ಟೈಗರ್ ಜೂನಿಯರ್ ಎನ್‌ಟಿಆರ್ (Junior NTR) ಅವರು ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದರು. ಬೆಂಗಳೂರಿನ ಮಹದೇವಪುರದಲ್ಲಿ ನಿರ್ಮಾಣವಾಗಿರುವ ಕಿಮ್ಸ್ (KIMS) ಆಸ್ಪತ್ರೆಯ ಉದ್ಘಾಟನಾ ಸಮಾರಂಭಕ್ಕೆ ಎನ್‌ಟಿಆರ್ ಅವರನ್ನು ವಿಶೇಷ ಅತಿಥಿಯನ್ನಾಗಿ ಕರೆಸಲಾಗಿತ್ತು. ಕನ್ನಡದಲ್ಲೇ ತಮ್ಮ ಭಾಷಣ ಮಾಡಿ ಕನ್ನಡ ನೆಲದ ಬಗ್ಗೆ ಕೊಂಡಾಡಿದ್ದಾರೆ.ರಜೆಯ ಮಜಾ ಕಳೆಯಲು ಮಕ್ಕಳು ಊರಿಗೆ ಬಂದಂತಹ ಅನುಭವವಾಗುತ್ತದೆ. ಈ ಕಾರಣಕ್ಕಾಗಿಯೇ ಕರ್ನಾಟಕ (Karnataka) ನನಗೆ ಯಾವಾಗಲೂ ತುಂಬಾ ಸ್ಪೆಷಲ್" ಎಂದರು.
ನನ್ನ ತಾಯಿ ಊರು ಕುಂದಾಪುರ!
ವೇದಿಕೆಯಲ್ಲಿ ನಟ ಮಾತನಾಡಿ, ಎಲ್ಲರಿಗೂ ನಮಸ್ಕಾರ. ಕರ್ನಾಟಕಕ್ಕೆ ನನಗೆ ಬರೋದು ಯಾವಾಗಲೂ ಖುಷಿ. ನಿಮಗೆ ಗೊತ್ತೇ ಇದೆ. ನನ್ನ ತಾಯಿ ಊರು ಕುಂದಾಪುರ. ಬೆಂಗಳೂರು, ಕರ್ನಾಟಕಕ್ಕೆ ಬಂದಾಗ, ನನಗೆ ಅಪ್ಪನ ಮನೆಯಿಂದ ಅಮ್ಮನ ಮನೆಗೆ ಬಂದ ಹಾಗೇ ಇರುತ್ತದೆ. ನನಗೆ ಇದು ಯಾವಾಗಲೂ ಸ್ಪೆಷಲ್. ರಜೆಯ ಮಜಾ ಕಳೆಯಲು ಮಕ್ಕಳು ಊರಿಗೆ ಬಂದಂತಹ ಅನುಭವವಾಗುತ್ತದೆ ಎಂದರು.
ಎನ್‌ಟಿಆರ್‌ಗಾಗಿ ಕಾದು ನಿಂತ ಫ್ಯಾನ್ಸ್
ತಾರಕ್ ಅವರನ್ನು ನೋಡಲು ಅಭಿಮಾನಿಗಳು ಗಂಟೆಗಟ್ಟಲೇ ರಸ್ತೆ ಬದಿಯಲ್ಲಿ ಕಾದು ಕುಳಿತಿದ್ದರು. ತಾರಕ್ ಇದ್ದ ಕಾರು ಕಂಡ ತಕ್ಷಣ ಅಭಿಮಾನಿಗಳು "ಟೈಗರ್... ಟೈಗರ್..." ಎಂದು ಘೋಷಣೆ ಕೂಗುತ್ತಾ ಸ್ವಾಗತಿಸಿದರು. ಬಹಳ ದಿನಗಳ ನಂತರ ಎನ್‌ಟಿಆರ್ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರಿಂದ ಅಭಿಮಾನಿಗಳು ಮತ್ತಷ್ಟು ಉತ್ಸಾಹದಿಂದ ಕೂಗಿದರು. ಆಸ್ಪತ್ರೆಯ ಬಳಿ ಅವರನ್ನು ನೋಡಲು ಅಭಿಮಾನಿಗಳ ಸಾಗರದಂತೆ ಹರಿದುಬಂದಿದ್ದರು. ಹಾಗಾಗಿ, ಮಹದೇವಪುರದ ಸುತ್ತಮುತ್ತಲ ಪ್ರದೇಶದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.
ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್
ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರಿಂದ ಬೆಂಗಳೂರಿನ ಮಹದೇವಪುರ ಮತ್ತು ಎಲೆಕ್ಟ್ರಾನಿಕ್ ಸಿಟಿ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಸುಮಾರು ಐದು ಕಿಲೋಮೀಟರ್‌ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಪ್ರಯಾಣಿಕರಿಗೆ ಸ್ವಲ್ಪ ತೊಂದರೆಯಾಯಿತು. ಪೊಲೀಸರ ಅಂದಾಜಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ವಿಶೇಷ ಕ್ರಮ ಕೈಗೊಳ್ಳಬೇಕಾಯಿತು.
ಇದನ್ನೂ ಓದಿ: Suvarna Sakhi: ಮಹಿಳಾ ಆಟೋ ಡ್ರೈವರ್ಸ್ ಗೌರವಿಸಿದ ಸ್ಟಾರ್ ಸುವರ್ಣ ; ಏನಿದು ʻಸುವರ್ಣಮಹಿಳಾ ಸಖಿʼ?
ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರು ಹರಸಾಹಸ ಪಟ್ಟರು. ಅಲ್ಲದೇ, ಕೆಲ ಅಭಿಮಾನಿಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಅವರ ಮೇಲೆ ಲಾಠಿ ಬೀಸಿದ್ದಾರೆ.