ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jana Nayagan : ದಳಪತಿ ವಿಜಯ್ ‘ಜನ ನಾಯಗನ್’ ಸಿನಿಮಾದಿಂದ ಬಿಗ್‌ ಅಪ್‌ಡೇಟ್‌; ಹೊಸ ಪೋಸ್ಟರ್ ಔಟ್‌, ರಿಲೀಸ್‌ ಯಾವಾಗ?

ಇತ್ತೀಚಿನ ಕರೂರ್ (Karoor) ಕಾಲ್ತುಳಿತ ಘಟನೆಯ ನಂತರ ಬಿಡುಗಡೆಯನ್ನು ಮುಂದೂಡಬಹುದು ಎಂಬ ಊಹಾಪೋಹಗಳ ನಡುವೆ ಈ ಅಪ್‌ಡೇಟ್‌ ಬಂದಿದೆ. ರಿಲೀಸ್ ಆದ ಬಳಿಕ ಅಮೆಜಾನ್ ಪ್ರೈಮ್ (Amazon Prime) ವಿಡಿಯೊ ಒಟಿಟಿಯಲ್ಲಿ ಪ್ರಸಾರ ಕಾಣಲಿದೆ. ವಿಜಯ್ (Thalapathy Vijay) ಅವರ ಈ ಕೊನೆಯ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ (KVN Production) ನಿರ್ಮಾಣ ಮಾಡುತ್ತಿದೆ.

thalapathy Vijay
1/7

ದಳಪತಿ ವಿಜಯ್ (Thalapathy Vijay) ಅವರ 'ಜನ ನಾಯಗನ್' ( 'Jana Nayagan' ) ಚಿತ್ರದ ನಿರ್ಮಾಪಕರು ಗುರುವಾರ ಚಿತ್ರದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ವಿಜಯ್ ಅವರ ಕೊನೆಯ ಚಿತ್ರದ ಅಧಿಕೃತ ನಿರ್ಮಾಪಕರಾದ ಕೆವಿಎನ್ ಪಿಕ್ಚರ್ಸ್, ಹೊಸ ಪೋಸ್ಟರ್ ಅನ್ನು ಎಕ್ಸ್ ನಲ್ಲಿ ಟಿಪ್ಪಣಿಯೊಂದಿಗೆ ಪೋಸ್ಟ್ ಮಾಡಿದೆ. ನವೆಂಬರ್ 8 ರಂದು ಮೊದಲ ಸಿಂಗಲ್ ಬಿಡುಗಡೆಯೊಂದಿಗೆ ಚಿತ್ರದ ಪ್ರಚಾರ ಪ್ರಾರಂಭವಾಗಲಿದೆ.

2/7

ನಟ ವಿಜಯ್ ಅವರ ಬಹು ನಿರೀಕ್ಷಿತ ಚಿತ್ರ 'ಜನ ನಾಯಗನ್' ನಿರ್ಮಾಪಕರು ಈ ಮೋದಲೇ ಯೋಜಿಸಿದಂತೆ ಜನವರಿ 9, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದೀಗ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ ಚಿತ್ರತಂಡ. ಇತ್ತೀಚಿನ ಕರೂರ್ ಕಾಲ್ತುಳಿತ ಘಟನೆಯ ನಂತರ ಬಿಡುಗಡೆಯನ್ನು ಮುಂದೂಡಬಹುದು ಎಂಬ ಊಹಾಪೋಹಗಳ ನಡುವೆ ಈ ಅಪ್‌ಡೇಟ್‌ ಬಂದಿದೆ. ಕರೂರು ಘಟನೆಯಿಂದ ಸಿನಿಮಾ ಮುಂದಕ್ಕೆ ಹೋಗಲಿದೆ ಎಂದು ಹೇಳಲಾಗಿತ್ತು. ಇದಕ್ಕೆ ತಂಡದವರು ಸ್ಪಷ್ಟನೆ ಕೊಟ್ಟಿದ್ದಾರೆ.

3/7

ಅಜಿತ್ ಕುಮಾರ್ ಅವರೊಂದಿಗೆ ಮೂರು ಯಶಸ್ವಿ ಚಿತ್ರಗಳಲ್ಲಿ ಕೆಲಸ ಮಾಡಿದ್ದ ಹೆಚ್. ವಿನೋತ್ ನಿರ್ದೇಶನದ ' ಜನ ನಾಯಗನ್' ವಿಜಯ್ ಅವರ ಸಿನಿಮೀಯ ವೃತ್ತಿಜೀವನದಿಂದ ನಿವೃತ್ತಿ ಹೊಂದುವ ಮೊದಲು ಅವರ ಕೊನೆಯ ಚಿತ್ರವಾಗಿರುವುದರಿಂದ ಇದು ಮಹತ್ವದ ಪ್ರಾಜೆಕ್ಟ್‌ ಆಗಿರಲಿದೆ ಎನ್ನಲಾಗುತ್ತಿದೆ.

4/7

ಅಮೆಜಾನ್ ಪ್ರೈಮ್ ವಿಡಿಯೋ ಲೋಗೋವನ್ನು ಸಹ ಹೊಂದಿದೆ. ಹೊಸ ವಿಷಯಗಳಿಗಾಗಿ ಕಾತರದಿಂದ ಕಾಯುತ್ತಿರುವ ವಿಜಯ್ ಅಭಿಮಾನಿಗಳಿಗೆ ಸಂಗೀತ ರಸದೌತಣ ನೀಡುವ ಭರವಸೆ ನೀಡಿ, ಚಿತ್ರದ ಮೊದಲ ಸಿಂಗಲ್ ಅನ್ನು ನವೆಂಬರ್ 8 ರಂದು ಬಿಡುಗಡೆ ಮಾಡುವುದಾಗಿ ಚಲನಚಿತ್ರ ನಿರ್ಮಾಪಕರು ಘೋಷಿಸಿದ್ದಾರೆ.

5/7

ಹಿಂದಿನ ಹಲವಾರು ಪೋಸ್ಟರ್‌ಗಳಂತೆ, ಇದು ಕೂಡ ಅವರನ್ನು ಜನಸಮೂಹದಿಂದ ಸುತ್ತುವರೆದಿದೆ, ನೀಲಿ ಶರ್ಟ್ ಮತ್ತು ಏವಿಯೇಟರ್‌ಗಳಲ್ಲಿ ಕ್ಲಾಸಿಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ನಟ. 'ಜನ ನಾಯಗನ್' ಚಿತ್ರವು ಜನವರಿ 9ರ ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾಗಲಿದೆ.

ಈ ವರ್ಷದ ಆರಂಭದಲ್ಲಿ, ಚಿತ್ರತಂಡವು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿತು, ಅದರಲ್ಲಿ ವಿಜಯ್ ಡೆನಿಮ್ ಶರ್ಟ್ ಮತ್ತು ಕಪ್ಪು ಜೀನ್ಸ್ ಧರಿಸಿ, ಕಾರಿನ ಮೇಲೆ ನಿಂತು ಹರ್ಷೋದ್ಗಾರ ಮಾಡುತ್ತಿರುವ ಜನಸಮೂಹದೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಪೋಸ್‌ ನೀಡಿದ್ದರು.

6/7

ಈ ಸಿನಿಮಾ ಬಳಿಕ ವಿಜಯ್ ಅವರು ರಾಜಕೀಯಕ್ಕೆ ಕಾಲಿಡಲಿದ್ದಾರೆ. ಹೀಗಾಗಿಯೇ ಸಿನಿಮಾನ ರಾಜಕೀಯ ಕಥಾ ಹಂದರದ ಹಿನ್ನೆಲೆಯಲ್ಲಿ ಮಾಡಲಾಗುತ್ತಿದೆ ಎಂದು ವರದಿ ಆಗಿದೆ. ಬಾಬಿ ಡಿಯೋಲ್ ಮತ್ತು ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

7/7

ರಿಲೀಸ್ ಆದ ಬಳಿಕ ಅಮೆಜಾನ್ ಪ್ರೈಮ್ ವಿಡಿಯೊ ಒಟಿಟಿಯಲ್ಲಿ ಪ್ರಸಾರ ಕಾಣಲಿದೆ.ವಿಜಯ್ ಅವರ ಈ ಕೊನೆಯ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ. ಕನ್ನಡದಲ್ಲಿ ಯಶಸ್ವಿಯಾಗಿ ಕೆಲ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕೆವಿಎನ್ ‘ಜನ ನಾಯಗನ್’ ಸಿನಿಮಾ ಮೂಲಕ ತಮಿಳಿಗೆ ಕಾಲಿರಿಸಿದೆ.

Yashaswi Devadiga

View all posts by this author