ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Kannada New Movie: ‘ಪ್ರೇಮ್ ಲವ್ ನಂದಿನಿ’ ಪೋಸ್ಟರ್ ಬಿಡುಗಡೆ! ನಿರ್ದೇಶಕಿಯಾದ ಸುಧಾ

Prem Love Nandini: ಹೊಸ ವರ್ಷಕ್ಕೆ ಹೊಸ ಪ್ರತಿಭೆಗಳ ತಂಡವೊಂದು ಹೊಸ ಚಿತ್ರ “ಪ್ರೇಮ್ ಲವ್ ನಂದಿನಿ” ಚಿತ್ರ ಮಾಡುವ ಮೂಲಕ ಚಿತ್ರೀಕರಣ ಮುಗಿಸಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಬಸವರಾಜ ನಂದಿ ಅವರ ನಿರ್ಮಾಣದಲ್ಲಿ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ ಸುಧಾ ಅಣ್ಣಾಶೇಠ.

ಪ್ರೇಮ್ ಲವ್ ನಂದಿನಿ

ಹೊಸ ವರ್ಷಕ್ಕೆ (New Year) ಹೊಸ ಪ್ರತಿಭೆಗಳ ತಂಡವೊಂದು ಹೊಸ ಚಿತ್ರ “ಪ್ರೇಮ್ ಲವ್ ನಂದಿನಿ” (Prem love Nandini) ಚಿತ್ರ ಮಾಡುವ ಮೂಲಕ ಚಿತ್ರೀಕರಣ ಮುಗಿಸಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಬಸವರಾಜ ನಂದಿ (Basavaraj Nandi) ಅವರ ನಿರ್ಮಾಣದಲ್ಲಿ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ (Direction) ಸುಧಾ ಅಣ್ಣಾಶೇಠ.

ಪತ್ರಕರ್ತ ಹಾಗೂ ನಟ ವಿಶ್ವಪ್ರಕಾಶ ಟಿ ಮಲಗೊಂಡ ನಾಯಕ ನಟನಾಗಿ, ಸಿರಿ ವೆಂಕಟೇಶ್ ನಾಯಕಿ ನಟಿಯಾಗಿ ಅಭಿನಯಿಸಿದ “ಪ್ರೇಮ್ ಲವ್ ನಂದಿನಿ” ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ ಚಿತ್ರ ತಂಡ.

ಇದನ್ನೂ ಓದಿ: Bigg Boss Kannada 12: ಇದು ಅನ್ನವನ್ನೇ ಕದ್ದು ತಿಂದ ಕಥೆ! ಮೊದಲ ಬಾರಿಗೆ ಮನದಾಳದ ನೋವನ್ನು ಹೊರಹಾಕಿದ ಗಿಲ್ಲಿ ನಟ

ಏನಿದು ಕಥೆ?

ಕಾಮಿಡಿ ಕಿಲಾಡಿಗಳು ಖ್ಯಾತಿಯ ದೀಕ್ಷಿತ್, ಮಧು ಅರಕೆರೆ ಸಹ ಕಲಾವಿದರಾಗಿ ಅಭಿನಯಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗಲಿದೆ ಎನ್ನುತ್ತಾರೆ ನಿರ್ಮಾಪಕ ಬಸವರಾಜ ಎಸ್ ನಂದಿ.

ಇತ್ತೀಚೆಗೆ ನಡೆಯುತ್ತಿರುವ ಪ್ರೇಮ ಕಥೆಯಿಂದ ಶುರುವಾಗಿ ಡೈವೋರ್ಸ್ ವರೆಗೆ ನಡೆಯುವ ಕಥೆಯೇ ಈ ಚಿತ್ರದ ಸಾರಾಂಶ. ಹೊಸ ಕಥೆ ಜೊತೆಗೆ ಸಾಮಾಜಿಕ ಸಂದೇಶ ನೀಡುವ ಚಿತ್ರ ಇದಾಗದೆ ಎನ್ನುತ್ತಾರೆ ನಿರ್ದೇಶಕಿ ಸುಧಾ ಅಣ್ಣಾಶೇಠ.

ಇದನ್ನೂ ಓದಿ: Bigg Boss Kannada 12: ಫಿನಾಲೆ ದಿನ ಬನಿಯನ್ ಧರಿಸಿ ಬರ್ತಾರಾ ಗಿಲ್ಲಿ ನಟ? ಕಾವ್ಯಾ, ರಕ್ಷಿತಾ ಕಾಸ್ಟ್ಯೂಮ್ಸ್ ಹೇಗಿವೆ?

ಇನ್ನು ಈ ಚಿತ್ರಕ್ಕೆ ಬಸವರಾಜ ನಂದಿ ಹಾಗೂ ಸಚಿನ್ ಅವರ ಛಾಯಾಗ್ರಾಹಣವಿದ್ದು, ಪ್ರಜ್ವಲ್ ನಂದಿ ಅವರ ಸಂಕಲನ, ಕ್ರಿಯೇಟಿವ್ ಹೆಡ್ ಆಗಿ ಅಣ್ಣಾಶೇಠ ಅವರು ಕಾರ್ಯ ನಿರ್ವಹಿಸಿದ್ದು, ಪ್ರಸಾದ ತೋಟದ ಅವರ ಪೋಸ್ಟರ್ ಡಿಸೈನ್, ಮೇಕಪ್ ಮಧು, ಡಾ. ಪ್ರಭು ಗಂಜಿಹಾಳ, ಡಾ. ವಿರೇಶ್ ಹಂಡಗಿ, ಹರೀಶ್ ಅರಸು ಅವರ ಪತ್ರಿಕಾ ಸಂಪರ್ಕ, ಉಮೇಶ್ ಕೆ ಎನ್ ಅವರು ಪಬ್ಲಿಸಿಟಿ ಜವಾಬ್ದಾರಿ ಹೊತ್ತಿದ್ದು, ನಿಂಗರಾಜ ಕಟ್ಟಿಗೇರಿ ಹೀಗೆ ಅನೇಕರು ತಂತ್ರಜ್ಞಾನದಲ್ಲಿದ್ದಾರೆ.

Yashaswi Devadiga

View all posts by this author