14 ವಾರಗಳು, ವಿನೂತನ ಟಾಸ್ಕ್‌ಗಳು, ಭರಪೂರ ಮನರಂಜನೆ, ಭಾವುಕತೆಯ ಕ್ಷಣಗಳನ್ನು ಹೊಂದಿದ್ದ ‘ಜೋಡಿ ನಂ 1’ (Jodi Number 1) ರಿಯಾಲಿಟಿ ಶೋ ಇದೇ ಜುಲೈ 11 ಮತ್ತು 12ರಂದು ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನೆರವೇರಿದೆ. ಇಲ್ಲಿ 30 ವರ್ಷದ ಸಾರ್ಥಕತೆಯ ದಾಂಪತ್ಯದ ಜೋಡಿ, 16 ವರ್ಷಗಳ ದಾಂಪತ್ಯದ ಅದ್ದೂರಿ ಜೋಡಿ, 10 ವರ್ಷಗಳ ಸಾಮರಸ್ಯವನ್ನ ಕಂಡಂತ ವಿನೂತನ ಜೋಡಿಗಳ ಜೊತೆಗೆ ಈಗಷ್ಟೇ ದಾಂಪತ್ಯಕ್ಕೆ ಕಾಲಿಟ್ಟ 3 ತಿಂಗಳ ಜೋಡಿಗಳೊಂದಿಗೆ ಶುರುವಾದ ಸಂಭ್ರಮದ ಕಾರ್ಯಕ್ರಮ ಜೋಡಿ ನಂ 1. ವಿನ್ನರ್ (Winner) ಆಗಿ ಕೋಟೆ ಪ್ರಭಾಕರ್ - ಮಾಲತಿ ದಂಪತಿ ಹೊರಹೊಮ್ಮಿದ್ದಾರೆ.
‘ಜೋಡಿ ನಂ 1’ ಕಾರ್ಯಕ್ರಮದ ಮೊದಲ ರನ್ನರ್ ಅಪ್ ಆಗಿ ಧನರಾಜ್ ಆಚಾರ್ - ಪ್ರಜ್ಞಾ ದಂಪತಿ ಹೊರಹೊಮ್ಮಿದ್ದಾರೆ. ಎರಡನೇ ರನ್ನರ್ ಅಪ್ ಸ್ಥಾನ ಪಡೆದವರು ನಯನ ನಾಗರಾಜ್ - ಸುಹಾಸ್ ದಂಪತಿ.
ಇದನ್ನೂ ಓದಿ: Ramya Krishnan: 'ಕ್ವೀನ್' ಆದ ರಮ್ಯಾ ಕೃಷ್ಣನ್! ಈ ಪಾತ್ರದ ಮೂಲಕ ಮತ್ತೆ ತೆರೆಗೆ
ಬಹುಮಾನ ಸಿಕ್ಕಿದ್ದೇನು?
30 ವರ್ಷಗಳಿಂದ ಅನ್ಯೋನ್ಯವಾಗಿ ದಾಂಪತ್ಯ ಜೀವನವನ್ನ ಸಾಗಿಸುತ್ತಾ ಬಂದಿರುವ ಕೋಟೆ ಪ್ರಭಾಕರ್ - ಮಾಲತಿ ದಂಪತಿ ‘ಜೋಡಿ ನಂ 1’ ಕಾರ್ಯಕ್ರಮದಲ್ಲಿ ವಿಜೇತರಾಗಿದ್ದಾರೆ. 5 ಲಕ್ಷ ರೂಪಾಯಿ ಬಹುಮಾನ ಹಣ ಸಿಕ್ಕಿದೆ. ಹಾಗೇ, ವಿನ್ನರ್ ಟ್ರೋಫಿ ಸಿಕ್ಕಿದೆ.
ಮೊದಲ ರನ್ನರ್ ಅಪ್ ಆಗಿ ಧನರಾಜ್ ಆಚಾರ್ - ಪ್ರಜ್ಞಾ ದಂಪತಿಗೆ ಜೀ ಕನ್ನಡ ವಾಹಿನಿ ವತಿಯಿಂದ 3 ಲಕ್ಷ ರೂಪಾಯಿ ಬಹುಮಾನ ಹಣ ಲಭಿಸಿದೆ. ಎರಡನೇ ರನ್ನರ್ ಅಪ್ ಸ್ಥಾನ ಪಡೆದವರು ನಯನ ನಾಗರಾಜ್ - ಸುಹಾಸ್ ದಂಪತಿಗೆ ಜೀ ಕನ್ನಡ ವಾಹಿನಿ ವತಿಯಿಂದ 2 ಲಕ್ಷ ರೂಪಾಯಿ ಬಹುಮಾನ ಹಣ ಸಿಕ್ಕಿದೆ.
ನಾನು ಬರೋಕೆ ಕಾರಣ ನನ್ನ ಮಗಳು. ಅವಳು ಸ್ಫೂರ್ತಿ ಕೊಟ್ಟಿದ್ದಕ್ಕೆ ನಾನು ಇಲ್ಲಿಗೆ ಬಂದೆ. ಇಲ್ಲಾಂದ್ರೆ ನಾನು ಬರುತ್ತಿರಲಿಲ್ಲ ಕೋಟೆ ಪ್ರಭಾಕರ್ ಈ ವೇಳೆ ಹೇಳಿಕೊಂಡರು.
ಮಾಳವಿಕ ಅವಿನಾಶ್, ಲವ್ಲಿ ಸ್ಟಾರ್ ಪ್ರೇಮ್, ರಾಜೇಶ್ ನಟರಂಗ, ಛಾಯಾಸಿಂಗ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಕುರಿ ಪ್ರತಾಪ್ ಹಾಗು ಶ್ವೇತಾ ಚೆಂಗಪ್ಪ ಈ ಶೋ ನಿರೂಪಕರು.
ಇದನ್ನೂ ಓದಿ: Daali Dhananjay: ‘ಮದರ್ ಪ್ರಾಮಿಸ್’ ಸಿನಿಮಾ ಬಗ್ಗೆ ಕೆಟ್ಟ ಪ್ರಚಾರ; ಡಾಲಿ ಧನಂಜಯ್ ಬೇಸರ
ಅಭಿಲಾಷ್ - ಅಪೂರ್ವ, ಕೋಟೆ ಪ್ರಭಾಕರ್ - ಮಾಲತಿ, ಗೀತಾ ಭಾರತಿ ಭಟ್- ರಾಜಾರಾಮ್ ಭಟ್, ರಜಿನಿ ಹಾಗು ಅರುಣ್, ರುದ್ರ ಮಾಸ್ಟರ್ - ನಿರೀಕ್ಷಾ, ಮಿಮಿಕ್ರಿ ಗೋಪಿ - ಉಷಾರಾಣಿ, ಧನರಾಜ್ - ಪ್ರಜ್ಞಾ, ಜಗಪ್ಪ - ಸುಶ್ಮಿತಾ, ಬಾಳು ಬೆಳಗುಂದಿ - ಮಾಲಾಶ್ರೀ, ನಯನ - ಸುಹಾಸ್ ಜೋಡಿ ಸ್ಪರ್ಧಿಗಳಾಗಿದ್ದರು.