ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Kalki 2898 AD: ಅಬ್ಬಬ್ಬಾ! ಒಂದು ದಿನಕ್ಕೆ 15 ಕೋಟಿ ರೂ. ಸಂಭಾವನೆ; ಕಮಲ್‌ ಹಾಸನ್‌ ಈಗ ಭಾರತದ ದುಬಾರಿ ನಟ!

Kamal Haasan: ಕಲ್ಕಿ ಸಿನಿಮಾಕ್ಕಾಗಿ ಕಮಲ್‌ ಹಾಸನ್‌ ಪಡೆಯುತ್ತಿರುವ ಸಂಭಾವನೆ ಈಗ ಚರ್ಚೆಗೆ ಕಾರಣವಾಗಿದೆ. ಸ್ಕ್ರೀನ್ ರೈಟರ್ ಯುಗಿ ಸೇತು ನೀಡಿರುವ ಮಾಹಿತಿಯಂತೆ, ಕಮಲ್ ಹಾಸನ್ ಅವರು ಕೇವಲ 10 ದಿನಗಳ ಚಿತ್ರೀಕರಣಕ್ಕಾಗಿ 150 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಅಂದರೆ ದಿನಕ್ಕೆ ಬರೋಬ್ಬರಿ 15 ಕೋಟಿ ರೂ. ಪಡೆಯುವ ಮೂಲಕ ಅವರು ಭಾರತದ ಅತ್ಯಂತ ದುಬಾರಿ ನಟ ಎನಿಸಿಕೊಂಡಿದ್ದಾರೆ.

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ‘ಕಲ್ಕಿ 2898 AD’ ಸಿನಿಮಾವು ವಿಶ್ವದಾದ್ಯಂತ ಭರ್ಜರಿ ಯಶಸ್ಸು ಕಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ನಾಗ್ ಅಶ್ವಿನ್ ನಿರ್ದೇಶನದ ಈ ಬೃಹತ್ ಬಜೆಟ್ ಸಿನಿಮಾವು ಪುರಾಣವನ್ನು ಭವಿಷ್ಯದೊಂದಿಗೆ ಬೆರೆಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತ್ತು. ಅದ್ಭುತ ವಿಎಫ್‌ಎಕ್ಸ್‌, ಸಿನಿಮಾದ ಕಥೆ, ತಾರಾಗಣ ಎಲ್ಲವೂ ಭರ್ಜರಿಯಾಗಿತ್ತು. ಬಾಕ್ಸ್ ಆಫೀಸ್‌ನಲ್ಲಿಯೂ ಭಾರಿ ಕಲೆಕ್ಷನ್ ಮಾಡಿದ್ದ ಈ ಸಿನಿಮಾಕ್ಕೀಗ ಪಾರ್ಟ್‌ 2 ಮಾಡಲಾಗುತ್ತಿದೆ.

ಕಲ್ಕಿ ಸೀಕ್ವೇಲ್‌ ಮೇಲೆ ಎಲ್ಲರ ಗಮನ

ಕಲ್ಕಿ ಸಿನಿಮಾ ಹಿಟ್‌ ಆದ ಬೆನ್ನಲ್ಲೇ ಈಗ ‘ಕಲ್ಕಿ 2’ ಮೇಲಿನ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಈಗಾಗಲೇ ಈ ಸೀಕ್ವೆಲ್ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಹೈದರಾಬಾದ್‌ನಲ್ಲಿ ಚಿತ್ರೀಕರಣ ಆರಂಭವಾಗಿದ್ದು, ಅಶ್ವತ್ಥಾಮ ಪಾತ್ರಧಾರಿ ಅಮಿತಾಬ್ ಬಚ್ಚನ್ ಅವರು ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಇತ್ತೀಚೆಗೆ ವೈರಲ್ ಆಗಿದ್ದವು. ಸೀಕ್ವೆಲ್‌ನಲ್ಲಿ ಕಥೆ ಇನ್ನಷ್ಟು ವಿಸ್ತಾರವಾಗಿ ಮತ್ತು ಬೃಹತ್ ಪ್ರಮಾಣದಲ್ಲಿ ಇರಲಿದೆ ಎಂದು ತಿಳಿದುಬಂದಿದೆ. ಮೊದಲ ಭಾಗದಲ್ಲಿದ್ದ ಪ್ರಮುಖ ಪಾತ್ರಗಳಿಗೆ ಎರಡನೇ ಭಾಗದಲ್ಲಿ ಹೆಚ್ಚಿನ ಪ್ರಾಧಾನ್ಯತೆ ಇರಲಿದ್ದು, ವಿಶೇಷವಾಗಿ ಪ್ರಭಾಸ್, ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಅವರ ನಡುವಿನ ದೃಶ್ಯಗಳು ಸಿಕ್ಕಾಪಟ್ಟೆ ಹೈಲೈಟ್‌ ಆಗಲಿವೆಯಂತೆ.

Kamal Haasan: ಕಮಲ್ ಹಾಸನ್-ಶಿವಕಾರ್ತಿಕೇಯನ್ ಜೋಡಿಯ ಹೊಸ ಸಿನಿಮಾಗೆ ಟೈಟಲ್‌ ಫಿಕ್ಸ್‌!

ದುಬಾರಿ ಸಂಭಾವನೆ ಪಡೆದ ಕಮಲ್‌ ಹಾಸನ್‌

ಸದ್ಯ ಈ ಚಿತ್ರದಲ್ಲಿ ಖಳ ಪಾತ್ರದಲ್ಲಿ ನಟಿಸುತ್ತಿರುವ ಕಮಲ್ ಹಾಸನ್ ಅವರ ಸಂಭಾವನೆ ಬಗ್ಗೆ ಈಗ ಆಸಕ್ತಿದಾಯಕ ಚರ್ಚೆ ನಡೆಯುತ್ತಿದೆ. ಸಾಮಾನ್ಯವಾಗಿ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಬಗ್ಗೆ ಮಾತನಾಡುವಾಗ ಪ್ರಭಾಸ್, ಅಲ್ಲು ಅರ್ಜುನ್, ರಜನಿಕಾಂತ್, ಶಾರುಖ್ ಖಾನ್ ಮತ್ತು ದಳಪತಿ ವಿಜಯ್ ಮುಂತಾದವರ ಹೆಸರುಗಳು ಕೇಳಿಬರುತ್ತವೆ. ಅಸಲಿಗೆ ಕಮಲ್‌ ಹಾಸನ್‌ ಈ ರೇಸ್‌ನಲ್ಲಿ ಮುಂದಿದ್ದಾರೆ ಎಂಬುದು ಲೇಟೆಸ್ಟ್ ಮಾಹಿತಿ.

ಈಚೆಗೆ ನಟ, ಸ್ಕ್ರೀನ್‌ ರೈಟರ್‌ ಯುಗಿ ಸೇತು ಅವರು ಸಂದರ್ಶನವೊಂದನ್ನು ನೀಡಿದ್ದು, ಅದರಲ್ಲಿ ಕಮಲ್ ಹಾಸನ್ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. "ಕಮಲ್ ಸರ್ ಕಲ್ಕಿ ಚಿತ್ರಕ್ಕೆ 20 ದಿನಗಳ ಕಾಲ್‌ಶೀಟ್‌ ನೀಡಿ, 150 ಕೋಟಿ ರೂ.ಗಳನ್ನು ಸಂಭಾವನೆಯಾಗಿ ಪಡೆಯುತ್ತಿದ್ದಾರೆ. ನಾನು ಅವರ ಹುಟ್ಟುಹಬ್ಬದಂದು ಅವರಿಗೆ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಮತ್ತು ದಿನಕ್ಕೆ 7.50 ಕೋಟಿ ರೂ, ಪಡೆಯುತ್ತಿದ್ದಾರೆ ಎಂದು ಹೇಳಿದ್ದೆ, ಏಕೆಂದರೆ ಅವರಿಗೆ 20 ದಿನಗಳಿಗೆ 150 ಕೋಟಿ ರೂ.ಗಳನ್ನು ನೀಡಲಾಗಿತ್ತು" ಎಂದು ಅವರು ಹೇಳಿದ್ದಾರೆ.

Thalaivar 173: ತಲೈವಾ-173 ಸಿನಿಮಾಗಾಗಿ ಒಂದಾದ ರಜನಿಕಾಂತ್-ಕಮಲ್ ಹಾಸನ್

ಆದರೆ ಇಲ್ಲೊಂದು ಟ್ವಿಸ್ಟ್‌ ಇದೆ. ಒಮ್ಮೆ ಕಲ್ಕಿ ನಿರ್ಮಾಪಕ ಸಿ. ಅಶ್ವನಿ ದತ್ ಅವರೊಂದಿಗೆ ಯುಗಿ ಸೇತು ಮಾತನಾಡುವಾಗ, "ನಮ್ಮ ಸ್ನೇಹಿತನನ್ನು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನನ್ನಾಗಿ ಮಾಡಿದ್ದಕ್ಕಾಗಿ ಧನ್ಯವಾದ" ಎಂದು ತಮಾಷೆ ಮಾಡಿದ್ದರಂತೆ. "20 ದಿನಗಳಿಗೆ ನೀವು 150 ಕೋಟಿ ರೂ.ಗಳನ್ನು ನೀಡಿದ್ದೀರಿ ಎಂದಾಗ, ʻಇಲ್ಲ ಸರ್, ಅವರು ಕೇವಲ 10 ದಿನ ಕಾಲ್‌ಶೀಟ್ ನೀಡಿದ್ದಾರೆ‌ʼ ಎಂದು ಉತ್ತರಿಸಿದರು. ಆಗ ನಾನು ಕ್ಷಮಿಸಿ, ತಪ್ಪನ್ನು ಸರಿಪಡಿಸಿಕೊಳ್ಳುತ್ತೇನೆ, ಅಂದರೆ, ದಿನಕ್ಕೆ 15 ಕೋಟಿ ರೂ. ಅಂತ ಹೇಳಿದೆ" ಎಂದು ಯುಗಿ ಸೇತು ಹೇಳಿದ್ದಾರೆ.

‘ಕಲ್ಕಿ 2898 AD’ ಚಿತ್ರದಲ್ಲಿ ಕಮಲ್ ಹಾಸನ್ ಅವರು 'ಸುಪ್ರೀಂ ಯಾಸ್ಕಿನ್' ಎಂಬ ಶಕ್ತಿಯುತ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಭಾಗದಲ್ಲಿ ಈ ಪಾತ್ರವು ಕಡಿಮೆ ಸಮಯದವರೆಗೆ ಇದ್ದರೂ, ಕಥೆಗೆ ಟ್ವಿಸ್ಟ್‌ ಕೊಟ್ಟಿತ್ತು. ಅತ್ಯಾಧುನಿಕ ಜಗತ್ತಿನ ಸರ್ವಾಧಿಕಾರಿಯಾಗಿ ಯಾಸ್ಕಿನ್ ಪಾತ್ರವನ್ನು ವಿನ್ಯಾಸಗೊಳಿಸಲಾಗಿದ್ದು, ಕಮಲ್ ಹಾಸನ್ ವಿಭಿನ್ನ ಗೆಟಪ್‌ನಲ್ಲಿ ಪ್ರೇಕ್ಷಕರನ್ನು ಅಚ್ಚರಿಗೊಳಿಸಿದ್ದರು. ಮೊದಲ ಭಾಗದಲ್ಲಿ ಕೇವಲ ಪರಿಚಯವಾಗಿದ್ದ ಈ ಪಾತ್ರ, ‘ಕಲ್ಕಿ 2’ ನಲ್ಲಿ ಇನ್ನಷ್ಟು ಕ್ರೂರವಾಗಿ ಮತ್ತು ಶಕ್ತಿಯುತವಾಗಿ ಕಾಣಿಸಿಕೊಳ್ಳಲಿದೆಯಂತೆ.