ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

The Raja Saab trailer 2.0: ಪ್ರಭಾಸ್ ‘ದಿ ರಾಜಾ ಸಾಬ್’ 2ನೇ ಟ್ರೇಲರ್ ಔಟ್‌; ಹೊಸ ಅವತಾರದಲ್ಲಿ ಸಂಜಯ್ ದತ್!

Prabhas : ನಿರ್ದೇಶಕ ಮಾರುತಿ ಅವರ ಹಾರರ್ ಕಾಮಿಡಿ ಚಿತ್ರ ದಿ ರಾಜಾ ಸಾಬ್ ನ ಹೊಸ ಟ್ರೇಲರ್ ಸೋಮವಾರ ಬಿಡುಗಡೆಯಾಯಿತು. ಪ್ರಭಾಸ್ , ಸಂಜಯ್ ದತ್, ರಿದ್ಧಿ ಕುಮಾರ್, ನಿಧಿ ಅಗರ್ವಾಲ್ ಮತ್ತು ಮಾಳವಿಕಾ ಮೋಹನನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಟ್ರೈಲರ್‌ ಕಂಡು ಪ್ರಭಾಸ್‌ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ. ಸಿನಿಮಾದ ಎರಡನೇ ಟ್ರೇಲರ್​​ನಲ್ಲಿ ಪ್ರಭಾಸ್ ಅವರ ಗೆಟಪ್ ಗಮನ ಸೆಳೆದಿದೆ. ಕಥೆ ಬಗ್ಗೆ ಹೆಚ್ಚು ಮಾಹಿತಿ ಸಿಕ್ಕಿದೆ.

ಪ್ರಭಾಸ್ ‘ದಿ ರಾಜಾ ಸಾಬ್’ 2ನೇ ಟ್ರೇಲರ್ ಔಟ್‌

ನಟ ಪ್ರಭಾಸ್‌ -

Yashaswi Devadiga
Yashaswi Devadiga Dec 29, 2025 7:03 PM

ನಿರ್ದೇಶಕ ಮಾರುತಿ ಅವರ ಹಾರರ್ ಕಾಮಿಡಿ (Horror Comedy) ಚಿತ್ರ ದಿ ರಾಜಾ ಸಾಬ್ ನ (The Raja Saab) ಹೊಸ ಟ್ರೇಲರ್ (Trailer) ಸೋಮವಾರ ಬಿಡುಗಡೆಯಾಯಿತು. ಪ್ರಭಾಸ್ , ಸಂಜಯ್ ದತ್, ರಿದ್ಧಿ ಕುಮಾರ್, ನಿಧಿ ಅಗರ್ವಾಲ್ ಮತ್ತು ಮಾಳವಿಕಾ ಮೋಹನನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಟ್ರೈಲರ್‌ ಕಂಡು ಪ್ರಭಾಸ್‌ ಫ್ಯಾನ್ಸ್‌ (Prabhas Fans) ಥ್ರಿಲ್‌ ಆಗಿದ್ದಾರೆ. . ಸಿನಿಮಾದ ಎರಡನೇ ಟ್ರೇಲರ್​​ನಲ್ಲಿ (Trailer) ಪ್ರಭಾಸ್ ಅವರ ಗೆಟಪ್ ಗಮನ ಸೆಳೆದಿದೆ. ಕಥೆ ಬಗ್ಗೆ ಹೆಚ್ಚು ಮಾಹಿತಿ ಸಿಕ್ಕಿದೆ.

3 ನಿಮಿಷಗಳ ಟ್ರೇಲರ್

'ದಿ ರಾಜಾ ಸಾಬ್' ಚಿತ್ರದ 3 ನಿಮಿಷಗಳ ಟ್ರೇಲರ್, ಆರಂಭಿಕ ಟ್ರೇಲರ್‌ಗಿಂತ ಹೆಚ್ಚಿನದನ್ನು ಬಹಿರಂಗಪಡಿಸುತ್ತದೆ . ಅಜ್ಜ ನಿಧನ ಹೊಂದಿದ ಬಳಿಕ ದೆವ್ವ ಆಗುತ್ತಾನೆ. ದೊಡ್ಡ ಬಂಗಲೆಯಲ್ಲಿ ಆತನ ಆತ್ಮ ಇರುತ್ತದೆ. ಆ ಬಂಗಲೆ ಒಳಗೆ ಬಂದವರೆಲ್ಲ ದೆವ್ವದ ಜಾಲದಲ್ಲಿ ಸಿಕ್ಕಿಕೊಳ್ಳುತ್ತಾರೆ. ಆ ಬಂಗಲೆಗೆ ಮೊಮ್ಮಗ (ಪ್ರಭಾಸ್) ತನ್ನ ಸ್ನೇಹಿತರ ಜೊತೆ ಎಂಟ್ರಿ ನೀಡುತ್ತಾನೆ. ಆ ಬಂಗಲೆಯ ಒಳಗಿನ ರಹಸ್ಯಗಳು ಏನು? ಎಂಬುದೇ ‘ದಿ ರಾಜಾ ಸಾಬ್’ ಸಿನಿಮಾದ ಕಥೆ.

ಚಿತ್ರದಲ್ಲಿ ಪ್ರಭಾಸ್ 'ರಾಜಾಸಾಬ್' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಜ್ಜಿ (ಜರೀನಾ ವಹಾಬ್) ಮೇಲೆ ಅಪಾರ ಪ್ರೀತಿ ಹೊಂದಿರುವ ವ್ಯಕ್ತಿಯಾಗಿ ನಟಿಸಿದ್ದಾರೆ. ತನ್ನ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದ ನಾಯಕ, ಅಂತಿಮವಾಗಿ ಪಾಳುಬಿದ್ದ ಬಂಗಲೆ ತಲುಪುತ್ತಾನೆ. ಆ ಬಂಗಲೆಯೇ ದಿ ರಾಜಸಾಬ್‌ ಸಿನಿಮಾದ ಕರಾಳ ರಹಸ್ಯಗಳ ತಾಣ. ಅಲ್ಲಿ ಸಂಮೋಹನ ವಿದ್ಯೆಯ ಮೂಲಕ ಮನಸ್ಸನ್ನೇ ಸೆರೆಹಿಡಿಯುವ ವಿಲನ್ ಸಂಜಯ್ ದತ್ ಎದುರಾಗುತ್ತಾರೆ. ದೈಹಿಕ ಬಲಕ್ಕಿಂತ ಹೆಚ್ಚಾಗಿ ಮಾನಸಿಕ ಆಟಗಳ ಮೂಲಕ ಪ್ರಭಾಸ್ ಅವರನ್ನು ಕಟ್ಟಿಹಾಕುವ ವಿಭಿನ್ನ ಪಾತ್ರದಲ್ಲಿ ಸಂಜಯ್ ದತ್ ಮಿಂಚಿದ್ದಾರೆ.

ಇದನ್ನೂ ಓದಿ: The Raja Saab: ಅದ್ಧೂರಿಯಾಗಿ ಜರುಗಿದ ರಾಜಾ ಸಾಬ್ ಪ್ರೀ-ರಿಲೀಸ್ ಇವೆಂಟ್; ಪ್ರಭಾಸ್‌ ಫ್ಯಾನ್ಸ್‌ಗೆ ನಿರ್ದೇಶಕ ಕೊಟ್ಟ ಭರವಸೆ ಏನು?

ದಿ ರಾಜಾ ಸಾಬ್‌ನ ಅಧಿಕೃತ ಎಕ್ಸ್ ಖಾತೆಯು ಹೊಸ ಟ್ರೇಲರ್ ಅನ್ನು ಪೋಸ್ಟ್ ಮಾಡಿ, ದಿರಾಜಾಸಾಬ್‌ಟ್ರೇಲರ್ 2.0....ನೀವು ನಿರೀಕ್ಷಿಸುವುದಕ್ಕಿಂತ ಇದು ಹೆಚ್ಚು.....ಪ್ರದರ್ಶನಗಳು, ದೃಶ್ಯಗಳು ಮತ್ತು ಸಂಗೀತ ಎಲ್ಲವೂ ಈ ಸಂಕ್ರಾಂತಿ, ಜನವರಿ 9, 2026 ರಂದು ಅದ್ಭುತ ಅನುಭವಕ್ಕಾಗಿ ಒಟ್ಟಿಗೆ ಬರುತ್ತವೆ" ಎಂದು ಬರೆದಿದೆ.

ಸಂಕ್ರಾಂತಿಯಂದು ರಿಲೀಸ್‌

ಮಾರುತಿ ನಿರ್ದೇಶಿಸಿದ್ದಾರೆ ಮತ್ತು ಟಿಜಿ ವಿಶ್ವ ಪ್ರಸಾದ್, ಕೃತಿ ಪ್ರಸಾದ್, ಇಶಾನ್ ಸಕ್ಸೇನಾ ಅವರ ಸಹ-ನಿರ್ಮಾಪಕರಾಗಿ, ದಿ ರಾಜಾ ಸಾಬ್ 2022 ರಿಂದ ನಿರ್ಮಾಣದಲ್ಲಿದ್ದಾರೆ. ಪ್ರಭಾಸ್, ಸಂಜಯ್ ದತ್, ಬೊಮನ್ ಇರಾನಿ, ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ , ರಿದ್ಧಿ ಕುಮಾರ್ ಮತ್ತು ಜರೀನಾ ವಹಾಬ್ ಇದರಲ್ಲಿ ನಟಿಸಿದ್ದಾರೆ. ಇದು ಸಂಕ್ರಾಂತಿಯಂದು ಜನವರಿ 9, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಮೂಲಕ ಟಿಜಿ ವಿಶ್ವ ಪ್ರಸಾದ್ ಅವರು ‘ದಿ ರಾಜಾ ಸಾಬ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ದೊಡ್ಡ ಬಜೆಟ್​​ನಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಕನ್ನಡದಲ್ಲೂ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಅವರು ಹಲವು ಗೆಟಪ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ನಟಿಸಿದ್ದಾರೆ. ಪ್ರಭಾಸ್ ಅವರು ಮಾಡಿರುವ ಮೊದಲ ಹಾರರ್ ಸಿನಿಮಾ ಇದು. ಈ ಚಿತ್ರದಲ್ಲಿ ಸಂಜಯ್ ದತ್ ಅವರು ದೆವ್ವದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.



ಪ್ರೀ ರಿಲೀಸ್‌ ಈವೆಂಟ್‌ನಲ್ಲಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ರೆಬೆಲ್ ಸ್ಟಾರ್ ಪ್ರಭಾಸ್ ಮಾತನಾಡಿ, "ಅಭಿಮಾನಿಗಳಿಗೆ ಸಂಪೂರ್ಣ ಮನರಂಜನೆ ನೀಡುವ ಉದ್ದೇಶದಿಂದ ಈ ಸಿನಿಮಾ ಮಾಡಿದ್ದೇವೆ.

ಇದನ್ನೂ ಓದಿ: Actor Prabhas: ಪ್ರಭಾಸ್ ನಟನೆಯ 'ದಿ ರಾಜಾ ಸಾಬ್' ಚಿತ್ರದ ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್

ನಿರ್ದೇಶಕ ಮಾರುತಿ ಅವರ ಬರವಣಿಗೆಗೆ ನಾನು ಕ್ಲೈಮ್ಯಾಕ್ಸ್ ನೋಡಿದ ನಂತರ ಅಭಿಮಾನಿಯಾದೆ. ಈ ಸಂಕ್ರಾಂತಿಗೆ ಬಿಡುಗಡೆಯಾಗುತ್ತಿರುವ ಎಲ್ಲಾ ಸಿನಿಮಾಗಳು ಯಶಸ್ವಿಯಾಗಲಿ, ಅದರ ಜೊತೆಗೆ 'ದಿ ರಾಜಾ ಸಾಬ್' ಕೂಡ ಬ್ಲಾಕ್‌ಬಸ್ಟರ್ ಆಗಲಿ" ಎಂದು ಆಶಿಸಿದರು.