Thalapathy Vijay: ಚಿತ್ರರಂಗಕ್ಕೆ ಗುಡ್‌ಬೈ ಹೇಳಿ ʻಟಿವಿಕೆʼ ಪಕ್ಷ ಸೇರುತ್ತಾರಾ ನಟಿ ತ್ರಿಷಾ ಕೃಷ್ಣನ್? ʻಕೊಡಿʼ ಸಿನಿಮಾ ಕಥೆ ನಿಜವಾಗುತ್ತಾ?
Trisha Politics Entry: ತಮಿಳು ನಟ ದಳಪತಿ ವಿಜಯ್ ಸ್ಥಾಪಿಸಿರುವ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷಕ್ಕೆ ನಟಿ ತ್ರಿಷಾ ಕೃಷ್ಣನ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಕಾಲಿವುಡ್‌ನಲ್ಲಿ ಕೇಳಿಬಂದಿದೆ. ವಿಜಯ್ ಅವರ ಕೌಟುಂಬಿಕ ಕಲಹ ಮತ್ತು ವಿಚ್ಛೇದನದ ಚರ್ಚೆಗಳ ನಡುವೆಯೇ, ತ್ರಿಷಾ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬುದು ಈ ವದಂತಿಗೆ ಪುಷ್ಟಿ ನೀಡಿದೆ.
-
ತಮಿಳು ನಟ ದಳಪತಿ ವಿಜಯ್ ಅವರು ಟಿವಿಕೆ ಪಕ್ಷ ಕಟ್ಟಿ, ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಅತ್ತ ವಿಜಯ್ ಅವರ ಪತ್ನಿ ಸಂಗೀತಾ, "ನನ್ನ ಪತಿಗೆ ನಟಿಯೊಬ್ಬರ ಜೊತೆ ಸಂಬಂಧ ಇದೆ, ನನಗೆ ವಿಚ್ಛೇದನ ಬೇಕು" ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇತ್ತ ನಟಿ ತ್ರಿಷಾ ಜೊತೆ ನಟ ವಿಜಯ್ ಬಹಿರಂಗವಾಗಿ ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇಷ್ಟೆಲ್ಲಾ ಚರ್ಚೆಗಳ ನಡುವೆ ಹೊಸದೊಂದು ಮಾಹಿತಿ ಕೇಳಿಬಂದಿದೆ.
ದಳಪತಿ ವಿಜಯ್ ಪಕ್ಷಕ್ಕೆ ತ್ರಿಷಾ?
ಹೌದು, ನಟಿ ತ್ರಿಷಾ ಅವರು ಶೀಘ್ರದಲ್ಲೇ ಸಿನಿಮಾರಂಗಕ್ಕೆ ಗುಡ್ ಬೈ ಹೇಳಿ, ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ವಿಜಯ್ ಹಾದಿಯಲ್ಲೇ ನಡೆಯುವ ನಿರ್ಧಾರ ಮಾಡಿರುವ ತ್ರಿಷಾ, ಅವರಂತೆಯೇ ಸಿನಿಮಾಗಳಿಂದ ದೂರವಾಗಿ ರಾಜಕೀಯಕ್ಕೆ ಕಾಲಿಡುವ ಸೂಚನೆ ಇದೆ ಎಂಬ ಟಾಕ್ ಕಾಲಿವುಡ್ ಅಂಗಳದಲ್ಲಿ ಕೇಳಿಬಂದಿದೆ.
Vijay-Trisha: ವಿಚ್ಛೇದನ ಪ್ರಕರಣದ ನಡುವೆ ವಿಜಯ್-ತ್ರಿಷಾ ಬಗ್ಗೆ ಈ ಬಾಲಿವುಡ್ ಸೆಲೆಬ್ರಿಟಿ ಭರ್ಜರಿ ಸಪೋರ್ಟ್!
ಇಂಥದ್ದೊಂದು ಗಾಸಿಪ್ ಹುಟ್ಟಿಕೊಳ್ಳುವುದಕ್ಕೂ ಕಾರಣ ಇದೆ. ಅದೇನಪ್ಪ ಅಂದರೆ, ಕಳೆದ ಕೆಲವು ಸಮಯದಿಂದ ತ್ರಿಷಾ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲವಂತೆ. ಇದೆ ಕಾರಣಕ್ಕೆ ತ್ರಿಷಾ ರಾಜಕೀಯಕ್ಕೆ ಕಾಲಿಡುವ ಉದ್ದೇಶದಿಂದಲೇ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೆ, ಅವರು ರಾಜಕೀಯ ಪ್ರವೇಶ ಕೂಡ ವಿಜಯ್ ಸ್ಥಾಪಿಸಿರುವ ‘ತಮಿಳಗ ವೆಟ್ರಿ ಕಳಗಂ’ ಪಕ್ಷದಿಂದಲೇ ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಆದರೆ, ಈ ವಿಷಯದ ಬಗ್ಗೆ ಇದುವರೆಗೂ ತ್ರಿಷಾ ಅಥವಾ ಅವರ ಕಡೆಯುವರು ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ.
Trisha Krishnan : ಪಾರ್ಥಿಬನ್ ಹೆಸರೇಳದೇ ಕೆಂಡ ಕಾರಿದ ತ್ರಿಷಾ; ಕ್ಷಮೆಯಾಚಿಸಿದ ನಿರ್ದೇಶಕ
ಪ್ರಸ್ತುತ ತ್ರಿಷಾ ಕೈಯಲ್ಲಿ ಕೆಲವು ದೊಡ್ಡ ಪ್ರಾಜೆಕ್ಟ್‌ಗಳಿವೆ. ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’ ಚಿತ್ರದಲ್ಲಿ ತ್ರಿಷಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ ಸೂರ್ಯ ನಟನೆಯ ‘ಕರುಪ್ಪು’ ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಈ ಸಿನಿಮಾಗಳ ತ್ರಿಷಾ ತಮ್ಮ ಪಾಲಿನ ಕೆಲಸ ಮುಗಿಸಿದ್ದಾರೆ. ಆದರೆ ಇವುಗಳ ನಂತರ ತ್ರಿಷಾ ಅವರು ಹೊಸ ಪ್ರಾಜೆಕ್ಟ್‌ಗಳಿಗೆ ಗ್ರೀನ್ ಸಿಗ್ನಲ್ ನೀಡದೇ ಇರುವುದರಿಂದ, ಇನ್ನು ಮುಂದೆ ಅವರು ಸಿನಿಮಾಗಳಿಗೆ ಸಂಪೂರ್ಣವಾಗಿ ಗುಡ್‌ಬೈ ಹೇಳಲಿದ್ದಾರೆ ಎಂಬ ಸುದ್ದಿಗಳು ಬಲವಾಗಿ ಕೇಳಿಬರುತ್ತಿವೆ.
ಕೊಡಿ ಸಿನಿಮಾದಲ್ಲಿ ರಾಜಕೀಯ ನಾಯಕಿ
2016ರಲ್ಲಿ ತೆರೆಕಂಡಿದ್ದ ತಮಿಳಿನ ಕೊಡಿ ಸಿನಿಮಾದಲ್ಲಿ ತ್ರಿಷಾ ರಾಜಕಾರಣಿ ಪಾತ್ರ ಮಾಡಿದ್ದರು. ಈ ಸಿನಿಮಾದಲ್ಲಿ ರುದ್ರಾ ಎಂಬ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ತ್ರಿಷಾ ಅದ್ಭುತವಾಗಿ ನಟಿಸಿದ್ದರು. ಅವರ ವೃತ್ತಿಜೀವನದ ಅತ್ಯುತ್ತಮ ಪಾತ್ರಗಳಲ್ಲಿ ಇದು ಒಂದು ಎನ್ನಲಾಗುತ್ತಿದೆ. ಆ ಸಿನಿಮಾದಲ್ಲಿ ರಾಜಕಾರಣಿಯಾದಂತೆ ನಿಜ ಜೀವನದಲ್ಲೂ ತ್ರಿಷಾ ರಾಜಕೀಯಕ್ಕೆ ಬರುತ್ತಾರಾ? ಕಾದುನೋಡಬೇಕು.
ರಿಯಾಕ್ಟ್ ಮಾಡದ ತ್ರಿಷಾ
ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನ ಕೋರಿ, ಅರ್ಜಿ ಸಲ್ಲಿಕೆ ಮಾಡಿದ ನಂತರ ವಿಜಯ್ ಜೊತೆ ಮದುವೆ ಸಮಾರಂಭವೊಂದಕ್ಕೆ ತ್ರಿಷಾ ಒಟ್ಟಿಗೆ ಹೋಗಿದ್ದರು. ಅಂದು ವಿಜಯ್ ಮತ್ತು ತ್ರಿಷಾ ಒಂದೇ ಬಣ್ಣದ ಬಟ್ಟೆಗಳನ್ನು ಧರಿಸಿದ್ದು ಬಹಳ ಗಮನಸೆಳೆದಿತ್ತು. ಇದೀಗ ಶುಕ್ರವಾರ (ಮಾ.13) ಚೆನ್ನೈ ಏರ್‌ಪೋರ್ಟ್‌ನಲ್ಲಿ ಮಾಧ್ಯಮಗಳಿಗೆ ತ್ರಿಷಾ ಎದುರಾಗಿದ್ದಾರೆ. "ಮೇಡಂ, ನೀವು ಮತ್ತು ವಿಜಯ್ ಒಟ್ಟಿಗೆ ಒಂದು ಸಮಾರಂಭದಲ್ಲಿ ಭಾಗವಹಿಸಿದ್ರಿ. ಅದು ಬಹಳಷ್ಟು ವಿವಾದವನ್ನು ಸೃಷ್ಟಿಸಿತು. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು" ಎಂದು ನೇರವಾಗಿ ಕೇಳಿದ್ದಾರೆ. ಅದಕ್ಕೆ ತ್ರಿಷಾ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳಿದ್ದಾರೆ.