ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸದ್ದಿಲ್ಲದೇ ʻಕೆಡಿʼ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ʻಜೋಗಿʼ ಪ್ರೇಮ್;‌ ಧ್ರುವ ಸರ್ಜಾ ಫ್ಯಾನ್ಸ್‌ಗೆ ಬಿಗ್‌ ಸರ್ಪ್ರೈಸ್‌

‌KD The Devil Movie Release Updates: ಧ್ರುವ ಸರ್ಜಾ ಅಭಿನಯದ 'ಕೆಡಿ: ದಿ ಡೆವಿಲ್' ಸಿನಿಮಾದ ಬಿಡುಗಡೆ ದಿನಾಂಕ ಸದ್ದಿಲ್ಲದೆ ಘೋಷಣೆಯಾಗಿದೆ. ಇಂದು ರಿಲೀಸ್‌ ಆದ 'ಅಣ್ತಮ್ಮ ಜೋಡೆತ್ತು ಕಣೋ' ಎಂಬ ಹಾಡಿನಲ್ಲಿ ಈ ಸರ್ಪ್ರೈಸ್‌ ರಿವೀಲ್ ಮಾಡಲಾಗಿದೆ.

ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮದ ನಡುವೆಯೇ ನಟ ಧ್ರುವ ಸರ್ಜಾ ಅವರ ಅಭಿಮಾನಿಗಳಿಗೆ ಬಿಗ್‌ ಸರ್ಪ್ರೈಸ್‌ ಒಂದು ಸಿಕ್ಕಿದೆ. ನಿರ್ದೇಶಕ ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಜೋಡಿಯ ಬಹುನಿರೀಕ್ಷಿತ 'ಕೆಡಿ: ದಿ ಡೆವಿಲ್' (KD - The Devil) ಸಿನಿಮಾದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದ್ದು, ಇದರ ಜೊತೆಗೆ ಕಿಚ್ಚು ಹಚ್ಚುವಂತಹ ಹೊಸ ಹಾಡೊಂದು ಬಿಡುಗಡೆಯಾಗಿದೆ. 

ಕೆಡಿ ಯಾವಾಗ ರಿಲೀಸ್?‌

ಹಲವು ಸಮಯದಿಂದ ಕೆಡಿ ಸಿನಿಮಾ ಯಾವಾಗ ರಿಲೀಸ್‌ ಆಗಲಿದೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಲೇ ಇತ್ತು. ಆದರೆ ಚಿತ್ರತಂಡ ಯಾವುದೇ ಮಾಹಿತಿ ನೀಡಿರಲಿಲ್ಲ. ಇದೀಗ ಈ ಚಿತ್ರ ಯಾವಾಗ ರಿಲೀಸ್ ಆಗಲಿದೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಚಿತ್ರತಂಡವು 2026ರ ಏಪ್ರಿಲ್ 30 ರಂದು ಕೆಡಿ ಸಿನಿಮಾವನ್ನು ತೆರೆಗೆ ತರಲು ಸಜ್ಜಾಗಿದೆ. ಇಂದು (ಡಿ.26) ರಿಲೀಸ್‌ ಆಗಿರುವ ಹೊಸ ಹಾಡಿನೊಂದಿಗೆ ಸೈಲೆಂಟ್‌ ಆಗಿಯೇ ಸಿನಿಮಾ ರಿಲೀಸ್‌ ಡೇಟ್‌ ಅನ್ನು ಅನೌನ್ಸ್‌ ಮಾಡಿದೆ ಕೆಡಿ ಟೀಮ್. ಅಲ್ಲಿಗೆ ಈ ಚಿತ್ರ ತೆರೆಗೆ ಬರಲು ಅಭಿಮಾನಿಗಳು ಇನ್ನೂ 4 ತಿಂಗಳು ಕಾಯಬೇಕಿದೆ.

Dhruva Sarja: ʻಕೆಡಿʼ ಬಳಿಕ ʻಕ್ರಿಮಿನಲ್ʼ ಆದ ಧ್ರುವ ಸರ್ಜಾ; ಅದ್ದೂರಿಯಾಗಿ ಲಾಂಚ್‌ ಆಯ್ತು ಹೊಸ ಸಿನಿಮಾ!

ಅಣ್ಣ-ತಮ್ಮಂದಿರ ಬಾಂಧವ್ಯದ 'ಅಣ್ತಮ್ಮ ಜೋಡೆತ್ತು'

ಸದ್ಯ ಈಗ ರಿಲೀಸ್‌ ಆಗಿರುವ 'ಅಣ್ತಮ್ಮ ಜೋಡೆತ್ತು' ಹಾಡು ಜೋಗಿ ಪ್ರೇಮ್ ಅವರ ಕಂಠದಲ್ಲಿ ಮೂಡಿಬಂದಿದ್ದು, ಸದ್ಯ ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಈ ಹಿಂದೆ ತಾಯಿ ಸೆಂಟಿಮೆಂಟ್ ಹಾಡುಗಳು ಮೂಲಕ ಕಮಾಲ್ ಮಾಡಿದ್ದ ಪ್ರೇಮ್, ಈಗ ಅಣ್ಣ-ತಮ್ಮಂದಿರ ಬಾಂಧವ್ಯವನ್ನು ಈ ಹಾಡಿನ ಮೂಲಕ ಸಾರಿದ್ದಾರೆ. ಮಂಜುನಾಥ್ ಬಿ.ಎಸ್. ಅವರ ಸಾಹಿತ್ಯ ಮತ್ತು ಅರ್ಜುನ್ ಜನ್ಯ ಅವರ ಸಂಗೀತವಿರುವ ಈ ಹಾಡನ್ನು ವಿವಿಧ ಭಾಷೆಯಲ್ಲಿ ಬೇರೆ ಬೇರೆ ಗಾಯಕರು ಹಾಡಿದ್ದಾರೆ. 

ಕೆವಿಎನ್ (KVN) ಸಂಸ್ಥೆ ನಿರ್ಮಿಸುತ್ತಿರುವ ಈ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡದ ಹಾಡಿಗೆ ಪ್ರೇಮ್ ಧ್ವನಿ ನೀಡಿದ್ದರೆ, ಹಿಂದಿಯಲ್ಲಿ ಜಾವೇದ್ ಅಲಿ, ತೆಲುಗು ಮತ್ತು ತಮಿಳಿನಲ್ಲಿ ಸಿದ್‌ ಶ್ರೀರಾಮ್ ಹಾಗೂ ಮಲಯಾಳಂನಲ್ಲಿ ವಿಜಯ್ ಅವರ ಧ್ವನಿಯಲ್ಲಿ ಈ ಹಾಡು ಹೊರಬಂದಿದೆ. ಈಗಾಗಲೇ 'ಶಿವ ಶಿವ' ಮತ್ತು 'ಸೆಟ್ಟಗಲ್ಲಾ ಹೋಗೆ' ಹಾಡುಗಳ ಮೂಲಕ ಸದ್ದು ಮಾಡಿದ್ದ ಕೆಡಿ ಚಿತ್ರತಂಡ, ಈಗ ಈ ಮೂರನೇ ಹಾಡಿನ ಮೂಲಕ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

ಇನ್ನು, ಈ ಸಿನಿಮಾದಲ್ಲಿ ಬಾಲಿವುಡ್‌ ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ ಹಾಗೂ ಕನ್ನಡದ ರವಿಚಂದ್ರನ್, ರಮೇಶ್ ಅರವಿಂದ್ ಮತ್ತು ರೀಷ್ಮಾ ನಾಣಯ್ಯ ಮುಂತಾದವರು ನಟಿಸಿದ್ದಾರೆ. ನೋರಾ ಫತೇಹಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ.