ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Prabhas: ಕರ್ನಾಟಕದಲ್ಲಿ ʻದಿ ರಾಜಾ ಸಾಬ್‌ʼ ಚಿತ್ರಕ್ಕೆ 300 ಥಿಯೇಟರ್‌ ಮೀಸಲು; ವಿತರಣೆ ಜವಾಬ್ದಾರಿ ಹೊತ್ತ ಹೊಂಬಾಳೆ ಫಿಲ್ಮ್ಸ್‌!

The Raja Saab Movie: ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಹಾರರ್ ಫ್ಯಾಂಟಸಿ 'ದಿ ರಾಜಾ ಸಾಬ್‌ʼ ಚಿತ್ರವು ಜ. 9ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ. ಈ ಚಿತ್ರದ ಕರ್ನಾಟಕ ವಿತರಣಾ ಹಕ್ಕುಗಳನ್ನು ಹೊಂಬಾಳೆ ಫಿಲ್ಮ್ಸ್ ಪಡೆದುಕೊಂಡಿದ್ದು, ರಾಜ್ಯಾದ್ಯಂತ ಸುಮಾರು 300 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಿದೆ.

ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ರಾಜಾ ಸಾಬ್' ಜ. 9ರಂದು ತೆರೆಗೆ ಬರುತ್ತಿದೆ. ವಿಶೇಷವೆಂದರೆ, ಈ ಸಿನಿಮಾದ ಕರ್ನಾಟಕದ ವಿತರಣಾ ಹಕ್ಕುಗಳನ್ನು ಪ್ರತಿಷ್ಠಿತ ಹೊಂಬಾಳೆ ಫಿಲಂಸ್ ಪಡೆದುಕೊಂಡಿದೆ. ಈಗಾಗಲೇ ಅಡ್ವಾನ್ಸ್‌ ಟಿಕೆಟ್ ಬುಕಿಂಗ್ ಓಪನ್‌ ಆಗಿದ್ದು, ಟಿಕೆಟ್‌ ದರಗಳು ಮುಗಿಲುಮುಟ್ಟಿದೆ. ಅಂದಹಾಗೆ, ಕರ್ನಾಟಕದಲ್ಲಿ ಈ ಚಿತ್ರಕ್ಕಾಗಿ ಸುಮಾರು 300 ಚಿತ್ರಮಂದಿರಗಳನ್ನು ಮೀಸಲಿಡಲಾಗಿದೆಯಂತೆ.

ಮಾರುತಿ ನಿರ್ದೇಶನದ ಸಿನಿಮಾ

ತೆಲುಗಿನ ಮಾರುತಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ, ಪ್ರಭಾಸ್ ಅವರು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗು, ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಈ ಚಿತ್ರ ದೇಶಾದ್ಯಂತ ಅದ್ದೂರಿಯಾಗಿ ಜನವರಿ 9ರಂದು ತೆರೆಕಾಣುತ್ತಿದೆ. ಇದೊಂದು ಪಕ್ಕಾ ಕಮರ್ಷಿಯಲ್ ಹಾಗೂ ಹಾರರ್, ಫ್ಯಾಂಟಸಿ ಎಂಟರ್ ಟೈನರ್‌ ಚಿತ್ರವಾಗಿದ್ದು, ಮನರಂಜನೆಯ ಜತೆಗೆ ಭಾವನಾತ್ಮಕ ಫ್ಯಾಂಟಸಿ ಎಲಿಮೆಂಟ್ಸ್ ಪ್ರೇಕ್ಷಕರನ್ನು ಹೊಸದೊಂದು ಲೋಕಕ್ಕೆ ಕರೆದೊಯ್ಯಲಿದೆ ಎಂಬುದು ಚಿತ್ರತಂಡ ನೀಡುವ ಭರವಸೆ.

The Raja Saab trailer 2.0: ಪ್ರಭಾಸ್ ‘ದಿ ರಾಜಾ ಸಾಬ್’ 2ನೇ ಟ್ರೇಲರ್ ಔಟ್‌; ಹೊಸ ಅವತಾರದಲ್ಲಿ ಸಂಜಯ್ ದತ್!

ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ. "ಮೂರು ವರ್ಷಗಳ ಹಿಂದೆ ದಿ ರಾಜಾ ಸಾಬ್ ಸಿನಿಮಾ ಪಯಣ ಪ್ರಾರಂಭವಾಯಿತು. ಜ. 9ಕ್ಕೆ ಚಿತ್ರ ರಿಲೀಸಾಗುತ್ತಿದೆ. ಹಾರರ್ ಫ್ಯಾಂಟಸಿ ಎಲ್ಲ ಭಾಷೆಗೂ ಹೊಂದಿಕೊಳ್ಳುತ್ತದೆ. ನಮ್ಮ ಚಿತ್ರ ಪ್ರೇಕ್ಷಕರಿಗೆ ಅದ್ಭುತ ಫ್ಯಾಂಟಸಿ ಅನುಭವ ನೀಡುತ್ತದೆ" ಎಂದು ನಿರ್ಮಾಪಕ ಟಿ ಜಿ ವಿಶ್ವಪ್ರಸಾದ್ ಹೇಳುತ್ತಾರೆ.‌

The Raja Saab: ಅದ್ಧೂರಿಯಾಗಿ ಜರುಗಿದ ರಾಜಾ ಸಾಬ್ ಪ್ರೀ-ರಿಲೀಸ್ ಇವೆಂಟ್; ಪ್ರಭಾಸ್‌ ಫ್ಯಾನ್ಸ್‌ಗೆ ನಿರ್ದೇಶಕ ಕೊಟ್ಟ ಭರವಸೆ ಏನು?

ಪ್ರತಿ ದೃಶ್ಯವೂ ಅಭಿಮಾನಿಗಳಿಗೆ ಹಬ್ಬ

"ಒಂದೂವರೆ ವರ್ಷಗಳಿಂದ ಈ ಸೆಟ್ ತುಂಬೆಲ್ಲ ಓಡಾಡಿದ್ದೇವೆ. ಆ ನೆನಪು ಎಂದಿಗೂ ಮಾಸದು. ಪ್ರಭಾಸ್ ಅವರಂತಹ ದೊಡ್ಡ ಸ್ಟಾರ್ ನನಗೆ ಈ ಅವಕಾಶ ನೀಡಿದ್ದಕ್ಕೆ ನಾನು ಚಿರಋಣಿ. ಇದು ಕೇವಲ ಸಿನಿಮಾ ಅಲ್ಲ, ಒಂದು ಬಿಗ್ ಹಾರರ್-ಫ್ಯಾಂಟಸಿ ಅನುಭವ. ಚಿತ್ರದ ಪ್ರತಿ ದೃಶ್ಯವೂ ಅಭಿಮಾನಿಗಳಿಗೆ ಹಬ್ಬದಂತಿರಲಿದೆ" ಎಂದು ನಿರ್ದೇಶಕ ಮಾರುತಿ ಹೇಳಿದರೆ, "ಈ ಸೆಟ್ ತುಂಬಾ ಹಲವಾರು ನೆನಪುಗಳಿವೆ. ಪ್ರಭಾಸ್ ಅವರಂತಹ ನಟನ ಜತೆ ಅಭಿನಯಿಸಿದ್ದು ಖುಷಿಯ ಸಂಗತಿ, ಈಗ ನಮ್ಮ ಚಿತ್ರ ನಿಮ್ಮ ಮುಂದೆ ಬರಲಿದೆ" ಎಂದು ನಾಯಕಿ ನಿಧಿ ಅಗರವಾಲ್ ಹೇಳಿದ್ದಾರೆ.

400 ಕೋಟಿ ರೂ. ಬಂಡವಾಳ

ʻದಿ ರಾಜಾ ಸಾಬ್ʼ ಚಿತ್ರದಲ್ಲಿ ಪ್ರಭಾಸ್ ಜೊತೆ ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಮತ್ತು ರಿದ್ಧಿ ಕುಮಾರ್ ನಾಯಕಿಯರಾಗಿ ನಟಿಸಿದ್ದಾರೆ. ಹಿರಿಯ ನಟಿ ಜರೀನಾ ವಹಾಬ್ ನಾಯಕನ ಅಜ್ಜಿಯಾಗಿ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್, ಬೋಮನ್ ಇರಾನಿ, ಬ್ರಹ್ಮಾನಂದಂ, ವೆನ್ನೆಲಾ ಕಿಶೋರ್‌, ಸತ್ಯ, ಸಮುದ್ರಖನಿ, ಪ್ರಭಾಸ್‌ ಸೀನು, ಸುಪ್ರಿತ್‌ ರೆಡ್ಡಿ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಎಸ್‌ ಥಮನ್ ಅವರ ಸಂಗೀತ ಸಂಯೋಜನೆ ಮತ್ತು ಕಾರ್ತಿಕ್ ಪಳನಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಈ ಚಿತ್ರಕ್ಕೆ ಸುಮಾರು 400 ಕೋಟಿ ರೂ. ಬಂಡವಾಳ ಹೂಡಲಾಗಿದೆ ಎಂಬ ಮಾಹಿತಿ ಇದೆ.