ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಯಾವಾಗ ಸ್ಪಂದನಾ (Spandana Somanna) ಅವರು ಡೇಂಜರ್ ಝೋನ್ ವರೆಗೆ ಹೋಗಿ ಮತ್ತೆ ವಾಪಸ್ ಬಂದ್ರೋ ಅಲ್ಲಿಂದ ಆಕ್ಟಿವ್ ಆಗಿದ್ದಾರೆ. ಇನ್ನು ಮನೆಯವರಿಗೂ ಅಲ್ಲದೇ ವೀಕ್ಷಕರಿಗೂ ಸ್ಪಂದನಾ ಎಲಿಮಿನೇಟ್ (Spandana Eliminate) ಆಗದೇ ಇರೋದು ಶಾಕ್ ತಂದಿದೆ. ಅಷ್ಟೇ ಅಲ್ಲ ಮಾಳು ಹಾಗೂ ಸೂರಜ್ ಕೂಡ ಸಂದರ್ಶನಗಳಲ್ಲಿ ಹೀಗೆ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಜಿಯೋ ಹಾಟ್ಸ್ಟಾರ್ನಲ್ಲಿ (Jio Hotstar) ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಸ್ಪಂದನಾ ತಮಾಷೆಯಾಗಿ ನಮ್ಮ ಮನೆಯಲ್ವಾ..? ಅದಕ್ಕೆ ಕೇಳ್ತಿದ್ದೀರಲ್ವಾ ನನಗೆ ಗೊತ್ತಾಯ್ತು ಎಂದು ತಮಾಷೆಯಾಗಿ ಹೇಳುತ್ತಾರೆ. ಇದೀಗ ವಿಡಿಯೋ ಈಗ ಸಖತ್ ಚರ್ಚೆ ಆಗುತ್ತಿದೆ.
ಸ್ಪಂದನಾ ಕುರಿತ ವಿಡಿಯೋ ವೈರಲ್
ಮಾಳು, ಹಾಗೂ ಸೂರಜ್ ಯಾವಾಗ ಎಲಿಮಿನೇಟ್ ಆದ್ರೋ ಅಲ್ಲಿಂದ ಸ್ಪಂದನಾ ಬಗ್ಗೆ ಚರ್ಚೆಗಳು ಶುರುವಾದವು. ಹಲವು ಮೀಮ್ಸ್ ಪೇಜ್‌ಗಳು ಸ್ಪಂದನಾ ಅವರನ್ನು ಟಾರ್ಗೆಟ್ ಮಾಡಲು ಶುರು ಮಾಡಿದೆ.ಕಲರ್ಸ್ ಕನ್ನಡದ ಮನೆಮಗಳು, ಟ್ರೋಫಿನೂ ಕೊಟ್ಟು ಬಿಡಿ ಅಂತ ನೆಟ್ಟಿಗರು ಕಮೆಂಟ್ ಮಾಡಲು ಶುರು ಮಾಡಿದ್ದರು. ಆದರೀಗ ಸ್ಪಂದನಾ ಕುರಿತ ವಿಡಿಯೋ ವೈರಲ್ ಆಗುತ್ತಿದೆ.
ಇದನ್ನೂ ಓದಿ: Bigg Boss Kannada 12: ʻಗಿಲ್ಲಿ ನೀನೊಬ್ಬ ಜೋಕರ್, ಥರ್ಡ್ ಕ್ಲಾಸ್ʼ! ಮತ್ತೆ ಹಳೆ ಚಾಳಿ ಮುಂದುವರಿಸಿದ ಅಶ್ವಿನಿ
ಜಿಯೋ ಹಾಟ್ಸ್ಟಾರ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಬಿಗ್ ಬಾಸ್ ಮನೆಯಲ್ಲಿ ಯಾಕೆ ಸೆಟಪ್ ಹಾಕಿಸಿಲ್ಲ ಎಂದು ರಘು ಪ್ರಶ್ನೆಯನ್ನು ಕೇಳುತ್ತಾರೆ. ಆಗ ಸ್ಪಂದನಾ ತಮಾಷೆಯಾಗಿ ನಮ್ಮ ಮನೆಯಲ್ವಾ? ಅದಕ್ಕೆ ಕೇಳ್ತಿದ್ದೀರಲ್ವಾ ನನಗೆ ಗೊತ್ತಾಯ್ತು ಎಂದು ತಮಾಷೆಯಾಗಿ ಹೇಳುತ್ತಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೀವು ಹೇಳಿದ್ದು ನೂರಕ್ಕೆ ನೂರು ನಿಜಾ, ''ಬಿಗ್ ಬಾಸ್'' ನಿಮ್ಮ ಮನೆನೇ ಎಂದು ಹೇಳುತ್ತಿದ್ದಾರೆ. ಕೊನೆಗೂ ಸತ್ಯ ಒಪ್ಪಿಕೊಂಡ್ರಲ್ಲ ಎನ್ನುತ್ತಿದ್ದಾರೆ. ಕೆಲವರು ಮತ್ತೆ ಸ್ಪಂದನಾ ಅವರನ್ನು ಈ ವಿಡಿಯೋ ಇಟ್ಟುಕೊಂಡು ಟ್ರೋಲ್ ಮಾಡಿದ್ದಾರೆ.
ಬಿಗ್ ಬಾಸ್‌ನಲ್ಲಿ ಆಟಕೋಸ್ಕರ ವ್ಯಕ್ತಿತ್ವವನ್ನೇ ಬದಲಾಯಿಸಿಕೊಳ್ಳುವವರ ಪೈಕಿ ಎಲ್ಲೂ ಕೂಡ ತನ್ನ ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳದ ವ್ಯಕ್ತಿ ಅಂದ್ರೆ ಅದು ನಮ್ಮ ಸ್ಪಂದನ ಮಾತ್ರ ಆದರಿಂದ ನಮ್ಮ ಮತ ಸ್ಪಂದನ ಅವರಿಗೆ ಅಂತೂ ಕಮೆಂಟ್ ಮಾಡಿದ್ದಾರೆ.
ಬೇರೆ ಸ್ಪರ್ಧಿಗಳಿಗೆ ಹೋಲಿಸಿದರೆ ಸ್ಪಂದನಾ ಸೋಮಣ್ಣ ಅವರು ಹೆಚ್ಚು ಆ್ಯಕ್ಟೀವ್ ಆಗಿಲ್ಲ. ಮೊದಲ ವಾರದಿಂದ 14ನೇ ವಾರದ ತನಕ ಅವರ ಆಟದಲ್ಲಿ ಹೆಚ್ಚಿನ ಬದಲಾವಣೆ ಕಾಣಿಸಿಲ್ಲ. ಆ ಕಾರಣದಿಂದ ಬಹುತೇಕ ಸಂದರ್ಭಗಳಲ್ಲಿ ಅವರನ್ನು ನಾಮಿನೇಟ್ ಮಾಡಲಾಗಿದೆ. ಆದರೂ ಕೂಡ ಅವರು ಪ್ರತಿ ವಾರ ಸೇಫ್ ಆಗಿದ್ದು ಕಂಡು ಬಹುತೇಕರಿಗೆ ಅಚ್ಚರಿ ಆಗಿದ್ದುಂಟು.