ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Kannada New Movie: `ಘಾರ್ಗಾ' ಚಿತ್ರದ ಟ್ರೈಲರ್ ರಿಲೀಸ್‌; ಸಿನಿಪ್ರಿಯರು ಫುಲ್‌ ಖುಷ್‌

Gharga : ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ ಮೊದಲಾದ ಚಿತ್ರಗಳ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ನಿರ್ಮಾಣದ ಬಹು ನಿರೀಕ್ಷಿತ ಘಾರ್ಗಾ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಒರಾಯನ್ ಮಾಲ್ ಆವರಣದಲ್ಲಿ ನೆರವೇರಿತು. ಅವರ ಪುತ್ರ ಅರುಣ್ ರಾಮ್‌ಪ್ರಸಾದ್‌ ಈ ಚಿತ್ರದ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಫಾರ್ಗಾ ಒಂದು ಊರಿನ ಹೆಸರಾಗಿದ್ದು, ದ ಲ್ಯಾಂಡ್ ಆಫ್ ಶಾಡೋ ಎಂಬ ಅಡಿಬರಹ ಚಿತ್ರಕ್ಕಿದೆ.

`ಘಾರ್ಗಾ' ಚಿತ್ರದ ಟ್ರೈಲರ್ ರಿಲೀಸ್‌; ಸಿನಿಪ್ರಿಯರು ಫುಲ್‌ ಖುಷ್‌

ಕನ್ನಡ ನ್ಯೂಸ್‌ -

Yashaswi Devadiga
Yashaswi Devadiga Jan 25, 2026 8:06 PM

ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ ಮೊದಲಾದ ಚಿತ್ರಗಳ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ (Ashwini Ram Prasad) ನಿರ್ಮಾಣದ ಬಹು ನಿರೀಕ್ಷಿತ ಘಾರ್ಗಾ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಒರಾಯನ್ ಮಾಲ್ ಆವರಣದಲ್ಲಿ ನೆರವೇರಿತು. ಅವರ ಪುತ್ರ ಅರುಣ್ ರಾಮ್‌ಪ್ರಸಾದ್‌ (Arun Ram Prasad) ಈ ಚಿತ್ರದ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಫಾರ್ಗಾ ಒಂದು ಊರಿನ ಹೆಸರಾಗಿದ್ದು, ದ ಲ್ಯಾಂಡ್ ಆಫ್ ಶಾಡೋ (The Land Of shadow) ಎಂಬ ಅಡಿಬರಹ ಚಿತ್ರಕ್ಕಿದೆ.

ಡೈಲಾಗ್ ಕಿಂಗ್ ಸಾಯಿಕುಮಾರ್

ಪ್ರಮುಖ ಪಾತ್ರದಲ್ಲಿ ಸಾಯಿಕುಮಾರ್ ಹಾಗೂ ನಾಯಕಿ ಪಾತ್ರದಲ್ಲಿ ರೆಹಾನ ಅಭಿನಯಿಸಿದ್ದಾರೆ. ಎಂ. ಶಶಿಧರ್ ಈ ಚಿತ್ರದ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಇದನ್ನೂ ಓದಿ: Anusha Hegde: 'ರಾಧಾ ರಮಣ ಧಾರಾವಾಹಿ' ಖ್ಯಾತಿಯ ನಟಿ ಅನುಷಾ ಹೆಗಡೆ ಬದುಕಲ್ಲಿ ಬಿರುಗಾಳಿ! ಡಿವೋರ್ಸ್ ಘೋಷಿಸಿದ ನಟಿ

ಆ ವೇದಿಕೆಯಲ್ಲಿ ಪೊಲೀಸ್ ಸ್ಟೋರಿ ಚಿತ್ರದ ಡೈಲಾಗ್ ಹೇಳಿದ ಸಾಯಿ ಕುಮಾರ್ ಅವರ ಅಪ್ಟಟ ಅಭಿಮಾನಿಯ ಕೈಲಿ ಚಿತ್ರದ ಟ್ರೈಲರ್ ರಿಲೀಸ್ ಮಾಡಿಸಲಾಯಿತು. ನಂತರ ಮಾತನಾಡಿದ ಸಾಯಿಕುಮಾರ್, ಶಶಿ ನನಗೆ ಈ ಕಥೆ ಹೇಳಿದ ತಕ್ಷಣ ನನಗೆ ಇದರಲ್ಲಿ ಆ್ಯಕ್ಟ್ ಮಾಡಬೇಕು ಅನಿಸಿತು.

ನಾನು ಘಸ್ಟ್ ಟೈಮ್ ಇಂಥ ರೋಲ್ ಮಾಡಿರೋದು. ಇನ್ ವೆಸ್ಟಿಗೇಷನ್ ಥರದ ಪಾತ್ರ. ಇಂಥ ಡೈರೆಕ್ಟರ್ ಮುಂದೆ ಬರಬೇಕು. ನಿರ್ಮಾಪಕರು ಅಶ್ವಿನಿ ರಾಮ್ ಪ್ರಸಾದ್ ಅಂದಾಗ ಖುಷಿಯಾಯ್ತು. ಅವರು ಕನ್ನಡಕ್ಕೆ ಒಳ್ಳೊಳ್ಳೆ ಚಿತ್ರಗಳನ್ನು ಕೊಟ್ಟವರು. ಸಿನಿಮಾ ತುಂಬಾ ರಿಚ್ ಆಗಿದೆ ಎಂದರು.

ವಿಭಿನ್ನ ರೀತಿ ಸಿನಿಮಾ

ಈ ಸಂದರ್ಭದಲ್ಲಿ ನಿರ್ಮಾಪಕ ಅಶ್ವಿನಿ ರಾಮ್‌ಪ್ರಸಾದ್ ಮಾತನಾಡುತ್ತ ಕಥೆಗೋಸ್ಕರ ನಾನೀ ಸಿನಿಮಾ ಮಾಡಿದೆ. ಏನೋ ಒಂದು ಕ್ರಿಯೇಟಿವಿಟಿ, ತುಂಬಾ ಸತ್ವ ಇದೆ. ಶಶಿ ಕಥೆ ಹೇಳಿದ ರೀತಿ, ಸ್ಕ್ರೀನ್ ಪ್ಲೈ ನನಗೆ ತುಂಬಾ ಇಷ್ಟವಾಯ್ತು. ಇದು ಮಾಮೂಲಿ ಸಿನಿಮಾ ಅಲ್ಲ, ವಿಭಿನ್ನ ರೀತಿಯಲ್ಲಿದೆ, ಸಿನಿಮಾ ರಿಲೀಸಾದ ಮೇಲೆ ನೀವೇ ನೋಡ್ತೀರಾ, ಮುಂದಿನ ತಿಂಗಳು ರಿಲೀಸ್ ಮಾಡುತ್ತಿದ್ದೇವೆ ಎಂದರು.



ವಿತರಕ ಕೆಸಿಎನ್ ಕುಮಾರ್ ಮಾತನಾಡಿ ಸಿನಿಮಾ ತುಂಬಾ ಚೆನ್ನಾಗಿ ಬಂದಿದ್ದು ಫೆ.6ರಂದು ರಿಲೀಸಾಗುತ್ತಿದೆ. ನಿರ್ದೇಶಕ ಶಶಿ ತುಂಬಾ ಪ್ರತಿಭಾವಂತ. ಈಗಾಗಲೇ ನನ್ನ ಮುಂದಿನ ಸಿನಿಮಾಗೆ ಅವರಿಗೆ ಅಡ್ವಾನ್ಸ್ ಮಾಡಿದ್ದೇನೆ ಎಂದರು. ನಿರ್ದೇಶಕ ಶಶಿಧರ್ ಮಾತನಾಡಿ ನಿರ್ಮಾಪಕರು ಒಂದೊಳ್ಳೆ ಅವಕಾಶ ಕೊಟ್ಟಿದ್ದಾರೆ. ಸದುಪಯೋಗ ಮಾಡಿಕೊಂಡಿದ್ದೇನೆ. ಜನ‌ ಮೆಚ್ಚುವಂಥ ಸಿನಿಮಾ ಮಾಡಿದ್ದೇನೆ. ಚಿತ್ರದಲ್ಲಿ ನಾಯಕನಿಗೆ 3 ಗೆಟಪ್‌ಗಳಿವೆ. ಈ ಟ್ರೈಲರ್ ನೋಡಿದಾಗ ನಿಮಗೆಲ್ಲ ನಂಬಿಕೆ ಬಂದಿರುತ್ತೆ, ಸಿನಿಮಾ ಕೂಡ ಅದೇ ಥರ ಮಾಡಿದ್ದೇನೆ. ನೀವೆಲ್ಲ ಸಿನಿಮಾ ನೋಡಿ, ನನ್ನ ನಂಬರ್ ಕೊಡ್ತೀನಿ, ಚೆನ್ನಾಗಿದ್ರೆ, ಚೆನ್ನಾಗಿಲ್ಲ ಅಂದ್ರೂ ಕಾಲ್ ಮಾಡಿ ಎಂದರು.

ನಾಯಕ ಅರುಣ್ ಮಾತನಾಡಿ ನನಗೆ ಡೈರೆಕ್ಟರ್ ಈ ಕಥೆ ಹೇಳಿದಾಗಲೇ ಕಾನ್ಫಿಡೆನ್ಸ್ ಬಂತು. ನನ್ನ ಪಾತ್ರ ತುಂಬಾ ವಿಭಿನ್ನವಾಗಿದ್ದು,

ಇದಕ್ಕೆ ರೈಟರ್, ಅಂಡರ್‌ವರ್ಡ್ಲ್ ಹೀಗೆ ಹಲವಾರು ಶೇಡ್ಸ್ ಇದೆ, ಇದೊಂದು ಹಾರರ್, ಕ್ರೈಮ್ ಥ್ರಿಲ್ಲರ್ ಸಬ್ಜೆಕ್ಟ್. ನಾನು ಬಣ್ಣ ಹಚ್ಚುವ ಮೊದಲೇ ಕಲರಿಫೈಟ್ಸ್, ಆಕ್ಷನ್, ಡಾನ್ಸ್ ಎಲ್ಲವನ್ನೂ ಕಲಿತು ಬಂದಿದ್ದೇನೆ ಎಂದು ಹೇಳಿದರು.

‌ವೇದಿಕೆಯಲ್ಲಿ ಚಿತ್ರದ ಸಂಗೀತ ಸಂಯೋಜಕ, ಆರ್.ಪಿ.ಪಟ್ನಾಯಕ್ ತಾವೇ ಕಂಪೋಜ್ ಮಾಡಿದ ಹಾಡನ್ನು ಹಾಡಿದತು.

ರಾಧಿಕಾ ಕುಮಾರಸ್ವಾಮಿ ಅವರ ಸಹೋದರ ರವಿರಾಜ್ ಸೇರಿದಂತೆ ಸಾಕಷ್ಟು ಗಣ್ಯರು ಹಾಜರಿದ್ದರು. ಘಾರ್ಗಾ ಒಂದು ಅಡ್ವೆಂಚರಸ್ ಡ್ರಾಮಾ, ಹಾರರ್ ಚಿತ್ರವಾಗಿದ್ದು, ಅರುಣ್ ಒಬ್ಬ ರೈಟರ್, ಸಂಶೋಧಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಎನ್. ಕುಮಾರ್ ಅವರು ರಿಲೀಸ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Amruthadhaare Serial: ಭೂಮಿಕಾ ಗೌತಮ್‌ ಒಂದಾದ ಬೆನ್ನಲ್ಲೇ ಜೈದೇವ್‌ಗೆ ಬಂತಾ ಕೇಡುಗಾಲ? ಏನಿದು ಟ್ವಿಸ್ಟ್‌?

ಹಾರರ್, ಸಸ್ಪೆನ್ಸ್, ಥಿಲ್ಲರ್, ಆಕ್ಷನ್ ಹೀಗೆ ಎಲ್ಲ ರೀತಿಯ ಮನರಂಜನಾತ್ಮಕ ಅಂಶಗಳೂ ಚಿತ್ರದಲ್ಲಿದ್ದು, ಮಂಗಳೂರು, ಚಿಕ್ಕಮಗಳೂರು, ದಾಂಡೇಲಿ, ಆಗುಂಬೆ ಹಾಗೂ ಬೆಂಗಳೂರಲ್ಲಿ ಚಿತ್ರೀಕರಿಸಲಾಗಿದೆ.