ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Hombale Films: ‘ಹೊಂಬಾಳೆ ಫಿಲ್ಮ್ಸ್’ನಿಂದ ಬಿಗ್‌ ಅಪ್‌ಡೇಟ್‌; ಈ ನೂತನ ಚಿತ್ರದ ಶೀರ್ಷಿಕೆ ನಾಳೆ ಅನಾವರಣ!

Hombale Films: ಮಹಾವತಾರ ನರಸಿಂಹ’ ಚಿತ್ರದ ಮೂಲಕ ಸಂಚಲನ ಮೂಡಿಸಿದ್ದ ಅದೇ ಸೃಜನಶೀಲ ತಂಡವು ಈಗ ಮತ್ತೆ ಒಂದಾಗುತ್ತಿದ್ದು,ಮತ್ತೊಂದು ಅದ್ಭುತ ಕಥಾಹಂದರವನ್ನು ತೆರೆಯ ಮೇಲೆ ತರಲು ಸಜ್ಜಾಗಿದೆ. ವಿಶೇಷವೆಂದರೆ, ವಿಭಿನ್ನ ದೃಷ್ಟಿಕೋನ ಹಾಗೂ ಹೊಸತನದ ಕಥೆಯನ್ನು ಒಳಗೊಂಡಿರುವ ಈ ಚಿತ್ರವನ್ನು ಅಶ್ವಿನ್ ಅವರು ನಿರ್ದೇಶಿಸಲಿದ್ದಾರೆ.

ಹೊಂಬಾಳೆ ಫಿಲ್ಮ್ಸ್

ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ನಿಂದ (Hombale Films) ಮತ್ತೊಂದು ಮಹತ್ವಾಕಾಂಕ್ಷೆಯ ಚಿತ್ರದ ಘೋಷಣೆ (Announce) ಆಗಲಿದೆ. ಈ ನೂತನ ಚಿತ್ರದ ಶೀರ್ಷಿಕೆ ನಾಳೆ ಅನಾವರಣ ಆಗಲಿದೆ. ರಾಜಕುಮಾರ’, ‘ಕೆಜಿಎಫ್’, ‘ಕಾಂತಾರ’ ಹಾಗೂ ‘ಸಲಾರ್’ ನಂತಹ ದೃಶ್ಯಕಾವ್ಯಗಳ ಮೂಲಕ ಭಾರತೀಯ ಚಿತ್ರರಂಗದ ಗತಿಯನ್ನೇ ಬದಲಿಸಿ, ಕಥೆ ಮತ್ತು ಮೇಕಿಂಗ್‌ಗೆ ಹೊಸ ವ್ಯಾಖ್ಯಾನ ಬರೆದ ಹೊಂಬಾಳೆ ಫಿಲ್ಮ್ಸ್, ಈಗ ತನ್ನ ಮುಂದಿನ ಬಹುನಿರೀಕ್ಷಿತ ಸಿನಿಮಾವನ್ನು (Cinema) ಅಧಿಕೃತವಾಗಿ ಘೋಷಿಸಿದೆ.

ಮಹಾವತಾರ ನರಸಿಂಹ’ ಚಿತ್ರದ ಮೂಲಕ ಸಂಚಲನ ಮೂಡಿಸಿದ್ದ ಅದೇ ಸೃಜನಶೀಲ ತಂಡವು ಈಗ ಮತ್ತೆ ಒಂದಾಗುತ್ತಿದ್ದು,ಮತ್ತೊಂದು ಅದ್ಭುತ ಕಥಾಹಂದರವನ್ನು ತೆರೆಯ ಮೇಲೆ ತರಲು ಸಜ್ಜಾಗಿದೆ. ವಿಶೇಷವೆಂದರೆ, ವಿಭಿನ್ನ ದೃಷ್ಟಿಕೋನ ಹಾಗೂ ಹೊಸತನದ ಕಥೆಯನ್ನು ಒಳಗೊಂಡಿರುವ ಈ ಚಿತ್ರವನ್ನು ಅಶ್ವಿನ್ ಅವರು ನಿರ್ದೇಶಿಸಲಿದ್ದಾರೆ.

ಇದನ್ನೂ ಓದಿ: Vijay Deverakonda: ಹೊಸ ಸಿನಿಮಾ ಘೋಷಿಸಿದ ವಿಜಯ್ ದೇವರಕೊಂಡ

ಚಿತ್ರದ ಶೀರ್ಷಿಕೆ ನಾಳೆ ಅಧಿಕೃತವಾಗಿ ಪ್ರಕಟ

ಸಿನಿಮಾ ಪ್ರೇಕ್ಷಕರಲ್ಲಿ ಈಗಾಗಲೇ ಈ ಪ್ರಾಜೆಕ್ಟ್ ಬಗ್ಗೆ ಭಾರೀ ಕುತೂಹಲ ಗರಿಗೆದರಿದ್ದು, ಭಾರತೀಯ ಚಿತ್ರರಂಗದ ಕಣ್ಣುಗಳು ಹೊಂಬಾಳೆ ಫಿಲ್ಮ್ಸ್‌ನ ಈ ನೂತನ ಘೋಷಣೆಯ ಮೇಲಿದೆ. ವಿಭಿನ್ನ ದೃಶ್ಯ ವೈಭವದೊಂದಿಗೆ ಮೂಡಿಬರಲಿರುವ ಈ ಚಿತ್ರದ ಶೀರ್ಷಿಕೆ ನಾಳೆ ಅಧಿಕೃತವಾಗಿ ಪ್ರಕಟವಾಗಲಿದೆ.



ಭಾರತೀಯ ಚಿತ್ರರಂಗದಲ್ಲಿ ಹೊಂಬಾಳೆ ಫಿಲ್ಮ್ಸ್ ಬಹು ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಯಾಗಿ ಗುರ್ತಿಸಿಕೊಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾಗಳ ನಿರ್ಮಾಣ ಮಾಡ್ತಿದೆ. ಮುಂದೆ ಮತ್ತಷ್ಟು ಅದ್ಧೂರಿ ಚಿತ್ರಗಳ ಕನಸು ಕಾಣುತ್ತಿದೆ. 14 ವರ್ಷಗಳ ಹಿಂದೆ 'ನಿನ್ನಿಂದಲೇ' ಚಿತ್ರದಿಂದ ಶುರುವಾದ ಹೊಂಬಾಳೆ ಪರ್ವ ಬಹಳ ದೊಡ್ಡದಾಗಿ ಬೆಳೆಯುತ್ತಾ ಬಂದಿದೆ.

ಇದನ್ನೂ ಓದಿ: Lavanya Bhardwaj: ತಾಯಿಯಾಗುತ್ತಿರುವ ಸಂಭ್ರಮದಲ್ಲಿ ‘ಶ್ರೀರಸ್ತು ಶುಭಮಸ್ತು’ ಖ್ಯಾತಿಯ ಲಾವಣ್ಯ ಭಾರಧ್ವಜ್

'ಕೆಜಿಎಫ್' ಸರಣಿ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಂಸ್ಥೆಯ ಬಲ ಹೆಚ್ಚಿಸಿತ್ತು. ಮತ್ತೊಮ್ಮೆ ಬಾಲಿವುಡ್ ಮಂದಿ ಕೂಡ ಸ್ಯಾಂಡಲ್‌ವುಡ್ ಕಡೆ ತಿರುಗಿ ನೋಡುವಂತಾಯಿತು. ಈಗಾಗಲೇ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಿದೆ.

Yashaswi Devadiga

View all posts by this author