ವಿಜಯ್ ನಟನೆಯ ಕೊನೆಯ ಚಿತ್ರ ʻಜನ ನಾಯಗನ್ʼಗೆ ಬಾಲಯ್ಯ ಸಿನಿಮಾವೇ ಸ್ಪೂರ್ತಿ; ಆದರೆ 'ದಳಪತಿ' ಕೊಟ್ಟ ಟ್ವಿಸ್ಟ್ ಏನ್ ಗೊತ್ತಾ?
Thalapathy Vijay Jana Nayagan Trailer: ವಿಜಯ್ ಅವರ ಕೊನೇ ಚಿತ್ರ 'ಜನ ನಾಯಗನ್' ಟ್ರೇಲರ್ ಶನಿವಾರ ಬಿಡುಗಡೆಯಾಗಿ ಯುಟ್ಯೂಬ್‌ನಲ್ಲಿ ಸುನಾಮಿ ಎಬ್ಬಿಸಿದೆ. ಈ ಚಿತ್ರವು ತೆಲುಗಿನ 'ಭಗವಂತ್ ಕೇಸರಿ' ಚಿತ್ರದ ರಿಮೇಕ್ ಎಂಬ ವಿಚಾರ ಚರ್ಚೆ ಆಗಿತ್ತು. ಅದಕ್ಕಿಲ್ಲಿ ಉತ್ತರ ಸಿಕ್ಕಿದೆ.
-
ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ʻಜನ ನಾಯಗನ್ʼ ಟ್ರೇಲರ್ ಶನಿವಾರ ಸಂಜೆ ಬಿಡುಗಡೆಯಾಗಿದ್ದು, ದೊಡ್ಡ ಸಂಚಲನ ಮೂಡಿಸಿದೆ. ಬಿಡುಗಡೆಯಾದ ಕೇವಲ 5 ನಿಮಿಷಗಳಲ್ಲಿ 5 ಮಿಲಿಯನ್‌ಗೂ ಹೆಚ್ಚು ರಿಯಲ್ ಟೈಮ್ ವೀಕ್ಷಣೆಗಳನ್ನು ಪಡೆಯುವ ಮೂಲಕ ಈ ಟ್ರೇಲರ್ ಹೊಸ ಇತಿಹಾಸ ಸೃಷ್ಟಿಸಿದೆ. ಇದರ ಮಧ್ಯೆ ಈ ಚಿತ್ರವು ನಂದಮೂರಿ ಬಾಲಯ್ಯ ನಟನೆಯ ʻಭಗವಂತ್ ಕೇಸರಿʼ ಸಿನಿಮಾದ ರಿಮೇಕ್ ಎಂಬ ವಿಚಾರಕ್ಕೂ ಉತ್ತರ ಸಿಕ್ಕಿದೆ.
ಟ್ರೇಲರ್ ಹೇಗಿದೆ?
2 ನಿಮಿಷ 52 ಸೆಕೆಂಡುಗಳ ಈ ಟ್ರೇಲರ್ ಅದ್ಭುತ ಆಕ್ಷನ್, ಸಂಗೀತ ಮತ್ತು ಭಾವನಾತ್ಮಕ ಸನ್ನಿವೇಶಗಳಿಂದ ಕೂಡಿದೆ. ಪ್ರೇಕ್ಷಕರು ಚಿತ್ರದ ಭರ್ಜರಿ ಮೇಕಿಂಗ್ ಮತ್ತು ವಿಜಯ್ ಅವರ ಸ್ವಾಗ್‌ಗೆ ಫಿದಾ ಆಗಿದ್ದು, ಇದೊಂದು ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೇನರ್ ಆಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 'ಜನ ನಾಯಗನ್' ಚಿತ್ರವು ಜನವರಿ 9 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು ದಳಪತಿ ವಿಜಯ್ ಅವರ ವೃತ್ತಿಜೀವನದ ಕೊನೆಯ ಚಿತ್ರವಾಗಿರುವುದರಿಂದ, ಅಭಿಮಾನಿಗಳಲ್ಲಿ ಈ ಸಿನಿಮಾ ಬಗ್ಗೆ ಎಮೋಷನಲ್ ಆಗಿದ್ದಾರೆ.
ಇದು ರಿಮೇಕಾ? ಸ್ವಮೇಕಾ?
ಇನ್ನು, ಜನ ನಾಯಗನ್ ಸಿನಿಮಾವು ತೆಲುಗಿನ ಭಗವಂತ್ ಕೇಸರಿ ರಿಮೇಕ್ ಎಂಬ ವಿಚಾರ ಆರಂಭದಿಂದಲೂ ಕೇಳಿಬಂದಿತ್ತು. ಆದರೆ ಚಿತ್ರತಂಡ ಆ ಬಗ್ಗೆ ಏನೂ ಹೇಳಿರಲಿಲ್ಲ. ಆದರೆ ಇದೀಗ ಟ್ರೇಲರ್‌ನಿಂದ ಎಲ್ಲದಕ್ಕೂ ಉತ್ತರ ಸಿಕ್ಕಿದೆ. ನಂದಮೂರಿ ಬಾಲಕೃಷ್ಣ ಅವರ ಭಗವಂತ್ ಕೇಸರಿ ಚಿತ್ರದ ಭಾಗಶಃ ರಿಮೇಕ್ ಆಗಿರುವ ಜನ ನಾಯಗನ್, ಒಂದಷ್ಟು ಹೊಸ ವಿಚಾರಗಳನ್ನು ಒಳಗೊಂಡಿದೆ. ಜನ ನಾಯಗನ್‌ನಲ್ಲಿ ರಾಜಕೀಯಕ್ಕೆ ಮಹತ್ವ ನೀಡಲಾಗಿದೆ. ಇನ್ನುಳಿದಂತೆ ಸ್ತ್ರೀ ಸಬಲಿಕರಣ ಮುಂತಾದ ವಿಚಾರಗಳನ್ನು ಭಗವಂತ್ ಕೇಸರಿಯಿಂದ ಎರವಲು ಪಡೆಯಲಾಗಿದೆ. ಆದರೂ ಥಿಯೇಟರ್‌ನಲ್ಲಿ ಬೇರೆಯದೇ ಅನುಭವ ನೀಡೋದಾಗಿ ಜನ ನಾಯಗನ್ ಟೀಮ್ ಆತ್ಮವಿಶ್ವಾಸದಿಂದ ಹೇಳಿಕೊಂಡಿದೆ.
Thalapathy Vijay: ದಳಪತಿ ವಿಜಯ್ ಕೊನೆಯ ಸಿನಿಮಾ 'ಜನ ನಾಯಗನ್' ಚಿತ್ರದಲ್ಲಿ ನಟಿಸಲಿದ್ದಾರೆ ಈ ಖ್ಯಾತ ನಿರ್ದೇಶಕರು
ನಿರ್ಮಾಪಕರು ಹೇಳೋದೇನು?
"ಮಲೇಷ್ಯಾದಲ್ಲಿ ನಡೆದ ಆಡಿಯೋ ಲಾಂಚ್‌ಗೆ ಸಿಕ್ಕ ಅಭೂತಪೂರ್ವ ಸ್ಪಂದನೆಯೇ ವಿಜಯ್ ಸರ್ ಮತ್ತು ಅವರ ಅಭಿಮಾನಿಗಳ ನಡುವಿನ ಬಾಂಧವ್ಯಕ್ಕೆ ಸಾಕ್ಷಿ. ಮಲೇಷ್ಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ನಮ್ಮ ಚಿತ್ರ ಸೇರ್ಪಡೆಯಾಗಿರುವುದು ಹೆಮ್ಮೆಯ ವಿಷಯ. ಈಗ ಟ್ರೇಲರ್ ಸೃಷ್ಟಿಸಿರುವ ಈ ಅಬ್ಬರವು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಜನವರಿ 9 ರಂದು ಈ ಚಿತ್ರವನ್ನು ವಿಶ್ವದಾದ್ಯಂತ ಪ್ರೇಕ್ಷಕರ ಮುಂದೆ ತರಲು ನಾವು ಉತ್ಸುಕರಾಗಿದ್ದೇವೆ" ಎಂದು ನಿರ್ಮಾಪಕ ವೆಂಕಟ್ ಕೆ. ನಾರಾಯಣ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ
Trailer cut ❌
— Tonystark🐉 (@Tonystark2409) January 3, 2026
Trailer copy paste ✅
pic.twitter.com/1ju3ZssKiL
ಈ ಚಿತ್ರದಲ್ಲಿ ದಳಪತಿ ವಿಜಯ್ ಅವರೊಂದಿಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ಪ್ರಿಯಾಮಣಿ ಮುಂತಾದ ಕಲಾವಿದರ ದಂಡೇ ಇದೆ. ಎಚ್. ವಿನೋದ್ ನಿರ್ದೇಶನದ ಈ ಚಿತ್ರಕ್ಕೆ ಸತ್ಯನ್ ಸೂರ್ಯನ್ ಛಾಯಾಗ್ರಹಣ ಮಾಡಿದ್ದು, ಅನಿರುದ್ಧ್ ಸಂಗೀತ ನೀಡಿದ್ದಾರೆ.