ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jana Nayagan: ʻದಳಪತಿʼ ವಿಜಯ್‌ ಕೊನೇ ಚಿತ್ರವು ಟಾರ್ಗೆಟ್‌ ಆಯ್ತಾ? ʻಜನ ನಾಯಗನ್‌ʼ ಎದುರು ಬರ್ತಿದೆಯಾ ಮತ್ತೊಂದು ತಮಿಳು ಸಿನಿಮಾ?

Jana Nayagan Movie Update: ದಳಪತಿ ವಿಜಯ್ ಅವರ ಕೊನೆಯ ಚಿತ್ರ 'ಜನ ನಾಯಗನ್' 2026ರ ಜನವರಿ 9ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಕನ್ನಡದ ಕೆವಿಎನ್ (KVN) ಸಂಸ್ಥೆ ನಿರ್ಮಿಸಿರುವ ಈ ಚಿತ್ರಕ್ಕೆ ತಮಿಳುನಾಡಿನ ರಾಜಕೀಯ ಮೇಲಾಟಗಳ ನಡುವೆ ಪೈಪೋಟಿ ಎದುರಾಗಿದೆ. ಶಿವಕಾರ್ತಿಕೇಯನ್ ಅಭಿನಯದ 'ಪರಾಶಕ್ತಿ' ಚಿತ್ರವು ಜನವರಿ 14ರ ಬದಲು ವಿಜಯ್ ಚಿತ್ರ ಬಿಡುಗಡೆಯಾದ ಮರುದಿನವೇ (ಜ.10) ತೆರೆಗೆ ಬರಲಿದೆ ಎಂಬ ಸುದ್ದಿ ಹಬ್ಬಿದೆ.

ತಮಿಳು ನಟ ದಳಪತಿ ವಿಜಯ್‌ ಅವರು ಚಿತ್ರರಂಗಕ್ಕೆ ವಿದಾಯ ಹೇಳಿ, ರಾಜಕಾರಣದಲ್ಲಿ ಬ್ಯುಸಿ ಆಗಲಿದ್ದಾರೆ. ಹಾಗಾಗಿ, ಅವರ ಕೊನೇ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇದೆ. ಕನ್ನಡದ ಕೆವಿಎನ್‌ ಸಂಸ್ಥೆಯು ವಿಜಯ್‌ ಅವರ ಕೊನೆ ಸಿನಿಮಾ ʻಜನ ನಾಯಗನ್ʼ‌ ಅನ್ನು ನಿರ್ಮಾಣ ಮಾಡಿದೆ. ಜನವರಿ 9ರಂದು ಈ ಸಿನಿಮಾ ತೆರೆಗೆ ಬರುತ್ತಿದ್ದು, ಅದಕ್ಕೂ ಮುನ್ನ ಒಂದಷ್ಟು ಸದ್ದು ಮಾಡುತ್ತಲೇ ಇದೆ. ಇದು ವಿಜಯ್‌ ಅವರ ಕೊನೆ ಸಿನಿಮಾವಾಗಿರುವುದರಿಂದ, ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಫೇರ್‌ವೆಲ್‌ ಮಾಡಲು ರೆಡಿಯಾಗಿದ್ದಾರೆ.

ಸಾಲು ಸಾಲು ತೆಲುಗು ಸಿನಿಮಾಗಳು

ಜನವರಿ ಎರಡನೇ ವಾರದಲ್ಲಿ ಸಂಕ್ರಾಂತಿ, ಪೊಂಗಲ್‌ ಹಬ್ಬಗಳು ಬರುತ್ತವೆ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಆ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನು ರಿಲೀಸ್‌ ಮಾಡುವುದು ವಾಡಿಕೆ. 2026ರ ಸಂಕ್ರಾಂತಿ ಹಬ್ಬದಂದು ಸಾಲು ಸಾಲು ದೊಡ್ಡ ತೆಲುಗು ಚಿತ್ರಗಳು ತೆರೆಗೆ ಬರಲು ಸಜ್ಜಾಗಿವೆ. ಜನವರಿ 9 ರಂದು ಪ್ರಭಾಸ್ ಮತ್ತು ಮಾಳವಿಕಾ ಮೋಹನನ್ ಅಭಿನಯದ ಹಾರರ್ ಕಾಮಿಡಿ ಸಿನಿಮಾ 'ದಿ ರಾಜಾ ಸಾಬ್', ಜನವರಿ 12 ರಂದು ಚಿರಂಜೀವಿ ಮತ್ತು ನಯನತಾರಾ ಜೋಡಿಯ 'ಮನ ಶಂಕರ ವರ ಪ್ರಸಾದ್ ಗಾರು' ಪ್ರೇಕ್ಷಕರ ಮುಂದೆ ಬರಲಿದೆ.

ಜೊತೆಗೆ ಜನವರಿ 13 ರಂದು ರವಿತೇಜ ಮತ್ತು ಆಶಿಕಾ ರಂಗನಾಥ್ ಅವರ 'ಭರ್ತ ಮಹಾಶಯುಲಕು ವಿಜ್ಞಾಪತಿʼ ಮತ್ತು ಜನವರಿ 14 ರಂದು ನವೀನ್ ಪೋಲಿಶೆಟ್ಟಿ ಅವರ 'ಅನಗನಗಾ ಓಕ ರಾಜು' ಸಿನಿಮಾ ಹಾಗೂ ಜನವರಿ 15 ರಂದು ಶರ್ವಾನಂದ್ ಮತ್ತು ಸಂಯುಕ್ತ ಅಭಿನಯದ 'ನಾರಿ ನಾರಿ ನಡುವಮ ಮುರಾರಿ' ಚಿತ್ರಗಳು ಬಿಡುಗಡೆಯಾಗಲಿವೆ.

Jana Nayagan : ‘ಜನ ನಾಯಗನ್’ ಸಿನಿಮಾದ ಮೊದಲ ಲಿರಿಕಲ್‌ ಸಾಂಗ್‌ ಔಟ್‌! ಸಖತ್‌ ಸ್ಟೆಪ್ಸ್‌ ಇಟ್ಟ ದಳಪತಿ ವಿಜಯ್‌

ಜನ ನಾಯಗನ್‌ ಜೊತೆಗೆ ಮತ್ತೊಂದು ಸಿನಿಮಾ?

ಈ ಎಲ್ಲಾ ತೆಲುಗು ಸಿನಿಮಾಗಳ ಜೊತೆಗೆ ತಮಿಳಿನಲ್ಲಿ ದಳಪತಿ ವಿಜಯ್ ಅವರ ವೃತ್ತಿಜೀವನದ ಕೊನೆಯ ಚಿತ್ರವಾದ 'ಜನ ನಾಯಗನ್' ಜನವರಿ 9ರಂದೇ ಬಿಡುಗಡೆ ಆಗಲಿದೆ. ಇನ್ನು, ಶಿವಕಾರ್ತಿಕೇಯನ್ ಅವರ 'ಪರಾಶಕ್ತಿ' ಜನವರಿ 14ರಂದು ರಿಲೀಸ್‌ ಆಗಲಿದೆ ಎಂಬ ಟಾಕ್‌ ಇತ್ತು. ಆದರೆ ಈಗ ಅದರಲ್ಲಿ ಬದಲಾವಣೆ ಕೇಳಿಬಂದಿದೆ. ಜ.14ರಂದು ರಿಲೀಸ್‌ ಆಗಬೇಕಿತ್ತು ಪರಾಶಕ್ತಿಯನ್ನು ಜನವರಿ 10ರಂದೇ ತೆರೆಕಾಣಿಸಲು ನಿರ್ಮಾಪಕರು ಪ್ಲ್ಯಾನ್‌ ಮಾಡಿದ್ದಾರಂತೆ! ಅಲ್ಲಿಗೆ, ಜನ ನಾಯಗನ್‌ ಚಿತ್ರಕ್ಕೆ ಮರುದಿನವೇ ತಮಿಳಿನ ಮತ್ತೊಂದು ಚಿತ್ರದಿಂದ ಪೈಪೋಟಿ ಎದುರಾಗಲಿದೆಯಾ ಎಂಬ ಮಾತುಗಳು ಕೇಳಿಬಂದಿವೆ.

Rapper Hanumankind: ಕಾಲಿವುಡ್‌ಗೆ ಕಾಲಿಟ್ಟ ಜನಪ್ರಿಯ ರ‍್ಯಾಪರ್ ಹನುಮಾನ್‌ಕೈಂಡ್; ದಳಪತಿ ವಿಜಯ್‌ ಚಿತ್ರಕ್ಕೆ ಧ್ವನಿ

ಹೇಳಿಕೇಳಿ, ಡಿಎಂಕೆ ಪಕ್ಷವನ್ನು ರಾಜಕೀಯವಾಗಿ ಎದುರಿಸಲು ವಿಜಯ್‌ ಅಣಿಯಾಗಿದ್ದಾರೆ. ಪರಾಶಕ್ತಿ ಚಿತ್ರಕ್ಕೆ ಹಣ ಹಾಕಿರುವ ಆಕಾಶ್‌ ಭಾಸ್ಕರನ್‌ ಅವರು ಡಿಎಂಕೆ ಕರುಣಾನಿಧಿ ಫ್ಯಾಮಿಲಿಯ ಸಂಬಂಧಿ. ಹಾಗಾಗಿ, ಜನ ನಾಯಗನ್‌ ಚಿತ್ರಕ್ಕೆ ಅಡ್ಡಿ ಮಾಡಲೆಂದೇ ಈ ರೀತಿ ಮಾಡಲಾಗುತ್ತಿದೆ ಎಂಬ ಟಾಕ್‌ ಕೇಳಿಬಂದಿದೆ. ಆದರೆ ಮಲೇಷ್ಯಾದ ತಮಿಳು ಸಿನಿಮಾಗಳ ವಿತರಕರೊಬ್ಬರು ಈ ಬೆಳವಣಿಗೆಯನ್ನು ಅಲ್ಲಗಳೆದಿದ್ದಾರೆ. ಪರಾಶಕ್ತಿ ಚಿತ್ರವು ಮೊದಲೇ ಹೇಳಿದಂತೆ ಜನವರಿ 14ರಂದೇ ರಿಲೀಸ್‌ ಆಗಲಿದ ಎಂದಿದ್ದಾರೆ. ಸದ್ಯ ಎಲ್ಲದಕ್ಕೂ ಪರಾಶಕ್ತಿ ಚಿತ್ರತಂಡದಿಂದಲೇ ಉತ್ತರ ಸಿಕ್ಕರೆ ಎಲ್ಲಾ ಅಂತೆ ಕಂತೆಗಳಿಗೆ ಫುಲ್‌ ಸ್ಟಾಪ್‌ ಬೀಳಲಿದೆ.