ಜನಪ್ರಿಯ ಸಿನಿಮಾ ಡೇಟಾಬೇಸ್ ಜಾಲತಾಣವಾದ ಐಎಂಡಿಬಿ (IMDb), ಭಾರತದ ಅತ್ಯಂತ ಬಹುನಿರೀಕ್ಷಿತ ಹೊಸ ಸಿನಿಮಾಗಳು ಮತ್ತು ಶೋಗಳ ಪಟ್ಟಿಯನ್ನು (Most Anticipated New Indian Movies and Shows) ಬಿಡುಗಡೆ ಮಾಡಿದೆ. ಜನಪ್ರಿಯತೆಯನ್ನು ಆಧರಿಸಿ ಸಿದ್ಧಪಡಿಸಲಾದ ಈ ಪಟ್ಟಿಯಲ್ಲಿ, ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾಕ್ಕೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಅಗ್ರಸ್ಥಾನದಲ್ಲಿ ಯಶ್
ವಿಶ್ವಾದ್ಯಂತ ಇರುವ ಸಿನಿಪ್ರಿಯರು ಶೇ. 42.3 ರಷ್ಟು ಮತಗಳನ್ನು 'ಟಾಕ್ಸಿಕ್' ಸಿನಿಮಾಕ್ಕೆ ನೀಡಿದ್ದಾರೆ. ಆ ಮೂಲಕ ಟಾಪ್ 10ರ ಪಟ್ಟಿಯಲ್ಲಿ ಸಿಂಹಪಾಲನ್ನು ಟಾಕ್ಸಿಕ್ ಪಡೆದುಕೊಂಡಿದ್ದರೆ, ರಣವೀರ್ ಸಿಂಗ್ ಅಭಿನಯದ 'ಧುರಂಧರ್: ದ ರಿವೆಂಜ್' ಶೇ. 23.6 ರಷ್ಟು ಜನಪ್ರಿಯತೆಯೊಂದಿಗೆ ಎರಡನೇ ಸ್ಥಾನದಲ್ಲಿದೆ. ಉಳಿದ ಸಿನಿಮಾಗಳು ಒಂದಂಕಿ ಅಥವಾ ಅದಕ್ಕಿಂತ ಕಡಿಮೆ ಶೇಕಡಾವಾರು ಪಾಲನ್ನು ಪಡೆದಿವೆ. ಇದು ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಮೇಲಿರುವ ಪ್ರೇಕ್ಷಕರಿಗಿರುವ ಭಾರೀ ಕ್ರೇಜ್ ಎಂಥದ್ದು ಎಂಬುದನ್ನು ಎತ್ತಿ ತೋರಿಸುತ್ತದೆ.
Toxic Movie: ಟಾಕ್ಸಿಕ್ ಸಿನಿಮಾಗೆ ಮತ್ತೊಂದು ಸಂಕಷ್ಟ, ಸಿಡಿದೆದ್ದ ಕ್ರೈಸ್ತರ ಒಕ್ಕೂಟ
ಐಎಂಡಿಬಿ ಟಾಪ್ 10 ಪಟ್ಟಿ ಇಲ್ಲಿದೆ
ಟಾಕ್ಸಿಕ್ - 42.3%
ಧುರಂಧರ್: ದ ರಿವೆಂಜ್ - 23.6%
ಅಸ್ಸಿ - 8.8%
ಎಲ್ಐಕೆ: ಲವ್ ಇನ್ಶೂರೆನ್ಸ್ ಕಂಪನಿ - 5.1%
ದ ಕೇರಳ ಸ್ಟೋರಿ 2 - 4.4%
ಸೀತಾ ಪಯಣಂ - 4.4%
ಯೂತ್ - 3.5%
ಕೆನಡಿ - 3%
ದೋ ದಿವಾನೆ ಸೆಹರ್ ಮೇ - 2.5%
ಕಪಲ್ ಫ್ರೆಂಡ್ಲಿ - 2.4%
ಟಾಕ್ಸಿಕ್ ಮುಂದೆ ಎಲ್ಲರೂ ಡಲ್
ಯಶ್ ಅವರ ಟಾಕ್ಸಿಕ್ ಸಿನಿಮಾಗೆ 42.3% ವೋಟ್‌ಗಳು ಸಿಕ್ಕಿದ್ದರೆ, ಧುರಂಧರ್ 2 ಸಿನಿಮಾಗೆ ಅಂದಾಜು ಅದರ ಅರ್ಧದಷ್ಟು (23.6%) ವೋಟ್ ಸಿಕ್ಕಿದೆ. ಅಚ್ಚರಿ ಎಂದರೆ, ಉಳಿದ 8 ಸಿನಿಮಾಗಳ ವೋಟಿಂಗ್ ಪರ್ಸೆಂಟೇಜ್ ಎರಡಂಕಿ ಕೂಡ ದಾಟಿಲ್ಲ! ಹಾಗಾಗಿ, ಸಿನಿಪ್ರಿಯರ ಗಮನವೆಲ್ಲಾ ಬರೀ ಮಾರ್ಚ್ 19ರ ಮೇಲಿದೆ. ಅಂದು ಒಟ್ಟೊಟ್ಟಿಗೆ ತೆರೆಗೆ ಬರಲಿರುವ ಟಾಕ್ಸಿಕ್ ಮತ್ತು ಧುರಂಧರ್ 2 ಸಿನಿಮಾಗಳ ಕ್ಲ್ಯಾಶ ಯಾವ ರೀತಿ ಇರಲಿದೆ ಎಂಬ ಕುತೂಹಲ ಸಿನಿಪ್ರಿಯರಲ್ಲಿದೆ.
Yash Toxic teaser: ಯಶ್ ಟಾಕ್ಸಿಕ್ ಟೀಸರ್, ರಣವೀರ್ ಸಿಂಗ್ ಧುರಂಧರ್ ಸಿನಿಮಾ ಟೀಕಿಸಿದ ಖ್ಯಾತ ನಟ
ಸದ್ಯದ ಕ್ರೇಜ್ ಗಮನಿಸಿದರೆ, ಯಶ್ ಟಾಕ್ಸಿಕ್ ಸಿನಿಮಾಕ್ಕೆ ಧುರಂಧರ್: ದ ರಿವೆಂಜ್ ಚಿತ್ರಕ್ಕಿಂತ ದೊಡ್ಡ ಪ್ರಮಾಣದ ಓಪನಿಂಗ್ ಸಿಗಲಿದೆ ಎಂಬ ನಿರೀಕ್ಷೆ ಇದೆ.