ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪತಿಗೆ ಡಿವೋರ್ಸ್‌ ಕೊಟ್ಟ ಬಳಿಕ ಪುನಃ ಚಿತ್ರರಂಗದಲ್ಲಿ ಬ್ಯುಸಿಯಾದ ನಟಿ ಹನ್ಸಿಕಾ ಮೋಟ್ವಾನಿ; ಆದ್ರೆ, ಈ ಬಾರಿ ಸಿನಿಮಾ ಮಾಡ್ತಿಲ್ಲ!

ಉದ್ಯಮಿ ಸೋಹೈಲ್ ಕಥುರಿಯಾ ಜೊತೆಗಿನ 4 ವರ್ಷಗಳ ವೈವಾಹಿಕ ಜೀವನಕ್ಕೆ ಅಧಿಕೃತವಾಗಿ ವಿಚ್ಛೇದನ ನೀಡಿರುವ ನಟಿ ಹನ್ಸಿಕಾ ಮೋಟ್ವಾನಿ, ವೈಯಕ್ತಿಕ ಆಘಾತಗಳಿಂದ ಹೊರಬಂದು ಬಣ್ಣದ ಲೋಕಕ್ಕೆ ಪವರ್‌ಫುಲ್ ಕಮ್‌ಬ್ಯಾಕ್ ಮಾಡಿದ್ದಾರೆ. ಪ್ರವೀಣ್ ಸತ್ತಾರು ನಿರ್ದೇಶನದ 'ಗಲ್ಲಿ' ಎಂಬ ರೋಚಕ ಕ್ರೈಮ್ ವೆಬ್ ಸರಣಿಯ ಮೂಲಕ ಅವರು ಸೆಕೆಂಡ್ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.

ನಟಿ ಹನ್ಸಿಕಾ ಮೋಟ್ವಾನಿ ಅವರ ದಾಂಪತ್ಯ ಬದುಕಿನಲ್ಲಿ ಕೆಲ ದಿನಗಳ ಹಿಂದಷ್ಟೇ ಸಾಕಷ್ಟು ಏರುಪೇರುಗಳು ನಡೆದಿದ್ದವು. 4 ವರ್ಷಗಳ ದಾಂಪತ್ಯ ಜೀವನಕ್ಕೆ ಹನ್ಸಿಕಾ ಗುಡ್‌ ಬೈ ಹೇಳಿದ್ದಾರೆ. ಪ್ರಖ್ಯಾತ ಉದ್ಯಮಿ ಸೋಹೈಲ್ ಕಥುರಿಯಾ ಜೊತೆ 2022ರಲ್ಲಿ ಮದುವೆಯಾಗಿದ್ದ ಹನ್ಸಿಕಾ ಅವರು ಈಗ ವಿಚ್ಛೇದನ ನೀಡಿ, ಒಂಟಿಯಾಗಿದ್ದಾರೆ. ಇದರ ನಡುವೆಯೇ ಅವರು ಪುನಃ ಬಣ್ಣದ ಲೋಕದತ್ತ ಮುಖ ಮಾಡಿದ್ದಾರೆ.

ಪವರ್‌ಫುಲ್ ರೀ-ಎಂಟ್ರಿ ಕೊಟ್ಟ ಹನ್ಸಿಕಾ

ವೈಯಕ್ತಿಕ ಜೀವನದಲ್ಲಿ ಎದುರಾದ ಈ ದೊಡ್ಡ ಆಘಾತದಿಂದ ಹನ್ಸಿಕಾ ಹೊರಬಂದಿದ್ದಾರೆ. ತಮ್ಮ ನೋವುಗಳನ್ನು ಪಕ್ಕಕ್ಕಿಟ್ಟು, ಸಿನಿಮಾ ಜಗತ್ತಿಗೆ ಮರಳಿದ್ದಾರೆ. ಈ ಬಾರಿ ಕೇವಲ ಗ್ಲಾಮರ್ ಪಾತ್ರಗಳಿಗಷ್ಟೇ ಸೀಮಿತವಾಗದೆ, ಇದುವರೆಗೆ ಯಾರೂ ನೋಡಿರದ ವಿಭಿನ್ನ ಪಾತ್ರದ ಮೂಲಕ ಕಮ್‌ಬ್ಯಾಕ್‌ ಮಾಡಿದ್ದಾರೆ ಹನ್ಸಿಕಾ. ಪ್ರವೀಣ್ ಸತ್ತಾರು ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಗಲ್ಲಿ’ ಎಂಬ ಕ್ರೈಮ್ ವೆಬ್ ಸರಣಿಯ ಮೂಲಕ ಅವರು ತಮ್ಮ ಪವರ್‌ಫುಲ್ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.

Hansika Motwani: ಡಿವೋರ್ಸ್ ಬಗ್ಗೆ ಕೊನೆಗೂ ಮುಕ್ತವಾಗಿ ಮಾತನಾಡಿದ ಹನ್ಸಿಕಾ ಮೋಟ್ವಾನಿ

ಶ್ರೀನಿಧಿ ಶೆಟ್ಟಿ ಕೂಡ ನಟಿಸುತ್ತಿದ್ದಾರಾ?

ʻಗಲ್ಲಿʼ ಸರಣಿಯಲ್ಲಿ ಹನ್ಸಿಕಾ ಅವರೊಂದಿಗೆ ಜೆ. ಡಿ. ಚಕ್ರವರ್ತಿ, ಸುಧೀರ್ ಬಾಬು ಸೇರಿದಂತೆ ಅನೇಕ ಅನುಭವಿ ಕಲಾವಿದರು ನಟಿಸುತ್ತಿದ್ದಾರೆ. ʻಕೆಜಿಎಫ್ʼ ಖ್ಯಾತಿಯ ಶ್ರೀನಿಧಿ ಶೆಟ್ಟಿ ಕೂಡ ಈ ವೆಬ್‌ ಸರಣಿಯಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಈ ಸರಣಿಯ ರೋಚಕ ಚಿತ್ರೀಕರಣವು ಹೈದರಾಬಾದ್‌ನ ಐತಿಹಾಸಿಕ ಚಾರ್ಮಿನಾರ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದಿದೆ. ಈ ಶೂಟಿಂಗ್‌ನಲ್ಲಿ ಜೆ ಡಿ ಚಕ್ರವರ್ತಿ ಅವರೊಂದಿಗೆ ಹನ್ಸಿಕಾ ಕೆಲವು ಪ್ರಮುಖ ಸನ್ನಿವೇಶಗಳಲ್ಲಿ ನಟಿಸಿದ್ದಾರೆ. ಚಾರ್‌ಮಿನಾರ್ ಬಳಿ ಹನ್ಸಿಕಾ ಶೂಟಿಂಗ್ ಮಾಡುತ್ತಿರುವ ವಿಡಿಯೋಗಳು ಮತ್ತು ಫೋಟೋಗಳು ಸದ್ಯ ಇಂಟರ್ನೆಟ್‌ನಲ್ಲಿ ಸಖತ್‌ ವೈರಲ್ ಆಗುತ್ತಿವೆ.

ಮಾರ್ಚ್‌ನಲ್ಲಿ ವಿಚ್ಛೇದನ ಪಡೆದುಕೊಂಡಿದ್ದ ಹನ್ಸಿಕಾ

ವೃತ್ತಿ ಬದುಕಿನ ಉತ್ತುಂಗದಲ್ಲಿದ್ದಾಗಲೇ ಹನ್ಸಿಕಾ ತಮ್ಮ ವೈಯಕ್ತಿಕ ಜೀವನಕ್ಕೆ ಹೆಚ್ಚಿನ ಆದ್ಯತೆ ನೀಡಿದರು. 2022ರ ಡಿಸೆಂಬರ್‌ನಲ್ಲಿ ಉದ್ಯಮಿ ಸೋಹೈಲ್ ಕಥುರಿಯಾ ಜೊತೆ ಅದ್ಧೂರಿಯಾಗಿ ವಿವಾಹವಾದರು. ಆದರೆ ಮದುವೆಯಾದ ಕೆಲವೇ ಸಮಯದಲ್ಲಿ ಇವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿತು. ಇಬ್ಬರ ನಡುವೆ ಪದೇ ಪದೇ ಮೂಡುತ್ತಿದ್ದ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ 2024ರ ಜುಲೈನಿಂದ ಇವರಿಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಸುದ್ದಿಗಳು ಬಂದಿದ್ದವು.

ಆನಂತರ ಪರಸ್ಪರ ಒಪ್ಪಿಗೆಯಿಂದಲೇ ವಿಚ್ಛೇದನಕ್ಕೆ ಅರ್ಜಿ ಹಾಕಿದರು. ಮುಂಬೈನ ಬಾಂದ್ರಾ ಫ್ಯಾಮಿಲಿ ಕೋರ್ಟ್ 2026ರ ಮಾರ್ಚ್ 11 ರಂದು ಇವರಿಗೆ ಅಧಿಕೃತವಾಗಿ ವಿಚ್ಛೇದನ ಮಂಜೂರು ಮಾಡಿದೆ.

ನಾಲ್ಕೇ ವರ್ಷಕ್ಕೆ ಮುರಿದುಬಿತ್ತು ನಟಿ ಹನ್ಸಿಕಾ ಮೋಟ್ವಾನಿ ದಾಂಪತ್ಯ; ಪತಿಯಿಂದ ಸಿಕ್ಕ ಜೀವನಾಂಶ ಎಷ್ಟು?

ಅಲ್ಲು ಅರ್ಜುನ್ ನಟನೆಯ ‘ದೇಶಮುದುರು’ (2007) ಸಿನಿಮಾದ ಮೂಲಕ ಹನ್ಸಿಕಾ ಅವರು ಟಾಲಿವುಡ್‌ಗೆ ನಾಯಕಿಯಾಗಿ ಪದಾರ್ಪಣೆ ಮಾಡಿದರು. ಆನಂತರ ಕನ್ನಡದ ʻಬಿಂದಾಸ್‌ʼ, ‘ಕಂತ್ರಿ’, ‘ಮಸ್ಕಾ’, ‘ಸೀತಾರಾಮುಲ ಕಲ್ಯಾಣಂ’, ‘ಸಮ್‌ಥಿಂಗ್ ಸಮ್‌ಥಿಂಗ್’, ‘ಓ ಮೈ ಫ್ರೆಂಡ್’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. 2024ರವರೆಗೂ ಹನ್ಸಿಕಾ ನಟನೆಯ ಸಿನಿಮಾಗಳು ತೆರೆಕಂಡಿದ್ದವು. ಇದೀಗ 2026ರಲ್ಲಿ ಪುನಃ ಬಣ್ಣದ ಲೋಕಕ್ಕೆ ಹನ್ಸಿಕಾ ಎಂಟ್ರಿ ನೀಡಿದ್ದಾರೆ.