ಮುಂಬೈ,ಅ.15: ಬಾಲಿವುಡ್ ನಟ ಇಮ್ರಾನ್ ಖಾನ್ ಗೆ (Imran Khan) ಪೊಲೀಸರು ಶಾಕ್ ನೀಡಿದ್ದು ಭಾರತವನ್ನು ಬಿಟ್ಟು ಹೊರ ನಡೆಯುವಂತೆ ಆದೇಶವನ್ನು ನೀಡಿದ್ದಾರೆ. ಅಕ್ಟೋಬರ್ 10 ರಂದು ಮುಂಬೈನಲ್ಲಿ ನಡೆದ ಸಿಇಸಿ ರಾಜೀನಾಮೆಗೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಇಮ್ರಾನ್ ಭಾಗವಹಿಸಿದ್ದರು. ಇಮ್ರಾನ್ ಖಾನ್ ಅವರು ಅಮೆರಿಕದ ಪ್ರಜೆ ಆಗಿರುವುದರಿಂದ ಭಾರತದ ಭಾರತೀಯ ವೀಸಾ ನಿಯಮ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ನಟ ಇಮ್ರಾನ್ ಖಾನ್ ಅವರಿಗೆ ಅಕ್ಟೋಬರ್ 28ರ ಒಳಗೆ ದೇಶ ಬಿಡುವಂತೆ ಮುಂಬೈ ಪೊಲೀಸ್ ಅಧಿಕಾರಿಗಳು ಸೂಚಿಸಿದ್ದಾರೆ.
ಅಮೆರಿಕದ ಪ್ರಜೆಯಾಗಿರುವ ನಟ ಇಮ್ರಾನ್ ಖಾನ್ ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆದ ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದ್ದರು. ಅವರ ಜತೆಗೆ ಪತ್ನಿ ಲೇಖಾ ವಾಷಿಂಗ್ಟನ್, ಸಂಬಂಧಿ ಝೈನ್ ಮೇರಿ ಖಾನ್. ಎಂ.ಸಹ ಭಾಗವಹಿಸಿದ್ದು ಈ ಬಗ್ಗೆ ಹಲವರಿಂದ ವಿರೋಧ ವ್ಯಕ್ತವಾಗಿತ್ತು.ಈ ಬಗ್ಗೆ ಇಮ್ರಾನ್ ಖಾನ್ ವಿರುದ್ಧ ಮುಂಬೈನ ಗಮದೇವಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು
"ನನಗೆ ಯಾವುದೇ ಬೇಡಿಕೆಗಳಿಲ್ಲ. ಕೇವಲ ನಾಗರಿಕನಾಗಿ, ಜನರ ಪರ ಬೆಂಬಲಕ್ಕೆ ನಿಂತಿದ್ದೇನೆ. ನಾನು ಯಾವುದೇ ಸಂಘಟನೆಗೂ ಸೇರಿಲ್ಲ. ಜನರ ಪ್ರತಿನಿಧಿಯಾಗಿ ಹೋರಾಟದಲ್ಲಿ ಭಾಗಿಯಾಗಿದ್ದೆ’ ಎಂದು ನಟ ಇಮ್ರಾನ್ ಖಾನ್ ಹೇಳಿದ್ದರು. ಆದರೆ ವಿದೇಶಿ ಪ್ರಜೆ ಇಂತಹ ಕಾನೂನುಬಾಹಿರ ಕೆಲಸಗಳನ್ನು ಮಾಡಲು ಅನುಮತಿಸಬಹುದೇ? ರಾಜಕೀಯ ಪ್ರತಿಭಟನೆಯಲ್ಲಿ ಪಾಲ್ಗೊಳಲು ಅವಕಾಶ ನೀಡಿದವರು ಯಾರೆಂದು ಹಲವಾರು ವಿರೋಧ ವ್ಯಕ್ತ ಪಡಿಸಿದ್ದರು.
ಇಮ್ರಾನ್ ಖಾನ್ ಭಾರತದಲ್ಲಿ ಶಾಶ್ವತವಾಗಿ ನೆಲೆಸಲು ಮತ್ತು ಕೆಲಸ ಮಾಡಲು ‘ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ’ (OCI) ಕಾರ್ಡ್ ಸೌಲಭ್ಯವನ್ನು ಹೊಂದಿದ್ದಾರೆ. ಆದರೆ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ, ಅ.28ರೊಳಗೆ ಭಾರತವನ್ನು ತೊರೆಯುವಂತೆ ಪೊಲೀಸರು 'ಲೀವ್ ಇಂಡಿಯಾ ನೋಟಿಸ್' ಜಾರಿ ಮಾಡಿದ್ದಾರೆ.
ಭಾರತೀಯ ವಲಸೆ ಕಾಯ್ದೆ ಮತ್ತು ವಿದೇಶಿಯರ ನೆಲೆಯ ನಿಯಮಗಳ ಪ್ರಕಾರ, ಯಾವುದೇ ವಿದೇಶಿ ಪ್ರಜೆ ಅಥವಾ ಒಸಿಐ ಕಾರ್ಡ್ದಾರರು ಭಾರತದ ರಾಜಕೀಯ ಚಟುವಟಿಕೆಗಳು, ಸರ್ಕಾರದ ವಿರುದ್ಧದ ಪ್ರತಿಭಟನೆಗಳಲ್ಲಿ ಭಾಗವಹಿಸುವಂತಿಲ್ಲ.ನಿಯಮ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ, ಅಕ್ಟೋಬರ್ 28 ರೊಳಗೆ ಸ್ವಯಂಪ್ರೇರಿತರಾಗಿ ದೇಶವನ್ನು ತೊರೆಯಬೇಕೆಂದು ಅವರಿಗೆ ಅಧಿಕೃತ ನೋಟಿಸ್ ನೀಡಲಾಗಿದೆ.