Oscars 2025: ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ; ಯಾರಿಗೆಲ್ಲ ಒಲಿದಿದೆ ಅವಾರ್ಡ್?
ಲಾಸ್ ಏಂಜಲೀಸ್‌ನಲ್ಲಿ 97 ನೇ ಆಸ್ಕರ್ ಪ್ರಶಸ್ತಿ ಸಮಾರಂಭ ನಡೆಯುತ್ತಿದೆ. ಹಲವಾರು ನಟ ನಟಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇನ್ನು , ಕೀರನ್ ಕಲ್ಕಿನ್ ಎ ರಿಯಲ್ ಪೇನ್‌ನಲ್ಲಿನ ಅಭಿನಯಕ್ಕಾಗಿ ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. , ಫ್ಲೋ ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರವನ್ನು ಗೆದ್ದರೆ, ಇನ್ ದಿ ಶಾಡೋಸ್ ಆಫ್ ದಿ ಸೈಪ್ರೆಸ್ ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರಕ್ಕಾಗಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಆಸ್ಕರ್ 2025

ವಾಷಿಂಗ್ಟನ್: ಮಾರ್ಚ್ 3 ರಂದು ಲಾಸ್ ಏಂಜಲೀಸ್‌ನಲ್ಲಿ 97ನೇ ಆಸ್ಕರ್ (Oscars 2025) ಅವಾರ್ಡ್ ಪ್ರದಾನ ಕಾರ್ಯಕ್ರಮ ನಡೆಯುತ್ತಿದೆ. ಈ ಹಿಂದೆ ಆತಿಥ್ಯವಹಿಸಿದ್ದ ಕೊನನ್ ಒ ಬ್ರೈನ್ ಈ ಬಾರಿಯೂ ಕೂಡ ಹೋಸ್ಟ್ ಮಾಡಿದ್ದಾರೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿರುವ ಎಮಿಲಿಯಾ ಪರೇಜ್ ಸುಮಾರು 13 ನಾಮಿನೇಷನ್ಗಳಲ್ಲಿದ್ದಾರೆ. ಇನ್ನು ವಿಕೆಡ್ ಸಿನಿಮಾದ ನಟಿ ಅರೈನಾ ಗ್ರಾಂಡೆ ವಿವಿಧ ಬಗೆಯ ವಿಭಾಗದಲ್ಲಿ 10 ನಾಮಿನೇಷನ್ಗಳಲ್ಲಿ ಹೆಸರನ್ನು ಹೊಂದಿದ್ದಾರೆ. 2024ರಲ್ಲಿ ಬಿಡುಗಡೆಯಾದ ಬ್ರ್ಯೂಟಾಲಿಸ್ಟ್ ಮತ್ತು ವಿಕೆಡ್ ಸಿನಿಮಾಗಳು 10 ವಿಭಾಗಗಳಲ್ಲಿ ನಾಮಿನೇಷನ್ಗೊಂಡಿವೆ.
ಇನ್ನು ನಟನೆಯ ವಿಚಾರದಲ್ಲಿ ಟಿಮೊಥಿ ಚಲಾಮೇಟ್, ಆ್ಯಂಡ್ರಯನ್ ಬಾಡಿ, ಅರೈನಾ ಗ್ರಾಂಡೇ, ಸೆಬಾಸ್ಟಿಯನ್ ಸ್ಟಾನ್ ಮತ್ತು ಜೆರೆಮಿ ಸ್ಟ್ರಾಂಗ್, ಕೈರನ್ ಕಲ್ಕಿನ್, ಡೆಮಿ ಮೋರ್ ಇವರೆಲ್ಲರೂ ಕೂಡ ಬೆಸ್ಟ್ ಆ್ಯಕ್ಟರ್ ಹಾಗೂ ಬೆಸ್ಟ್ ಸಪೋರ್ಟಿಂಗ್ ಆ್ಯಕ್ಟರ್ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ.
"This is everything."
— ABC News (@ABC) March 3, 2025
Paul Tazewell made history by becoming the first Black man to win the Oscar for Best Costume Design.#Oscarshttps://t.co/nl9CxOviL4 pic.twitter.com/TcSHpEotcW
2025 ರ ಆಸ್ಕರ್‌ನಲ್ಲಿ, ಕೀರನ್ ಕಲ್ಕಿನ್ ಎ ರಿಯಲ್ ಪೇನ್‌ನಲ್ಲಿನ ಅಭಿನಯಕ್ಕಾಗಿ ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಅನಿಮೇಟೆಡ್ ವಿಭಾಗಗಳಲ್ಲಿ, ಫ್ಲೋ ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರವನ್ನು ಗೆದ್ದರೆ, ಇನ್ ದಿ ಶಾಡೋಸ್ ಆಫ್ ದಿ ಸೈಪ್ರೆಸ್ ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರಕ್ಕಾಗಿ ಪ್ರಶಸ್ತಿಯನ್ನು ಪಡೆದಿದೆ.
ಈ ಸುದ್ದಿಯನ್ನೂ ಓದಿ: Laapataa Ladies: ಆಸ್ಕರ್ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್
ವಿಕ್ಟೋರಿಯಾ ವಾರ್ಮರ್‌ಡ್ಯಾಮ್ ಮತ್ತು ಟ್ರೆಂಟ್ ಅವರ ಐ ಆಮ್ ನಾಟ್ ಎ ರೋಬೋಟ್, ಪ್ರಿಯಾಂಕಾ ಚೋಪ್ರಾ ಮತ್ತು ಗುಣೀತ್ ಮೊಂಗಾ ಅವರ ಅನುಜಾವನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತು. ತಿಮೋತಿ ಚಲಮೆಟ್ ಮತ್ತು ಝೆಂಡಾಯಾ ಅವರ ಡ್ಯೂನ್: ಭಾಗ ಎರಡು ಅತ್ಯುತ್ತಮ ಧ್ವನಿಗಾಗಿ ಆಸ್ಕರ್ ಪ್ರಶಸ್ತಿಯನ್ನು ಪಡೆಯಿತು. ಬೆಸ್ಟ್ ಎಡಿಟಿಂಗ್ ವಿಭಾಗದಲ್ಲಿ ಅನೋರಾ ದಿ ಬ್ರ್ಯೂಟಲಿಸ್ಟ್ ಸಿನಿಮಾಗೆ ಆಸ್ಕರ್ ಅವಾರ್ಡ್ ಪಡೆದಿದ್ದಾರೆ. ಇನ್ನು ಬೆಸ್ಟ್ ಮೇಕಪ್ ಮತ್ತು ಬೆಸ್ಟ್ ಹೇರ್ಸ್ಟೈಲ್ಗೆ ದಿ ಸಬ್ಸ್ಟ್ಯಾನ್ಸ್ ಸಿನಿಮಾದ ಡೆಮಿ ಮೂರೆಗೆ ಪ್ರಶಸ್ತಿ ಒಲಿದಿದೆ. ಎಮಿಲಿಯಾ ಪೆರೆಜ್‌ಗಾಗಿ ಜೋಯ್ ಸಲ್ಡಾನಾ ಅತ್ಯುತ್ತಮ ಪೋಷಕ ನಟಿ, ವಿಕೆಡ್ ಚಿತ್ರಕ್ಕಾಗಿ ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ ಪಾಲ್ ಟೇಜ್‌ವೆಲ್ ಅವರು ಪ್ರಶಸ್ತಿಯನ್ನು ಬಾಚಿಕೊಂಡರು.