Lavanya Bhardwaj: ತಾಯಿಯಾಗುತ್ತಿರುವ ಸಂಭ್ರಮದಲ್ಲಿ ‘ಶ್ರೀರಸ್ತು ಶುಭಮಸ್ತು’ ಖ್ಯಾತಿಯ ಲಾವಣ್ಯ ಭಾರಧ್ವಜ್
Lavanya Bhardwaj: ಕನ್ನಡ ಕಿರುತೆರೆಯಲ್ಲಿ ತಮ್ಮ ಮುಗ್ಧ ಅಭಿನಯದ ಮೂಲಕವೇ ಜನಪ್ರಿಯತೆ ಪಡೆದ ನಟಿ ಲಾವಣ್ಯ ಭಾರಧ್ವಜ್ .ಶ್ರೀರಸ್ತು ಶುಭಮಸ್ತು’ ಮುಕ್ತಾಯಗೊಂಡ ಬಳಿಕ ಲಾವಣ್ಯ ಭಾರಧ್ವಜ್ ತೆಲುಗಿನ ‘ಇಲ್ಲುಇಲ್ಲಲು ಪಿಲ್ಲಲು’ ಧಾರಾವಾಹಿಯಲ್ಲಿ ಪ್ರೇಮಾ ಪಾತ್ರದಲ್ಲಿ ನಟಿಸುತ್ತಿದ್ದರು. ಈ ಪಾತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದರು ಲಾವಣ್ಯ. ಧಾರಾವಾಹಿಯಿಂದ ಲಾವಣ್ಯ ಹೊರಬಂದ ಬಳಿಕ ತಾಯಿಯಾಗಲಿದ್ದಾರೆ ಎಂಬ ವದಂತಿ ವೈರಲ್ ಆಗಿತ್ತು.
ಲಾವಣ್ಯ ಭಾರಧ್ವಜ್ -
ಕನ್ನಡ ಕಿರುತೆರೆಯಲ್ಲಿ ತಮ್ಮ ಮುಗ್ಧ ಅಭಿನಯದ ಮೂಲಕವೇ ಜನಪ್ರಿಯತೆ ಪಡೆದ ನಟಿ ಲಾವಣ್ಯ ಭಾರಧ್ವಜ್ (lavanya bhardwaj). ‘ರಾಜಾ ರಾಣಿ’, ‘ಸಂಘರ್ಷ’, ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಜನಪ್ರೀಯತೆ ಪಡೆದಿದ್ದಾರೆ. ‘ಶ್ರೀರಸ್ತು ಶುಭಮಸ್ತು’ (srirastu subhamastu) ಧಾರಾವಾಹಿಯಲ್ಲಿ ಪೂರ್ಣಿ ಪಾತ್ರದ ಮೂಲಕ ಜನಪ್ರಿಯತೆ ಪಡೆದ ಲಾವಣ್ಯ ಭಾರಧ್ವಜ್ ಹಾಗೂ ‘ಅಮೃತಧಾರೆ’ಯಲ್ಲಿ ಜೀವನ್ ಪಾತ್ರದಲ್ಲಿ ನಟಿಸಿದ್ದ ನಟ ಶಶಿ ಹೆಗ್ಡೆ (Shashi Hegde) ದಂಪತಿ ಇದೀಗ ಮದುವೆಯಾಗಿ ಹಲವು ವರ್ಷಗಳ ಬಳಿಕ ತಂದೆ-ತಾಯಿಯಾಗಿ ಭಡ್ತಿ ಪಡೆಯುವ ಸಂಭ್ರಮದಲ್ಲಿದ್ದಾರೆ.
ಲಾವಣ್ಯ ಭಾರಧ್ವಜ್ ವಿಡಿಯೋ
ಲಾವಣ್ಯ ಭಾರಧ್ವಜ್ ವಿಡಿಯೋ ಹಂಚಿಕೊಂಡು, ನಮ್ಮ ಪ್ರೀತಿಯ ಕಥೆಯಲ್ಲಿ ಒಂದು ಹೊಸ ಅಧ್ಯಾಯ ಶುರುವಾಗ್ತಿದೆ. We are adding a little more LOVE to our FAMILY, ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದು ಬರೆದುಕೊಂಡಿದ್ದಾರೆ. ವಿಡೀಯೋದಕ್ಕಿ ಹಸಿರು ಬಣ್ಣದ ಸೀರೆಯುಟ್ಟು, ಹಣ್ಣುಕಾಯಿ ಬಟ್ಟಲು ಹಿಡಿದು ದೇಗುಲಕ್ಕೆ ಬರುವ ವಿಡಿಯೋ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Amruthadhaare Serial: ಗೌತಮ್ ಮನೆ ತುಂಬಾ ಮಂದಹಾಸ ; ಮಂಕಾಗಿದೆ ಜೇಡಿಯ ಅಟ್ಟಹಾಸ!
ಜೋಡಿ ನಡೆದುಕೊಂಡು ಮುಂದೆ ಹೋದಂತೆ, ಪುಟ್ಟ ಪಾದವೊಂದು ಅವರನ್ನು ಹಿಂಬಾಲಿಸುವ ಈ ವಿಡಿಯೋವು ಮುದ್ದಿನ ಮಗುವಿನ ಆಗಮನದ ಸಂಭ್ರಮವನ್ನು ಸೂಚಿಸಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
ಶ್ರೀರಸ್ತು ಶುಭಮಸ್ತು’ ಮುಕ್ತಾಯಗೊಂಡ ಬಳಿಕ ಲಾವಣ್ಯ ಭಾರಧ್ವಜ್ ತೆಲುಗಿನ ‘ಇಲ್ಲುಇಲ್ಲಲು ಪಿಲ್ಲಲು’ ಧಾರಾವಾಹಿಯಲ್ಲಿ ಪ್ರೇಮಾ ಪಾತ್ರದಲ್ಲಿ ನಟಿಸುತ್ತಿದ್ದರು. ಈ ಪಾತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದರು ಲಾವಣ್ಯ. ಧಾರಾವಾಹಿಯಿಂದ ಲಾವಣ್ಯ ಹೊರಬಂದ ಬಳಿಕ ತಾಯಿಯಾಗಲಿದ್ದಾರೆ ಎಂಬ ವದಂತಿ ವೈರಲ್ ಆಗಿತ್ತು.
ಇದನ್ನೂ ಓದಿ: Hera Pheri 3: ‘ಹೇರಾ ಫೆರಿ 3’ ಸದ್ಯಕ್ಕೆ ಸೆಟ್ಟೇರಲ್ಲ; ಅಕ್ಷಯ್ ಕುಮಾರ್
ಶಶಿ ಮತ್ತು ಲಾವಣ್ಯ ಇಬ್ಬರೂ ರಾಜಾ ರಾಣಿ ಸೀರಿಯಲ್ ನಲ್ಲಿ ಅಣ್ಣ ತಂಗಿಯಾಗಿ ನಟಿಸುತ್ತಿದ್ದ ಸಮಯದಲ್ಲಿ ಲವ್ವಲ್ಲಿ ಬಿದ್ದಿದ್ದರು. ಆರಂಭದಲ್ಲಿ ಶಶಿ ಹೆಗ್ಡೆಯನ್ನು ಅಣ್ಣ ಎಂದೇ ಕರೆಯುತ್ತಿದ್ದ ಲಾವಣ್ಯ, ಬಳಿಕ ಲವ್ ಮಾಡೀ, ನಂತರ ಪೋಷಕರ ಒಪ್ಪಿಗೆ ಪಡೆದು 2022 ರಲ್ಲಿ ಇಬ್ಬರೂ ಮದುವೆನೂ ಆಗಿದ್ದರು.