ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚು ಅವಕಾಶಗಳು ಸಿಗಲಿಲ್ಲʼ ಎಂಬ ಬಗ್ಗೆ ನಟ ದಿಲೀಪ್‌ ರಾಜ್‌ಗೆ ಬೇಸರವಿತ್ತೇ? ಇಲ್ಲಿವೆ ಅವರೇ ಹೇಳಿದ್ದ ಮನದಾಳದ ಮಾತುಗಳು

ನಟ ದಿಲೀಪ್ ರಾಜ್ ಅವರ ಅಕಾಲಿಕ ನಿಧನವು ಕನ್ನಡ ಚಿತ್ರರಂಗದಲ್ಲಿ ಅವರ ಪ್ರತಿಭೆಗೆ ಸಿಗಬೇಕಾದ ಮನ್ನಣೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ತಮಗೆ ಹೆಚ್ಚಿನ ಸಿನಿಮಾ ಅವಕಾಶಗಳು ಸಿಗುತ್ತಿಲ್ಲ ಎಂಬ ಕಹಿ ಸತ್ಯವನ್ನು ಬಹಳ ಹಿಂದೆಯೇ ಜೀರ್ಣಿಸಿಕೊಂಡಿದ್ದ ದಿಲೀಪ್, ಸದಾ ಉತ್ತಮ ಕಥೆಗಳಿಗಾಗಿ ಹಂಬಲಿಸುತ್ತಿದ್ದರು.

ನಟ ದಿಲೀಪ್‌ ರಾಜ್‌ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಅಕಾಲಿಕ ಸಾವು ಚಿತ್ರರಂಗಕ್ಕೆ ಆಘಾತ ನೀಡಿದೆ. ದಿಲೀಪ್‌ ಅವರ ಸಾವಿನ ನಂತರ ಕೇಳಿಬರುತ್ತಿರುವ ಪ್ರತಿಕ್ರಿಯೆಗಳಲ್ಲಿ, ಹೆಚ್ಚು ಸದ್ದು ಮಾಡಿರುವುದು ಅವರ ಪ್ರತಿಭೆ ತಕ್ಕ ಅವಕಾಶಗಳು ಸಿಗಲಿಲ್ಲ ಎಂಬುದು. ದಿಲೀಪ್‌ ರಾಜ್‌ ಅವರನ್ನು ಕನ್ನಡ ಚಿತ್ರರಂಗ ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಲಿಲ್ಲ ಎಂದು ಅನೇಕರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಹಾಗಾದರೆ, ಸ್ವತಃ ದಿಲೀಪ್‌ ರಾಜ್‌ ಅವರಿಗೆ ಈ ಬಗ್ಗೆ ಬೇಸರವಿತ್ತೇ? ಯಾಕೆಂದರೆ,‌ ಅವರು ಇದ್ದಾಗಲೂ ಹಲವು ಸಂದರ್ಶನಗಳಲ್ಲಿ ಈ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ದಿಲೀಪ್‌ ಉತ್ತರಿಸಿದ್ದರು ಕೂಡ! ಹಿಂದೊಮ್ಮೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶಗಳು ಸಿಕ್ಕಿಲ್ಲ, ಇದರ ಬಗ್ಗೆ ಬೇಸರವಿದೆಯೇ ಎಂದು ಪ್ರಶ್ನಿಸಿದಾಗ, "ಆ ಸತ್ಯವನ್ನು ನಾನು ಜೀರ್ಣಿಸಿಕೊಂಡಿದ್ದೇನೆ" ಎಂಬ ಮಾತು ಅವರಿಂದಲೇ ಬಂದಿತ್ತು.

3 ಆಸ್ಪತ್ರೆಗಳಿಗೆ ಹೋದರೂ ಉಳಿಯಲಿಲ್ಲ ದಿಲೀಪ್‌ ರಾಜ್‌ ಜೀವ; ಪ್ರತಿಭಾವಂತ ನಟನ ಆ ಕೊನೆಯ ಕ್ಷಣಗಳು ಹೇಗಿದ್ದವು?

"ಬಹಳ ವರ್ಷಗಳ ಹಿಂದೆಯೇ ನಾನು ಹೆಚ್ಚಿನ ಅವಕಾಶಗಳು ನನಗೆ ಸಿಗುತ್ತಿಲ್ಲ ಎಂಬ ವಿಷಯವನ್ನು ಜೀರ್ಣಿಸಿಕೊಂಡಿದ್ದೇನೆ. ಯಾಕೆ ಹೀಗೆ ಆಗುತ್ತದೆ ಎಂಬುದಕ್ಕೆ ನನಗೂ ಕಾರಣ ಗೊತ್ತಿಲ್ಲ. ಹೆಚ್ಚೆಚ್ಚು ಸಿನಿಮಾಗಳನ್ನು ಮಾಡಬೇಕು ಎಂಬ ಆಸೆ ನನಗೂ ಇದೆ. ಆದರೆ ಅವಕಾಶಗಳೇ ಬರುತ್ತಿಲ್ಲ" ಎಂದು ದಿಲೀಪ್‌ ರಾಜ್‌ ಹೇಳಿದ್ದರು.

ಬಂದ ಆಫರ್‌ಗಳು ಉತ್ತಮವಾಗಿದ್ದವು

ದಿಲೀಪ್‌ ರಾಜ್‌ಗೆ ಅವಕಾಶಗಳು ಬಂದಿರಬಹುದು, ಆದರೆ ಬಂದ ಅವಕಾಶಗಳೆಲ್ಲಾ ಉತ್ತಮವೇ ಆಗಿದ್ದವು. ಆ ಬಗ್ಗೆ ಅವರಿಗೂ ಖುಷಿ ಇತ್ತು. "ನನಗೆ ತೂಕವಿರುವ ಪಾತ್ರಗಳೇ ಸಿಗುತ್ತಿ. ನಾನು ಈಗಾಗಲೇ ಮಾಡಿರುವ ಪಾತ್ರಗಳು ಜನರಿಗೆ ಇಷ್ಟವಾಗಿದ್ದು, ಹೆಸರು ತಂದುಕೊಟ್ಟಿವೆ ಎಂಬ ಸಮಾಧಾನ ನನಗೆ ಇದೆ" ಎಂದು ದಿಲೀಪ್‌ ರಾಜ್ ಹೇಳಿಕೊಂಡಿದ್ದರು.‌

ʻಮಿಲನʼ ಸಿನಿಮಾದ ಆಕಾಶ್‌ - ಹೇಮಂತ್‌ ಇಬ್ಬರೂ ನಮ್ಮೊಂದಿಗಿಲ್ಲ; ಅಯ್ಯೋ, ಅಪ್ಪು- ದಿಲೀಪ್‌ ರಾಜ್‌ ನಡುವೆ ಇದೆಂಥಾ ಸಾಮ್ಯತೆ?

ಸಿನಿಮಾ ನಿರ್ದೇಶಕರಾಗುವ ಆಸೆ ಇತ್ತು

"ಸಿನಿಮಾದಲ್ಲಿ ಕಥೆ ಹೇಗಿದೆ ಎನ್ನುವುದು ನನ್ನ ಮೊದಲ ಆಯ್ಕೆ. ಹಾಗೆಯೇ ಆ ಕಥೆಯನ್ನು ಯಾರು ಹೇಳುತ್ತಿದ್ದಾರೆ ಹಾಗೂ ಹೇಗೆ ಹೇಳಲು ರೆಡಿ ಮಾಡಿಕೊಂಡಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. ನನಗೆ ಸಿನಿಮಾ ನಿರ್ದೇಶನದ ಮಾಡುವ ಆಸೆ ಇದೆ. ನಿರ್ದೇಶನ ಬಹಳ ಖುಷಿ ಕೊಡುವ ಕೆಲಸ. ನಿರ್ದೇಶಕನಾಗಲು 2-3 ಮೀಸಲಿಡಬೇಕು. ಮಾನಸಿಕವಾಗಿ ಅದಕ್ಕೆ ಸಿದ್ಧನಾಗಬೇಕು. ಹಾಗಾಗಿ, ನಿರ್ದೇಶಕನಾದರೆ, ಆ ಸಿನಿಮಾದಲ್ಲಿ ನಟನೆ ಮಾಡುವುದಿಲ್ಲ" ಎಂದು ಹೇಳುವ ಮೂಲಕ ತಮಗೆ ಸಿನಿಮಾ ನಿರ್ದೇಶನ ಮಾಡುವ ಆಸೆಯೂ ಇದೆ ಎಂಬುದನ್ನು ವ್ಯಕ್ತಪಡಿಸಿದ್ದರು‌ ದಿಲೀಪ್ ರಾಜ್.

‌ಉತ್ತಮ ಸಿನಿಮಾ ಆಫರ್‌ಗಳು ಬರದೇ ಇದ್ದರೂ, ʻಮಿಲನʼ, 'ಆರ್ಕೆಸ್ಟ್ರಾ ಮೈಸೂರು', 'ಯು ಟರ್ನ್‌', ʼಲವ್‌ ಗುರುʼ, 'ಅಂಬಿ ನಿಂಗ್ ವಯಸ್ಸಾಯ್ತ' ಸೇರಿದಂತೆ ಹಲವು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಎಲ್ಲರನ್ನು ರಂಜಿಸಿದ್ದಾರೆ ದಿಲೀಪ್ ರಾಜ್. ಜೊತೆಗೆ ಅನೇಕ ಯಶಸ್ವಿ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ, ನಿರ್ದೇಶನವನ್ನೂ ಮಾಡಿದ್ದಾರೆ. ಆದರೆ, ಸಿನಿಮಾ ನಿರ್ದೇಶಕನಾಗಬೇಕು ಎಂಬ ಕನಸು ಮಾತ್ರ, ಕನಸಾಗಿಯೇ ಉಳಿಯಿತು.