ಧಾರಾವಾಹಿಗಳಿಗೆ (Tv Serial) ಅದರದ್ದೇ ಆದ ಫ್ಯಾನ್ಸ್ ವರ್ಗವಿದೆ. ಟಿವಿಯಲ್ಲಿ ಸೀರಿಯಲ್ ಜೊತೆಗೆ ರಿಯಾಲಿಟಿ ಶೋಗಳನ್ನು ಜನ ತುಂಬಾ ಇಷ್ಟ ಪಟ್ಟು ನೋಡ್ತಾರೆ. ರಿಯಾಲಿಟಿ ಶೋಗಳನ್ನು (Reality Show) ಪ್ರೇಕ್ಷಕರು ಅದೆಷ್ಟು ಮೆಚ್ಚಿಕೊಂಡಿದ್ದಾರೆ ಅನ್ನೋದು ಗುರುವಾರ ರಿವೀಲ್ ಆಗುತ್ತಿದೆ. ಹಾಗಾದ್ರೆ ಈ ವಾರ TRP ಅಲ್ಲಿ ಧಾರಾವಾಹಿಗಳಗೆ ಇರೋ ಸ್ಥಾನಗಳು ಏನು?
ಜೀ ಕನ್ನಡ ನಂಬರ್ 1!
ಕನ್ನಡದ ನಾಲ್ಕು ಪ್ರಮುಖ ವಾಹಿನಿಗಳು ಜೀ ಕನ್ನಡ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ ಹಾಗೂ ಉದಯ ಟಿವಿ ಟಿಆರ್‌ಪಿ ರಿವೀಲ್ ಆಗಿದೆ. ಈ ವಾರ ಕೂಡ ಜೀ ಕನ್ನಡ 510 ಜಿಆರ್‌ಪಿ ಅಂಕಗಳೊಂದಿಗೆ ನಂ 1 ಸ್ಥಾನದಲ್ಲಿದೆ. ಇದರೊಂದಿಗೆ 370 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿ ಸ್ಟಾರ್ ಸುವರ್ಣ ಇದ್ದರೆ, ಕಲರ್ಸ್ ಕನ್ನಡ 3ನೇ ಸ್ಥಾನದಲ್ಲಿದೆ. ಉದಯ ಟಿವಿ 4ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: Amruthadhaare Serial: ಕೇಡು ಬಯಸೋ ಕೇಡಿ ಜೇಡಿಗೆ, ಪಾಠ ಕಲಿಸೋಕೆ ರೆಡಿಯಾದ್ರು ಭೂಮಿ ಟೀಚರ್!
ಕರ್ಣ ಧಾರಾವಾಹಿಯೇ ಮೊದಲು
ಈ ವಾರ ಜೀ ಕನ್ನಡದ ಕೆಲವು ಧಾರಾವಾಹಿಗಳ ಟಿಆರ್‌ಪಿಯಲ್ಲಿ ಇಳಿಕೆಯಾಗಿದೆ. ಇನ್ನು ಕೆಲವು ಧಾರಾವಾಹಿಗಳು ಏರಿಕೆಯಾಗಿದೆ. ಕರ್ಣ 6.7 ಲಕ್ಷ್ಮಿ ನಿವಾಸ 6.2 ಅಣ್ಣಯ್ಯ 5.9 ನಾ ನಿನ್ನ ಬಿಡಲಾರೆ 5.6 ಡಿಕೆಡಿ 5.3 ರೇಟಿಂಗ್ ಸಿಕ್ಕಿದೆ. ಇನ್ನು ಕರ್ಣ ಧಾರಾವಾಹಿಯಲ್ಲಿ ಈಗ ಈ ಸೀರಿಯಲ್‌ನಲ್ಲಿ ಕರ್ಣನ ತಂದೆ ರಮೇಶ್ ಪಾತ್ರದಲ್ಲಿ ಟಿ ಎಸ್ ನಾಗಾಭರಣ ಅವರು ನಟಿಸುತ್ತಿದ್ದರು. ಈಗ ಇವರ ಬದಲು ನಟ ಅಭಿಜಿತ್ ನಟಿಸುತ್ತಿದ್ದಾರೆ. ನಾಗಾಭರಣ ಅವರು ವೈಯಕ್ತಿಕ ಕಾರಣಕ್ಕೆ ಸೀರಿಯಲ್‌ನಿಂದ ಹೊರಬಂದಿದ್ದು, ಇವರ ಜಾಗಕ್ಕೆ ಹೊಸ ನಟನ ಆಗಮನ ಆಗಿದೆ.
ಕಲರ್ಸ್ ಕನ್ನಡದಲ್ಲಿ ಮುದ್ದು ಸೊಸೆ 5.0 ನಂದ ಗೋಕುಲ 4.6 ಶ್ರೀಗಂಧದ ಗುಡಿ 4.0 ಗೌರಿ ಕಲ್ಯಾಣ 3.9 ಗಿಚ್ಚಿ ಗಿಲಿ ಗಿಲಿ ಜೂನಿಯರ್ಸ್ 3.8 ರೇಟಿಂಗ್ ಸಿಕ್ಕಿದೆ. ಸ್ಟಾರ್ ಸುವರ್ಣ 2ನೇ ಸ್ಥಾನದಲ್ಲಿ ಮುಂದುವರೆದಿದೆ. ಶಾರದೆ 3.6 ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ 3.6 ನಿನ್ನ ಜೊತೆ ನನ್ನ ಕಥೆ 3.5 ಆಸೆ 3.5 ನೀ ಇರಲು ಜೊತೆಯಲ್ಲಿ 3.4 ಸಿಕ್ಕಿದೆ.
ಇದನ್ನೂ ಓದಿ: Hari Murali: ಬಾಲ ನಟನಾಗಿ ಮಿಂಚಿದ್ದ 27 ವರ್ಷದ ನಟ ಶವವಾಗಿ ಪತ್ತೆ
ಈ ವಾರ ಉದಯ ಟಿವಿ ಟಿಆರ್‌ಪಿಯಲ್ಲಿ ಏರಿಕೆಯಾಗಿದೆ.ಶಾಂಭವಿ 2.4 ಶಾಂತಿ ನಿವಾಸ 2.2 ಸಿಂಧು ಭೈರವಿ 2.2 ಮೈನಾ 2.2 ಕೃಷ್ಣ ವಂಶಿ 2.2 ರೇಟಿಂಗ್ ಸಿಕ್ಕಿದೆ.