Ibrahim Ali Khan: ಪಲಕ್ ತಿವಾರಿ ಜೊತೆ ಡೇಟಿಂಗ್ ವದಂತಿ ಬೆನ್ನಲ್ಲೇ ಮತ್ತೊರ್ವ ಸ್ಟಾರ್ ನಟಿಯ ಪುತ್ರಿ ಜೊತೆ ಕಾಣಿಸಿಕೊಂಡ ಸೈಫ್ ಪುತ್ರ
ಇಬ್ರಾಹಿಂ ಅಲಿ ಖಾನ್ ಪಲಕ್ ತಿವಾರಿ ಜೊತೆ ಡೇಟಿಂಗ್ ನಲ್ಲಿದ್ದಾರೆ ಎಂಬ ವದಂತಿಗಳು ಇತ್ತೀಚೆಗಷ್ಟೇ ಸುದ್ದಿ ಆಗಿತ್ತು. ಇದರ ಬೆನ್ನಲ್ಲೆ ನಟಿ ರವೀನಾ ಟಂಡನ್ ಪುತ್ರಿ ರಾಶಾ ಥಡಾನಿ ಜೊತೆಗೆ ಇಬ್ರಾಹಿಂ ಅಲಿ ಖಾನ್ ಐಪಿಎಲ್ ಮ್ಯಾಚ್ ವೀಕ್ಷಿಸಲು ಬಂದಿದ್ದು ಈ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ...

Ibrahim Ali Khan

ಮುಂಬೈ: ಐಪಿಎಲ್ 2025ರ ಆವೃತ್ತಿ ಅದ್ಧೂರಿಯಾಗಿ ನಡೆಯುತ್ತಿದೆ. ಪಂದ್ಯದ ರೋಚಕ ಅನುಭವ ಪಡೆಯಲು ಸೆಲೆಬ್ರಿಟಿಗಳು, ಸ್ಟಾರ್ ನಟ ನಟಿಯರು ಕೂಡ ಭೇಟಿ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಾಲಿವುಡ್ ನ ಇಬ್ರಾಹಿಂ ಅಲಿ ಖಾನ್ (Ibrahim Ali Khan) ಮತ್ತು ರಾಶಾ ಥಡಾನಿ (Rasha Thadani) ಐಪಿಎಲ್ ಮ್ಯಾಚ್ ನೋಡಲು ಆಗಮಿಸಿದ್ದು ಇದೀಗ ಹೊಸ ಗಾಸಿಪ್ ಗೆ ಕಾರಣವಾಗಿದೆ. ಇಬ್ರಾಹಿಂ ಅಲಿ ಖಾನ್ ಪಾಲಕ್ ತಿವಾರಿ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂಬ ವದಂತಿಗಳು ಇತ್ತೀಚೆಗಷ್ಟೇ ಸುದ್ದಿ ಆಗಿತ್ತು. ಇದರ ಬೆನ್ನಲ್ಲೆ ನಟಿ ರವೀನಾ ಟಂಡನ್ ಪುತ್ರಿ ರಾಶಾ ಥಡಾನಿ ಜೊತೆಗೆ ಇಬ್ರಾಹಿಂ ಅಲಿ ಖಾನ್ ಐಪಿಎಲ್ ಮ್ಯಾಚ್ ವೀಕ್ಷಿಸಲು ಬಂದಿದ್ದು ಈ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ (Viral Video) ಆಗುತ್ತಿದೆ.
ಇಬ್ರಾಹಿಂ ಅಲಿ ಖಾನ್ ಮತ್ತು ರಾಶಾ ವಿಡಿಯೊ ಇಲ್ಲಿದೆ
ಎಪ್ರಿಲ್ 17 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿ ಯನ್ಸ್ ನಡುವೆ ಪಂದ್ಯ ನಡೆದಿದೆ. ಇದನ್ನು ವೀಕ್ಷಿಸಲು ಸ್ಟೈಲಿಶ್ ಐಕಾನ್ ಇಬ್ರಾಹಿಂ ಅಲಿ ಖಾನ್ ಮತ್ತು ರಾಶಾ ಥಡಾನಿ ಒಟ್ಟಿಗೆ ಆಗಮಿಸಿದ್ದಾರೆ. ಸದ್ಯ ಇವರಿಬ್ಬರ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ. ರಾಶಾ ಥಡಾನಿ ವೈಟ್ ಜಾಕೆಟ್ ಧರಿಸಿ ಸ್ಟನಿಂಗ್ ಲುಕ್ ನೀಡಿದ್ದಾರೆ. ಇಬ್ರಾಹಿಂ ಅಲಿಖಾನ್ ಗ್ರೀನಿಶ್ ಕಲರ್ ಕ್ಯಾಶುವಲ್ ಟೀ ಶರ್ಟ್ ಪ್ಯಾಂಟ್ ಧರಿಸಿ ಸಖತ್ ಸ್ಟೈಲ್ ಆಗಿ ಮಿಂಚಿದ್ದಾರೆ. ಪಂದ್ಯ ಮುಗಿದ ಬಳಿಕ ಇಬ್ಬರೂ ಕ್ರೀಡಾಂಗಣ ದಿಂದ ಒಟ್ಟಿಗೆ ನಿರ್ಗಮಿಸುತ್ತಿರುವುದನ್ನು ವೈರಲ್ ವಿಡಿಯೊದಲ್ಲಿ ಕಾಣಬಹುದು.
ಕೆಲವು ದಿನಗಳ ಹಿಂದೆ ಇಬ್ರಾಹಿಂ ಅಲಿ ಖಾನ್ ಮತ್ತು ಪಾಲಕ್ ತಿವಾರಿ ಡೇಟಿಂಗ್ ಮಾಡುತ್ತಿರುವ ಸುದ್ದಿ ಬಹಳಷ್ಟು ವೈರಲ್ ಆಗಿತ್ತು. ಗೋವಾ ಹಾಗೂ ಮಾಲ್ಡೀವ್ಸ್ ಗೆ ಇವರಿಬ್ಬರು ಜೊತೆಗೆ ಪ್ರವಾಸಕ್ಕೆ ಕೂಡ ತೆರಳಿದ್ದರು ಎಂದು ವದಂತಿ ಯಾಗಿತ್ತು.ಬಳಿಕ ಇಬ್ರಾಹಿಂ ಅವರು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಪಲಕ್ ತಿವಾರಿ ನನ್ನ ಉತ್ತಮ ಸ್ನೇಹಿತೆ ಎಂದು ಹೇಳುವ ಮೂಲಕ ಎಲ್ಲ ವದಂತಿಗೂ ಬ್ರೇಕ್ ನೀಡಿದ್ದರು. ಸದ್ಯ ಇಬ್ರಾಹಿಂ ಅಲಿ ಖಾನ್ ಮತ್ತು ರಾಶಾ ಥಡಾನಿ ಒಟ್ಟಿಗೆ ಐಪಿಎಲ್ ಮ್ಯಾಚ್ ನೋಡಲು ತೆರಳುವ ಮೂಲಕ ಮತ್ತೆ ಗಾಸಿಪ್‌ಗೆ ಕಾರಣವಾಗಿದೆ.
ಇದನ್ನು ಓದಿ: Jaat Movie Row: ಸನ್ನಿ ಡಿಯೋಲ್ ಸೇರಿ ಖ್ಯಾತ ನಟ ವಿರುದ್ಧ FIR- ಏನಿದು ಪ್ರಕರಣ?
ಇದೀಗ ಇಬ್ರಾಹಿಂ ಮತ್ತು ರಾಶಾ ಜೊತೆಗೆ ಕಾಣಿಸಿಕೊಂಡ ಬಳಿಕ ಇವರಿಬ್ಬರ ನಡುವೆ ಏನೊ ಇದೆ ಎಂಬ ಅನುಮಾನವನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇಬ್ರಾಹಿಂ ಮತ್ತು ರಾಶಾ ಈ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರವೀನಾ ಟಂಡನ್ ಪುತ್ರಿ ರಾಶಾ ಇತ್ತೀಚೆಗಷ್ಟೇ ಬಾಲಿವುಡ್‌ಗೆ ಪ್ರವೇಶ ಮಾಡಿದ್ದರು. ಇಬ್ರಾಹಿಂ ಅಲಿ ಖಾನ್ ಕರಣ್ ಜೋಹರ್ ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು.