ಬೆಂಗಳೂರು: ಕನ್ನಡದ ಹೊಸ ಚಾನೆಲ್ ಜೀ ಪವರ್ ನಲ್ಲಿ ಅಕುಲ್ ಬಾಲಾಜಿ ನಡೆಸಿಕೊಡು ತ್ತಿರುವ ಹಳ್ಳಿ ಪವರ್ (Halli Power TV Show) ಎಲ್ಲರ ಜನಮನ್ನಣೆ ಗಳಿಸಿದೆ. ಇನ್ನು ಇಷ್ಟು ದಿನ ಒಂದು ಗಂಟೆಗಳ ಕಾಲ ಪ್ರಸಾರ ಆಗುತ್ತಿದ್ದ 'ಹಳ್ಳಿ ಪವರ್' ಜನರಿಗೆ ಮನರಂಜನೆ ನೀಡಲು ಇನ್ನು ಮುಂದೆ ಒಂದೂವರೆ ಗಂಟೆಗಳ ಕಾಲ ಪ್ರಸಾರ ಆಗುತ್ತಿದೆ. ಹೆಚ್ಚುವರಿ ಮನರಂಜನೆಯೊಂದಿಗೆ ಇನ್ನು ಮುಂದೆ 'ಹಳ್ಳಿ ಪವರ್' ಪ್ರತಿದಿನ ರಾತ್ರಿ 8:30 ರಿಂದ 10 ಗಂಟೆಯವರೆಗೆ ಪ್ರಸಾರ ಆಗಲಿದೆ.
ಸಿಟಿಯಲ್ಲಿ ಬೆಳೆದ ಹುಡುಗಿಯರು ತಮ್ಮ ಆಧುನಿಕ ಜೀವನ ಶೈಲಿಯನ್ನು ತ್ಯಜಿಸಿ ಹಳ್ಳಿ ಯುವತಿಯರಂತೆ ಜೀವನ ನಡೆಸುವುದೇ 'ಹಳ್ಳಿ ಪವರ್' ಶೋ. ಇಲ್ಲಿ ಹಳ್ಳಿಯ ದಿನನಿತ್ಯದ ಕೆಲಸಗಳನ್ನು ಸ್ಪರ್ಧಿಗಳಿಗೆ ಟಾಸ್ಕ್ ರೂಪದಲ್ಲಿ ನೀಡಲಾಗುತ್ತದೆ. ಇನ್ನು ಈ ಶೋ ನಲ್ಲಿ ಸಿಟಿ ಹುಡುಗಿಯರು ಹಳ್ಳಿ ಯಲ್ಲಿ ಹೇಗೆ ಜೀವನ ನಡೆಸಲಿದ್ದಾರೆ ಎಂಬುದೇ ಈ ಶೋನ ಹೈಲೆಟ್ ಆಗಿರಲಿದೆ. ರಗಡ್ ರಶ್ಮಿ, ಸೋನಿಯಾ ಜೋಸೆಫ್, ಟೆಲಿನ್ ಮಹಿಮಾ, ಗಾನವಿ ಗೌಡ, ಕಾವ್ಯ, ಗಗನಾ ಮೂರ್ತಿ, ದಿಯಾ ಅರಸ್, ಮೋನಿಷಾ ಪುಟ್ಟಮದು, ಫರೀನ್, ಕವನಾ, ಧನ್ಯ, ಸಿಂಚನ ಸ್ಪರ್ಧಿಗಳಾಗಿದ್ದಾರೆ. ದಿನ ಹೋದಂತೆ ಟಾಸ್ಕ್ ನ ತೀವ್ರತೆ ಹೆಚ್ಚಾಗಿರುವುದು ವೀಕ್ಷಕರಲ್ಲಿ ಇನ್ನಷ್ಟು ಕುತೂಹಲವನ್ನು ಮೂಡಿಸಿದೆ.
ಇದನ್ನೂ ಓದಿ:Gatha Vaibhava Movie: ಸಿಂಪಲ್ ಸುನಿ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್! ಟ್ರೈಲರ್ ಔಟ್
'ಹಳ್ಳಿ ಪವರ್' ಶೋ ಶುರು ಆಗಿ ಈಗಾಗಲೇ ತಿಂಗಳುಗಳಾಗಿದ್ದು, ಟಾಸ್ಕ್ಸ್ ಗಳು ಆಸಕ್ತಿದಾಯಕವಾಗಿ ಮೂಡಿ ಬರುತ್ತಿರುವು ದರಿಂದ ಇನ್ನು ಮುಂದೆ ಇನ್ನಷ್ಟು ಇಂಟ್ರಸ್ಟಿಂಗ್ ಮೂಡಿಸಲು ಎಕ್ಸ್ಟ್ರಾ ಪವರ್ ನೊಂದಿಗೆ ಎಕ್ಸ್ಟ್ರಾ ಮನರಂಜನೆ ವೀಕ್ಷಕರಿಗೆ ನೀಡಲು ಅರ್ಧ ಗಂಟೆ ಮುಂಚಿತವಾಗಿ ಬರುತ್ತಿದೆ. ಹಾಗೆಯೇ 12 ಸ್ಪರ್ಧಿಗಳು ಇದ್ದು ಇಲ್ಲಿ ಯಾರಿಗೆ ಹಳ್ಳಿ ಪವರ್ ಸಿಗುತ್ತದೆ ಎಂದು ಕಾದು ನೋಡಬೇಕಿದೆ. ಹಾಗಾಗಿ ವಿವಿಧ ಟಾಸ್ಕ್ಸ್ ಗಳಲ್ಲಿ ಸ್ಪರ್ಧಿಗಳು ಹೇಗೆ ಪರ್ಫಾರ್ಮ್ ಮಾಡ್ತಾರೆ? ಯಾರು ವಿನ್ನರ್ ಆಗ್ತಾರೆ ಎಂದು ತಿಳಿಯಲು ಇನ್ನು ಮುಂದೆ ನೀವು ಮಿಸ್ ಮಾಡದೆ ' ಹಳ್ಳಿ ಪವರ್' ಕಾರ್ಯಕ್ರಮವನ್ನು ಪ್ರತಿದಿನ ರಾತ್ರಿ 8:30 ಕ್ಕೆ ವೀಕ್ಷಣೆ ಮಾಡಬಹುದು.