Jana Nayagan postponed: 'ಜನ ನಾಯಗನ್' ಸಿನಿಮಾ ರಿಲೀಸ್ ಮುಂದೂಡಿಕೆ ; ದಳಪತಿ ವಿಜಯ್ ಫ್ಯಾನ್ಸ್ ಬೇಸರ
Thalapathy Vijay: ದಳಪತಿ ವಿಜಯ್ ಅವರ ಜನ ನಾಯಗನ್ಚಿ ತ್ರವನ್ನು ಅಧಿಕೃತವಾಗಿ (Postponed) ಮುಂದೂಡಲಾಗಿದೆ. ಜನವರಿ 7 ರಂದು ಯುರೋಪ್ ಮತ್ತು ಮಲೇಷ್ಯಾದಲ್ಲಿ ಚಿತ್ರದ ವಿತರಕರು ಬಿಡುಗಡೆಯನ್ನು ರದ್ದುಗೊಳಿಸಲಾಗಿದೆ ಎಂದು X ನಲ್ಲಿ ಘೋಷಿಸಿದ್ದಾರೆ. ಜನವರಿ 9 ರಂದು ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿದ್ದ ಈ ಚಿತ್ರವನ್ನು ಈಗ ಮುಂದೂಡಲಾಗಿದೆ, ತಯಾರಕರು ಇನ್ನೂ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ.
ದಳಪತಿ ವಿಜಯ್ -
ದಳಪತಿ ವಿಜಯ್ (Thalapathy Vijay) ಅವರ ಜನ ನಾಯಗನ್ (Jana Nayagan) ಚಿತ್ರವನ್ನು ಅಧಿಕೃತವಾಗಿ (Postponed) ಮುಂದೂಡಲಾಗಿದೆ. ಜನವರಿ 7 ರಂದು ಯುರೋಪ್ ಮತ್ತು ಮಲೇಷ್ಯಾದಲ್ಲಿ ಚಿತ್ರದ ವಿತರಕರು ಬಿಡುಗಡೆಯನ್ನು ರದ್ದುಗೊಳಿಸಲಾಗಿದೆ ಎಂದು X ನಲ್ಲಿ ಘೋಷಿಸಿದ್ದಾರೆ. ಜನವರಿ 9 ರಂದು ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿದ್ದ ಈ ಚಿತ್ರವನ್ನು ಈಗ ಮುಂದೂಡಲಾಗಿದೆ, ತಯಾರಕರು ಇನ್ನೂ ಹೊಸ ಬಿಡುಗಡೆ (New Release Date) ದಿನಾಂಕವನ್ನು ಘೋಷಿಸಿಲ್ಲ. ಈಗ ಸಿನಿಮಾ ರಿಲೀಸ್ ತಾತ್ಕಲಿಕವಾಗಿ ಮುಂದಕ್ಕೆ ಹೋಗಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.
ಸಿಬಿಎಫ್‌ಸಿ ಅನುಮತಿ ವಿಳಂಬ
ಬಡುಗಡೆಗೆ ಮುಂಚಿತವಾಗಿ ಅಗತ್ಯ ಪ್ರಮಾಣಪತ್ರವನ್ನು ನೀಡಲು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ವಿಫಲವಾದ ನಂತರ ಈ ಮುಂದೂಡಿಕೆ ಮಾಡಲಾಗಿದೆ. ಜನ ನಾಯಗನ್ ಚಿತ್ರಕ್ಕೆ ವಿಷಯವಾಗಿ ಕೆವಿಎನ್ ನಿರ್ಮಾಣ ಸಂಸ್ಥೆ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ. ಸಿನಿಮಾ ತಂಡ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದ್ದು, ಜನವರಿ 9ಕ್ಕೆ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ: Thalapathy Vijay: ಸಿನಿ ಪಯಣಕ್ಕೆ ದಳಪತಿ ವಿಜಯ್ ವಿದಾಯ; ಭಾವುಕರಾಗಿ ಅಭಿಮಾನಿಗಳಿಗೆ ಹೇಳಿದ್ದೇನು?
ಸೆನ್ಸಾರ್ ಮಾಡಿಸಲು ‘ಕೆವಿಎನ್’ ಸಂಸ್ಥೆ ಡಿಸೆಂಬರ್ 18ರಂದೇ ಸಿನಿಮಾ ಸಲ್ಲಿಕೆ ಮಾಡಿತ್ತು. . ಸಿನಿಮಾ ನೋಡಿದ ಮಂಡಳಿ 27 ಕಡೆ ಬದಲವಾಣೆ/ಕಟ್ಗೆ ಸೂಚನೆ ನೀಡಿತ್ತು. ಇದನ್ನು ಸಿನಿಮಾ ಪಾಲಿಸಿತ್ತು. ನಂತರ ಸಿನಿಮಾನ ಮರು ಸಲ್ಲಿಕೆ ಮಾಡಿತ್ತು.
ಮುಂಗಡ ಬುಕಿಂಗ್‌ಗಳು ಪ್ರಾರಂಭ
ವಿಜಯ್ ಅವರ ಚಿತ್ರಕ್ಕೆ ಮುಂಗಡ ಬುಕಿಂಗ್ ಹೆಚ್ಚಾಗಿದೆ. ವಿಪರ್ಯಾಸವೆಂದರೆ, ಜನ ನಾಯಗನ್ ಚಿತ್ರದ ಬಗ್ಗೆ ಉತ್ಸಾಹವು ಉತ್ತುಂಗಕ್ಕೇರುತ್ತಿದ್ದಂತೆಯೇ ಈ ಮುಂದೂಡಿಕೆಯನ್ನು ಘೋಷಿಸಲಾಗಿದೆ.
ತಮಿಳುನಾಡಿನಾದ್ಯಂತ ಈಗಾಗಲೇ ಮುಂಗಡ ಬುಕಿಂಗ್‌ಗಳು ಪ್ರಾರಂಭಗೊಂಡಿದ್ದು, ಟಿಕೆಟ್‌ಗಳಿಗೆ ಅಭೂತಪೂರ್ವ ಬೇಡಿಕೆ ಹುಟ್ಟಿಸಿದೆ. ಮೊದಲ ದಿನದ, ಮೊದಲ ಪ್ರದರ್ಶನದ ಟಿಕೆಟ್‌ಗಳು 5,000 ರೂ.ಗಳವರೆಗೆ ಮಾರಾಟವಾಗಿವೆ ಎಂದು ಹೇಳಲಾಗಿದೆ.
ಇನ್ನು, ಕಳೆದ ವಾರ ಬಿಡುಗಡೆಯಾದ ಜನ ನಾಯಗನ್ ಚಿತ್ರದ ಟ್ರೈಲರ್‌ನಲ್ಲಿ ರಾಜಕೀಯ ಪ್ರೇರಿತ ಸಂಭಾಷಣೆಗಳಿರುವ ಸ್ಪಷ್ಟ ಸುಳಿವು ಸಿಕ್ಕಿತ್ತು.
ಇದನ್ನೂ ಓದಿ: ವಿಜಯ್ ನಟನೆಯ ಕೊನೆಯ ಚಿತ್ರ ʻಜನ ನಾಯಗನ್ʼಗೆ ಬಾಲಯ್ಯ ಸಿನಿಮಾವೇ ಸ್ಪೂರ್ತಿ; ಆದರೆ 'ದಳಪತಿ' ಕೊಟ್ಟ ಟ್ವಿಸ್ಟ್ ಏನ್ ಗೊತ್ತಾ?
ವಿನೋತ್ ನಿರ್ದೇಶನ ಹಾಗೂ ವೆಂಕಟ್ ಕೆ ನಾರಾಯಣ ನಿರ್ಮಾಣದಲ್ಲಿ ಮೂಡಿಬರುತ್ತಿರುವ ವಿಜಯ್ ಅಭಿನಯದ ಕೊನೆಯ ಚಿತ್ರ 'ಜನ ನಾಯಗನ್'ನಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದರೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ಪ್ರಿಯಾಮಣಿ ಮತ್ತು ನರೇನ್ ಸೇರಿದಂತೆ ಘಟಾನುಘಟಿ ಕಲಾವಿದರ ಬಳಗ ಇದೆ.