ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

'ಜೈಲರ್ 2' ಸೆಟ್‌ಗೆ `ಕಿಂಗ್ ಖಾನ್' ಎಂಟ್ರಿ: ʻತಲೈವಾʼ ರಜನಿಕಾಂತ್ ಜೊತೆ ಖಾಕಿ ಅವತಾರದಲ್ಲಿ ಶಾರುಖ್ ಖಾನ್ ಅಬ್ಬರ!

Shah Rukh Khan In Jailer: ರಜನಿಕಾಂತ್ ಅವರ 'ಜೈಲರ್' ಸೀಕ್ವೆಲ್‌ನಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸುವುದು ಬಹುತೇಕ ಅಧಿಕೃತವಾಗಿದೆ. ಚಿತ್ರದಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಲಿದ್ದು, ಶಿವರಾಜ್‌ಕುಮಾರ್, ಮೋಹನ್‌ಲಾಲ್ ಮತ್ತು ಎಸ್‌ಜೆ ಸೂರ್ಯ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

Rajinikanth: ʻಜೈಲರ್ 2ʼ ಸಿನಿಮಾದಲ್ಲಿ ಪೊಲೀಸ್‌ ಅಧಿಕಾರಿಯಾದ ಶಾರುಖ್‌

-

Avinash GR
Avinash GR Mar 10, 2026 1:05 PM

ʻಸೂಪರ್‌ ಸ್ಟಾರ್‌ʼ ರಜನಿಕಾಂತ್‌ ನಟನೆಯ ಬಹುನಿರೀಕ್ಷಿತ ʻಜೈಲರ್‌ 2ʼ ಸಿನಿಮಾದ ಶೂಟಿಂಗ್‌ ಬಿರುಸಿನಿಂದ ಸಾಗುತ್ತಿದ್ದು, ಆಗಸ್ಟ್‌ ವೇಳೆಗೆ ಸಿನಿಮಾವನ್ನು ತೆರೆಗೆ ತರುವುದಕ್ಕೆ ಚಿತ್ರತಂಡ ಪ್ಲ್ಯಾನ್‌ ಮಾಡಿಕೊಂಡಿದೆ. ಇದರ ನಡುವೆ ಸಿನಿಮಾದ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸುತ್ತಿದ್ದಾರೆ ನಿರ್ದೇಶಕ ನೆಲ್ಸನ್‌ ದಿಲೀಪ್‌ ಕುಮಾರ್.‌ ಅಂದಹಾಗೆ, ಈ ಸಿನಿಮಾದಲ್ಲಿ ಶಾರುಖ್‌ ಖಾನ್‌ ನಟಿಸಲಿದ್ದಾರೆ ಎಂಬ ಟಾಕ್‌ ಬಹಳ ದಿನಗಳಿಂದ ಕೇಳಿಬರುತ್ತಿತ್ತು. ಇದೀಗ ಅದಕ್ಕೆ ಮುಹೂರ್ತ ಕೂಡಿಬಂದಿದ್ದು, ಈ ಚಿತ್ರದಲ್ಲಿ ಅವರು ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಶಾರುಖ್‌ ಖಾನ್‌ ಸೀನ್‌ಗಳ ಶೂಟಿಂಗ್‌

ನಟ ರಜನಿಕಾಂತ್ ಈಗಾಗಲೇ ‘ಜೈಲರ್ 2’ ಚಿತ್ರದಲ್ಲಿನ ತಮ್ಮ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಆದರೆ ಶಾರುಖ್ ಖಾನ್ ಅವರ ದೃಶ್ಯಗಳ ಚಿತ್ರೀಕರಣ ಬಾಕಿ ಇದೆ. ವರದಿಗಳ ಪ್ರಕಾರ, ಶಾರುಖ್ ಅವರ ಭಾಗದ ಚಿತ್ರೀಕರಣಕ್ಕಾಗಿ ಒಂದು ವಾರ ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಬೇಕಾಗಬಹುದು. ಆ ನಂತರ ಚಿತ್ರತಂಡವು ಸಂಪೂರ್ಣ ಚಿತ್ರೀಕರಣಕ್ಕೆ ಮುಕ್ತಾಯ ಹಾಡಲಿದೆ ಎಂಬ ಮಾಹಿತಿ ಸಿಕ್ಕಿದೆ.

Jailer 2 Movie: 'ಜೈಲರ್‌ 2' ಚಿತ್ರದಿಂದ ಹೊರಬಿತ್ತು ಬಿಗ್‌ ಅಪ್‌ಡೇಟ್‌; ರಜನಿಕಾಂತ್‌ ಮಗಳ ಪಾತ್ರಕ್ಕೆ ಕನ್ನಡತಿ ಆಯ್ಕೆ?

ಶಾರುಖ್‌ ಖಾನ್‌ ಅವರು ಪೊಲೀಸ್‌ ಅಧಿಕಾರಿಯಾಗಿಯೇ ತೆರೆಮೆಲೆ ಕಾಣಿಸಿಕೊಳ್ಳಲಿದ್ದು, ಅವರೊಂದಿಗೆ ಶಿವರಾಜ್‌ಕುಮಾರ್‌, ಎಸ್‌ಜೆ ಸೂರ್ಯ, ಮೋಹನ್‌ಲಾಲ್‌ ಕೂಡ ಒಟ್ಟಿಗೆ ತೆರೆಮೇಲೆ ಮಿಂಚಲಿದ್ದಾರಂತೆ. ರಜನಿಕಾಂತ್‌ ಕೂಡ ಈ ಸೀನ್‌ಗಳ ಶೂಟಿಂಗ್‌ನಲ್ಲಿ ಭಾಗಿಯಾಗುವ ಸಾಧ್ಯತೆ ಇದೆಯಂತೆ.

ರಾ ಒನ್‌ ಸಿನಿಮಾದಲ್ಲಿ ನಟಿಸಿದ್ದ ರಜನಿ

ಶಾರುಖ್‌ ಖಾನ್‌ ನಟಿಸಿ, ನಿರ್ಮಾಣ ಮಾಡಿದ್ದ ʻರಾ-ಓನ್‌ʼ ಸಿನಿಮಾದಲ್ಲಿ ರೋಬೋ ಚಿಟ್ಟಿಯಾಗಿ ರಜನಿಕಾಂತ್‌ ಕೆಲ ನಿಮಿಷಗಳ ಅತಿಥಿ ಪಾತ್ರವನ್ನು ನಿಭಾಯಿಸಿದ್ದರು. ಇದೀಗ ರಜನಿಕಾಂತ್‌ ಅವರ ಸಿನಿಮಾಕ್ಕಾಗಿ ಶಾರುಖ್‌ ಖಾನ್‌ ಎಂಟ್ರಿ ಕೊಟ್ಟಿರುವುದು ವಿಶೇಷ. ಈ ಹಿಂದೆ ʻಕೂಲಿʼ ಚಿತ್ರದಲ್ಲಿ ಆಮಿರ್‌ ಖಾನ್‌ ಅವರು ಅತಿಥಿ ಪಾತ್ರ ಮಾಡಿದ್ದರು. ಈಗ ಶಾರುಖ್‌ ಸರದಿ. ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಜೈಲರ್‌ 2 ಸಿನಿಮಾವು ನಿರೀಕ್ಷೆಯನ್ನು ಹೆಚ್ಚು ಮಾಡುತ್ತಿದೆ.

Jailer 2 Movie: ಮತ್ತೊಮ್ಮೆ ಆ್ಯಕ್ಷನ್‌ ಅವತಾರದಲ್ಲಿ ರಜನಿಕಾಂತ್‌; 'ಜೈಲರ್‌ 2' ಚಿತ್ರದ ಟೀಸರ್‌ ಔಟ್‌

ರಜನಿಕಾಂತ್ ಮತ್ತೆ 'ಟೈಗರ್' ಮುತ್ತುವೇಲ್ ಪಾಂಡಿಯನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ರಮ್ಯಾ ಕೃಷ್ಣನ್ ಅವರು ರಜನಿಕಾಂತ್ ಪತ್ನಿಯ ಪಾತ್ರದಲ್ಲಿ ಮುಂದುವರಿಯಲಿದ್ದಾರೆ. ನರಸಿಂಹ ಪಾತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಈ ಸೀಕ್ವೆಲ್‌ನಲ್ಲಿಯೂ ಮಿಂಚಲಿದ್ದಾರೆ.

ಈ ಬಾರಿ ಈ ಚಿತ್ರಕ್ಕೆ ಜತಿನ್ ಸರ್ನಾ, ಮಿಥುನ್ ಚಕ್ರವರ್ತಿ, ಸಂತಾನಂ, ಸೂರಜ್ ವೆಂಜಾರಮೂಡು, ವಿಜಯ್ ಸೇತುಪತಿ, ಮೇಘನಾ ರಾಜ್ ಸರ್ಜಾ ಮತ್ತು ಅನ್ನಾ ರಾಜನ್ ಸೇರ್ಪಡೆಗೊಂಡಿದ್ದಾರೆ. ಅಲ್ಲದೆ, ನೋರಾ ಫತೇಹಿ ಅವರ ಐಟಂ ಸಾಂಗ್‌ ಈ ಚಿತ್ರದಲ್ಲಿ ಇರಲಿದೆ ಎಂಬ ಗುಸುಗುಸು ಕೇಳಿಬರುತ್ತಿದೆ.