Kamal Haasan: ಕಮಲ್ ಹಾಸನ್-ಶಿವಕಾರ್ತಿಕೇಯನ್ ಜೋಡಿಯ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್!
Seyon: ರಾಜ್ ಕಮಲ್ ಇಂಟರ್ನ್ಯಾಷನಲ್ ಹಾಗೂ ಟರ್ಮಿರಿಕ್ ಮೀಡಿಯಾ ಬ್ಯಾನರ್ ನಡಿ ಕಮಲ್ ಹಾಸನ್ ಹಾಗೂ ಆರ್ ಮಹೇಂದ್ರನ್ ನಿರ್ಮಾಣದಲ್ಲಿ ಸಿಯೋನ್ ಸಿನಿಮಾ ಮೂಡಿ ಬರ್ತಿದೆ. ಶಿವಕಾರ್ತಿಕೇಯನ್ ಹುಟ್ಟುಹಬ್ಬದ ವಿಶೇಷವಾಗಿ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ. ಹಣೆಯಲ್ಲಿ ವಿಭೂತಿ ಧರಿಸಿ, ಕೈಯಲ್ಲಿ ಕತ್ತಿ ಹಿಡಿದು ಶಿವಕಾರ್ತಿಕೇಯನ್ ಮಾಸ್ ಅವತಾರ ತಾಳಿದ್ದಾರೆ.
ಕಮಲ್ ಹಾಸನ್ -
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಕಮಲ್ ಹಾಸನ್ (Kamal Hassan) ಹಾಗೂ ಶಿವಕಾರ್ತಿಯೇನ್ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಈ ಹಿಂದೆ ಕಮಲ್ ನಿರ್ಮಿಸಿದ್ದ ಅಮರನ್ ಸೂಪರ್ ಹಿಟ್ ಕಂಡಿತ್ತು. ಈ ಚಿತ್ರದಲ್ಲಿ ಶಿವಕಾರ್ತಿಕೇಯನ್ (Sivakarthikeyan) ನಾಯಕನಾಗಿ ನಟಿಸಿದ್ದರು. ಇದೀಗ ಈ ಜೋಡಿ ಸಿಯೋನ್ ಎಂಬ ಸಿನಿಮಾಗಾಗಿ ಮತ್ತೆ ಒಂದಾಗಿದ್ದಾರೆ.ಫೆಬ್ರವರಿ 17 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಶಿವಕಾರ್ತಿಕೇಯನ್, ಕೃತಜ್ಞತಾ ಪತ್ರವನ್ನು ಬರೆದಿದ್ದು, ಅದರಲ್ಲಿ 'ಸಿಯೋನ್' ( Seyon) ನಿರ್ಮಾಪಕರೂ ಆಗಿರುವ ಕಮಲ್ ಹಾಸನ್ ಅವರಿಗೆ ಶುಭಾಶಯ ಕೋರಿದ್ದಾರೆ.
ಇದನ್ನೂ ಓದಿ: Bhagyalakshmi Kannada Serial: ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಅಂತ್ಯ ಆಗತ್ತಾ? ಕ್ಲಾರಿಟಿ ಕೊಟ್ಟ ನಟ ಸುದರ್ಶನ್!
ರಾಜ್ ಕಮಲ್ ಇಂಟರ್ನ್ಯಾಷನಲ್ ಹಾಗೂ ಟರ್ಮಿರಿಕ್ ಮೀಡಿಯಾ ಬ್ಯಾನರ್ ನಡಿ ಕಮಲ್ ಹಾಸನ್ ಹಾಗೂ ಆರ್ ಮಹೇಂದ್ರನ್ ನಿರ್ಮಾಣದಲ್ಲಿ ಸಿಯೋನ್ ಸಿನಿಮಾ ಮೂಡಿ ಬರ್ತಿದೆ. ಶಿವಕಾರ್ತಿಕೇಯನ್ ಹುಟ್ಟುಹಬ್ಬದ ವಿಶೇಷವಾಗಿ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ. ಹಣೆಯಲ್ಲಿ ವಿಭೂತಿ ಧರಿಸಿ, ಕೈಯಲ್ಲಿ ಕತ್ತಿ ಹಿಡಿದು ಶಿವಕಾರ್ತಿಕೇಯನ್ ಮಾಸ್ ಅವತಾರ ತಾಳಿದ್ದಾರೆ.
ಥಾಯ್ ಕಿಝವಿ ಸಿನಿಮಾ ನಿರ್ದೇಶಿಸಿರುವ ಶಿವಕುಮಾರ್ ಮುರುಗೇಶನ್ ಸಿಯೋನ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಂತೋಷ್ ನಾರಾಯಣ್ ಸಂಗೀತ, ವಿವೇಕ್ ವಿಜಯಕುಮಾರ್ ಛಾಯಾಗ್ರಹಣ, ಸ್ಯಾನ್ ಲೋಕೇಶ್ ಸಂಕಲನ ಚಿತ್ರಕ್ಕಿದೆ. ಇದೇ ವರ್ಷ ಅಕ್ಟೋಬರ್ ತಿಂಗಳಲ್ಲಿ ವಿಶ್ವಾದ್ಯಂತ ಚಿತ್ರ ಬಿಡುಗಡೆ ಮಾಡಲು ಸಿನಿಮಾ ಟೀಂ ಯೋಜನೆ ಹಾಕಿಕೊಂಡಿದೆ.
ಇದನ್ನೂ ಓದಿ: Suhana Syed: ʻಸವದತ್ತಿ ಯಲ್ಲಮ್ಮʼ ಅಂತ ಹೆಸರು ಬದಲಿಸಿಕೊಳ್ಳಿ ಅಂದವರಿಗೆ ಸುಹಾನಾ ಗರಂ ರಿಯಾಕ್ಷನ್
ಶಿವಕಾರ್ತಿಕೇಯನ್ ಮಾತನಾಡಿ, "ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಜೊತೆ ಮತ್ತೊಮ್ಮೆ ಸಹಕರಿಸಲು ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆ ಇದೆ. ಕಮಲ್ ಹಾಸನ್ ಸರ್ ನಿರ್ಮಿಸಿದ, ಅದ್ಭುತ ಚಲನಚಿತ್ರ ನಿರ್ಮಾಪಕ ಶಿವಕುಮಾರ್ ಮುರುಗೇಶನ್ ನಿರ್ದೇಶಿಸಿದ, 24 ವರ್ಷಗಳ ಕಾಲ ನನ್ನ ಕಾಲೇಜಿನ ಹಿರಿಯ ಮತ್ತು ಆತ್ಮೀಯ ಸ್ನೇಹಿತ ಸಂತೋಷ್ ನಾರಾಯಣನ್ ಅವರ ಸಂಗೀತದೊಂದಿಗೆ ನನ್ನ ಮುಂದಿನ ಚಿತ್ರ 'ಸೆಯಾನ್' ನ ಫಸ್ಟ್ ಲುಕ್ ಟೀಸರ್ ಅನ್ನು ಬಿಡುಗಡೆ ಮಾಡಿದ ಇಡೀ ತಂಡಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು," ಎಂದು ಅವರು ಹೇಳಿದರು