾ ಅವರ ಅಳಲು.
ಈ ವೇಳೆ ಧನುಷ್ ಕೂಡ ಬಕೆಟ್ ಘಟನೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆಸಿಯಾ ಎರಡನೇ ಬಾರಿ ಬಕೆಟ್ನಿಂದ ಹಾಕುವಾಗ ಸೌಂದರ್ಯ ತಲೆಯನ್ನು ಅಲ್ಲಾಡಿಸಿದ್ದರಿಂದ ಅದು ತಾಗಿರಬಹುದು. ಆದರೆ ಆ ಘಟನೆಯ ನಂತರ ಸೌಂದರ್ಯ ನಡೆದುಕೊಂಡ ರೀತಿ ಸರಿಯಾಗಿರಲಿಲ್ಲ ಎಂದು ಧನುಷ್ ಹೇಳಿದ್ದಾರೆ.
ಇದನ್ನೂ ಓದಿ: Bigg Boss kannada 13: ಮೊದಲ ನಿರ್ಧಾರದಲ್ಲೇ ಎಡವಿದ್ರಾ ಮಹರಾಣಿಯಾದ ಗಾನವಿ?
ಬದಲಾಗುತ್ತಿದೆಯಾ ಮನೆಯವರ ಅಭಿಪ್ರಾಯ?
ಬಿಗ್ ಬಾಸ್ ಮನೆಗೆ ಬಂದ ಆರಂಭದಲ್ಲಿ ಸೌಂದರ್ಯ ಶೆಟ್ಟಿ ಅವರನ್ನು ಸ್ನೇಹಪರ, ಉತ್ಸಾಹದಿಂದ ಇರುವ ಮತ್ತು ಎಲ್ಲರೊಂದಿಗೆ ಬೆರೆಯುವ ಸ್ಪರ್ಧಿ ಎಂದು ಹಲವರು ನೋಡಿದ್ದರು. ಆದರೆ ಇತ್ತೀಚಿನ ಘಟನೆಗಳು ಅವರ ಬಗ್ಗೆ ಮನೆಯವರ ಅಭಿಪ್ರಾಯ ಬದಲಾಗುವಂತೆ ಮಾಡಿವೆ.