ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Halli Power: ಪ್ಯಾಟೆ ಹುಡುಗಿಯರ ಹಳ್ಳಿ ಪವರ್: ಝೀ ಕನ್ನಡದ ಹೊಸ ಚಾನೆಲ್​ನಲ್ಲಿ ಹೊಸ ರಿಯಾಲಿಟಿ ಶೋ

ಹಳ್ಳಿ ಪವರ್ ಶೋನ ಅಕುಲ್ ಬಾಲಾಜಿ ನಡೆಸಿಕೊಡಲಿದ್ದಾರೆ. ಸದ್ಯ ಶೋ ಪ್ರಾರಂಭಿಕ ಹಂತದಲ್ಲಿದ್ದು, ಆಡಿಷನ್ಗೆ ನಡೆದಿದೆ. ಹಿಂದೆ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ಸುವರ್ಣ ವಾಹಿನಿಯಲ್ಲಿ ನಡೆಯುತ್ತಿತ್ತು. ಈ ರಿಯಾಲಿಟಿ ಶೋ ನಾಲ್ಕು ಸೀಸನ್ ಆಗಿದೆ. ಅದರಲ್ಲಿ ಅಕುಲ್ ಬಾಲಾಜಿ ಅವರೇ ನಿರೂಪಕರಾಗಿ ಪ್ರಮುಖ ಪಾತ್ರ ವಹಿಸಿದ್ದರು.

ಪ್ಯಾಟೆ ಹುಡುಗಿಯರ ಹಳ್ಳಿ ಪವರ್: ಹೊಸ ಚಾನೆಲ್​ನಲ್ಲಿ ಹೊಸ ಶೋ

Halli Power

Profile Vinay Bhat Aug 2, 2025 3:54 PM

ಕನ್ನಡಿಗರ ನೆಚ್ಚಿನ ವಾಹಿನಿ ಝೀ ಕನ್ನಡ (Zee Kannada) ಜನರನ್ನು ತನ್ನ ಧಾರಾವಾಹಿಗಳು, ರಿಯಾಲಿಟಿ ಶೋಗಳು ಮತ್ತು ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮೂಲಕ ಮನರಂಜಿಸುತ್ತ ಬಂದಿದೆ. ಇಂದಿನಿಂದ ಝೀಯಲ್ಲಿ ನಾವು ನಮ್ಮವರು ಎಂಬ ಹೊಸ ರಿಯಾಲಿಟಿ ಶೋ ಶುರುವಾಗಲಿದೆ. ಇದರ ಬೆನ್ನಲ್ಲೆ ಮತ್ತೊಂದು ರಿಯಾಲಿಟಿ ಶೋನ ಪ್ರೊಮೋ ಬಿಡುಗಡೆ ಮಾಡಿದೆ ವಾಹಿನಿ. ಆದರೆ, ಇದು ಝೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿಲ್ಲ. ಬದಲಾಗಿ ಝೀ ಕನ್ನಡದ ನೂತನ ಚಾನೆಲ್ ಝೀ ಪವರ್​ನಲ್ಲಿ ಟೆಲಿಕಾಸ್ಟ್ ಆಗಲಿದೆ. ಈ ಹೊಸ ರಿಯಾಲಿಟಿ ಶೋ ಹೆಸರು ಹಳ್ಳಿ ಪವರ್.

ಹಳ್ಳಿ ಪವರ್ ಶೋನ ಅಕುಲ್ ಬಾಲಾಜಿ ನಡೆಸಿಕೊಡಲಿದ್ದಾರೆ. ಸದ್ಯ ಶೋ ಪ್ರಾರಂಭಿಕ ಹಂತದಲ್ಲಿದ್ದು, ಆಡಿಷನ್​​ಗೆ ನಡೆದಿದೆ. ಹಿಂದೆ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ಸುವರ್ಣ ವಾಹಿನಿಯಲ್ಲಿ ನಡೆಯುತ್ತಿತ್ತು. ಈ ರಿಯಾಲಿಟಿ ಶೋ ನಾಲ್ಕು ಸೀಸನ್ ಆಗಿದೆ. ಅದರಲ್ಲಿ ಅಕುಲ್ ಬಾಲಾಜಿ ಅವರೇ ನಿರೂಪಕರಾಗಿ ಪ್ರಮುಖ ಪಾತ್ರ ವಹಿಸಿದ್ದರು. ಈ ಶೋ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿತ್ತು. ಹಳ್ಳಿ ಜೀವನ, ಹಳ್ಳಿ ಬದುಕು ಹೇಗಿರುತ್ತದೆ ಎಂಬುದನ್ನು ಸಿಟಿ ಹುಡುಗಿಯರಿಗೆ ಮನದಟ್ಟು ಮಾಡಿಕೊಟ್ಟ ಈ ಶೋ ಬಹಳ ಚೆನ್ನಾಗಿ ಮೂಡಿಬಂದಿತ್ತು. ಈಗ ಅದೇ ಮಾದರಿಯಲ್ಲಿ ಇದು ಕೂಡ ಇರಲಿದೆ ಎನ್ನಲಾಗಿದೆ.

ಹೊಸದಾಗಿ ಬಿಡುಗಡೆ ಆಗಿರುವ ಪ್ರೊಮೋದಲ್ಲಿ, ಹಳ್ಳಿಯ ಜಾನುವಾರು ಜೊತೆ ಬಾಳೋದು ಅಂತಂದ್ರ ಪ್ಯಾಟೆ ಎಸಿ ರೂಮ್‌ನ್ಯಾಗ ಮಲ್ಕೊಳ್ಳುವಷ್ಟು ಆರಾಮ್‌ ಅಲ್ಲ ಎಂದು ಅಕುಲ್‌ ಹೇಳಿದ್ದಾರೆ. ಇನ್ನೂ ರಗಡ್‌ ಮಜಾ ಈಗ ಬರ್ತೈತಿ ಎಂದು ಪಪ್ಪಿ ಸಿನಿಮಾದ ಬಾಲನಟ ಹೇಳಿದ್ದಾನೆ. ‘ಜಾನುವಾರು ಕೊಟ್ಟಿಗೇಲಿ ಮಲಗೋದು ಅಂದ್ರೆ ಎಸಿ ರೂಮಲ್ಲಿ ಮಲಗಿದಂಗೆ ಅಲ್ರೀ.. ರಗಡ್ ಮಜಾ ಮುಂದೆ ಬರ್ತೈತಿ ಹಳ್ಳಿ ಪವರ್ ಶೀಘ್ರದಲ್ಲಿ ಎಂದು ಪ್ರೋಮೋಗೆ ಝೀ ವಾಹಿನಿಯು ಕ್ಯಾಪ್ಶನ್‌ ನೀಡಿದೆ.

ಇತ್ತೀಚೆಗಷ್ಟೆ ಜುಲೈ 19ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಆಡಿಷನ್ ನಡೆಸಲಾಗಿದೆ. 18 ರಿಂದ 28ರ ವಯಸ್ಸಿನ ಸಿಟಿ ಮಾರ್ಡನ್‌ ಯುವತಿಯರು ಆಡಿಷನ್‌ನಲ್ಲಿ ಭಾಗವಹಿಸಿದ್ದರು. ಈ ಪೈಕಿ ಯಾರೆಲ್ಲಾ ಸೆಲೆಕ್ಟ್‌ ಆಗಿದ್ದಾರೆ ಅನ್ನೋದು ಮುಂದಿನ ದಿನಗಳಲ್ಲಿ ಹೊರಬೀಳಲಿದೆ.

Bhagya Lakshmi Serial: ಸ್ಕೂಲ್​ನಲ್ಲಿ ಭಾಗ್ಯಾಗೆ ಅವಮಾನ ಮಾಡಿದವನ ಬೆವರಿಳಿಸಿದ ಆದೀಶ್ವರ್